ಗೃಹಲಕ್ಷ್ಮಿ ಯೋಜನೆ ಹೊಸ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಕಾರಣ ಏನು ಎಂದು ತಿಳಿಯಿರಿ!
Gruhalakshmi new update:- ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ಖಾತೆಗೆ ಹಣ ಜಮೆಯಾಗುತ್ತಿದೆ. ಕೆಲ ತಾಂತ್ರಿಕ(server) ಕಾರಣದಿಂದ ಇನ್ನೂ ಕೆಲವರ ಖಾತೆಗೆ ಹಣ ಜಮೆಯಾಗಿಲ್ಲ. ಅಲ್ಲಿವರೆಗೂ ಹೊಸ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ.
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿತು. ಖಾತೆಗೆ ಹಣ ವರ್ಗಾವಣೆ ಕೂಡ ಆಗಿದ್ದರೂ ಆದರೆ ಹಣವೇ ಬಹುತೇಕ ಜನರಿಗೆ ವರ್ಗಾವಣೆಯಾಗಿಲ್ಲಾ.
ಇದರಿಂದ ಈಗಾಗಲೇ ನೋಂದಣಿ ಮಾಡಿಸಿಕೊಂಡವರಿಗೆ ಹಣ ಜಮೆಯಾಗುವವರೆಗೂ ಹೊಸದಾಗಿ ನೋಂದಣಿ ಮಾಡಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ತಿಳಿಸಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಣ ಜಮೆ, ಹೊಸ ನೋಂದಣಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಇನ್ನಷ್ಟೇ ಆದೇಶ ಜಾರಿಯಾಗಬೇಕಿದೆ.
https://twitter.com/HTKannadaNews/status/1699281181517451485?s=20
ಸಚಿವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೇಳಿದ್ದೇನು??
ನೊಂದಾಯಿತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂ. ಜಮೆ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಗೃಹ ಲಕ್ಷ್ಮಿ ಯೋಜನೆಯ ಹೊಸ ನೊಂದಣಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎಲ್ಲಾ ಫಲಾನುಭವಿಗಳಿಗೆ ಹಣ ತಲುಪಿದ್ದು ಖಚಿತವಾದ ಬಳಿಕ ಮತ್ತೆ ಪ್ರಕ್ರಿಯೆ ಆರಂಭಿಸುತ್ತೇವೆ ಎನ್ನುವುದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿವರಣೆ.
ಫಲಾನುಭವಿಗಳ ಬ್ಯಾಂಕ್ ಖಾತೆ ನಿಷ್ಕ್ರಿಯಗೊಂಡಿದ್ದರಿಂದ 7-8 ಲಕ್ಷ ಫಲಾನುಭವಿಗಳಿಗೆ ಹಣ ಜಮೆಗೊಳಿಸಲು ಅಡ್ಡಿಯಾಗಿದೆ. ಶೀಘ್ರ ಅದನ್ನು ಸರಿಪಡಿಸುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗೆ ಹಾಕಲು ಸರ್ಕಾರದ ಖಜಾನೆಗೆ ಈಗಾಗಲೇ ಹಣ ಬಿಡುಗಡೆಯಾಗಿದೆ. ಒಂದು ಕೋಟಿ ಫಲಾನುಭವಿಗಳಿಗೆ 2-3 ದಿನದಿಂದ ಹಣ ಜಮೆಯಾಗಲಿದೆ ಎಂದು ತಿಳಿಸಿದ್ದಾರೆ.
ನೋಂದಣಿ ಸ್ಥಗಿತ ಏಕೆ??
ಕರ್ನಾಟಕದಲ್ಲಿ 1.28 ಕೋಟಿ ಮಹಿಳಾ ಅರ್ಹ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿದ್ದಾರೆ. ಈಗಾಗಲೇ ನಡೆಸಿರುವ ಸಮೀಕ್ಷೆ ಹಾಗೂ ಕಲೆ ಹಾಕಿರುವ ಮಾಹಿತಿಯ ಪ್ರಕಾರ ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ತಿಳಿಸಿದೆ. ಆದರೆ ಎರಡು ತಿಂಗಳ ಹಿಂದೆ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದ್ದು. ಈವರೆಗೂ 1.12 ಕೋಟಿ ಗೃಹಿಣಿಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ 16 ಲಕ್ಷಕ್ಕೂ ಅಧಿಕ ಮಹಿಳೆಯರು ನೋಂದಣಿ ಮಾಡಿಸಿಕೊಳ್ಳುವುದು ಬಾಕಿಯಿದೆ ಎಂದು ಹೇಳಿದ್ದಾರೆ.
