ಆತ್ಮೀಯ ನಾಗರಿಕರೇ, ಆತ್ಮೀಯ ಬಾಂಧವರೇ, ಟ್ಯಾಕ್ಸಿ / ಗೂಡ್ಸ್ / ಪ್ಯಾಸೆಂಜರ್ ಆಟೋ ರಿಕ್ಷಾ ವಾಹನ ಖರೀದಿ ಮಾಡಬೇಕೆಂದು ಆಸೆ ನಿಮಗಿದ್ದರೆ ಸರ್ಕಾರವು ನಿಮಗಾಗಿ ಒಂದು ಹೊಸ ಯೋಜನೆಯನ್ನು ತಂದಿದೆ. ಈ ಯೋಜನೆ ಅಡಿಯಲ್ಲಿ ನೀವು ಸರ್ಕಾರದಿಂದ ಮೂರು ಲಕ್ಷದವರೆಗೆ ಸಹಾಯಧನವನ್ನು ಪಡೆದು ನಿಮ್ಮ ಆಸೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.
ಈ ಯೋಜನೆ ಹೆಸರೇನು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಕೆ ಹೇಗೆ?
ಈ ಯೋಜನೆಯ ಹೆಸರು ಸ್ವಾವಲಂಬಿ ಸಾರಥಿ ಯೋಜನೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಸೆಪ್ಟಂಬರ್ 25 ಕೊನೆ ದಿನಾಂಕವಾಗಿದೆ. ಮೊದಲು ಜನರು ನಾವು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ವೆಬ್ ಸೈಟಿಗೆ ಭೇಟಿ ನೀಡಿ. https://kmdc.karnataka.gov.in/
ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://kmdconline.karnataka.gov.in/Portal/login
ಈ ಯೋಜನೆಯ ಸಂಪೂರ್ಣ ಮಾಹಿತಿಗಾಗಿ ನಾವು ಕೆಳಗೆ ಅಧಿಕೃತವಾಗಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಯ ಸಂಪೂರ್ಣ ಮಾಹಿತಿಯು ನಿಮಗೆ ಕೇವಲ ಒಂದು ನಿಮಿಷದಲ್ಲಿ ದೊರೆತು ಬಿಡುತ್ತದೆ.
https://kmdc.karnataka.gov.in/23/subsidy-/kn
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1.ಆನ್‍ಲೈನ್ ಅರ್ಜಿ
2.ಫಲಾನುಭವಿಯ ಇತ್ತೀಚಿನ 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರ
3.ಜಾತಿ, ಆದಾಯ ಪ್ರಮಾಣ ಪತ್ರ
4.ಆಧಾರ್ ಕಾರ್ಡ್ ಪ್ರತಿ
5.ವಾಹನ ಚಾಲನ ಪರವಾನಿಗೆ ಪ್ರಮಾಣ ಪತ್ರ
6.ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನ ಖರೀದಿಗೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿಲ್ಲದಿರುವಬಗ್ಗೆ ಜಿಲ್ಲಾ ವ್ಯವಸ್ಥಾಪಕರಿಂದ ದೃಢೀಕರಣ ಪತ್ರ
7.ಈ ಯೋಜನೆಯಡಿ ಪಡೆದ ವಾಹನವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಾರ್ಗಸೂಚಿಗಳು:
1.ಈ ಯೋಜನೆಯನ್ನು ನಿಗಮದ ವತಿಯಿಂದ ರಾಷ್ಟ್ರೀಕೃತ/ಷೆಡ್ಯೂಲ್ಡ್ ಬ್ಯಾಂಕ್‍ಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ.
2.ಬ್ಯಾಂಕುಗಳಿಂದ ಸಾಲ ಮಂಜೂರಾತಿ ನೀಡಿದ/ಪಡೆದ ಫಲಾನುಭವಿಗಳಿಗೆ ಆಟೋರಿಕ್ಷ / ಗೂಡ್ಸ್ ವಾಹನ /ಟ್ಯಾಕ್ಸಿ ಖರೀದಿಸಲು ವಾಹನದ ಮೌಲ್ಯದ ಶೇ.50 ರಷ್ಟು ಸಹಾಯಧನ ಗರಿಷ್ಠ ರೂ.3.00 ಲಕ್ಷವನ್ನು ನೀಡಲಾಗುವುದು.
3.ಮಹಿಳೆಯರಿಗೆ ಆದ್ಯತೆಯನ್ನು ನೀಡಲಾಗುವುದು.
4.ಈ ಯೋಜನೆಯಡಿ ಖರೀದಿಸಲಾಗಿರುವ ವಾಹನವನ್ನು ಫಲಾನುಭವಿಗಳು ಸಾಲದ ಅವಧಿಯಲ್ಲಿ ಇತರರಿಗೆ ಪರಭಾರೆ ಮಾಡಬಾರದು
5.ಫಲಾನುಭವಿಯು ಈ ವಾಹನದಿಂದ ಲಭ್ಯವಾಗುವ ವಾರ್ಷಿಕ ಆದಾಯದ ವಿವರ, ಖರೀದಿ ಮಾಡಿದ ತಕ್ಷಣ ತೆರಿಗೆಯನ್ನು ಪಾವತಿಸಿರುವ ಮತ್ತು ವಿಮೆಯನ್ನು ಪಾವತಿಸಿರುವ ಬಗ್ಗೆ ವಿವರಗಳನ್ನು ದಾಖಲೆಗಳ ಪ್ರತಿಯೊಂದಿಗೆ ಜಿಲ್ಲಾಕಛೇರಿಗೆ ಮಾಹಿತಿಯನ್ನು ಸಲ್ಲಿಸುವುದು.
