Annabhagya third installment money deposit
ನಮಸ್ಕಾರ ಪ್ರಿಯ ರೈತ ಬಾಂಧವರೇ ಇಂದಿನ ದಿನ ನಾವು ಅನ್ನ ಭಾಗ್ಯ ಯೋಜನೆಯ ಮೂರು ಕಂತಿನ ಹಣ ಬಂದಿರುವುದನ್ನು ಹೇಗೆ ಪರಿಶೀಲಿಸಬಹುದು ಎಂದು ನೋಡೋಣ.
ಅನ್ನಭಾಗ್ಯ ಯೋಜನೆಯಡಿ 12.95:ಅನ್ನಭಾಗ್ಯ ಯೋಜನೆ ಯಡಿ ಆಗಸ್ಟ್ ತಿಂಗಳ ಹಣವನ್ನು ಜಿಲ್ಲೆಯ ಅರ್ಹ 3,73,236 ಪಡಿತರ ಚೀಟಿಗಳ ಪೈಕಿ 12,95,465 ಸದಸ್ಯರಿಗೆ 170 ರೂ.ರಂತೆ ಒಟ್ಟು 22.02 ಕೋಟಿ ರೂ.ಗಳನ್ನು ಅರ್ಹ ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ.
ಅನ್ನ ಭಾಗ್ಯ ಯೋಜನೆಯಡಿ ಪಡಿತರ ವಸ್ತುಗಳನ್ನು ಪಡೆದಿರುವ ಪಡಿತರ ಚೀಟಿದಾರರಿಗೆ ಈ ತಿಂಗಳಲ್ಲಿ 5 ಕೆಜಿ ಅಕ್ಕಿಯ ಹಣವನ್ನು ಆಯಾ ಪಡಿತರ ಚೀಟಿದಾರರ ಮುಖ್ಯಸ್ಥರ ಬ್ಯಾಂಕ್ಯಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ರಾಷ್ಟ್ರೀಕೃತ ಮಾಡಲಾಗುತ್ತಿದ್ದು ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರು ಇರುವ ಅಂತ್ಯೋದಯ ಪಡಿತರ ಚೀಟಿಗೆ ಪ್ರತಿ ಹೆಚ್ಚುವರಿಗೆ ಸದಸ್ಯರಿಗೆ 170 ರೂ.ರಂತೆ ಮತ್ತು ಆದ್ಯತಾ ಕುಟುಂಬ ಪಡಿತರ ಚೀಟಿ ಬಿಪಿಎಲ್ ) ಪಡಿತರ ಚೀಟಿಯಲ್ಲಿನ ಪ್ರತಿ ಸದಸ್ಯರಿಗೆ 170 ರೂ ರಂತೆ ಹಣ ವರ್ಗಾವಣೆ ಮಾಡಲಾಗುವುದು ಎಲ್ಲ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ (ಬಿಪಿಎಲ್ ಪಡಿತರ ಚೀಟಿಯಲ್ಲಿನ ಮುಖ್ಯಸ್ಥರು ಬ್ಯಾಂಕ್ ಖಾತೆ ಕಡ್ಡಾಯವಾಗಿ ಹೊಂದಿರಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಅನ್ನಭಾಗ್ಯ ಹಣ ಜಮೆಯಾಗಲು ಇವು ಮುಖ್ಯ:-
ಇ – ಕೆವೈಸಿ ಆಗಿರತಕ್ಕದ್ದು,ಇ – ಕೆವೈಸಿ ಆಗದೇ ಇದ್ದಲ್ಲಿ ಕೂಡಲೇ ಆಯಾ ಬ್ಯಾಂಕಿನ ಶಾಖೆಯನ್ನು ಸಂಪರ್ಕಿಸಿ ಇ – ಕೆವೈಸಿಯನ್ನು ಮಾಡಿಸಿ ಖಾತೆ ಚಾಲ್ತಿಯಲ್ಲಿಟ್ಟುಕೊಳ್ಳುವಂತೆ ಹಾಗೂ ಬ್ಯಾಂಕ್ ಖಾತೆ ಹೊಂದದೇ ಇದ್ದಲ್ಲಿ ಅಂಚೆ ಕಚೇರಿಯಲ್ಲಿ ಐಪಿಪಿಬಿ(IPPB) ಬ್ಯಾಂಕ್ ಖಾತೆಯನ್ನು