ಪ್ರಿಯ ರೈತರೇ, ಸಾಮಾನ್ಯವಾಗಿ ರೈತರ ನಡುವೆ ಜಮೀನಿನ ಬಗ್ಗೆ ತಂಟೆ ತಕರಾರುಗಳು ನಡೆಯುತ್ತಲೇ ಇರುತ್ತವೆ. ತಮ್ಮ ಜಮೀನನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡುವಾಗ ಅಥವಾ ಬೇರೆಯವರ ಜಮೀನನ್ನು ಖರೀದಿಸಿದಾಗ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ರೈತರು ಕೊಡುವ ಕಷ್ಟ ಅಷ್ಟಿಷ್ಟಲ್ಲ. ರೈತರು ತಾವು ಖರೀದಿಸಿದ ಅಥವಾ ವರ್ಗಾವಣೆ ಮಾಡಿದ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಕೆಲವೊಮ್ಮೆ ವರ್ಷಗಳೇ ಬೇಕಾಗುತ್ತವೆ. ರೈತರಿಗೆ ಕಡಿಮೆ ಸಮಯದಲ್ಲಿ ತಮ್ಮ ಜಮೀನಿನ ವರ್ಗಾವಣೆ ದಾಖಲೆಯನ್ನು ಕಡಿಮೆ ಸಮಯದಲ್ಲಿ ಪಡೆದುಕೊಳ್ಳಲು ರಾಜ್ಯ ಸರ್ಕಾರವು ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳುವ ಹೊಸ ಅನುಕೂಲವನ್ನು ಜಾರಿಗೆ ತರಲಾಗಿದೆ.
ಸರ್ಕಾರದ ಈ ಹೊಸ ಯೋಜನೆಯಿಂದ ಅಥವಾ ಅನುಕೂಲದಿಂದ ಇದೀಗ ರೈತರು ತಮ್ಮ ಜಮೀನಿನ ಸುತ್ತಳತೆ ಎಷ್ಟು? ಅಥವಾ ವಿಸ್ತೀರ್ಣ ಎಷ್ಟು? ಹಾಗೂ ತಮ್ಮ ಜಮೀನಿನ ಪಹಣಿಯನ್ನು ಯಾವ ರೀತಿ ಡೌನ್ಲೋಡ್ ಮಾಡಿಕೊಳ್ಳಬೇಕು? ನಿಮ್ಮ ಜಮೀನಿನ ಚೆಕ್ ಬಂದಿ, ನಿಮ್ಮ ಜಮೀನಿನ ಸರ್ವೆ ನಂಬರ್ ಎಷ್ಟು? ಮತ್ತು ಅದರ ಸುತ್ತಮುತ್ತ ಯಾರ ಯಾರ ಜಮೀನಿದೆ? ಎಂಬುದರ ಬಗ್ಗೆ ಇರುವ ಸಂಪೂರ್ಣ ವಿವರವನ್ನು ರೈತರು ಇದರಿಂದ ತಿಳಿದುಕೊಳ್ಳಬಹುದಾಗಿದೆ.
