Gruhalakshmi funds the next installment
ಗೃಹ ಹಲಕ್ಷ್ಮಿ ಮುಂದಿನ ಕಂತಿನ ಹಣ
ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಹಣ ತಮ್ಮ ಖಾತೆಗೂ ಬರಬೇಕು ಎನ್ನುವ ಮಹಿಳೆಯರ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕಾಗಿ ಹೇಗಾದರೂ ಹಣ ಪಡೆಯಬೇಕು ಅಂತ ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ದಿನವು ಬ್ಯಾಂಕ್ ನಿಂದ ಬ್ಯಾಂಕ್ ಗೆ ಸೇವಾ ಕೇಂದ್ರಗಳಿಗೆ ಮಹಿಳೆಯರು ಹಾಗೂ ಅವರ ಮನೆಯವರು ಅಲೆದಾಡುತ್ತಿದ್ದಾರೆ.
ಸರ್ಕಾರ ತಿಳಿಸಿರುವ ಪ್ರಕಾರ ಈಗಾಗಲೇ ಸುಮಾರು 65% ಮಹಿಳೆಯರಿಗೆ ಮೊದಲ ಕಂತಿನ ಹಣ ಜಮಾ ಆಗಿದೆ ಆದರೆ ಇನ್ನೂ 35% ನಷ್ಟು ಮಹಿಳೆಯರಿಗೆ ಹಣ ಸಿಕ್ಕಿಲ್ಲ. ಗೃಹ ಲಕ್ಷ್ಮಿ ಯೋಜನೆಯ ಜಾರಿಯಾಗಿ ಒಂದು ತಿಂಗಳು ಆದರೂ ಇನ್ನೂ 35% ಜನಕ್ಕೆ ಹಣ ಸಿಕ್ಕಿಲ್ಲ
ಯಾಕೆ ಬಂದಿಲ್ಲ ಮೊದಲ ಕಂತಿನ ಹಣ? ಇದನ್ನು ಓದಿರಿ
ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕು ಅಂದ್ರೆ ಅದಕ್ಕೆ ಕೆಲವೊಂದು ಇಷ್ಟು ನಿಯಮಗಳನ್ನು ಪಾಲಿಸಲೇ ಬೇಕಾಗಿತ್ತು. ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್(Adhaar Card) ಬ್ಯಾಂಕ್ ಖಾತೆಯ(Bank account) ಈ ಕೆವೈಸಿ ಮಾಡಿಸಿಕೊಳ್ಳುವುದು
ಆಧಾರ್ ಸೀಡಿಂಗ್ ತಪ್ಪದೇ ಆಗಿರಬೇಕು , ಅದೇ ರೀತಿಯಾಗಿ ರೇಷನ್ ಕಾರ್ಡ್ (ration card) ಮಹಿಳೆಯರ ಹೆಸರಿಗೆ ಮಾಡಿಕೊಳ್ಳುವುದು, ಮೊದಲಾದ ಬದಲಾವಣೆಗಳು ಆಗಬೇಕಿತ್ತು. ಇದರ ಜೊತೆಗೆ ಮಹಿಳೆಯ ರೇಷನ್ ಕಾರ್ಡ್ ಆಧಾರ್ ಕಾರ್ಡ್ (Aadhaar card) ಹಾಗೂ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಒಂದಕ್ಕೊಂದು ಮ್ಯಾಚ್ ಆಗಬೇಕು. ಇವುಗಳು ಸರಿ ಆಗದೆ ಇದ್ದ ಕಾರಣದಿಂದ ಹಲವರ ಖಾತೆಗೆ ಹಣ ಜಮಾ ಆಗಿಲ್ಲ.
ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಮಾಹಿತಿ ತಪ್ಪದೆ ಓದಿರಿ :-
ಇನ್ನು ಮೊದಲ ಕಂತಿನ ಹಣ ಯಾರ ಖಾತೆಗೆ ಜಮಾ ಆಗಿಲ್ಲವೋ ಅವರು ನೇರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ವರ್ ಅವರನ್ನೇ ಪ್ರಶ್ನಿಸುತ್ತಿದ್ದಾರೆ. ತಮ್ಮ ಖಾತೆಯಲ್ಲಿ ಎಲ್ಲವೂ ಸರಿ ಇದ್ರೂ ಹಣ ಮಾತ್ರ ಬರ್ತಿಲ್ಲ ಅನ್ನುತ್ತಿದ್ದಾರೆ ಮಹಿಳೆಯರು.
ಈ ಬಗ್ಗೆ ಮಾಹಿತಿ ನೀಡಿರುವ ಲಕ್ಷ್ಮಿ ಹೆಬ್ಬಾಳ್ವರ್ ಅವರು ಮೊದಲ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗದೆ ಇರಲು ಅವರ ಖಾತೆಗೆ ಈ-ಕೆವೈಸಿ(E-kyc) ಆಗದೆ ಇರುವುದೇ ಮುಖ್ಯ ಕಾರಣ.
