How much debt is owed on your farm, see here ರಾಜ್ಯ ಸರ್ಕಾರದ ಕಂದಾಯ ಇಲಾಖೆ ಕಡೆಯಿಂದ ಬಿಡುಗಡೆ ಆದ ವೆಬ್ಸೈಟ್ ಇದೆ. ರೈತರು ಭೂಮಿ( Bhoomi) ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ರೈತರಿಗೆ ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ. ಹಾಗೂ ಅದೇ ರೀತಿ

https://landrecords.karnataka.gov.in/.

ಈ ಲಿಂಕ್ ಮೂಲಕ ಕೂಡ ಮಾಹಿತಿ ಪಡೆಯಬಹುದು.

ಬನ್ನಿ ಹಾಗಾದರೆ ನಿಮ್ಮ ಜಮೀನಿನ ಆಧಾರದ ಮೇಲೆ ಎಷ್ಟು ಲಕ್ಷದವರೆಗೆ ಸಾಲ ಇದೆ ಎಂದು ನೋಡೋಣ.

ಮೊದಲಿಗೆ ಭೂಮಿ ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿ.

ಅಥವಾ Https://landrecords.karnataka.gov.in/ ಈ ಲಿಂಕ್ ಹಾಕಿ ಸರ್ಚ್ ಮಾಡಿ.

ಈ ವೆಬ್ ಸೈಟಿಗೆ ಹೋದ ನಂತರ ಏನು ಮಾಡಬೇಕು?

ನಂತರ ಅಲ್ಲಿ ಪಹಣಿ ನಂಬರ್ ಹಾಗೂ ಜಿಲ್ಲಾ, ತಾಲೂಕು,ಗ್ರಾಮ ಹಿಸ್ಸಾ ನಂಬರ್ ಹೀಗೆ ಮಾಹಿತಿ ಕೇಳುತ್ತದೆ.

ನಂತರ ಅಲ್ಲಿ ಎಲ್ಲಾ ಮಾಹಿತಿ ಹಾಕಿದ ನಂತರ ಮುಂದೆ ಹೋಗಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.ಇದೆಲ್ಲ ಆದ ನಂತರ ಅಲ್ಲಿ ನಿಮ್ಮ ಹೆಸರು ಹಾಗೂ ನಿಮ್ಮ ಜಮೀನಿನ ಸಂಪೂರ್ಣ ಮಾಹಿತಿ ದೊರೆಯುತ್ತದೆ. ನಂತರ ಅಲ್ಲಿ ವಿವ್ ಆರ್ ಟಿ ಸಿ (view rtc) ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮ್ಮ ಜಮೀನಿನ ಪಹಣಿ ದೊರೆಯುತ್ತದೆ ಅದರಲ್ಲಿ ನಿಮ್ಮ ಜಮೀನಿನ ಆಧಾರದ ಮೇಲೆ ಇರುವ ಸಾಲದ ಮೊತ್ತದ ಮಾಹಿತಿ ದೊರೆಯುತ್ತದೆ.

ಪಹಣಿ ಡೌನ್ಲೋಡ್ ಮಾಡುವುದು ಹೇಗೆ?

ಮೊದಲಿನಂತೆ ಕಛೇರಿಗೆ ಹೋಗಿ ಪಹಣಿ ತಗೆದುಕೊಳ್ಳುವ ಕಾಲ ಹೋಗಿದೆ ಈಗ ಏನಿದ್ದರೂ ಆನ್ಲೈನ್ ಕಾಲ. ಈಗ ನೀವು ನಿಮ್ಮ ಮೊಬೈಲ್ ನಲ್ಲಿಯೇ ಪಹಣಿ ಡೌನ್ಲೋಡ್ ಮಾಡಿಕೊಳ್ಳಬಹುದು.

https://landrecords.karnataka.gov.in/.

ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಅವರು ಕೇಳಿದ ಮಾಹಿತಿ ಹಾಕಿದರೆ ನಿಮಗೆ ಪಹಣಿ ಕೋತಲ್ಲಿಯೆ ದೊರೆಯುತ್ತದೆ. ನಿಮಗೆ ನಿಮ್ಮ ಹೋಲದ ಪಹಣಿ ಪಡೆಯಬೇಕಿದ್ದರೇ, ಮೊದಲಿನಂತೆ ನಾಡ ಕಚೇರಿಗೆ ಹೋಗಿ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಆನ್‌ಲೈನ್‌ ಮೂಲಕ ಅತೀ ಸುಲಭವಾಗಿ ಹೋಲದ RTC ಉತಾರ/ ಪಹಣಿಯನ್ನು ನೀವು ಪಡೆಯಬಹುದಾಗಿದೆ. ಹಾಗೆಯೇ ಪಹಣಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಸಹ ಅವಕಾಶವಿದೆ.

ಕಟ್ಟುನಿಟ್ಟಾಗಿ ಹೇಳುವುದಾದರೆ, ಖಾತಾ ಪ್ರಮಾಣಪತ್ರ ಅಥವಾ ಖಾತಾ ಸಾರವು ಹೇಳಿದ ಆಸ್ತಿಯ ಮೇಲೆ ಆಸ್ತಿ ತೆರಿಗೆ ಪಾವತಿಸಲಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಯಾರ ಹೆಸರಿನಲ್ಲಿದೆಯೋ ಆ ವ್ಯಕ್ತಿಗೆ ಆಸ್ತಿಯ ಯಾವುದೇ ಮಾಲೀಕತ್ವವನ್ನು ನೀಡುವುದಿಲ್ಲ.

-: ಲೇಖನ ಮುಕ್ತಾಯ :-

ತಪ್ಪದೆ ಓದಿರಿ :-

➡️ ಹತ್ತು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗುತ್ತದೆ ನಿಮ್ಮ ಜಿಲ್ಲೆ ಹೆಸರನ್ನು ಪರೀಕ್ಷಿಸಿ https://krushivahini.com/2023/09/28/grulahakshmi-yojana-funds-will-arrive-on-september-30-for-these-ten-districts/

➡️ ಕರ್ನಾಟಕ ಬಂದ್ ಶಾಲೆಗಳಿಗೆ ರಜೆ ಇರುತ್ತದೆಯೋ ಇಲ್ಲವೋ ಏನೆಲ್ಲಾ ಇರುತ್ತದೆ ಇರುವುದಿಲ್ಲ ನೋಡಿ https://krushivahini.com/2023/09/28/what-will-happen-during-karnataka-bandh-tomorrow-what-not-check-where/

➡️ ಇದರಲ್ಲಿ ಅಪ್ರೂವಲ್ ಆದರೆ ಮಾತ್ರ ನಿಮ್ಮ ಮುಂಗಾರು ಬೆಳೆ ಸಮೀಕ್ಷೆಯ ಹಣ ಬರುತ್ತದೆ https://krushivahini.com/2023/09/15/check-crop-survey-status-in-mobile/

➡️ 19.69 ಕೋಟಿ ಬೆಳೆ ಪರಿಹಾರ ಹಣ ಬಿಡುಗಡೆಯಾಗಿದೆ ನಿಮ್ಮ ಹೆಸರನ್ನು ಚೆಕ್ ಮಾಡಿ https://krushivahini.com/2023/09/17/crop-damage-compensation-status/

➡️ ರೇಷನ್ ಕಾರ್ಡ್ ಹೊಸ ಅಪ್ಡೇಟ್ ಇದನ್ನು ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ https://krushivahini.com/2023/09/18/ration-card-new-update/

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿ ಹಾಗೂ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻https://chat.whatsapp.com/K9mNNO3T6FzKJGch4oqd2m

Leave a Reply

Your email address will not be published. Required fields are marked *