ಅನ್ನಭಾಗ್ಯ ಯೋಜನೆ ಹೊಸ ಅಪ್ಡೇಟ್!

ಇವರಿಗೆ ಹಣ ಸಿಗುವುದಿಲ್ಲನಮಸ್ಕಾರ ಸ್ನೇಹಿತರೆ, ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್ ಬಗ್ಗೆ ಸಂಪೂರ್ಣವಾಗಿ ತಿಳಿಯಿರಿ.ಈ ಲೇಖನ ವನ್ನು ತಪ್ಪದೆ ಸರಿಯಾಗಿ ಓದಿರಿ. ಹೌದು ಸರ್ಕಾರ ಈಗಷ್ಟೇ ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್ ಬಗ್ಗೆ ತಿಳಿಸಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ(Central Government) ಉಚಿತವಾಗಿ ಕೊಡುತ್ತಿರುವ 5 ಕೆಜಿ ಅಕ್ಕಿಗಳ (Free Rice) ಜೊತೆಗೆ ಇನ್ನೂ ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ರಾಜ್ಯದ ಫಲಾನುಭವಿಗಳಿಗೆ ನೀಡುವುದಾಗಿ ಭರವಸೆ ಕೊಟ್ಟಿದ್ದು, ಆದರೆ ಬೇಕಾಗಿರುವಷ್ಟು ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗದೆ ಇರುವ ಕಾರಣ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿಗೆ ತಲಾ ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ (DBT) ಮಾಡುತ್ತಿದ್ದಾರೆ.

ಜುಲೈ ಹಾಗೂ ಆಗಸ್ಟ್ ತಿಂಗಳ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಈಗಾಗಲೇ ಹಣ ಬಿಡುಗಡೆಯಾಗಿದೆ ಹಾಗೂ ಸಾಕಷ್ಟು ಜನರ ಖಾತೆಗೆ ಹಣ ಕೂಡ ವರ್ಗಾವಣೆ ಆಗಿದೆ., ಆದರೆ ಇನ್ನೂ ಹಲವರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯಾಗಲಿ ಹಣವಾಗಲಿ ಇದು ವರೆಗೂ ಸಿಕ್ಕಿಲ್ಲ.

ಸುಮಾರು 29 ಲಕ್ಷ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ. ತಾಂತ್ರಿಕ ದೋಷದ (Technical/server error) ಕಾರಣದಿಂದ ಇಂತಹ ಕುಟುಂಬಗಳಿಗೆ ಹಣ ನೀಡಲಾಗಿಲ್ಲ ಎಂದು ಸರ್ಕಾರ ಈಗಾಗಲೇ ಹೇಳಿದೆ.

ಫಲಾನುಭವಿಗಳ ಕುಟುಂಬದಲ್ಲಿ ಇರುವವರ ಸಂಖ್ಯೆ ಕನಿಷ್ಠ ಮಿತಿಯನ್ನು ದಾಟಿದೆ ಹಾಗೂ ಸತತ ಮೂರು ತಿಂಗಳಿನಿಂದ ಪಡಿತರ ಪಡೆಯದೆ ಇರುವವರಿಗೆ ಹಣ ನೇರ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ.ಈ ಕಾರಣದಿಂದಾಗಿ ಬಹಳಷ್ಟು ಜನರಿಗೆ ಹಣ ಜಮೆಯಾಗಿಲ್ಲ.

ಅನ್ನಭಾಗ್ಯ ಸ್ಥಗಿತಗೊಂಡ ಡಿ ಬಿ ಟಿ :-

ತಾಂತ್ರಿಕ ದೋಷದಿಂದ 29 ಲಕ್ಷ ಪಡಿತರ ಕುಟುಂಬಗಳಿಗೆ ಯೋಜನೆಯ ನೇರ ಹಣ ವರ್ಗಾವಣೆ (DBT) ಮಾಡುವುದನ್ನು ಸ್ಥಗಿತಗೊಳಿಸಿದ್ದೇವೆ ಎಂದು ಆಹಾರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

ಅಲ್ಲದೆ ಯಾರಿಗೆ ಪಡಿತರ ಸಿಕ್ಕಿಲ್ಲವೋ ಅಂತವರು ತಮ್ಮ ಪಡಿತರ ಚೀಟಿಯನ್ನು ಕೂಡಲೇ ತಿದ್ದುಪಡಿ ಮಾಡಿಕೊಂಡರೆ ಮತ್ತೆ ಈ ಸೌಲಭ್ಯ ಸಿಗುತ್ತದೆ ಎಂದಿದ್ದಾರೆ.ಇನ್ನು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೇವಲ ಎರಡೇ ದಿನ ಬಾಕಿಯಿದೆ.