6.ಯಾವುದಾದರೂ ಮೊದಲು ಕ್ಲೇಮ್ ಮಾಡಿದಲ್ಲಿ ಖರೀದಿಸಿದ ವಿವರವನ್ನು ನಿಗಮಕ್ಕೆ ನೀಡತಕ್ಕದ್ದು.
7.ನಿಗಮದ ಸಹಾಯಧನದಿಂದ ಪಡೆದ ವಾಹನ ಮೇಲೆ “ಕೆ ಎಂ ಡಿ ಸಿ ವತಿಯಿಂದ ಸಹಾಯಧನ” ಎಂದು ನಮೂದಿಸತಕ್ಕದ್ದು.
8.ನಿಗಮದಿಂದ ಪಡೆದ ವಾಹನದ ಜೊತೆಯಲ್ಲಿ ಫಲಾನುಭವಿ ಭಾವಚಿತ್ರವನ್ನು ಕಡ್ಡಾಯವಾಗಿ ಜಿಲ್ಲಾ ವ್ಯವಸ್ಥಾಪಕರು ದೃಡೀಕರಿಸಿ ಕಡತದಲ್ಲಿ ಇಡತಕ್ಕದ್ದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:
(ಅ) ಅರ್ಜಿದಾರರು ರಾಜ್ಯದ ಮತೀಯ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.
(ಆ) ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
(ಇ) ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷಗಳು.
(ಈ) ಎಲ್ಲಾ ಮೂಲಗಳಿಂದ ಕೌಟುಂಬಿಕ ವಾರ್ಷಿಕ ಆದಾಯ ರೂ.4.50 ಲಕ್ಷ ದೊಳಗಿರಬೇಕು.
(ಉ)ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ/ಸಾರ್ವಜನಿಕ ವಲಯದ ಘಟಕ ಸರ್ಕಾರದ ಉದ್ಯೋಗಿಯಾಗಿರಬಾರದು
(ಊ)ಅರ್ಜಿದಾರರು ಆರ್.ಟಿ.ಒ.ಯಿಂದ ನೀಡಲ್ಪಟ್ಟ ಸಂಬಂಧಪಟ್ಟ ವಾಹನ ಚಾಲನಾ ಪರವಾಗಿಯನ್ನು ಹೊಂದಿರಬೇಕು
(ಋ)ಅರ್ಜಿದಾರರ ಮತ್ತು ಕುಟುಂಬದ ಸದಸ್ಯರು ವಾಹನಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು.
(ಋ) ಅರ್ಜಿದಾರರು ಕೆ ಎಂ ಡಿ ಸಿ ಯಲ್ಲಿಸುಸ್ತಿದಾರಯಾಗಿರಬಾರದು.
ಈ ಲೇಖನವು ಅರ್ಥಪೂರ್ಣವಾಗಿದ್ದು ನಿಮಗೆ ಸರಿ ಅನಿಸಿದರೆ ತಪ್ಪದೇ ಎಲ್ಲರಿಗೂ ಶೇರ್ ಮಾಡಿ 🙏🏻
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ತಿಳಿಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿ ವಾಹಿನಿ ಗ್ರೂಪ್ಸ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿರಿ 👇🏻https://chat.whatsapp.com/K9mNNO3T6FzKJGch4oqd2m
–* ಲೇಖನ ಮುಕ್ತಾಯ *–
➡️ ಗೃಹ ಲಕ್ಷ್ಮಿ ಯೋಜನೆಯ ಹೊಸ ನೊಂದಣಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ತಪ್ಪದೇ ತಿಳಿಯಿರಿ https://krushivahini.com/2023/09/06/new-registration-of-graha-lakshmi-yojana-has-been-stopped-temporarily/
➡️ ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದಿದ್ದರೆ ಈ ಸಣ್ಣ ಕೆಲಸ ಮಾಡಿ https://krushivahini.com/2023/09/02/gruhalakshmi-scheme-amount-not-credited/
➡️ ನೀವು ಯಾವ ಬೆಳೆಗೆ ವಿಮೆ ಕಟ್ಟಬೇಕು?? ಇಷ್ಟು ಪರಿಹಾರ ಸಿಗುತ್ತದೆ ಚೆಕ್ ಮಾಡಿ ‘https://krushivahini.com/2023/09/04/which-crop-should-you-buy-insurance-for-check-if-you-get-this-solution/
➡️ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಕಾಲಾವಕಾಶವನ್ನು ನೀಡಲಾಗಿದೆ ತಪ್ಪದೇ ಈ ಕೂಡಲೆ ತಿದ್ದುಪಡಿ ಮಾಡಿರಿ https://krushivahini.com/2023/09/02/ration-card-correction-rationapplication-invited/
➡️ ಕೇವಲ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಖಾತೆಗೆ ಹಣ ಬಂದಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿ https://krushivahini.com/2023/08/30/gruhalakshmi-amount-credited-to-your-account/
➡️ ಸರ್ಕಾರದಿಂದ ಉಚಿತ ಬೋರ್ವೆಲ್ ಕೊರೆಸಲು ಸಹಾಯಧನಕ್ಕಾಗಿ ಅರ್ಜಿ ಅಹ್ವಾನ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ https://krushivahini.com/2023/08/31/ganga-kalyana-scheme-application-invited
➡️ ನಿಮ್ಮ ಸರ್ವೆ ನಂಬರನ್ನು ನಮೂದಿಸಿ ಕಾತಾ ಪಟ್ಟಿಯನ್ನು ಮೊಬೈಲ್ ನಲ್ಲಿ ಪಡೆಯಿರಿ https://krushivahini.com/2023/09/02/get-katha-report-in-mobile-2/