ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸಲ್ಲಿಕೆ ಆರಂಭವಾಗಿದೆ ಮತ್ತು ಈ ಕೂಡಲೇ ತಿದ್ದುಪಡಿ ಮಾಡಿಸಿ!!ನಮಸ್ಕಾರ ಪ್ರಿಯರೈತ ಬಾಂಧವರೇ ಇಂದು ನಾವು ರೇಷನ್ ಕಾರ್ಡ್ ಇಲ್ಲಿ ತಿದ್ದುಪಡಿ ಮಾಡುವುದು ಹೇಗೆ ಮತ್ತು ಅರ್ಜಿ ಸಲ್ಲಿಕೆ ಆರಂಭವಾಗಿದೆ, ಎಂಬ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ಓದಿರಿ..ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ತಿದ್ದುಪಡಿಗಾಗಿ ಅರ್ಜಿಯನ್ನು ಸಲ್ಲಿಸಬಹುದು ಮತ್ತು 10 ದಿನಗಳ ಕಾಲಾವಕಾಶವನ್ನು ಕಲ್ಪಿಸಿದೆ ಈ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ..Ration card correction:- ರೇಷನ್ ಕಾರ್ಡ್ ( ಪಡಿತರ ಚೀಟಿ ತಿದ್ದುಪಡಿ ಅರ್ಜಿ ಸಲ್ಲಿಕೆಗೆ ಆಹಾರ ಇಲಾಖೆ ಮತ್ತು 10 ದಿನಗಳ ಕಾಲ ಸಮಯವನ್ನು ನೀಡಿದೆ. ಈ ಸಮಯದಲ್ಲಿ ಆಧಾರ್ ಕಾರ್ಡ್ ಹೊಂದಿದವರು ತಮಗೆ ಬೇಕಾದ ತಿದ್ದುಪಡಿ ಮಾಡಿಕೊಂಡು. ಅನ್ನಭಾಗ್ಯ ಯೋಜನೆಯ ಸೌಲಭ್ಯದ ಜೊತೆಗೆ ಇತರೆ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಿ.ಕಳೆದ ಆಗಸ್ಟ್ ನಲ್ಲಿ ನಾಲ್ಕು ದಿನಗಳ ಕಾಲ ಪಡಿತರ ಚೀಟಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಆದರೆ ಬಹಳಷ್ಟು ಸಮಯದಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದು ಬಹಳಷ್ಟು ಜನ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲಾಗಿಲ್ಲ.ಈ ಕೂಡಲೇ ಆಹಾರ ನಾಗರಿಕ ಸರಬರಾಜು ಇಲಾಖೆಗೆ ಹೋಗಿ ರೇಷನ್ ಕಾರ್ಡನ್ನು ತಿದ್ದುಪಡಿ ಆದಷ್ಟು ಬೇಗ ಮಾಡಬೇಕೆಂದು ಹೆಚ್ಚುವರಿ ನಿರ್ದೇಶಕರು ತಿಳಿಸಿದ್ದಾರೆ.ಈಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು 10 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.
ರೇಷನ್ ಕಾರ್ಡ್ ನಲ್ಲಿ ಏನೆಲ್ಲಾ ತಿದ್ದುಪಡಿ ಮಾಡಿಸಬಹುದು??
* ರೇಷನ್ ಅಂಗಡಿ ಬದಲಾವಣೆ* ಫಲಾನುಭವಿಯ ಹೆಸರು ಬದಲಾವಣೆ* ರೇಷನ್ ಕಾರ್ಡ್ ಸದಸ್ಯರ ಹೆಸರನ್ನು ತೆಗೆದು ಹಾಕುವುದು ಹಾಗೂ ಸೇರ್ಪಡೆಯನ್ನು ಮಾಡುವುದು* ಕಾರ್ಡ್ ನಲ್ಲಿರುವ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಬಹುದು.* ಮಹಿಳಾ ಮುಖ್ಯಸ್ಥರ ಹೆಸರನ್ನು ಕೂಡ ಬದಲಾವಣೆ ಮಾಡಬಹುದು.