ಇಷ್ಟು ಕುಟುಂಬಗಳು ಮೂರು ತಿಂಗಳಿನಿಂದ ರೇಷನ್ ಕಾರ್ಡ್ ಇದ್ದರು ರೇಷನ್ ಪಡೆದಿಲ್ಲ:

ಇನ್ನು ರಾಜ್ಯದಲ್ಲಿ ಸುಮಾರು 5.41 ಲಕ್ಷ ಕುಟುಂಬಗಳು ಹಾಗೂ ಸುಮಾರು 3.50 ಲಕ್ಷ ಕುಟುಂಬಗಳು ಗರಿಷ್ಠ ಸದಸ್ಯರ ಸಂಖ್ಯೆಯನ್ನು ಮೀರಿರುವ ಕಾರಣ ಅಂತಹ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

ಆದರೆ ಇಂಥವರಿಗೆ ಅನ್ನ ಭಾಗ್ಯ ಯೋಜನೆಯ ಹಣ ಬರುವುದಿಲ್ಲ, ಉಳಿದಂತೆ ಸರ್ಕಾರದಿಂದ ಸಿಗುವ ಐದು ಕೆಜಿ ಅಕ್ಕಿ ಸಿಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

ಕಳೆದ ಎರಡು ತಿಂಗಳಲ್ಲಿ ಅನ್ನಭಾಗ್ಯ ಯೋಜನೆಯ ನೇರಹಣ ವರ್ಗಾವಣೆಯ ಲಾಭ ಪಡೆದುಕೊಂಡವರಿಗೆ ಸರ್ಕಾರದ ಈ ಹೊಸ ರೂಲ್ಸ್ (Rules) ನಿರಾಸೆ ಮೂಡಿಸಿದೆ. ಯಾರ ಮನೆಯಲ್ಲಿ ಮೂರು ತಿಂಗಳಿನಿಂದ ರೇಷನ್ (ration) ಪಡೆದುಕೊಂಡಿಲ್ಲವೋ ಹಾಗೂ ಹೆಚ್ಚು ಸದಸ್ಯರ ಸಂಖ್ಯೆಯನ್ನು ಹೊಂದಿದ್ದರೆ ಅಂತವರಿಗೆ ಹೆಚ್ಚುವರಿ ಅಕ್ಕಿ ಹಾಗೂ ಹಣ ಎರಡು ಕೂಡ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆ :- ಅನ್ನ ಭಾಗ್ಯ ಯೋಜನೆ ಅಡಿ ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಈ ತರಹ ಚೆಕ್ ಮಾಡಿ

ಮೊದಲು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು

https://ahara.kar.nic.in/Home/EServices

ನಂತರ ಈ ಮುಖಪುಟ ತೆರೆಯುತ್ತದೆ ಅಲ್ಲಿ ಈ ರೇಷನ್ ಕಾರ್ಡ್ e-ration card ದೇವತ್ತಬೇಕು ನಂತರ ಕೆಳಗಡೆ ತೋರಿಸಿರುವ Show cancelled /suspended list ರದ್ದಾಗಿರುವ ಹಾಗೂ ತಡೆಹಿಡಿದಿರುವ ರೇಷನ್ ಪಟ್ಟಿ ಮೇಲೆ ಕ್ಲಿಕ್ ಮಾಡಿ

ನಂತರ ಅಲ್ಲಿ ಕಾಣಿಸುವ ಜಿಲ್ಲೆ ತಾಲೂಕು ತಿಂಗಳ ವರ್ಷ ಆಯ್ಕೆ ಮಾಡಿ Go mele ಕ್ಲಿಕ್ ಮಾಡಿದರೆ ನಿಮಗೆ ಬೇಕಾದ ರೇಷನ್ ಕಾರ್ಡ್ ರದ್ದಾಗಿರುವ ಬಗ್ಗೆ ಮಾಹಿತಿ ಸಿಗುತ್ತದೆ.

