E-Kyc for Ration Card: ಪಡಿತರ ಚೀಟಿದಾರರು ( ರೇಷನ್ ಕಾರ್ಡ್ ಇರುವವರು) ಕಡ್ಡಾಯವಾಗಿ ಆ .31 ರೊಳಗೆ ಇ – ಕೆವೈಸಿ ಮಾಡಿಸದಿದ್ದರೆ ಅಂಥವರ ರೇಷನ್ ಕಾರ್ಡ್ ರದ್ದಾಗಲಿದೆ. ಇದಲ್ಲದೆ ಸೆಪ್ಟೆಂಬರ್ ತಿಂಗಳಿನಿಂದಲೇ ಅವರಿಗೆ ಅನ್ನಭಾಗ್ಯ ಅಕ್ಕಿಯಾಗಲಿ ಹಾಗೂ ಅಕ್ಕಿ ಬದಲಿಗೆ ನೀಡುತ್ತಿರುವ ಹಣವಾಗಲಿ ಯಾವುದೂ ಕೂಡ ಜಮೆಯಾಗುವುದಿಲ್ಲ. ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಇ – ಕೆವೈಸಿ ‘ಎಂದು ಕರೆಯುತ್ತಾರೆ.
ಇದೀಗ ಜಿಲ್ಲೆಯಲ್ಲಿ 2,95,309 ಅಂತ್ಯೋದಯ (ಎಎವೈ) ಮತ್ತು ಆದ್ಯತಾ (ಪಿಎಚ್‌ಎಚ್ ) ಪಡಿತರ ಚೀಟಿ ಹೊಂದಿ ರುವ 9.48 ಲಕ್ಷ ಸದಸ್ಯರ ಪೈಕಿ 9,09,861 ಮಂದಿ ಇ ಕೆವೈಸಿ (ಶೇ .95.98) ಮಾಡಿಸಿದ್ದಾರೆ. ಇನ್ನು 29,593 ಪಡಿತರ ಚೀಟಿಯಲ್ಲಿನ 38,139 ಸದಸ್ಯರು (ಶೇ .4.02) ಇ – ಕೆವೈಸಿ ಮಾಡಿಸಿಲ್ಲ ಅನ್ನಭಾಗ್ಯ ಯೋಜನೆಯನ್ನು ಬಡವರು ಮತ್ತು ನಿರ್ಗತಿಕರಿಗೆಂದು ರೂಪಿಸಲಾಗಿದ್ದು, ಸಿರಿವಂತರೂ ಕೂಡ ಎಂತಹ ಯೋಜನೆಯ ದುರ್ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದರಿಂದಾಗಿ ಅನರ್ಹ ರೇಷನ್ ಕಾರ್ಡ್ ರದ್ದುಗೊಳಿಸುವ
ಹಿನ್ನಲೆಯಲ್ಲಿ ಆಧಾರ್‌ಗೆ ಲಿಂಕ್ ಮಾಡಲಾಗುತ್ತಿದೆ. ಪಡಿತರ ವ್ಯವಸ್ಥೆಯಲ್ಲಿ ನೀಡುವ ಆಹಾರ ಸಾಮಗ್ರಿಗಳ ನಿರ್ದಿಷ್ಟ ಮಾಹಿತಿ ಹಾಗೂ ಕುಟುಂಬ ಸದಸ್ಯರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರಕಾರ ವರ್ಷಗಳ ಹಿಂದೆಯೇ ಇ – ಕೆವೈಸಿ ಆರಂಭಿಸಿತ್ತು.
ಹಲವು ಬಾರಿ ಅವಕಾಶ ನೀಡಿದ್ದರೂ ಶೇ .100 ಪ್ರಗತಿ ಇ ಕೆ ವೈ ಸಿ ಸಾಧ್ಯವಾಗಿಲ್ಲ.ಇದೀಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಇ– ಕೆವೈಸಿ ಕುರಿತು ಆದೇಶ ಹೊರ ಬಿದ್ದಿದೆ.
