If Aadhaar is not linked to the bank by September 30, the pension facility will stop
ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ಯೋಜನೆ ಮೊತ್ತ ಪಡೆಯುತ್ತಿರುವ ಇಂದಿಗೂ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಜೋಡಣೆ ಮಾಡಿಲ್ಲ ಎಂದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಸೆಪ್ಟೆಂಬರ್ 30 ಕಡೆಯ ದಿನ.
ಸೆಪ್ಟೆಂಬರ್ 30ರೊಳಗೆ ಇ-ಕೆವೈಸಿ ಮೂಲಕ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಬೇಕು. ಜತೆಗೆ ಎನ್‌ಪಿಸಿಐ(NPCI) ಕೂಡಾ ಮಾಡಿಸಬೇಕು. ಒಂದು ವೇಳೆ ಮಾಡಿಸದಿದ್ದರೆ ಪಿಂಚಣಿ ಬಂದ್ ಆಗಲಿದೆ!
ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ಗಳಿಗೆ ಆಧಾರ್ ನಂಬರ್ ಜೋಡಣೆ ಮಾಡಬೇಕು. ಅಲ್ಲದೇ ಎನ್‌ಪಿಸಿಐ(ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ)NPCI ಮ್ಯಾಪ್ ಮಾಡಿಸಬೇಕು. ಇಲ್ಲವಾದರೆ ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳು ಜಮೆ ಆಗುವುದಿಲ್ಲಎಂದು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ನಿರ್ದೇಶನದಂತೆ ಮಾಸಿಕ ಪಿಂಚಣಿ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಶೇಷಚೇತನರ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಮತ್ತು ಇತರೆ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಸಿಕ ಪಿಂಚಣಿಯನ್ನು ಅವರ ಬ್ಯಾಂಕ್ ಅಥವಾ ಅಂಚೆ ಉಳಿತಾಯ ಖಾತೆಗೆ ನಿರ್ದೇಶನಾಲಯದಿಂದ ನೇರವಾಗಿ ಜಮಾ ಮಾಡಲಾಗುತ್ತದೆ.
ಖಾತೆಗೆ ಕಡ್ಡಾಯವಾಗಿ ಆಧಾರ್ ಜೋಡಣೆ
ಪಿಂಚಣಿದಾರರು ನಾನಾ ಯೋಜನೆ ಯಡಿ ಪಿಂಚಣಿ ಪಡೆಯುತ್ತಿರುವ ಖಾತೆಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಬೇಕು. ಬ್ಯಾಂಕ್ ಅಥವಾ ಅಂಚೆ ಉಳಿತಾಯ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಸಂಯೋಜಿಸಿಕೊಳ್ಳಬೇಕು.
ಈವರೆಗೆ ಆಧಾರ್ ಜೋಡಣೆ ಮಾಡಿಕೊಳ್ಳದಿದ್ದಲ್ಲಿ ಸೆ.30ರ ಒಳಗಾಗಿ ಬ್ಯಾಂಕ್/ಅಂಚೆ ಕಚೇರಿಗೆ ಸಂಪರ್ಕಿಸಿ ತಕ್ಷಣವೇ ಇ-ಕೆವೈಸಿ ಮೂಲಕ ಆಧಾರ್ ಜೋಡಣೆ ಮಾಡಬೇಕು. ಎನ್‌ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ) ಮ್ಯಾಪಿಂಗ್ ಮಾಡಿಸಿ ಆಧಾರ್ ಜೋಡಣೆ ಮಾಡದಿದ್ದರೆ, ಪಿಂಚಣಿ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
-: ಲೇಖನ ಮುಕ್ತಾಯ :-
ತಪ್ಪದೆ ಓದಿರಿ :-
➡️ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಗುಡ್ ನ್ಯೂಸ್ ಕೊಟ್ಟು ಸರ್ಕಾರ https://krushivahini.com/2023/09/28/the-government-has-given-good-news-about-the-application-for-the-new-ration-card/
➡️ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಎಂಬುದನ್ನು ಮೊಬೈಲ್ ನಲ್ಲಿ ನೋಡಿ https://krushivahini.com/2023/09/28/how-much-debt-is-owed-on-your-farm-see-here/
➡️ ಈ ಹತ್ತು ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತದೆ ನಿಮ್ಮ ಜಿಲ್ಲೆ ಹೆಸರು ನೋಡಿ https://krushivahini.com/2023/09/28/grulahakshmi-yojana-funds-will-arrive-on-september-30-for-these-ten-districts/
➡️ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ https://krushivahini.com/2023/09/28/the-government-has-given-good-news-about-the-application-for-the-new-ration-card/
➡️ ಹತ್ತಿಯಲ್ಲಿ ರಸ ಹೀರುವ ಕೀಟಗಳ ಸಮಗ್ರ ನಿರ್ವಹಣೆ ಹೇಗೆ https://krushivahini.com/2023/09/28/management-of-sucking-insects-in-cotton/
➡️ ಕರ್ನಾಟಕ ಬಂದ್ ಶಾಲೆಗಳು ಇರುತ್ತವೆ ಇಲ್ಲವೋ ಏನೆಲ್ಲಾ ವಿಚಾರ ಎಂಬುದನ್ನು ತಿಳಿದುಕೊಳ್ಳಿ https://krushivahini.com/2023/09/28/what-will-happen-during-karnataka-bandh-tomorrow-what-not-check-where/
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಹಾಗೂ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ https://chat.whatsapp.com/K9mNNO3T6FzKJGch4oqd2m