ಅದೇ ರೀತಿ ಆ ಮುಖಪುಟದಲ್ಲಿ ಕಾಣುವ ಶೋ ವಿಲೇಜ್ ಲಿಸ್ಟ್ (Show village list) ಅದರ ಮೇಲೆ ಕ್ಲಿಕ್ ಮಾಡಿದಾಗ ಇಲ್ಲಿ ಕಾಣಿಸುವ ಜಿಲ್ಲೆ ತಾಲೂಕು ಗ್ರಾಮ ಪಂಚಾಯಿತಿ ಹಳ್ಳಿ ಆಯ್ಕೆ ಮಾಡಿ Go ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮಗೆ ಹಳ್ಳಿವಾರು ಪಟ್ಟಿ ಸಿಗುತ್ತದೆ.

ಗೃಹಲಕ್ಷ್ಮಿ ಯೋಜನೆ ಹಳ್ಳಿ ಅವರು ಪಟ್ಟಿಯನ್ನು ಚೆಕ್ ಮಾಡಿ ಈ ಲಿಸ್ಟ್ ನಲ್ಲಿ ಇದ್ದರೆ ಮಾತ್ರ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತದೆ https://ahara.kar.nic.in/WebForms/Show_Village_List.aspx

–*ಲೇಖನ ಮುಕ್ತಾಯ *–

➡️ ಪಿ ಎಂ ಕಿಸಾನ್ ಯೋಜನೆ 15ನೇ ಕಂತಿನ ಹಣ ಈ ಲಿಸ್ಟ್ ನಲ್ಲಿ ಇದ್ದರೆ ಮಾತ್ರ 2000 ಹಣ ಜಮೆ ಆಗುತ್ತದೆ https://krushivahini.com/2023/09/13/pm-kisan-15th-batch-farmers-list-released-check-your-name/

➡️ ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಅರ್ಜಿ ಯನ್ನು ಸ್ಥಗಿತಗೊಳಿಸಲಾಗಿದೆ, ತಪ್ಪದೆ ತಿಳಿಯಿರಿ https://krushivahini.com/2023/09/06/new-registration-of-graha-lakshmi-yojana-has-been-stopped-temporarily/

➡️ ನೀವು ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಎಷ್ಟು ಪರಿಹಾರ ಸಿಗುತ್ತದೆ ನೋಡಿರಿ!! https://krushivahini.com/2023/09/04/which-crop-should-you-buy-insurance-for-check-if-you-get-this-solution/

➡️ ಟ್ಯಾಕ್ಸಿ ಆಟೋ ಪ್ಯಾಸೆಂಜರ್ ಕಾರ್ ಪಡೆಯಲು ಸರ್ಕಾರದಿಂದ ಮೂರು ಲಕ್ಷ ಸಹಾಯಧನ ಈಗಲೇ ಅರ್ಜಿ ಸಲ್ಲಿಸಿ https://krushivahini.com/2023/09/05/3-lakh-subsidy-for-purchase-of-taxi-goods-passenger-auto-rickshaw-vehicle-apply-now/

➡️ ಆಧಾರ್ ಸಂಖ್ಯೆಯನ್ನು ನಮೂದಿಸಿ ಗೃಹ ಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಮೊಬೈಲ್ ನಲ್ಲಿ ನೋಡಿರಿ https://krushivahini.com/2023/08/30/gruhalakshmi-amount-credited-to-your-account/

➡️ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಎರಡು ದಿನ ಬಾಕಿ ಕೂಡಲೇ ಅರ್ಜಿ ಸಲ್ಲಿಸಿ ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿ https://krushivahini.com/2023/09/02/ration-card-correction-rationapplication-invited/

Leave a Reply

Your email address will not be published. Required fields are marked *