Gruhalakshmi scheme amount not credited:- ಗ್ರಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದಿದ್ದರೆ ಈ ಸಣ್ಣ ಕೆಲಸ ಮಾಡಿ!!
ನಮಸ್ಕಾರ ಪ್ರಿಯ ರೈತ ಬಾಂಧವರೇ ಇಂದು ನಾವು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ ಅದರ ಬಗ್ಗೆ ನೋಡೋಣ, ಹೌದು ಕಾಂಗ್ರೆಸ್ ಸರ್ಕಾರ ಘೋಷಿಸಿದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಒಂದು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ 2000 ರೂ ಹಣ ಅಕೌಂಟ ಗೆ ಬಂದಿದೆ. ಆದರೆ ಕೆಲವಷ್ಟು ಫಲಾನುಭವಿಗಳಿಗೆ ಇನ್ನೂ ಹಣ ಜಮೆಯಾಗಿಲ್ಲ ಅಂತವರು ಏನು ಮಾಡಬೇಕು.
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೊಂದಣಿ ಮಾಡಿಕೊಂಡಿದ್ದರು ಅನೇಕರ ಬ್ಯಾಂಕ್ ಖಾತೆಗೆ ಇನ್ನೂ ಹಣ ಜಮೆಯಾಗಿಲ್ಲ ಹಾಗೂ ಅವರಿಗೆ ಮೆಸೇಜ್ ಕೂಡ ಬಂದಿಲ್ಲ ಎಂಬುದು ಬಹಳಷ್ಟು ಜನರಲ್ಲಿ ಗೊಂದಲ ಉಂಟು ಮಾಡಿದೆ.
ಕಳೆದ ಆಗಸ್ಟ್ 30 ರಂದು ಮೈಸೂರಿನಲ್ಲಿ ಯೋಜನೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 1.10 ಕೋಟಿ ಮಹಿಳೆಯರಿಗೆ ತಿಂಗಳಿಗೆ 2000 ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದರು.
ಖಾತೆಗೆ ಹಣ ಬಂದಿರುವುದಾಗಿ ಇತರ ಮೆಸೇಜ್ ಬಂದಿದೆ – ಅಭಿನಂದನೆಗಳು ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ GL1702001XXXX ಅನ್ನು ಅನುಮೋದಿಸಲಾಗಿದೆ. ಆಗಸ್ಟ್ 2023 ರಿಂದ 2000 ಹಣವನ್ನು ನೋಂದಾಯಿಸಿಕೊಂಡಿದ್ದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಧನ್ಯವಾದಗಳು ನಿಮ್ಮ ಕರ್ನಾಟಕ ಸರ್ಕಾರ ಎಂಬ ಸಂದೇಶ ಬಂದಿದೆ.
ಈ ಮೇಲೆ ಕಾಣಿಸಿದ ಹಾಗೆ ಮೆಸೇಜ್ ಬಂದ ಫಲಾನುಭವಿಗಳಿಗೆ ಕೆಲವೊಬ್ಬರಿಗೆ ಅದೇ ದಿನ ಹಣ ಜಮೆಯಾಗಿದೆ ಕೆಲವೊಬ್ಬರಿಗೆ ಮರುದಿನ ಹಣ ಜಮೆಯಾಗಿರುತ್ತದೆ ಇನ್ನೂ ಕೆಲವರಿಗೆ ತಾಂತ್ರಿಕ ಅಥವಾ ಸರ್ವ ಸಮಸ್ಯೆಯಿಂದ ಸ್ವಲ್ಪ ತಡವಾಗಿ ಹಣ ಬರುತ್ತದೆ. ಇನ್ನೂ ಕೆಲವಷ್ಟು ಜನಗಳಿಗೆ ಈ ಮೆಸೇಜ್ ಕೂಡ ಹೋಗಿರುವುದಿಲ್ಲ. ಅಂಥವರು ಏನು ಮಾಡಬೇಕು ಈ ಕೆಳಕಂಡನಂತೆ ಅನುಸರಿಸಿರಿ.
ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರುವುದಕ್ಕೆ ಕಾರಣವನ್ನು ತಿಳಿಯಿರಿ,??
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೊಂದಾಯಿತವಾದ 1.10 ಕೋಟಿ ಮಹಿಳೆಯರ ಪೈಕಿ ಬಹಳಷ್ಟು ಜನರಿಗೆ ಮೊದಲನೇ ಕತ್ತಿನ ಜಮೆಯಾಗಿರುವುದಿಲ್ಲ. ನಂದಾಯಿತವಾದ ಪಟ್ಟಿಯಲ್ಲಿ 15 ರಿಂದ 17 ಲಕ್ಷ ಮಹಿಳೆಯರಿಗೆ ಅಗಸ್ಟ್ ತಿಂಗಳಲ್ಲಿ 2000 ಹಣ ವರ್ಗಾವಣೆ ಇನ್ನೂ ಆಗಿಲ್ಲ. ಇದಕ್ಕೆ ಕಾರಣಗಳನ್ನು ತಿಳಿಯಿರಿ👇
* ವರಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿರುವ ಕಾರಣಕ್ಕೆ ನಿಮ್ಮ ನೋಂದಣಿಗಳು ರದ್ದಾಗಿರುತ್ತವೆ.
* ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಅಪ್ಡೇಟ್ ಮಾಡದೇ ಇರುವುದರಿಂದಲೂ ಸಹ ಕೆಲವು ಫಲಾನುಭವಿಗಳ ನೋಂದಣಿ ರದ್ದಾಗಿರುತ್ತದೆ.
* ರೇಷನ್ ಕಾರ್ಡ್ ನಲ್ಲಿ ಯಜಮಾನಿ ಸ್ಥಾನದಲ್ಲಿರುವವರು ಮೃತಪಟ್ಟಿದ್ದರೆ: ಅವರ ಹೆಸರನ್ನು ಡಿಲೀಟ್ ಮಾಡಿಸಿ ಹೊಸದಾಗಿ ಅಪ್ಡೇಟ್ ಮಾಡಿಸದೆ ಇರುವ ಪಲಾನುಭವಿಗಳ ನೋಂದಣಿ ಕೂಡ ಅದಾಗಿರುತ್ತದೆ ಅಥವಾ ತಡೆಹಿಡಿಯಲಾಗಿರುತ್ತದೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಎರಡನೇ ಕಂತಿನ ಹಣ ಜಮಯಾಗಲು ಈ ತಿದ್ದುಪಡಿಗಳನ್ನು ಕೂಡಲೇ ಮಾಡಿಸಿ…
ಈ ಮೇಲ್ಕಾಣಿಸಿದ ಕಾರಣಗಳನ್ನು ಮೊದಲು ತಿದ್ದುಪಡಿ ಮಾಡಿಸಿ ಆದಮೇಲೆ ನಿಮಗೆ ಗೃಹಲಕ್ಷ್ಮಿ ಯೋಜನೆಯಡಿ ₹2000 ರೂ ಹಣ ಖಾತೆಗೆ ಜಮೆ ಆಗುತ್ತದೆ.
ಬಹಳಷ್ಟು ಮುಖ್ಯವಾಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು, ಇನ್ನೊಂದು ಬಾರಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯನ್ನು ಮಾಡಬೇಕು. ಮತ್ತು ನಿಮ್ಮ ಬ್ಯಾಂಕ್ ಅಕೌಂಟ್ ಅಪ್ಡೇಟ್ ಮಾಡಿಸಿ ಸರಿಯಾಗಿ ನೋಂದಣಿ ಮಾಡಲು ಅವಕಾಶ ಮಾಡಿಕೊಡಬೇಕು. ಹಾಗೂ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ನೊಂದಣಿಯನ್ನು ಸರಿಯಾದ ಹೆಸರಿನ ಮೇಲೆ ಮಾಡಿಸಬೇಕು..
ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿರುವ ಮಾಹಿತಿಯನ್ನು ಇಲ್ಲಿ ಚೆಕ್ ಮಾಡಿ.. 🙏🏻👇🏻
https://ahara.kar.nic.in/Home/EServices
ನಂತರ ಈ ಕೆಳಗೆ ಕಾಣುವ ಮುಖಪುಟದಲ್ಲಿರುವ ಯಾರೋ ಮಾರ್ಕನ್ನು ಒತ್ತಿ..
ನಂತರ e-Ration card ಇದರ ಮೇಲೆ ಕ್ಲಿಕ್ ಮಾಡಿ
ಅಲ್ಲಿ ಕೆಳಗೆ ಕಾಣುವ show cancelled /suspended list ಮೇಲೆ ಕ್ಲಿಕ್ ಮಾಡಿರಿ
ನಂತರ ಅಲ್ಲಿ ಕಾಣುವ ಜಿಲ್ಲೆ ತಾಲೂಕು ತಿಂಗಳು ಹಾಗೂ ವರ್ಷವನ್ನು ಆಯ್ಕೆ ಮಾಡಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿರುವ ಬಗ್ಗೆ ಮಾಹಿತಿಯನ್ನು ಪಡೆಯಿರಿ.
ಈಗಾಗಲೇ ಸರಿಯಾಗಿ ನೋಂದಣಿ ಮಾಡಿ ಹಣ ಬರಲಾರದವರು ಮತ್ತೊಮ್ಮೆ ಸರಿಯಾಗಿ ತಿದ್ದುಪಡಿ ಮಾಡಿಸಿ ಮತ್ತೆ ನೋಂದಣಿ ಮಾಡಿಸಿಕೊಳ್ಳಿ ಹೊಸದಾಗಿ ನೋಂದಣಿ ಮಾಡುವವರ ಸೂಕ್ತ ದಾಖಲೆಗಳೊಂದಿಗೆ ನೊಂದಣಿ ಯಾದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಜಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಲೇಖನವು ಅರ್ಥಪೂರ್ಣವಾಗಿದ್ದು ನಿಮಗೆ ಸರಿ ಅನಿಸಿದರೆ ತಪ್ಪದೇ ಎಲ್ಲರಿಗೂ ಶೇರ್ ಮಾಡಿ 🙏🏻
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ತಿಳಿಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿ ವಾಹಿನಿ ಗ್ರೂಪ್ಸ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿರಿ 👇🏻https://chat.whatsapp.com/K9mNNO3T6FzKJGch4oqd2m
–*ಲೇಖನ ಮುಕ್ತಾಯ *–
➡️ ಅನ್ನ ಭಾಗ್ಯ ಯೋಜನೆಯ ಹಣ ಜಮೆಯಾಗಿದೆ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ https://krushivahini.com/2023/08/29/annabagya-yojana-amount-credited-or-not/
➡️ ಗಂಗಾ ಕಲ್ಯಾಣ ಯೋಜನೆ ಅಡಿ ಸರ್ಕಾರದಿಂದ ಉಚಿತ ಬೋರ್ವೆಲ್ ಅಳವಡಿಸಿಕೊಳ್ಳಲು ಅರ್ಜಿ ಸಲ್ಲಿಸಿ https://krushivahini.com/2023/08/31/ganga-kalyana-scheme-application-invited/
➡️ ಕೇವಲ ಆಧಾರ್ ನಂಬರ್ ಹಾಕಿ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದಿರುವುದನ್ನು ಚೆಕ್ ಮಾಡಿಕೊಳ್ಳಿ https://krushivahini.com/2023/08/30/gruhalakshmi-amount-credited-to-your-account/
➡️ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರುತ್ತದೆ https://krushivahini.com/2023/08/28/gruhalaksmi-yojane-amount-credited/
➡️ ಇ-ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ https://krushivahini.com/2023/08/27/e-kyc-for-ration-card/
➡️ ಕೇವಲ ಸರ್ವೆ ನಂಬರನ್ನು ನಮೂದಿಸಿ ನಿಮ್ಮ ಕಾತ ಪುಸ್ತಕವನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ https://krushivahini.com/2023/09/02/get-katha-report-in-mobile-2/