Track gruhajyothi application status: ನಮಸ್ಕಾರ ಪ್ರಿಯ ರೈತ ಬಾಂಧವರೇ, ಇಂದು ನಾವು ಗ್ರಹ ಜ್ಯೋತಿ ಅಪ್ಲಿಕೇಶನ್ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ ಎಂದು ತಿಳಿಯೋಣ.
ಈಗಾಗಲೇ ಕಾಂಗ್ರೆಸ್ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ಗ್ರಹ ಜ್ಯೋತಿ ಯೋಜನೆಯ ಒಂದು. ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ತನ್ನು ಕೊಡಲಾಗುವುದು.
ಈಗಾಗಲೇ ಈ ಯೋಜನೆಗೆ ಬಹಳಷ್ಟು ಜನ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.
ನೀವು ಈ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಿ ಅವರ ಸ್ಟೇಟಸ್ ಏನಿದೆ ಎಂಬುದನ್ನು ಮೊಬೈಲ್ ನಲ್ಲಿ ತಿಳಿಯಲು ನೀವು ಮನೆಯಲ್ಲಿ ಕುಳಿತು ಗೃಹಜೋತಿ ಯೋಜನೆ ಅಪ್ಲಿಕೇಶನ್ ಸ್ಟೇಟಸ್ ಅನ್ನು ನೋಡಬಹುದು.
200 ಯೂನಿಟ್ ಉಚಿತ ವಿದ್ಯುತ್ ಸಿಗುವ ಗ್ರಹ ಜ್ಯೋತಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ನೀವು ಮೊಬೈಲ್ ನಲ್ಲಿ ನೋಡಲು ಈ ಕೆಳಕಂಡ ಲಿಂಕ್ ಮೇಲೆ ಒತ್ತಿ
https://sevasindhu.karnataka.gov.in/StatucTrack/Track_Status
ಅಲ್ಲಿ escom ಆಯ್ಕೆಯಲ್ಲಿ ನೀವು ಯಾವ ವಿಭಾಗಕ್ಕೆ ಬರುತ್ತೀರಿ ಎನ್ನುವುದನ್ನು ಆಯ್ಕೆ ಮಾಡಿ. ಕಲಬುರ್ಗಿ ಕಡೆಯ ಜನರು gescom, ಮೈಸೂರು ಕಡೆಯವರು mescome, ಹುಬ್ಬಳ್ಳಿ ಕಡೆ ಅವರು hescom, ಆಯ್ಕೆ ಮಾಡಿ ನಂತರ ನಿಮ್ಮ ಕರೆಂಟ್ ಬಿಲ್ ನಲ್ಲಿರುವ ಅಕೌಂಟ್ ನಂಬರನ್ನು ಹಾಕಿ ನಂತರ check status ಸೆಲೆಕ್ಟ್ ಮಾಡಬೇಕು.
ನಂತರ ಆ ಲಿಂಕ್ನಲ್ಲಿ ಕಾಣುವ track your application status ಕಾಣುತ್ತದೆ.
ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಅರ್ಜಿಯನ್ನು ಸ್ವೀಕರಿಸಲಾಗಿದೆ ಇಲ್ಲವೋ ಎಂಬುದು ನಿಮಗೆ ತಿಳಿಯುತ್ತದೆ. ಒಂದು ವೇಳೆ ನಿಮ್ಮ ಅರ್ಜಿಯನ್ನು ಸ್ವೀಕರಿಸಿದ್ದರೆ. Your application to gruhajyothi received and sent to escome for processing ಎಂದು ಬರೆದಿರುವುದು ಕಾಣಿಸುತ್ತದೆ.