ಇದರ ಜೊತೆಗೆ ತಾಂತ್ರಿಕ ದೋಷಗಳು, ಸರ್ವರ್ ಸಮಸ್ಯೆ ಮೊದಲಾದವುಗಳಿಂದ ಮೊದಲ ಕಂತಿನ ಹಣ ಎಲ್ಲ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಇನ್ನು ಎರಡನೇ ಕಂತಿನ ಹಣ ಸದ್ಯದಲ್ಲಿಯೇ ಜಮಾ ಆಗಲಿದ್ದು ಮೊದಲನೆಯ ಕಂತಿನ ಹಣ ಯಾರ ಖಾತೆಗೆ ಜಮಾ ಆಗಿಲ್ಲವೋ ಅಂತವರ ಖಾತೆಗೆ ಎರಡು ಕಂತಿನ ಹಣ ಸೇರಿಸಿ ನಾಲ್ಕು ಸಾವಿರ ರೂಪಾಯಿಗಳನ್ನು ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಇನ್ನು ಮುಂದೆ ಪ್ರತಿ ತಿಂಗಳು 15 ನೇ ತಾರೀಖಿನೊಳಗೆ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂಬುದಾಗಿಯೂ ಭರವಸೆ ನೀಡಿದ್ದಾರೆ.
ಹಣ ಬಾರದೆ ಇದ್ದರೆ ಏನು ಮಾಡಬೇಕು?
ಗೃಹಲಕ್ಷ್ಮಿಯ 2000 ಉಚಿತವಾಗಿ ಸಿಗುವಂತಹ ಅವಕಾಶದಿಂದ ಹಲವು ಮಹಿಳೆಯರು ವಂಚಿತರಾಗಿದ್ದಾರೆ. ಇದಕ್ಕೆ ಸಾಕಷ್ಟು ಕಾರಣಗಳು ಕೂಡ ಇವೆ ಇನ್ನು ಯಾವ ಸಮಸ್ಯೆ ಇದೆ ಎಂಬುದನ್ನು ಕಂಡು ಹಿಡಿಯಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ ಇನ್ನು ಮುಂದೆ ಮನೆ ಮನೆಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರನ್ನು ಕಳುಹಿಸಿ ಮಹಿಳೆಯರಿಗೆ ಸಹಾಯ ಮಾಡಲಿದೆ.
ನಿಮಗೆ 2,000 ಬರದೇ ಇದ್ದರೆ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಸಹಾಯಕಿಯರು ಮನೆಗೆ ಬಂದಾಗ ಅವರಿಗೆ ಮಾಹಿತಿ ನೀಡಿ ಸೂಕ್ತ ಸಲಹೆ ಪಡೆದುಕೊಳ್ಳಬಹುದು ಎಂದು ಸಚಿವೆ ತಿಳಿಸಿದ್ದಾರೆ.
ಅನ್ನ ಭಾಗ್ಯ ಯೋಜನೆಯ ಡಿ ಬಿ ಟಿ ಸ್ಟೇಟಸ್ :-
(ಜೂಲೈ,ಆಗಸ್ಟ್,ಸೆಪ್ಟೆಂಬರ್ ) ಮೂರು ತಿಂಗಳ ಹಣ ಜಮಾ ಸ್ಟೇಟಸ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ಅಲ್ಲಿ ಕಾಣಿಸುವ ತಿಂಗಳನ್ನು ಆಯ್ಕೆ ಮಾಡಿಕೊಂಡು ಕೆಳಗೆ ತೋರಿಸಿರುವ ಆರ್‌ಸಿ ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಜಮಾ ಹಣವನ್ನು ತೋರಿಸುತ್ತದೆ.
https://ahara.kar.nic.in/status1/status_of_dbt_new.aspx
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳಿಗೆ ಎಲ್ಲ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ನಾವು ಯಾವುದೇ ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ ನಾವು ಬರೆದಿರುವ ಲೇಖನವು ಅರ್ಥಪೂರ್ಣವಾಗಿದ್ದು ಎಲ್ಲರಿಗೂ ಉಪಯೋಗವಾಗುವಂತಿದ್ದರೆ ತಪ್ಪದೆ ಎಲ್ಲರಿಗೂ ಈ ಲೇಖನವನ್ನು ಶೇರ್ ಮಾಡಿ. ಇನ್ನೂ ಹೆಚ್ಚಿನ ಕೃಷಿ ಆಧಾರಿತ ಅಪ್ಡೇಟ್ ಪಡೆಯಲು ಕೃಷಿವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/K9mNNO3T6FzKJGch4oqd2m