ಹೊಂದಬಹುದಾಗಿದ್ದು, ಪಡಿತರ ಚೀಟಿದಾರರು ಹೆಚ್ಚಿನ ಮಾಹಿತಿಗಾಗಿ ಆಯಾ ನ್ಯಾಯಬೆಲೆ ಅಂಗಡಿ ಯವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗಸ್ಟ್ ತಿಂಗಳಲ್ಲಿ ಹಣ ಜಮೆ ಆಗಿರುವುದು ನಿಮ್ಮ ಮೊಬೈಲ್ ಗೆ ಆಗಲೇ ಮೆಸೇಜ್ ಬಂದು ಹಣವು ಜಮೆ ಆಗಿದೆ. ಅದೇ ರೀತಿಯಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಮತ್ತೆ ಅನ್ನ ಭಾಗ್ಯ ಹಣ ಈಗಾಗಲೇ ಸ್ಟೇಟಸ್ ಬಿಡುಗಡೆ ಮಾಡಿದ್ದು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಅಲ್ಲಿ ಕಾಣಿಸುವ ನಿಮ್ಮ ಜಿಲ್ಲೆಯ ಲಿಂಕ್ ಮೇಲೆ ಕಾಣಿಸುತ್ತದೆಯೋ ಅದನ್ನು ಕ್ಲಿಕ್ ಮಾಡಿಕೊಂಡು ನಂತರದಲ್ಲಿ ತಿಂಗಳನ್ನು ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು(RC number)ಇಲ್ಲಿ ನಮೂದಿಸಿ ನಂತರ ಮುಂದೆ ಕ್ಲಿಕ್ ಮಾಡಿದ ಮೇಲೆ ಮತ್ತೆ ನಿಮ್ಮ ಮನೆಯಲ್ಲಿ ಎಷ್ಟು ಜನರಿಗೆ ಮತ್ತು ಎಷ್ಟು ರೂಪಾಯಿಗಳು ಜಮಾ ಆಗುತ್ತದೆ ಎಂದು ತೋರಿಸುತ್ತದೆ.
ಅನ್ನಭಾಗ್ಯ ಪ್ರತಿ ತಿಂಗಳ ಜಮೆ ಆಗಿರುವ ಸ್ಟೇಟಸ್ ಚೆಕ್ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಖಾತೆಗೆ ಹಣ ಜಮಾ ಆಗಿರುವುದನ್ನು ಪರಿಶೀಲಿಸಿಕೊಳ್ಳಿ.
https://ahara.kar.nic.in/lpg/re
ನಿಮಗೆ ಈ ಕೆವೈಸಿ ಬಗ್ಗೆ ಮಾಹಿತಿ ಗೊತ್ತಿರಬಹುದು ಯಾರದು ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಬ್ಯಾಂಕ್ ಪುಸ್ತಕಕ್ಕೆ ಲಿಂಕ್ ಮಾಡಿರುವುದಿಲ್ಲ ಅಂತಹವರಿಗೆ ಇನ್ನೂವರೆಗೆ ಅನ್ನ ಭಾಗ್ಯ ಹಣ ಜಮೆಯಾಗಿಲ್ಲ ಕಾರಣ ಅನ್ನಭಾಗ್ಯ ಹಣವು ನೇರವಾಗಿ ಆಧಾರ್ ಕಾರ್ಡ್ ಸಂಖ್ಯೆಗೆ ಹಾಕಿರುವುದರಿಂದ ಯಾವ ಆಧಾರ ಸಂಖ್ಯೆಗೆ ಯಾವ ಬ್ಯಾಂಕ್ ಖಾತೆ ಸೀಡಿಂಗ್ ಆಗಿರುತ್ತದೆಯೋ, ಆ ಖಾತೆಗೆ ಹಣ ಜಮೆಯಾಗುತ್ತದೆ ಇದರಿಂದಾಗಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಥವಾ ತಪ್ಪದರೂ ಹಣ ವರ್ಗಾವಣೆ ಆಗುವುದಿಲ್ಲ.
ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್:-
(ಜೂಲೈ,ಆಗಸ್ಟ್,ಸೆಪ್ಟೆಂಬರ್ ) ಮೂರು ತಿಂಗಳ ಹಣ ಜಮಾ ಸ್ಟೇಟಸ್ ಮಾಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ಅಲ್ಲಿ ಕಾಣಿಸುವ ತಿಂಗಳನ್ನು ಆಯ್ಕೆ ಮಾಡಿಕೊಂಡು ಕೆಳಗೆ ತೋರಿಸಿರುವ ಆರ್‌ಸಿ ನಂಬರ್ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಜಮಾ ಹಣವನ್ನು ತೋರಿಸುತ್ತದೆ.
https://ahara.kar.nic.in/status1/status_of_dbt_new.aspx
-: ಲೇಖನ ಮುಕ್ತಾಯ :-
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಹಾಗೂ ಕೃಷಿ ವಾಹಿನಿ ಗ್ರೂಪನ್ನು ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻https://chat.whatsapp.com/K9mNNO3T6FzKJGch4oqd2m
ತಪ್ಪದೆ ಓದಿರಿ :-
➡️ ಮುಂದಿನ ತಿಂಗಳಿನಿಂದ ಅನ್ನ ಭಾಗ್ಯ ಹಣ ಜಮೆ ಆಗುವುದಿಲ್ಲ ಅದರ ಬದಲಾಗಿ ಅಕ್ಕಿ ವಿತರಣೆ https://krushivahini.com/2023/09/29/10-kg-annabhagya-rice-guaranteed/
➡️ ನಿಮ್ಮ ಆಧಾರ್ ಗೆ ಬ್ಯಾಂಕ್ ಲಿಂಕ್ ಆಗದೇ ಇದ್ದರೆ ನಿಮಗೆ ಪಿಂಚಣಿ ಸೌಲಭ್ಯ ಬರುವುದಿಲ್ಲ https://krushivahini.com/2023/09/29/if-aadhaar-is-not-linked-to-the-bank-by-september-30-the-pension-facility-will-stop/
➡️ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ https://krushivahini.com/2023/09/28/the-government-has-given-good-news-about-the-application-for-the-new-ration-card/
➡️ ಈ 10 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಹಣ ಬರುವುದು ನಿಮ್ಮ ಜಿಲ್ಲೆ ಇದೆ ಚೆಕ್ ಮಾಡಿ https://krushivahini.com/2023/09/28/grulahakshmi-yojana-funds-will-arrive-on-september-30-for-these-ten-districts/
➡️ ನಿಮ್ಮ ಹೊಲದ ಮೇಲೆ ಎಷ್ಟು ಸಾಲ ಇದೆ ಎಂಬುದನ್ನು ಮೊಬೈಲ್ನಲ್ಲಿ ತಿಳಿದುಕೊಳ್ಳಿ https://krushivahini.com/2023/09/28/how-much-debt-is-owed-on-your-farm-see-here/
[…] ➡️ ಅನ್ನ ಭಾಗ್ಯ ಯೋಜನೆಯ ಮೂರನೇ ಕಂತಿನ ಹಣ ಜಮೀನಿನ ಹೆಸರನ್ನು ಪರಿಶೀಲಿಸಿಕೊಳ್ಳಿ https://krushivahini.com/2023/09/29/annabhagya-third-installment-money-deposit/ […]