ಒಂದು ವೇಳೆ ಈ ಕೆಳಗೆ ತೋರಿಸಿದ ಹಾಗೆ ಕಂಡರೆ ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು👇🏻…
ಒಂದು ವೇಳೆ ನೀವು ಇನ್ನೂ ಗ್ರಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರೆ ಇನ್ನೂ ಮೂರೇ ದಿನಗಳ ಒಳಗೆ ಅರ್ಜಿಯನ್ನು ಸಲ್ಲಿಸಿ ನೀವು ಇನ್ನೂ ಮೂರು ದಿನಗಳಲ್ಲಿ ಅರ್ಜಿ ಸಲ್ಲಿಸದಿದ್ದರೆ ನಿಮ್ಮ ಅಗಸ್ಟ್ ತಿಂಗಳಲ್ಲಿ ಬರುವ ವಿದ್ಯುತ್ ಅನ್ನು ನೀವೇ ಕಟ್ಟಬೇಕು. ನೀವು ಇನ್ನೂ ಮೂರು ದಿನಗಳಲ್ಲಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿದರೆ ನಿಮ್ಮ ಅಗಸ್ಟ್ ತಿಂಗಳ ವಿದ್ಯುತ್ ಉಚಿತವಾಗಿ ಸಿಗುತ್ತದೆ. ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಗ್ರಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು??
• ಮನೆಯ ಯಜಮಾನಿಯ ಆಧಾರ್ ಕಾರ್ಡ್ ನಂಬರ್
• ಕರೆಂಟ್ ಬಿಲ್ ನಲ್ಲಿರುವ ಐಡಿ ನಂಬರ್
• ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್
ಈ ಮೇಲಿನ ದಾಖಲೆಗಳು ಇದ್ದರೆ ನೀವು ಸುಲಭವಾಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಅದೇ ರೀತಿ ಸರ್ಕಾರ ನೀಡುತ್ತಿರುವ ಈ ಗ್ರಹ ಜ್ಯೋತಿ ಯೋಜನೆಗೆ ಅನ್ವಯಿಸುವ ಶರತ್ತುಗಳನ್ನು ಸರಿಯಾಗಿ ತಿಳಿದುಕೊಂಡು ಈ ಸರ್ಕಾರಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಿ.
: ತಪ್ಪದೆ ಓದಿರಿ :
👉🏻 ನಿಮ್ಮ ಹೊಲದ ಉತಾರಿಯಲ್ಲಿ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡುವುದು ಹೇಗೆ ಎಂದು ತಿಳಿಯಿರಿ
👉🏻 ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ ಹಾಗೂ ಅದರ ಸ್ಟೇಟಸ್ ಅನ್ನು ಚೆಕ್ ಮಾಡಿ
👉🏻 ಗೃಹಲಕ್ಷ್ಮಿ ಯೋಜನೆಯ 2000 ರೂ ಹಣ ಯಾರ ಹೆಸರಿಗೆ ಬರುತ್ತದೆ ಎಂದು ಮೊಬೈಲ್ ನಲ್ಲಿಯೇ ತಿಳಿಯಿರಿ.
👉🏻 ಅನ್ನ ಭಾಗ್ಯ ಯೋಜನೆ ಹಣ ರೈತರ ಖಾತೆಗೆ ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
👉🏻 ನಿಮ್ಮ ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ಚೆಕ್ ಮಾಡಿ
👉🏻 ಮೆಕ್ಕೆಜೋಳದಲ್ಲಿ ಮುಳ್ಳು ಸಜ್ಜೆ ಕಸವನ್ನು ಹೋಗಲಾಡಿಸಲು ಕಳೆನಾಶಕ ಬಂದಿದೆ
ಪ್ರಮುಖ ಲಿಂಕಗಳು :-
👉🏻ವಾಟ್ಸಪ್ ಗ್ರೂಪ್ ಸೇರಲು – Click Here
👉🏻ಟೆಲಿಗ್ರಾಂ ಗ್ರೂಪ್ ಸೇರಲು – Click Here
ಹೆಚ್ಚಿನ ಕೃಷಿ ಆಧಾರಿತ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ..