Increase in Green Gram : ಹೆಸರುಕಾಳಿಗೆ ಹೆಚ್ಚಿದ ಬೇಡಿಕೆ!
ನಮಸ್ಕಾರ ಪ್ರಿಯ, ಹೆಸರಿನ ಕಾಳಿಗೆ ಹೆಚ್ಚಿದ ಬೆಲೆ!ಹೆಸರು ಕಾಳು ಬೆಳೆದ ರೈತರೀಗ ಸಂತಸಗೊಂಡಿದ್ದಾರೆ. ಹೌದು, ಹೆಸರು ಕಾಳಿನ ಬೆಲೆ ಸದ್ಯ ಭಾರಿ ಹೆಚ್ಚಳವಾಗಿದ್ದು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಧಾರಣೆಗೆ ಮಾರಾಟವಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಹೆಸರುಕಾಳಿನ ಕನಿಷ್ಠ ದರ 2000 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 12455 ರೂಪಾಯಿ ಆಗಿತ್ತು.
ಬಾಗಲಕೋಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರು ಮುಗಿಬಿದ್ದು ಹೆಸರುಕಾಳನ್ನು ಖರೀದಿ ಮಾಡುತ್ತಿದ್ದಾರೆ. ರೈತರ ಮುಖದಲ್ಲಿ ಸಂತಸ . ಆಗಸ್ಟ್ ಮೊದಲ ವಾರದಿಂದ ಹೆಸರುಕಾಳು ಆವಕ ಶುರುವಾಗಿದ್ದು, ಆರಂಭದಲ್ಲಿ 8 ಸಾವಿರ ರೂಪಾಯಿ ಇದ್ದ ಹೆಸರುಕಾಳು ಬೆಲೆ ಈಗ 12455 ರೂಪಾಯಿಗೆ ಹೆಚ್ಚಳವಾಗಿದೆ.
ಎರಡು ವರ್ಷಗಳಿಂದ ಹೆಸರು ಕಾಳು ಧಾರಣೆ ಪ್ರತಿ ಕ್ವಿಂಟಲ್‌ಗೆ 4500 ಸಾವಿರದಿಂದ 7500 ರೂಪಾಯಿವರೆಗೆ ಇರುತಿತ್ತು. ಎರಡು ವರ್ಷ ಅಧಿಕವಾಗಿ ಹೆಸರು ಕಾಳು ಮಾರುಕಟ್ಟೆಗೆ ಬಂದ ಕಾರಣ ದರ ಕುಸಿತವಾಗಿತ್ತು.
ಕೈಕೊಟ್ಟ ಮುಂಗಾರು ಕಡಿಮೆಯಾದ ಬಿತ್ತನೆ
ಈ ವರ್ಷ ಮುಂಗಾರು ಕೈಕೊಟ್ಟ ಕಾರಣ ಬಿತ್ತನೆ ಮಾಡುವ ಪ್ರಮಾಣ ಕೂಡ ಕಡಿಮೆಯಾಗಿದೆ. ವಾಡಿಕೆಯಂತೆ ಸುಮಾರು 20,250 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಕಾಳು ಬಿತ್ತನೆಯಾಗಬೇಕು, ಈ ಬಾರಿ ಕೇವಲ 6,840 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಬಿತ್ತನೆ ಕಡಿಮೆಯಾಗಿದ್ದು, ಇದರಿಂದ ಇಳುವರಿ ಕಡಿಮೆಯಾಗಿದ್ದು, ದರ ಕೂಡ ಹೆಚ್ಚಾಗಿದೆ ಎಂದು ಬಾಗಲಕೋಟೆ ಎಪಿಎಂಸಿ ಕಾರ್ಯದರ್ಶಿ ವಿ.ಡಿ. ಪಾಟೀಲ್ ಪ್ರಜಾವಾಣಿ ವರದಿಯಲ್ಲಿ ಹೇಳಿದ್ದಾರೆ.
