Ganga kalyana scheme application invited

ಗಂಗಾ ಕಲ್ಯಾಣ ಯೋಜನೆ-2023 (Ganga kalyana scheme)

ನಮಸ್ಕಾರ ಪ್ರಿಯ ರೈತ ಬಾಂಧವರೇ, ಇಂದು ನಾವು ಈ ಲೇಖನದಲ್ಲಿ ಸರ್ಕಾರದಿಂದ ಉಚಿತ ಬೋರ್ವೆಲ್ ಅನ್ನು ಕೊರಿಸಲು ನಾಲ್ಕು ಲಕ್ಷ ಸಹಾಯಧನ ನೀಡುತ್ತಿರುವ ಬಗ್ಗೆ ತಿಳಿದುಕೊಳ್ಳೋಣ. ಹೌದು ಸರ್ಕಾರದಿಂದ ಕರ್ನಾಟಕ ಗಂಗಾ ಕಲ್ಯಾಣ ಯೋಜನೆ2023 ರ ಅಡಿಯಲ್ಲಿ ಉಚಿತ ಬೋರ್ವೆಲ್ ಪಡೆಯಬಹುದಾಗಿದೆ, ಈ ಯೋಜನೆಯ ಸಂಪೂರ್ಣ ವಿವರ ಯಾರೆಲ್ಲಾ ಅರ್ಹರು?? ಹಾಗೂ ಈ ಯೋಜನೆಗಳಿಂದ ಆಗುವ ಪ್ರಯೋಜನಗಳು??ಮತ್ತು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಕೆಳಗೆ ಕೊಟ್ಟಿರುವ ಲಿಂಕ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ..

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೊಳವೆಬಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ಧೀಕರಣ ಮಾಡಿ ನೀರನ್ನು ಒದಗಿಸಲಾಗುತ್ತದೆ, ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ.

ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಸರ್ಕಾರವು ರೂ.4 ಲಕ್ಷಗಳನ್ನು 1. ಬೆಂಗಳೂರು ಗ್ರಾಮಾಂತರ 2. ಕೋಲಾರ 3. ಚಿಕ್ಕಬಳ್ಳಾಪುರ 4. ರಾಮನಗರ 5. ತುಮಕೂರು ಜಿಲ್ಲೆಗಳಿಗೆ ನಿಗದಿಪಡಿಸಿರುತ್ತದೆ ಮತ್ತು ಇತರೆ ಜಿಲ್ಲೆಗಳಿಗೆ ರೂ.3 ಲಕ್ಷಗಳನ್ನು ನಿಗದಿಪಡಿಸಿರುತ್ತದೆ.

ಗಂಗಾ ಕಲ್ಯಾಣ ಯೋಜನೆಯ ಅರ್ಹತೆಗಳೇನು??

ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.

ಪ್ರತಿ ಫಲಾನುಭವಿಗೆ 1 ಎಕರೆ 20 ಗುಂಟೆ (1 ಎಕರೆ 50 ಸೆಂಟ್ಸ್) ಎಕರೆಯಿಂದ 5 ಎಕರೆಯವರೆಗೆ ಖುಷ್ಕಿ ಜಮೀನಿರಬೇಕು,ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಇಂತಹ ಜಿಲ್ಲೆಗಳಲ್ಲಿ ಜಮೀನಿನ ಲಭ್ಯತೆ ಬಹಳ ಕಡಿಮೆ ಇರುವುದರಿಂದ ಕನಿಷ್ಠ 1 ಎಕರೆ ಜಮೀನನ್ನು ಹೋದಿರತಕ್ಕದ್ದು.

*ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.

* ಅರ್ಜಿದಾರರು ಸಣ್ಣ /ಅತಿ ಸಣ್ಣ ಹಿಡುವಳಿದಾರ ರೈತರಾಗಿರಬೇಕು.

* ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 96,000/- ಗಳನ್ನು ಮೀರಬಾರದು.

* ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.

ಬೇಕಾಗಿರುವ ಅಗತ್ಯ ದಾಖಲೆಗಳು??

* ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ

* ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ

* ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)

* ಇತ್ತೀಚಿನ ಆರ್‌ಟಿಸಿ ಪ್ರತಿ

* ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಸಣ್ಣ/ ಅತಿ ಸಣ್ಣ ಹಿಡುವಳಿದಾರ ಪ್ರಮಾಣಪತ್ರ

* ಬ್ಯಾಂಕ್ ಪಾಸ್ ಬುಕ್ ಪ್ರತಿ

* ಭೂ-ಕಂದಾಯ ಪಾವತಿಸಿದ ರಸೀದಿ

* ಸ್ವಯಂ ಘೋಷಣೆ ಪತ್ರ

* ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ

ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಸರಿಯಾಗಿ ಗಮನಿಸಿರಿ :-

ಹಂತ 1:- ಅರ್ಜಿ ಸಲ್ಲಿಸಲು ನೀವು ಕರ್ನಾಟಕ ಗಂಗಾ ಕಲ್ಯಾಣ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು ಕೆಳಕಂಡ ಲಿಂಕನ್ನು ಒತ್ತಿ👇

https://kmdconline.karnataka.gov.in/Portal/home

ಹಂತ 2:- ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಮುಖ್ಯ ವೆಬ್ಸೈಟ್ನ ಮುಖಪುಟವು ನಿಮ್ಮ ಮುಂದೆ ಬರುತ್ತದೆ.