ಇತ್ತೀಚಿನ ದಿನಗhttps://bhoomojini.karnataka.gov.in/service39/ಳಲ್ಲಿ ಭೂ ವರ್ಗಾವಣೆ ಅಥವಾ ಖರೀದಿ ಮಾಡಿಕೊಂಡ ರೈತರು ತಮ್ಮ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪಡುತ್ತಿರುವ ಕಷ್ಟವನ್ನು ಅರಿತ ರಾಜ್ಯ ಸರ್ಕಾರ ರೈತರ ಜಮೀನು ಭೂ ಪರಿವರ್ತನೆಯಾದ ನಂತರ ಅದರ ಹಕ್ಕು ಪತ್ರವನ್ನು ಅಥವಾ ತಮ್ಮ ಹೆಸರಿಗೆ ಆದ ಪಹಣಿ ದಾಖಲೆಯನ್ನು ನೀಡುವುದು ತಡವಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಇತ್ತೀಚಿಗೆ ನಡೆದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಭೂ ಪರಿವರ್ತನೆಗೊಂಡ ರೈತರ ಹಕ್ಕು ಪತ್ರಗಳನ್ನು ಕಡಿಮೆ ಅವಧಿ ಒಳಗಾಗಿ ತಿದ್ದುಪಡಿ ಮಾಡಿಸಿ ರೈತರಿಗೆ ಅವರ ಜಮೀನಿನ ಹಕ್ಕು ಪತ್ರವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ನಿಮ್ಮ ಜಮೀನಿನ ಹಕ್ಕು ಪತ್ರಗಳನ್ನು ಪಡೆಯುವುದು ಹೇಗೆ?
ರೈತರು ತಮ್ಮ ಜಮೀನಿಗೆ ಸಂಬಂದಿಸಿದ ಯಾವುದೇ ತರಹದ ಸರ್ಕಾರಿ ದಾಖಲೆಗಳನ್ನು ಪಡೆದುಕೊಳ್ಳಲು ಅಥವಾ ನಿಮ್ಮ ಜಮೀನಿನ ಮಾಹಿತಿ ವಿವರಗಳನ್ನು ಪಡೆದುಕೊಳ್ಳಲು, ಈ ಕೆಳಗಿನಂತೆ ಓದುತ್ತಾ ಕೆಳಗೆ ತಿಳಿಸಿರುವ ಲಿಂಕ್ ನ ಸಹಾಯದಿಂದ ನಿಮ್ಮ ಹೊಲಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ
ಸರ್ವೇ ನಂಬರನ್ನು ನಮೂದಿಸಿ ನಿಮ್ಮ ಹೊಲದ ಉತರ ನೋಡಿರಿ..
ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ನಿಮ್ಮ ಜಿಲ್ಲೆ,ತಾಲೂಕು,ಹೋಬಳಿ,ಹಾಗೂ ನಿಮ್ಮ ಹಳ್ಳಿಯನ್ನು, ಆಯ್ಕೆ ಮಾಡಿ ನಂತರ ಸರ್ವೆ ನಂಬರನ್ನು ನಮೂದಿಸಿದ ನಂತರ
• ನಿಮ್ಮ ಹೊಲದ ಸಂಪೂರ್ಣ ಉತಾರ (view land data )
• ನಿಮ್ಮ ಹೊಲದ ಸಂಪೂರ್ಣ ಬದಲಾವಣೆ (view mutation status of field)ಅನ್ನು ನೋಡಿರಿ
• ಕೊನೆಯದಾಗಿ ಹೊಲದ ಮೇಲೆ ಕೇಸ್ ಅಥವಾ ಜಗಳವಿದ್ದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು (View dispute case information)ಅನ್ನು ಒತ್ತೀರಿ..