ಹೀಗಾಗಿ ಇ – ಕೆವೈಸಿ ಮಾಡಲು ಬಾಕಿ ಇರುವವರಿಗೆ ಆ .31 ರ ಕೊನೆಯ ಗಡುವು(ಕೊನೆಯ ದಿನಾಂಕ) ನೀಡಲಾಗಿದೆ. ಒಂದುವೇಳೆ ಇ ಕೆ ವೈ ಸಿ ಮಾಡಿಸದಿದ್ದಲ್ಲಿ ಅಂತಹ ಸದಸ್ಯರುಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸುವ ಜತೆಗೆ ಫಲಾನುಭವಿಗಳಿಗೆ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತದೆ.
ಇ – ಕೆವೈಸಿ ಮಾಡದಿದ್ದರೆ ಏನಾಗುತ್ತದೆ ?👆🏻👆🏻
ಪಡಿತರ ಚೀಟಿ ಇ ಕೆವೈಸಿ ಮಾಡದಿದ್ದರೆ ಪಡಿತರ ಸಾಮಗ್ರಿ ಮಾತ್ರವಲ್ಲದೆ ಸರ್ಕಾರದ ಅನೇಕ ಸವಲತ್ತುಗಳನ್ನು ಪಡೆಯಲು ಕೂಡ ತೊಂದರೆ ಉಂಟಾಗಲಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಇ – ಕೆವೈಸಿ ಕುರಿತು ಆದೇಶ ಹೊರಡಿಸಿದೆ.
ಇ-ಕೆವೈಸಿ ಆಗದೇ ಇರುವ ಪಡಿತರ ಚೀಟಿದಾರರಿಗೆ ಆಗಸ್ಟ್ 31 ರೊಳಗೆ ಇ – ಕೆವೈಸಿ ಪೂರ್ಣಗೊಳಿಸುವ ಬಗ್ಗೆ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ.
ಜಿಲ್ಲೆಗಳ ಜಂಟಿ / ಉಪ ನಿರ್ದೆಶಕರುಇ – ಕೆವೈಸಿಆಗದ ಪಡಿತರಚೀಟಿದಾರರ ಹೆಸರುಗಳನ್ನು ಆಯಾಯ ನ್ಯಾಯ ಬೆಲೆ ಅಂಗಡಿಗಳ ಫಲಕದಲ್ಲಿ ಪ್ರದರರ್ಶಿಸಲು ಸೂಚಿಸಲಾಗಿದೆ. ವಿನಾಯಿತಿ ನೀಡಲಾಗಿರುವ ಪಡಿತರ ಚೀಟಿ ಯಲ್ಲಿ ಬೆರಳಚ್ಚು ಪಡೆಯಲು ಆಗದೇ ಇರುವ ಪಡಿ ತರ ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಅಮಾನತುಪಡಿಸದೇ, ಸದರಿ ಫಲಾನಭವಿಗಳಿಂದ ಪುನಃ ಬೆರಳಚ್ಚು ಪಡೆಯಲು ಪ್ರಯತ್ನಿಸತಕ್ಕದ್ದು.
ಇಲ್ಲದಿದ್ದಲ್ಲಿ ಐಆರ್‌ಐಎಸ್ ತಂತ್ರಾಂಶವನ್ನುಕಾಯತಕ್ಕದ್ದು ಆಹಾರ ತಂತ್ರಾಂಶದೊಂದಿಗೆ ಜೋಡಣೆಯಾಗುವ ವರೆಗೆ.
