If we lose our mobile, we immediately lock it
ಮೊಬೈಲ್ ಕಳೆದರೆ ತಕ್ಷಣ ಲಾಕ್ ಮಾಡುವ ವ್ಯವಸ್ಥೆ ಜಾರಿ
ಈಗಲೇ ಆಪ್ ಡೌನ್ಲೋಡ್ ಮಾಡಿಕೊಳ್ಳಿ
ಬೆಂಗಳೂರು ಮೊಬೈಲ್ ಕಳವಾದ ಕೂಡಲೇ ಪೊಲೀಸ್ ಇಲಾಖೆಯ ಅಧಿಕೃತ ಆ್ಯಪ್ (KSP Application) ನಲ್ಲೇ ದೂರು ದಾಖಲಿಸಿ ತಕ್ಷಣವೇ ಮೊಬೈಲ್ ಕಾರ್ಯಸ್ಥಗಿತಗೊಳಿ ಸುವ ವ್ಯವಸ್ಥೆಯನ್ನು ಪೊಲೀಸರು ಜಾರಿ ಗೊಳಿಸಿದ್ದಾರೆ. ಕಳೆದುಹೋದ ಮೊಬೈಲನ್ನು ಸಬೇಕಿದೆ. ಮಾಲಿಕರು ಲಾಕ್ ಮಾಡಿದರೆ ಬೇರೆ ಯಾರಿಗೂ ಅದನ್ನು ಬಳಕೆ ಮಾಡಲು ಬರುವುದಿಲ್ಲ.
ಈ ಕೆಳಗೆ ಕಾಣುವ ಲಿಂಕ್ ಮೇಲೆ ಒತ್ತಿದ್ದರೆ ನಿಮಗೆ ಈ ಕೆ ಎಸ್ ಪಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳ ಬಹುದು ಹಾಗೂ ನಿಮ್ಮ ಕಳೆದು ಹೋದ ಮೊಬೈಲ್ ಅನ್ನು ನೀವು ಸುಲಭವಾಗಿ ಲಾಕ್ ಮಾಡಬಹುದು
https://play.google.com/store/apps/details?id=com.capulustech.ksppqrs
ಮೊದಲಿಗೆ ಗೂಗಲ್ ಪ್ಲೇಸ್ಟರ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ನಂತರ ಮೊಬೈಲ್ ಬಿಲ್ ಇದ್ದರೆ ಅದನ್ನು ಅಪ್‌ಲೋಡ್ ಮಾಡಿ ನಂತರ ಸೆಲೆಕ್ಟ್ ಅರ್ಟಿಕಲ್ ಆಪ್ಟನ್ ಆಯ್ಕೆ ಮಾಡಬೇಕು.
ಬಳಿಕ ಮೊಬೈಲ್ ದೂರನ್ನು ಇ-ಲಾಸ್ಟ್ ನಲ್ಲಿ ವರದಿ ಮಾಡಲು ಕೆಎಸ್‌ಪಿ ಆ್ಯಪ್ – ಓಪನ್ ಮಾಡಿ ಅಲ್ಲಿರುವ ಇ-ಲಾಸ್ಟ್‌ನಲ್ಲಿ ವರದಿ ಆಪ್ಟನ್ ಅನ್ನು ಆಯ್ಕೆ ಮಾಡಬೇಕು. ಬಳಿಕ ಮೊಬೈಲ್ ಆಪ್ಪನ್‌ನ್ನು ಆಯ್ಕೆ ಮಾಡಿ ಇ ಲಾಸ್ಟ್‌ನಲ್ಲಿ ವರದಿಯನ್ನು ನೊಂದಾಯಿಸಿ
ಅದಾದ ನಂತರ ಆ್ಯಡ್ ಆಪ್ಟನ್ ಆಯ್ಕೆ ಮಾಡಿ ನಿಮ್ಮ ಹೆಸರು ವಿಳಾಸ, ರಾಜ್ಯ, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ನೋಂದಾಯಿಸಬೇಕು. ಕೊನೆಗೆ ಮೊಬೈಲ್ ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ಹಾಗೂ ಕಳೆದು ಹೋದ ಬಗೆಯ ಮಾಹಿತಿ ನೊಂದಾಯಿಸಿ ಸಬಿಟ್ ಅಪ್ಪನ್ ಆಯ್ಕೆ ಮಾಡಿ ಸ್ವೀಕೃತಿ ರಶೀದಿ ಪಡೆಯಬಹುದು ಎಂದು ಪೊಲೀಸರು ವಿವರಿಸಿದ್ದಾರೆ.