ಈ ನೋಂದಣಿ ಸದ್ಯಕ್ಕೆ ಸ್ಥಗಿತವಾಗಲಿದೆ ನೋಂದಣಿ ಬಾಕಿ ಇರುವವರಲ್ಲಿ ಕೆಲವರ ಬಳಿ ಪಡಿತರ ಚೀಟಿ ಇಲ್ಲ. ಹೊಸದಾಗಿ ಪಡಿತರ ಚೀಟಿ ಮಾಡಿಸಿಕೊಳ್ಳಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅವಕಾಶ ನೀಡಿಲ್ಲ.
ಇದರಿಂದ ಬಹುತೇಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಎಡತಾಕುತ್ತಿದ್ದಾರೆ. ಇದು ಆಹಾರ ಇಲಾಖೆ ಸಮಸ್ಯೆ. ಅಲ್ಲಿ ಭೇಟಿ ಮಾಡಿ ಎಂದು ಕಳುಹಿಸಲಾಗುತ್ತಿದೆ. ಸರ್ಕಾರದಿಂದ ಅನುಮತಿ ಬಾರದೇ ಹೊಸ ಪಡಿತರ ಕಾರ್ಡ್ ಮಾಡುವ ಪ್ರಶ್ನೆಯೇ ಇಲ್ಲ ಎನ್ನುವುದು ಆಹಾರ ಇಲಾಖೆಯವರ ಸ್ಪಷ್ಟನೆಯಾಗಿದೆ. ಪಡಿತರ ಕಾರ್ಡ್ ಇಲ್ಲದೇ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಆವಕಾಶವೇ ಇಲ್ಲದಿರುವುದರಿಂದ ಹಲವರ ನೋಂದಣಿ ಪ್ರಕ್ರಿಯೆ ಈ ಕಾರಣದಿಂದಾಗಿ ಬಾಕಿ ಉಳಿದಿದೆ.
ಇನ್ನು ಕೆಲವರ ಪಡಿತರ ಕಾರ್ಡ್‌ನಲ್ಲಿ ಯಜಮಾನಿ ಎನ್ನುವ ಮಾಹಿತಿ ಇಲ್ಲದೇ ಇರುವುದರಿಂದ ಅವರಿಗೂ ನೋಂದಣಿ ಪ್ರಕ್ರಿಯೆ ಆಗುತ್ತಿಲ್ಲ. ಅಂತವರೂ ಕಚೇರಿಗಳಿಗೆ ಸುತ್ತುವ ಸ್ಥಿತಿ ಸದ್ಯ ನಿರ್ಮಾಣವಾಗಿದೆ.
ಹೊಸದಾಗಿ ನೋಂದಣಿ ಮಾಡಿಸುವವರಲ್ಲಿ ಪಡಿತರ ಕಾರ್ಡ್ ಇಲ್ಲದೇ ಇರುವವರ ಸಮಸ್ಯೆ ಇರುವುದು ನೊಂದಣಿಗೆ ತೊಡಕಾಗಿದೆ. ಪಡಿತರ ಕಾರ್ಡ್ ವಿಚಾರ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಇದು ಆಹಾರ ಇಲಾಖೆಗೆ ಸಂಬಂಧ ಪಡುತ್ತದೆ ಎಂದು ಹೇಳುತ್ತಿದ್ದಾರೆ.
ತಾಂತ್ರಿಕ ತೊಡಕು..?
ಹೌದು, ಗ್ರಹಲಕ್ಷ್ಮಿ ಫಲಾನುಭವಿಗಳಿಗೆ ಹಣ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ಇನ್ನು 1.12 ಕೋಟಿ ಗೃಹಿಣಿಯರಲ್ಲಿ ಈವರೆಗೂ 59 ಲಕ್ಷ ಮಂದಿ ಖಾತೆಗೆ ಈವರೆಗೂ ತಲಾ ಎರಡು ಸಾವಿರ ರೂ. ಜಮೆಯಾಗಿದೆ. ಇನ್ನುಳಿದವರ ಖಾತೆಗೆ ಜಮೆ ಮಾಡಲು ಬ್ಯಾಂಕ್ ಖಾತೆಯೂ ಸೇರಿದಂತೆ ಹಲವು ತಾಂತ್ರಿಕ ತೊಡಕುಗಳು ಎದುರಾಗಿವೆ. ಅವುಗಳನ್ನು ಬಗೆಹರಿಸಿ ಬೇಗನೇ ಹಣವನ್ನು ವರ್ಗ ಮಾಡುವಂತೆ ಸೂಚನೆಯನ್ನೂ ಸಹ ನೀಡಲಾಗಿದೆ. ಆದರೂ ಈ ಗೊಂದಲ ಇನ್ನೂ ಬಗೆಹರಿದಿಲ್ಲ.
ಇದರಿಂದ ಈಗಾಗಲೇ ನೋಂದಣಿ ಮಾಡಿಸಿಕೊಂಡವರಿಗೆ ಹಣ ಜಮೆಯಾಗುವವರೆಗೂ ಹೊಸದಾಗಿ ನೋಂದಣಿ ಮಾಡಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮುಂದಾಗಿದೆ.
ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಣ ಜಮೆ, ಹೊಸ ನೋಂದಣಿ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ಲೇಖನವು ಅರ್ಥಪೂರ್ಣವಾಗಿದ್ದು ನಿಮಗೆ ಸರಿ ಅನಿಸಿದರೆ ತಪ್ಪದೇ ಎಲ್ಲರಿಗೂ ಶೇರ್ ಮಾಡಿ.
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ತಿಳಿಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿ ವಾಹಿನಿ ಗ್ರೂಪ್ಸ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿರಿ 👇🏻https://chat.whatsapp.com/K9mNNO3T6FzKJGch4oqd2m
ಅನ್ನಭಾಗ್ಯ ಯೋಜನೆಯ ಹಣ ರೈತರ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ನೋಡಿರಿ 👇🏻👇🏻
https://ahara.kar.nic.in/status1/status_of_dbt.aspx
ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗದಿದ್ದರೆ ಈ ಕೂಡಲೇ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಪ್ಡೇಟ್ ಮಾಡಿಸಿ. ಹಾಗೂ ಆಧಾರ್ ಕಾರ್ಡಿಗೆ ಮತ್ತು ರೇಷನ್ ಕಾರ್ಡ್ ಗೆ ಮತ್ತು ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಿ. ನಂತರ ನಿಮ್ಮ ಅನ್ನ ಭಾಗ್ಯ ಯೋಜನೆಯ ಹಣ ಜಮೆಯಾಗುತ್ತದೆ.
—*ಲೇಖನ ಮುಕ್ತಾಯ *—
➡️ ಪಿಎಂ ಕಿಸಾನ್ 15ನೇ ಕಂತಿನ ಹಣ ಈ ಲಿಸ್ಟ್ ನಲ್ಲಿ ಇದ್ದ ರೈತರಿಗೆ ಮಾತ್ರ 2000 ಜಮೆ ನಿಮ್ಮ ಹೆಸರು ಚೆಕ್ ಮಾಡಿರಿ https://krushivahini.com/2023/09/13/pm-kisan-15th-batch-farmers-list-released-check-your-name/
➡️ ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್ ಇವರಿಗೆ ಹಣ ಬರುವುದಿಲ್ಲ! https://krushivahini.com/2023/09/08/annabhagya-yojana-new-update-they-dont-get-money/
➡️ ಯಾವ ಬೆಳೆಗೆ ವಿಮೆ ಕಟ್ಟಬೇಕು ಹಾಗೂ ಎಷ್ಟು ವಿಮೆ ಬರುತ್ತದೆ ಎಂಬುದನ್ನು ಮೊಬೈಲ್ ನಲ್ಲಿ ನೋಡಿರಿ https://krushivahini.com/2023/09/04/which-crop-should-you-buy-insurance-for-check-if-you-get-this-solution/
➡️ ಸರ್ಕಾರದಿಂದ ಉಚಿತ ಟ್ಯಾಕ್ಸಿ ಆಟೋ ಕಾರ್ ತೆಗೆದುಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಕೂಡಲೇ ಸಲ್ಲಿಸಿ https://krushivahini.com/2023/09/05/3-lakh-subsidy-for-purchase-of-taxi-goods-passenger-auto-rickshaw-vehicle-apply-now/
➡️ ಕೇವಲ ಆಧಾರ್ ಸಂಖ್ಯೆ ನಮೂದಿಸಿ ಗೃಹಲಕ್ಷ್ಮಿ ಯೋಜನೆಯ ಹಣ ಮೊಬೈಲ್ ನಲ್ಲಿ ಬಂದಿರುವುದನ್ನು ಚೆಕ್ ಮಾಡಿ https://krushivahini.com/2023/08/30/gruhalakshmi-amount-credited-to-your-account/
➡️ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ಉಚಿತ ಬೋರ್ವೆಲ್ ಕರೆಸಿಕೊಳ್ಳಲು ಅರ್ಜಿ ಆಹ್ವಾನ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ https://krushivahini.com/2023/08/31/ganga-kalyana-scheme-application-invited/
➡️ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗದಿದ್ದರೆ ಈ ಸಣ್ಣ ಕೆಲಸ ಮಾಡಿ https://krushivahini.com/2023/09/02/gruhalakshmi-scheme-amount-not-credited/
➡️ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಈ ಕೂಡಲೇ ರೇಷನ್ ಕಾರ್ಡ್ ತಿದ್ದುಪಡಿ ಮಾಡಿ ಅನ್ನಭಾಗ್ಯ ಯೋಜನೆಯ ಹಣ ಪಡೆದುಕೊಳ್ಳಿ https://krushivahini.com/2023/09/02/ration-card-correction-rationapplication-invited/