ಕಳೆದ ವರ್ಷ ಮಾರುಕಟ್ಟೆಗೆ 1,42,140 ಕ್ವಿಂಟಲ್ ಹೆಸರು ಕಾಳು ಮಾರುಕಟ್ಟೆಗೆ ಬಂದಿತ್ತು. ಆದರೆ ಈ ಬಾರಿ ಕೇವಲ 13,207 ಕ್ವಿಂಟಾಲ್ ಹೆಸರುಕಾಳು ಮಾತ್ರ ಮಾರುಕಟ್ಟೆಗೆ ಬಂದಿದೆ. ಹೆಸರುಕಾಳಿಗೆ 8558 ರೂಪಾಯಿ ಬೆಂಬಲ ಬೆಲೆ(Minimum support price)ಇದ್ದು, ಮಾರುಕಟ್ಟೆಯಲ್ಲಿ ಅದಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಹೆಸರುಕಾಳು ಬೆಲೆ
ಬಾಗಲಕೋಟೆ ಮಾರುಕಟ್ಟೆಯಲ್ಲಿ ಹೆಸರು ಕಾಳು ಬೆಲೆ ಕನಿಷ್ಠ 2000 ರೂಪಾಯಿ ಗರಿಷ್ಠ 12455 ರೂಪಾಯಿ ಇದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಹೆಸರುಕಾಳು ಬೆಲೆ ಕನಿಷ್ಠ 9300 ರೂಪಾಯಿ ಇದ್ದರೆ ಗರಿಷ್ಠ ಧಾರಣೆ 12500 ರೂಪಾಯಿ ಆಗಿತ್ತು.
ಬಸವಕಲ್ಯಾಣ ಮಾರುಕಟ್ಟೆಯಲ್ಲಿ ಕನಿಷ್ಠ ಧಾರಣೆ 9500 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 10580 ರೂಪಾಯಿ ಆಗಿತ್ತು. ಬೀದರ್ ಮಾರುಕಟ್ಟೆಯಲ್ಲಿ ಕನಿಷ್ಠ ಧಾರಣೆ 8500 ರೂಪಾಯಿ, ಗರಿಷ್ಠ ಧಾರಣೆ 12025 ರೂಪಾಯಿ ಇತ್ತು. ಗದಗ ಮಾರುಕಟ್ಟೆಯಲ್ಲಿ 8570 ರೂಪಾಯಿ ಕನಿಷ್ಠ ಧಾರಣೆ ಇದ್ದರೆ, ಗರಿಷ್ಠ ಧಾರಣೆ 13029 ರೂಪಾಯಿಗೆ ಮಾರಾಟವಾಗಿದೆ. ಲಕ್ಷ್ಮೇಶ್ವರ ಮಾರುಕಟ್ಟೆಯಲ್ಲಿ ಕನಿಷ್ಠ ಧಾರಣೆ 6125 ರೂಪಾಯಿ ಇದ್ದರೆ ಗರಿಷ್ಠ ಧಾರಣೆ 13800 ರೂಪಾಯಿ ಆಗಿತ್ತು. ಹೆಸರುಕಾಳಿನ ಬೆಲೆ ಹಿಂದಿನ ಎರಡು ವರ್ಷಕ್ಕಿಂತ ಈ ವರ್ಷ ಬಹಳ ಹೆಚ್ಚಾಗಿದೆ.
ಈ ಲೇಖನವು ಅರ್ಥಪೂರ್ಣವಾಗಿದ್ದು ನಿಮಗೆ ಸರಿ ಅನಿಸಿದರೆ ತಪ್ಪದೇ ಎಲ್ಲರಿಗೂ ಶೇರ್ ಮಾಡಿ 🙏🏻
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ತಿಳಿಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿ ವಾಹಿನಿ ಗ್ರೂಪ್ಸ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿರಿ 👇🏻https://chat.whatsapp.com/K9mNNO3T6FzKJGch4oqd2m
–*ಲೇಖನ ಮುಕ್ತಾಯ *–
➡️ ಕೇವಲ ಸರ್ವೇ ನಂಬರ್ ಹಾಕಿ ನಿಮ್ಮ ಖತಾ ರಿಪೋರ್ಟನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳಿ https://krushivahini.com/2023/09/02/get-katha-report-in-mobile-2/
➡️ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಜಮಾ ಆಗದಿದ್ದರೆ ಈ ಸಣ್ಣ ಕೆಲಸ ಮಾಡಿ https://krushivahini.com/2023/09/02/gruhalakshmi-scheme-amount-not-credited/
➡️ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ ಈ ಕೂಡಲೇ ಅರ್ಜಿ ಸಲ್ಲಿಸಿ ಇನ್ನು 6 ದಿನ ಬಾಕಿ ಅರ್ಜಿ ಸಲ್ಲಿಸಲು https://krushivahini.com/2023/09/02/ration-card-correction-rationapplication-invited/
➡️ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿ https://krushivahini.com/2023/08/30/gruhalakshmi-amount-credited-to-your-account/
➡️ ಸರ್ಕಾರದಿಂದ ಉಚಿತ ಕೊಳವೆಬಾವಿ ಕೊರೆಸಲು ಸಹಾಯಧನಕ್ಕಾಗಿ ಈ ಕೂಡಲೇ ಅರ್ಜಿ ಸಲ್ಲಿಸಿ https://krushivahini.com/2023/08/31/ganga-kalyana-scheme-application-invited/