https://landrecords.karnataka.gov.in/service53/
ಗ್ರಾಮವಾರು ಮ್ಯುಟೇಷನ್ ಪ್ರಕ್ರಿಯೆಯಲ್ಲಿರುವ ಸರ್ವೇ ನಂಬರ್ , ವಹಿವಾಟಿನ ವಿವರ ಹಾಗು ಮ್ಯುಟೇಷನ್ ಸ್ಥಿತಿಯನ್ನು (Mutation status)ಇಲ್ಲಿ ವೀಕ್ಷಿಸಬಹುದು ಹಾಗು ಡೌನ್ಲೋಡ್ ಮಾಡಿ ಕೊಳ್ಳಬಹುದು👇🏻
https://landrecords.karnataka.gov.in/service40/BhoomiPendencyReport
ನಿಮ್ಮ ಹೊಲಕ್ಕೆ ಸಂಬಂಧಿಸಿದ ಎಲ್ಲಾ ಸರ್ವೆ ಡಾಕ್ಯುಮೆಂಟ್ಸ್ (Survey Documents)ನೋಡಲು ಕೆಳಗಿನ ಲಿಂಕ್ ಮೇಲೆ ಒತ್ತಿರಿ ಚೆಕ್ ಮಾಡಿ👇🏻
https://bhoomojini.karnataka.gov.in/service35/
ನಿಮ್ಮ ಜಮೀನಿನ ಆಕರ ಬಂದ /ಚೆಕ್ ಬಂದಿ(akara banda)ನೋಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ 👇🏻
https://bhoomojini.karnataka.gov.in/service39/
ರೈತರು ವರ್ಗಾವಣೆಯಾದ ಜಮೀನನ್ನು ಅಥವಾ ತಾವು ಖರೀದಿ ಮಾಡಿದ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ. ಇದಕ್ಕಾಗಿ ಕೆಲವು ಅಧಿಕಾರಿಗಳಿಗೆ ಲಂಚವನ್ನು ಸಹ ನೀಡಬೇಕಾಗುತ್ತದೆ. ಕೆಲವೊಮ್ಮೆ ಲಂಚ ಕೊಟ್ಟರು ಭೂ ಪರಿವರ್ತನೆಯ ಹಕ್ಕು ಪತ್ರ ನೀಡುವುದಿಲ್ಲ. ಅದಕ್ಕಾಗಿ ರಾಜ್ಯ ಸರ್ಕಾರ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಹಲವು ರೈತರಿಗೆ ತಮ್ಮ ಜಮೀನಿನ ವರ್ಗಾವಣೆಯ ಹಕ್ಕು ಪತ್ರವನ್ನು ಕೇವಲ ಏಳೇ ದಿನದಲ್ಲಿ ಪಡೆಯಲು ತುಂಬಾ ಅನುಕೂಲವಾಗುತ್ತದೆ.
ಇದಿಷ್ಟು ಈ ಭೂ ಪರಿವರ್ತನೆಯ ಹಕ್ಕು ಪತ್ರದ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದೆ. ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯನ್ನು ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
-: ಲೇಖನ ಮುಕ್ತಾಯ :-
➡️ ಪಿ ಎಂ ಕಿಸಾನ್ 15 ನೇ ಕಂತಿನ ಹಣ ಬಿಡುಗಡೆಯಾಗುವ ಪಟ್ಟಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ https://krushivahini.com/2023/09/13/pm-kisan-15th-batch-farmers-list-released-check-your-name/
➡️ ಆಧಾರ್ ನಂಬರ್ ಹಾಕಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವುದನ್ನು ಚೆಕ್ ಮಾಡಿ https://krushivahini.com/2023/08/30/gruhalakshmi-amount-credited-to-your-account/
➡️ ನೀವು ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಎಷ್ಟು ಪರಿಹಾರ ಸಿಗುತ್ತದೆ ಇಲ್ಲಿ ನೋಡಿ https://krushivahini.com/2023/09/04/which-crop-should-you-buy-insurance-for-check-if-you-get-this-solution/
➡️ ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್! ಇಂಥವರಿಗೆ ಹಣ ಸಿಗುವುದಿಲ್ಲ,, https://krushivahini.com/2023/09/08/annabhagya-yojana-new-update-they-dont-get-money/
ಈ ಲೇಖನವು ಅರ್ಥಪೂರ್ಣವಾಗಿದ್ದು ನಿಮಗೆ ಸರಿ ಅನಿಸಿದರೆ ತಪ್ಪದೇ ಎಲ್ಲರಿಗೂ ಶೇರ್ ಮಾಡಿ 🙏🏻
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ತಿಳಿಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿ ವಾಹಿನಿ ಗ್ರೂಪ್ಸ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿರಿ 👇🏻
https://chat.whatsapp.com/K9mNNO3T6FzKJGch4oqd2m