PM Kisan 15th installment list of ineligible farmers released

ನಮಸ್ಕಾರ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ಪಿಎಂ ಕಿಸಾನ್ ಯೋಜನೆಯ ಅರ್ಹ ಮತ್ತು ಅನರ್ಹ ರೈತರ ಪಟ್ಟಿಯನ್ನು ನೋಡೋಣ.

ಕೇಂದ್ರ ಸರ್ಕಾರದ 15 ನೇ ಕಂತು ಬಿಡುಗಡೆಯಾಗುವ ರೈತರ ಪಟ್ಟಿಯನ್ನು ಸರ್ಕಾರದಿಂದ ಬಿಡಲಾಗಿದೆ. ಪಿಎಂ ಕಿಸಾನ್ ಯೋಜನೆಯ ಅಡಿ ರೈತರಿಗೆ ತಿಂಗಳಿಗೆ ರಾಜ್ಯದ ರೈತರಿಗೆ 2000 ಹಣಗಳನ್ನು ರೈತರ ಖಾತೆಗೆ ಜಮಾ ಮಾಡಿದೆ.

ಪ್ರಸ್ತುತ ಕೇಂದ್ರ ಸರ್ಕಾರವು ಪಿಎಂ ಕಿಸಾನ್ 15ನೇ ಕಂತಿನ ಫಲಾನುಭವಿಗಳ ಗ್ರಾಮವಾರು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಿ.

ಪಿಎಂ ಕಿಸಾನ್ 15 ನೇ ಕಂತಿನ ಫಲಾನುಭವಿಗಳ ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಲು ಈ ಕೆಳಗೆ ತಿಳಿಸಿರುವಂತೆ ಮಾಡಿ.

ಮೊದಲನೆಯದಾಗಿ ನಾವು ಕೊಟ್ಟಿರುವ ಈ ಕೆಳಗಿನ ಲಿಂಕ್ ಮೇಲೆ ಒತ್ತಬೇಕು 👇🏻

https://pmkisan.gov.in/VillageDashboard_Portal.aspx

ಈ ಲಿಂಕ್ ಓಪನ್ ಆದಮೇಲೆ ಅಲ್ಲಿ ಹೊಸ ಮುಖಪುಟದಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.

ಎಲ್ಲಾ ಆಯ್ಕೆಗಳನ್ನು ಸರಿಯಾಗಿ ಆಯ್ದುಕೊಂಡು ನಂತರ submit ಎಂಬ option ಮೇಲೆ ಕ್ಲಿಕ್ ಮಾಡಿ.

ನಂತರ ಈ ಮೇಲಿನ ಮುಖಪುಟದಲ್ಲಿ ಕಾಣುವ Aadhaar authentication status ಇಲ್ಲಿ ತೋರಿಸಿರುವ ಹಾಗೆ ಅದರ ಮೇಲೆ ಕ್ಲಿಕ್ ಮಾಡಿ. ನಂತರ total negligible ಲಿಸ್ಟ್ ನಲ್ಲಿ ಯಾವ ರೈತರು ಪಿಎಂ ಕಿಸಾನ್ 15ನೇ ಕಂತಿನ ಯೋಜನೆಯ ಹಣ ಸಿಗೋದಿಲ್ಲ ಅವರ ಹೆಸರನ್ನು ಕೆಳಗಡೆ ನೋಡಬಹುದು.

ಪಿಎಂ ಕಿಸಾನ್ 15 ನೇ ಕಂತಿನ ಫಲಾನುಭವಿಗಳ ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಲು ಈ ಕೆಳಗೆ ತಿಳಿಸಿರುವಂತೆ ಮಾಡಿ.

1. ಮೊದಲು ನಿಮ್ಮ ಮೊಬೈಲ್ ನಲ್ಲಿ ನೀವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು.

https://pmkisan.gov.in/Rpt_BeneficiaryStatus_pub.aspx

ಆಗ ಹೊಸ ಮುಖಪುಟದಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.

ಎಲ್ಲಾ ಆಯ್ಕೆಗಳನ್ನು ಸರಿಯಾಗಿ ಆಯ್ದುಕೊಂಡು ನಂತರ ಗೆಟ್ ರಿಪೋರ್ಟ್ ಎಂಬ option ಮೇಲೆ ಕ್ಲಿಕ್ ಮಾಡಿ. ನಿಮಗೆ ಅಲ್ಲಿ ನಿಮ್ಮ ಗ್ರಾಮವಾರು ಫಲಾನುಭವಿಗಳ ಪಟ್ಟಿ ದೊರೆಯುತ್ತದೆ.

ಗ್ರಾಮವಾರು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಗ್ರಾಮದ ಫಲಾನುಭವಿಗಳ ಹೆಸರುಗಳನ್ನು ನೀಡಲಾಗುತ್ತದೆ. ಅಲ್ಲಿ ನೀವು ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಬಹುದು.

ಪಿಎಂ ಕಿಸಾನ್ ಅರ್ಹ ಫಲಾನುಭವಿಗಳು e-kyc ಮಾಡುವುದು ಕಡ್ಡಾಯ! ಈ ಕೆಳಗೆ ತೋರಿಸಿದ ಹಾಗೆ ನಿಮ್ಮ ಮೊಬೈಲ್ ನಲ್ಲಿಯೇ ಈ ಕೆವೈಸಿ ಅಪ್ಡೇಟ್ ಮಾಡಿ.

ಪಿ ಎಂ ಕಿಸಾನ್ E-Kyc ನಿಮ್ಮ ಮೊಬೈಲ್ ನಲ್ಲಿ ಲಿಂಕ್ ಮಾಡಿರಿ..

ಪಿಎಂ ಕಿಸಾನ್ ಯೋಜನೆಯ 2000 ಹಣ ಜಮಾ ಆಗಬೇಕಾದರೆ ಇ – ಕೆ ವೈ ಸಿ ಕಡ್ಡಾಯ ಮಾಡಲಾಗಿದೆ.

https://exlink.pmkisan.gov.in/aadharekyc.aspx

ಈ ಲಿಂಕ್ ಓಪನ್ ಆದಮೇಲೆ ಆಧಾರ್ ನಂಬರ್ ಅನ್ನು ನಮೂದಿಸಿ search ಮೇಲೆ ಒತ್ತಿರಿ.

ಮುಂದಿನ ಮುಖಪುಟದಲ್ಲಿ ನಿಮಗೆ ಆಧಾರ್ ಲಿಂಕ್ ನಲ್ಲಿರುವ ಮೊಬೈಲ್ ನಂಬರನ್ನು ನಮೂದಿಸಿ ನಂತರ ನಿಮ್ಮ ಆಧಾರ್ ನಂಬರ್ ಗೆ ಲಿಂಕ್ ಇರುವ ಮೊಬೈಲ್ ಗೆ ಬಂದಿರುವ ಒಟಿಪಿಯನ್ನು ಅಲ್ಲಿ ಹಾಕಿ ಇ-ಕೆ ವೈ ಸಿ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ನೋಡಿರಿ..

ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿಯಾಧಾರಿತ ಎಲ್ಲಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳ ಕಂಡ ಲಿಂಕ್ ಅನ್ನು ಒತ್ತಿರಿ..

https://chat.whatsapp.com/K9mNNO3T6FzKJGch4oqd2m

➡️ ಆಧಾರ್ ನಂಬರ್ ಹಾಕಿ ಬೆಳೆ ಹಾನಿ ಪರಿಹಾರ ಹಣ ಜಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ. https://krushivahini.com/2023/09/17/crop-damage-compensation-status/

Leave a Reply

Your email address will not be published. Required fields are marked *