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬೇಕಾದ ಅಗತ್ಯ ದಾಖಲೆಗಳು??
* ಚಾಲತಿಯಲ್ಲಿರುವ ರೇಷನ್ ಕಾರ್ಡ್ ಜೆರಾಕ್ಸ್* ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಮಕ್ಕಳು ಮತ್ತು ಹೊಸ ಸೊಸೆಯಂದಿರ ಹೆಸರು ಸೇರ್ಪಡೆಗೆ ಅವರ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ* ತೀರಿಹೋದ ಹಿರಿಯರ ಮರಣ ಪ್ರಮಾಣ ಪತ್ರ ಹಾಗೂ ಇತ್ಯಾದಿ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಗ್ರಾಮರ್ ಅಥವಾ ಸೇವಾ ಕೇಂದ್ರಗಳಿಗೆ ತೆರಳಿ ತಿದ್ದುಪಡಿಯನ್ನು ಮಾಡಿಸಿಕೊಳ್ಳಬೇಕು.
ತಿದ್ದುಪಡಿಯನ್ನು ಎಲ್ಲಿ ಮಾಡಿಸಬೇಕು??
ನೀವು ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನು ಗ್ರಾಮೋನ್ ಕೇಂದ್ರ, ಕಾಮನ್ ಸರ್ವಿಸ್ ಸೆಂಟರ್, ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಕೊಟ್ಟಿರುವ 10 ದಿನಗಳ ಕಾಲಾವಧಿಯಲ್ಲಿ ಎಲ್ಲಾ ರೇಷನ್ ಕಾರ್ಡ್ ಅರ್ಜಿದಾರರು ಸಪ್ಟೆಂಬರ್ 1-10ನೇ ತಾರೀಖಿನ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ತಿದ್ದುಪಡಿ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಯನ್ನು ಮಾಡಿಸಬೇಕು.ಈ ಲೇಖನವು ಅರ್ಥಪೂರ್ಣವಾಗಿದ್ದು ನಿಮಗೆ ಸರಿ ಅನಿಸಿದರೆ ತಪ್ಪದೇ ಎಲ್ಲರಿಗೂ ಶೇರ್ ಮಾಡಿ 🙏🏻ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ತಿಳಿಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿ ವಾಹಿನಿ ಗ್ರೂಪ್ಸ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿರಿ 👇🏻https://chat.whatsapp.com/K9mNNO3T6FzKJGch4oqd2m –*ಲೇಖನ ಮುಕ್ತಾಯ *–➡️ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗದಿದ್ದರೆ ಈ ಸಣ್ಣ ಕೆಲಸ ಮಾಡಿ https://krushivahini.com/2023/09/02/gruhalakshmi-scheme-amount-not-credited/➡️ ಕೇವಲ ಆಧಾರ್ ಸಂಖ್ಯೆ ನಮೂದಿಸಿ ನಿಮ್ಮ ಹಣ ಜಮ ಆಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿ https://krushivahini.com/2023/08/30/gruhalakshmi-amount-credited-to-your-account/➡️ ಸರ್ಕಾರದಿಂದ ಉಚಿತ ಬೋರ್ವೆಲ್ ಕೊರೆಸಲು ಸಹಾಯಧನಕ್ಕಾಗಿ ಅರ್ಜಿ ಈ ಕೂಡಲೇ ಸಲ್ಲಿಸಿ https://krushivahini.com/2023/08/31/ganga-kalyana-scheme-application-invited/➡️ ಅನ್ನ ಭಾಗ್ಯ ಯೋಜನೆಯಡಿ ನಿಮ್ಮ ಹಣ ಖಾತೆಗೆ ಜಮಾ ಆಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿ https://krushivahini.com/2023/08/29/annabagya-yojana-amount-credited-or-not/