Management of sucking insects in ಕಾಟನ್

(ರಸಹೀರುವ ಕೀಟಗಳ ನಿರ್ವಹಣೆ:)

•ಹತ್ತಿ ಬೆಳೆಯಲ್ಲಿ ಮೊದಲ ಹಂತದಲ್ಲಿ ರಸ ಹೀರುವ ಕೀಟಗಳ ನಿರ್ವಹಣೆಗೆ ಇಮಿಡಾಕ್ಲೋಪ್ರಿಡ್(Imidacloprid) 70 ಡಬ್ಲ್ಯೂ.ಪಿ (10 ಗ್ರಾಂ ಪತಿ ಕಿ.ಗ್ರಾಂ ಬೀಜಕ್ಕೆ) ಕೀಟನಾಶಕದಿಂದ ಬೀಜೋಪಚಾರ ಮಾಡಿದ ಹತ್ತಿ ಬೀಜಗಳನ್ನು ಉಪಯೋಗಿಸಿದಲ್ಲಿ 30 ರಿಂದ 40 ದಿವಸಗಳವರೆಗೆ ರಸಹೀರುವ ಕೀಟಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದಲ್ಲದೇ ಉಪಕಾರಿ ಕೀಟಗಳನ್ನು ಸಂರಕ್ಷಿಸಬಹುದು.

•ರಸಹೀರುವ ಕೀಟಗಳ ಹತೋಟಿಗಾಗಿ 0.3 ಗ್ರಾಂ ಪ್ಲೋನಿಕ್ ಆರ್ಮಿ(Flonicamid) 50 ಡಬ್ಲ್ಯುಪಿ / ಡೈನೋಟಿಫ್ಯುರಾನ್ 20 ಎಸ್.ಜಿ ಅಥವಾ 0.20 ಗ್ರಾಂ ಅಸಿಟಾಮಿಪ್ರಿಡ್ 20 ಎಸ್.ಪಿ(Acetamarphid 20sp) ಅಥವಾ 1.0 ಮಿ.ಲೀ. ಪಿಪ್ರೋನಿಲ್(Fipronil)5 ಎಸ್.ಸಿ/ 0.20 ಗ್ರಾಂ ಥೈಯಾಮೆಥಾಕ್ಸಮ್(Thaimethoxam) 25 ಡಬ್ಲ್ಯು.ಡಿಜಿ ಅಥವಾ 0.07 ಗ್ರಾಂ ಕ್ಲೋಥಯಾನಿಡಿನ್(Clothinidian) 50 ಡಬ್ಲು.ಡಿಜಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಪ್ರತಿ ಎಕರೆಗೆ 200-250 ಲೀ. ಸಿಂಪರಣಾ ದ್ರಾವಣ ಬಳಸಬೇಕು.

★ಕಾಯಿ ಕೊರೆಯುವ ಕೀಟಗಳು (Boll worms):

ಹತ್ತಿ ಬೆಳೆಯ ಹೂವು, ಮೊಗ್ಗು ಮತ್ತು ಕಾಯಿ ಬೆಳವಣಿಗೆ ಹಂತದಲ್ಲಿ ಮೂರು ತರಹದ ಕಾಯಿ ಕೊರಕಗಳು ಕಾಣಿಸಿಕೊಂಡು ಬಾಧೆಯುಂಟು ಮಾಡುವುದರಿಂದ ಇಳುವರಿ ಮತ್ತು ಗುಣಮಟ್ಟ ಕಡಿಮೆಗೊಳ್ಳುತ್ತದೆ. ಮೂರು ತರಹದ ಕಾಯಿಕೊರಕಗಳು ಈ ಕೆಳಗಿನಂತಿವೆ.