ಹಂತ 3:- ನಿಮ್ಮ ಮುಂದೆ ಕಾಣುವ ಮುಖಪುಟದಲ್ಲಿ ನೀವು ಆನ್ಲೈನ್ ಅಪ್ಲಿಕೇಶನ್ ಗಾಗಿ ಆಯ್ಕೆಯನ್ನು ನೋಡುತ್ತೀರಿ ಹಾಗೂ ಅದರ ಮೇಲೆ ಕ್ಲಿಕ್ ಮಾಡಬೇಕು.

ಹಂತ 4:- ತದನಂತರ ನಿಮ್ಮ ಮುಂದೆ ಗಂಗಾ ಕಲ್ಯಾಣ ಯೋಜನೆಯ ಅರ್ಜಿ ನಮೂನೆಯ ತರೆದುಕೊಳ್ಳುತ್ತದೆ ಅದರಲ್ಲಿ ನಿಮ್ಮಿಂದ ಕೇಳಲಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಹಂತ 5:- ನೀವು ಬರ್ತಿ ಮಾಡಿದ ಫಾರ್ಮೊಂದಿಗೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಇದಾದಮೇಲೆ ಅರ್ಜಿಯನ್ನು ಸಲ್ಲಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಹಂತ 6:- ಈಗ ನೀವು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಪೂರ್ಣಗೊಳ್ಳುತ್ತದೆ.

ಗಂಗಾ ಕಲ್ಯಾಣ ಯೋಜನೆಯ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಸಹಾಯವಾಣಿಗೆ ಕರೆಮಾಡಿರಿ “…

24×7 ಸಹಾಯವಾಣಿ

+91-8277799990

mwdhelpline@karnataka.gov.in

ಈ ಮೇಲೆ ತಿಳಿಸಿರುವ ಲೇಖನವನ್ನು ಸರಿಯಾಗಿ ಓದಿ ನಿಮಗೆ ಸರಿ ಅನಿಸಿದಲ್ಲಿ ನಿಮ್ಮ ಸಂಪರ್ಕದಲ್ಲಿರುವ ರೈತ ಬಾಂಧವರಿಗೆ ಇದನ್ನು ತಪ್ಪದೆ ಶೇರ್ ಮಾಡಿರಿ.🙏🏻🙏🏻

—* ಲೇಖನ ಮುಕ್ತಾಯ *—

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಲು ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಹಾಗೂ ಕೃಷಿ ವಾಹಿನಿ ವಾಟ್ಸಪ್ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇🏻

https://chat.whatsapp.com/K9mNNO3T6FzKJGch4oqd2m

ತಪ್ಪದೆ ಓದಿರಿ :-

➡️ ಕೇವಲ ಸರ್ವೇ ನಂಬರ್ ನಮೂದಿಸಿ ನಿಮ್ಮ ಖಾತಾ ಬುಕ್ಕನ್ನು ಮೊಬೈಲ್ನಲ್ಲಿಯೇ ಪಡೆದುಕೊಳ್ಳಿ *https://krushivahini.com/2023/09/02/get-katha-report-in-mobile-2/

*🔴ಕೇವಲ ಸರ್ವೇ ನಂಬರ್ ನಮೂದಿಸಿ ನಿಮ್ಮ ಖಾತಾ ರಿಪೋರ್ಟ್ನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ*

➡️ ಆಧಾರ್ ನಂಬರ್ ಹಾಕಿ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದಿರುವುದನ್ನು ಮೊಬೈಲ್ ನಲ್ಲಿಯೇ ನೋಡಿರಿ

https://krushivahini.com/2023/08/30/gruhalakshmi-amount-credited-to-your-account/

➡️ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ?? ಇಲ್ಲವೋ?? ಬರದಿದ್ದರೆ ಏನು ಮಾಡಬೇಕು ಎಂಬುದನ್ನು ನೋಡಿರಿ 👇🏻

https://krushivahini.com/2023/08/29/annabagya-yojana-amount-credited-or-not/

➡️ ಗೃಹ ಲಕ್ಷ್ಮಿ ಯೋಜನೆಯ ಹಣ ಈ ಲಿಸ್ಟಿನಲ್ಲಿ ಇದ್ದರೆ ಮಾತ್ರ ಜಮೆ ಆಗುತ್ತದೆ 👇🏻

https://krushivahini.com/2023/08/28/gruhalaksmi-yojane-amount-credited/

➡️ ಇ-ಕೆ ವೈ ಸಿ ಮಾಡದಿದ್ದರೆ ರೇಷನ್ ಕಾರ್ಡನ್ನು ರದ್ದು ಮಾಡಲಾಗುತ್ತದೆ ಇಲ್ಲಿದೆ ಮಾಹಿತಿ 👇🏻

https://krushivahini.com/2023/08/27/e-kyc-for-ration-card/

➡️ ಗೃಹ ಜ್ಯೋತಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ಚೆಕ್ ಮಾಡಿ 👇🏻

https://krushivahini.com/2023/07/24/track-gruhajyothi-application-status/

➡️ ನಿಮ್ಮ ಉತಾರಿಯಲ್ಲಿ ಹೊಲದ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡುವುದು ಹೇಗೆ 👇🏻

https://krushivahini.com/2023/07/24/how-to-change-name-in-rtc/

➡️ ಆನ್ಲೈನ್ ನಲ್ಲಿ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡುವುದು ಹೇಗೆ ಎಂಬುದನ್ನು ಮೊಬೈಲ್ ನಲ್ಲಿ ನೋಡಿರಿ 👇🏻

https://krushivahini.com/2023/07/23/ration-card-correction-online/

Leave a Reply

Your email address will not be published. Required fields are marked *