ಪಡಿತರ ಚೀಟಿ ಫಲಾನುಭವಿಗಳ ಇ – ಕೆವೈಸಿ ಸಂಗ್ರಹಣೆಯನ್ನು ಆ .31 ರೊಳಗಾಗಿ ಪೂರ್ಣಗೊಳಿಸದೆ ಇದ್ದಲ್ಲಿ ಅಂತಹ ಪಡಿತರ ಚೀಟಿಗಳ ಸದಸ್ಯರು ಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿ ಸಲಾಗುವುದು ಮತ್ತು ಈ ಫಲಾನುಭವಿಗಳಿಗೆ ಆಹಾರ ಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸೆಪ್ಟೆಂಬರ್ ತಿಂಗಳಿನಿಂದ ಸ್ಥಗಿತಗೊಳಿಸಲಾಗುವುದು.
ಅನ್ನಭಾಗ್ಯ ಯೋಜನೆಯ ಪ್ರಯೋಜನ ಮತ್ತು ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯಬೇಕೆಂದರೆ ಫಲಾನುಭವಿಗಳು ತುರ್ತಾಗಿ ಬ್ಯಾಂಕ್‌ಗಳಿಗೆ ತೆರಳಿ ಇ – ಕೆವೈಸಿ ಮಾಡಿಸಬೇಕು. ಇಲ್ಲಿಯವರೆಗೆ ಬ್ಯಾಂಕ್ ಖಾತೆ ಹೊಂದದೇ ಇರುವ ಫಲಾನು ಭವಿಗಳು ಕೂಡಲೇ ಹೊಸ ಬ್ಯಾಂಕ್ ಖಾತೆಯನ್ನು ತೆರೆದು ಅದಕ್ಕೆ ಆಧಾರ್ ಕಾರ್ಡ್ ಹಾಗೂ ಪೋನ್ ನಂಬರ್ ಲಿಂಕ್ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಯೋಜನೆಗಳು :-
➡️ಗೃಹ ಲಕ್ಷ್ಮಿ 2000 ರೂಪಾಯಿ ಫಲಾನುಭವಿಗಳ ಲಿಸ್ಟ್ ಲಿಂಕ್ 👇🏻
1)ಜಿಲ್ಲಾ, 2)ತಾಲೂಕು, 3)ಗ್ರಾಮ ಪಂಚಾಯತಿ,4)ಗ್ರಾಮ ಆಯ್ಕೆ ಮಾಡಿಕೊಂಡು ನೋಡಿ..,👇🏻👇🏻 https://ahara.kar.nic.in/WebForms/Show_Village_List.aspx
👆🏻👆🏻👆🏻👆🏻👆🏻
➡️ ಗೃಹಜ್ಯೋತಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ಮನೆಯಲ್ಲಿ ಕುಳಿತುಕೊಂಡು ಚೆಕ್ ಮಾಡಿ
➡️ ಗೃಹಲಕ್ಷ್ಮಿ ಯೋಜನೆಯ ಹಣ ಯಾರ ಹೆಸರಿನಲ್ಲಿ ಬರುವುದು ಎಂದು ತಿಳಿದುಕೊಳ್ಳಿ!
➡️ ಅನ್ನಭಾಗ್ಯ ಯೋಜನೆಯ ಹಣ ರೈತರ ಖಾತೆಗೆ ಜಮಯಾಗಿದೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ!!
➡️ ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಗೆ ಆಧಾರ್ ನಂಬರ್ ಲಿಂಕ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ!!
➡️ ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಮೊಬೈಲ್ ನಲ್ಲಿಯೇ ಚೆಕ್ ಮಾಡಿ.
➡️ ನಿಮ್ಮ ಉತಾರಿಯಲ್ಲಿ ಹೊಲದ ಮಾಲೀಕರ ಹೆಸರನ್ನು ತಿದ್ದು ಪಡಿ ಮಾಡುವುದು ಹೇಗೆ??
ಕೃಷಿ ಆಧಾರಿತ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ನ್ನು ಒತ್ತಿ 👇🏻👇🏻
https://chat.whatsapp.com/K9mNNO3T6FzKJGch4oqd2m