ಅ) ಹಿಲಿಯೋಥಿಸ್ ಕಾಯಿಕೊರಕ (American boll worm): ಹತ್ತಿ ಅಲ್ಲದೆ 180 ಕ್ಕೂ ಹೆಚ್ಚು ಬೆಳೆಗಳಿಗೆ ಮಾರಕವಾಗಿದೆ. ಕಂದು ಬಣ್ಣದ ದೇಹ, ಮುಂದಿನ ರೆಕ್ಕೆಗಳ ಮೇಲೆ ನಸುಗಪ್ಪು ಬಣ್ಣದ ಒಂದೊಂದು ಚುಕ್ಕೆಗಳಿರುವ ಪತಂಗವು ನಸು ಹಳದಿ ವರ್ಣದ ಗಸಗಸೆ ಗಾತ್ರದ ಮೊಟ್ಟೆಗಳನ್ನು ಎಲೆ, ಕುಡಿ, ಮೊಗ್ಗು, ಹೂ ಮತ್ತು ಕಾಯಿಗಳ ಮೇಲೆ ಇಡುವುದು. ಮರಿ ಕೀಡೆಗಳು ಮೊಗ್ಗು, ಹೂ ಕಾಯಿಗಳನ್ನು ತಿಂದು ಹೊಸ ಮೊಗ್ಗು, ಹೂ ಕಾಯಿಗಳನ್ನು ಬಾಧಿಸುತ್ತ ಹೋಗುವವು. ಬಿತ್ತಿದ 45-50 ದಿನಗಳ ನಂತರ ಈ ಕೀಟದ ಬಾಧೆ ಪ್ರಾರಂಭವಾಗಿ ಕೊನೆಯ ಹಂತದವರೆಗೂ ಮುಂದುವರಿಯುವುದು.

ಬ) ಚುಕ್ಕೆ ಕಾಯಿಕೊರಕ (Spotted boll worm): ಚುಕ್ಕೆ ಕಾಯಿಕೊರಕದ ಪತಂಗದ ಗಾತ್ರ ಚಿಕ್ಕದು ಮತ್ತು ಮುಂದಿನ ರೆಕ್ಕೆಗಳು ಹಸಿರು ಅಥವಾ ನಸು ಹಳದಿ ಬಣ್ಣದ ರೆಕ್ಕೆಗಳ ಮೇಲೆ ಹಸಿರು ಬಣ್ಣದ ಪಟ್ಟಿ ಹೊಂದಿರುತ್ತದೆ. ಈ ಕೀಡೆಗಳು ಬೆಳೆಯುತ್ತಿರುವ ಕುಡಿಗಳನ್ನು ಕೊರೆದು ಕಾಂಡದ ಒಳಗೆ ಸೇರಿ ಕೊರೆಯುವುದರಿಂದ ಕುಡಿಗಳು ಬಾಗಿ ಬಾಡಿದಂತಾಗುವವು. ಬಾಧೆಗೊಳಗಾದ ಮೊಗ್ಗುಗಳು ಪೀರುಕಾಗಿ ಉದುರುವುದರಿಂದ ಕಾಯಿಗಳ ಸಂಖ್ಯೆ ಕಡಿಮೆಯಾಗಿ ಇಳುವರಿ ಕುಂಠಿತಗೊಳ್ಳುತ್ತದೆ

ಕ) ಗುಲಾಬಿ ಬಣ್ಣದ ಕಾಯಿಕೊರಕ (Pink boll worm) :

ಈ ಕೀಟದ ಬಾಧೆಯು ಮಧ್ಯ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಇತ್ತೀಚಿಗೆ ಹೆಚ್ಚಾಗಿ ಕಂಡುಬರುತ್ತಿದೆ. ನಸುಗಪ್ಪು ಬಣ್ಣದ, ಚಿಕ್ಕ ಗಾತ್ರದ ಪತಂಗಗಳು ಚಪ್ಪಟೆಯಾದ ಮೊಟ್ಟೆಗಳನ್ನು ಮೊಗ್ಗು, ಹೂ ಮತ್ತು ಕಾಯಿಗಳ ಮೇಲಿಡುವುದು, ಹೊರಬಂದ ಮರಿ ಕೀಡೆಯು ನೇರವಾಗಿ ಕಾಯಿಗಳ ಒಳಗೆ ಸೇರಿ ತಿರುಳನ್ನು ತಿಂದು ಅಲ್ಲಿಯೇ ಕೋಶಾವಸ್ಥೆ ತಲುಪುವದು. ಪರಿಣಾಮವಾಗಿ ಕಾಯಿಗಳು ಇರುಕಲಾಗಿ ಒಡೆಯುವವು. ಇದರಿಂದ ಹತ್ತಿಯ ಇಳುವರಿ ಮತ್ತು ಗುಣಮಟ್ಟ ಕುಂಠಿತವಾಗುತ್ತದೆ.

ಹತ್ತಿ ಬೆಳೆಯಲ್ಲಿ ಕಾಯಿ ಕೊರಕಗಳ ನಿರ್ವಹಣೆ:-

Control of bollworms in cottan..

0.5 ಮಿ.ಲೀ, ಇಂಡೋಕ್ಸಿಕಾರ್ಬ್(Indoxicarb)14.5 ಎಸ್.ಸಿ, 0.2 ಮಿ.ಲೀ ಸೈನೊಸ್ಯಾಡ್(Spinosad) 48 ಎಸ್.ಸಿ, ಅಥವಾ 0.25 ಗ್ರಾಂ ಎಮೊಮೆಕ್ಟನ್ ಬೆಂಜೋಯೇಟ್(Emamectin benzoate)5 ಎಸ್.ಸಿ, ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

-:ಲೇಖನ ಮುಕ್ತಾಯ :-

ತಪ್ಪದೆ ಓದಿರಿ:-

➡️ ಈ ಹತ್ತು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಣ ಜಮೆ ಯಾಗುತ್ತದೆ ನಿಮ್ಮ ಜಿಲ್ಲೆ ಹೆಸರನ್ನು ನೋಡಿರಿ https://krushivahini.com/2023/09/28/grulahakshmi-yojana-funds-will-arrive-on-september-30-for-these-ten-districts/

➡️ ನಿಮ್ಮ ಹೊಲದ ಮೇಲೆ ಎಷ್ಟು ಸಾಲ ಇದೆ ಎಂಬುದನ್ನು ಮೊಬೈಲ್ ನಲ್ಲಿಯೇ ನೋಡಿರಿ https://krushivahini.com/2023/09/28/how-much-debt-is-owed-on-your-farm-see-here/

➡️ ನಿಮ್ಮ ಬೆಳೆ ಸಾಲ ಮನ್ನಾ ಈ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದರೆ ಮಾತ್ರ ಬೆಳೆ ಸಾಲ ಮನ್ನಾ ಆಗುತ್ತದೆ https://krushivahini.com/2023/09/13/implementation-of-new-loan-waiver-rules/

➡️ಅಪ್ರೂವಲ್ ಆದರೆ ಮಾತ್ರ ಮುಂಗಾರು ಬೆಳೆ ಸಮೀಕ್ಷೆ ಹಣ ಬರುತ್ತದೆ ಹೀಗೆ ಚೆಕ್ ಮಾಡಿ https://krushivahini.com/2023/09/15/check-crop-survey-status-in-mobile/

➡️ ಸರ್ಕಾರದಿಂದ ಅಧಿಕೃತ ಬರಗಾಲ ಘೋಷಿತ ತಾಲೂಕುಗಳ ಪಟ್ಟಿ https://krushivahini.com/2023/09/14/official-drought-list-released-by-govt/

➡️ ಹೊಸ ರೇಷನ್ ಕಾರ್ಡ್ ಅಪ್ಡೇಟ್ ಹೀಗೆ ಮಾಡುದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಖಂಡಿತ https://krushivahini.com/2023/09/18/ration-card-new-update/

➡️ ಪಿಎಂ ಕಿಸಾನ್ 15ನೇ ಕಂತಿನ ಅರ್ಹ ರೈತರು ಪಟ್ಟಿ ನಿಮ್ಮ ಹೆಸರನ್ನು ಚೆಕ್ ಮಾಡಿ https://krushivahini.com/2023/09/13/pm-kisan-15th-batch-farmers-list-released-check-your-name/

➡️ ಪಿಎಂ ಕಿಸಾನ್ 15ನೇ ಕಂತಿನ ಅನರ್ಹ ರೈತರು ಪಟ್ಟಿ ನಿಮ್ಮ ಹೆಸರನ್ನು ಚೆಕ್ ಮಾಡಿ https://krushivahini.com/2023/09/14/pm-kisan-15th-installment-list-of-ineligible-farmers-released/

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಕೃಷಿ ವಾಹಿನಿ ಗ್ರೂಪ್ ಸೇರಲು ಕಳಕೊಂಡ ಲಿಂಕ್ ನ್ನು ಒತ್ತಿರಿ

https://chat.whatsapp.com/K9mNNO3T6FzKJGch4oqd2m

Leave a Reply

Your email address will not be published. Required fields are marked *