ನಮಸ್ಕಾರ ಪ್ರಿಯ ರೈತ ಬಾಂಧವರೇ ನೀವು ನೋಡಿರುವ ಹಾಗೆ ಗ್ರಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ 2000/- ರೂ ಸಿಗಲಿದೆಘೋಷಿಸಲಾಗಿದೆ.

ಈಗಾಗಲೇ ಎಲ್ಲರಿಗೂ ಗೊತ್ತಿರುವ ಗ್ರಹಲಕ್ಷ್ಮಿ ಯೋಜನೆಯ ಇದಾಗಿದ್ದು ಇದರಲ್ಲಿ ಬಹಳಷ್ಟು ಜನರಿಗೆ ಈ ಯೋಜನೆಯ ಅಡಿಯಲ್ಲಿ ಯಾರಿಗೆ ಹಣ ಬರುವುದು ಎಂಬ ಗೊಂದಲಗಳು ಇರುವುದು ಸರ್ವೇಸಾಮಾನ್ಯ.

ಈ ಲೇಖನದಲ್ಲಿ ನೀಡಿರುವ ಲಿಂಕನ್ನು ಉಪಯೋಗಿಸಿ ಗೃಹಲಕ್ಷ್ಮಿ ಯೋಜನೆ ಅಡಿ ಯಜಮಾನಿಗೆ ಬರುವ 2000/- ರೂಪಾಯಿ ಯಾರ ಹೆಸರಿಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

*ಮೊದಲಿಗೆ ನಾವು ಕೆಳಗೆ ಸೂಚಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು👇🏻

https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010

ನಂತರ ಅದರಲ್ಲಿ ತೋರಿಸುವ ಹಾಗೆ

1) ನಿಮ್ಮ ಜಿಲ್ಲೆ select ಮಾಡಿರಿ,

2) ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ

ನಂತರ Submit ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮಗೆ ಮನೆಯ ಯಜಮಾನಿಯ ಹೆಸರನ್ನು ನೋಡಬಹುದು ಹಾಗೂ ಯಾರಿಗೆ ಹಣ ಬರುವುದು ಎಂದು ಖಚಿತಪಡಿಸಿಕೊಳ್ಳ ಬಹುದು..

ಹಾಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಮೆಸೇಜ್ ಮಾಡಿ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸ್ಥಳ ಮತ್ತು ಸಮಯ ಯಾವಾಗ ಎಂದು ತಿಳಿಯಲು ಈ ಕೆಳಗಿನ ಲೇಖನವನ್ನು ಗಮನವಿಟ್ಟು ಓದಿ.

ಮೊದಲಿಗೆ ನೀವು 8147500500 ಈ ಸಂಖ್ಯೆಗೆ ಎಸ್ಎಂಎಸ್ ಅಥವಾ ವಾಟ್ಸಪ್ ಸಂದೇಶ ಕಳಿಸುವ ಮೂಲಕ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಮೊದಲಿಗೆ ನೊಂದಣಿ ಮಾಡಬೇಕಾದ ವಿವರಗಳನ್ನು ಪಡೆಯಬಹುದು ಮತ್ತು ಅರ್ಜಿದಾರರು ಸೂಚಿಸುವ ಸಮಯದಲ್ಲಿ ಹೋಗಿ ನೀವು ಅರ್ಜಿ ನೋಂದಣಿ ಮಾಡಬಹುದು.

ಇದನ್ನು ಓದಿರಿ : ಅನ್ನಭಾಗ್ಯ ಯೋಜನೆಯ ಹಣ ರೈತರ ಖಾತೆಗೆ ಜಮಾ ಮೊಬೈಲ್ ನಲ್ಲಿ ಚೆಕ್ ಮಾಡಿ ಎಷ್ಟು ಹಣ ಜಮೆಯಾಗಿದೆ

ನಿಮ್ಮ ಯೋಜನೆಯ ಅರ್ಜಿಯು ಕರ್ನಾಟಕ ಒನ್ ಗ್ರಾಮ್ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ. ಎಪಿಎಲ್ ಬಿಪಿಎಲ್ ಅಂತೋದಯ ಕಾರ್ಡ್ ಇದ್ದವರು ಇದರ ಫಲಾನುಭವಿಗಳಾಗಿರುತ್ತಾರೆ.

ಈ ಯೋಜನೆಗೆ ಅರ್ಹತೆ ಇರುವವರು ಅವರ ಪತಿಯ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದು. ಆದರೆ ವಿಶೇಷವಾಗಿ ಪತಿಯು ಯಾವುದೇ ಜಿಎಸ್‌ಟಿ ಅಥವಾ ಐಟಿ ರಿಟರ್ನ ಮಾಡುವವರಾಗಿರಬಾರದು. ಹಾಗಿದ್ದಲ್ಲಿ ಮಾತ್ರ ಈ ಯೋಜನೆಗೆ ನೀವು ಅರ್ಹರೆ ಇರುತ್ತೀರಿ.

ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ಏನು ಮಾಡಬೇಕು??👇🏻

ಚಿಂತೆ ಬೇಡ ಆಧಾರ್ ಲಿಂಕ್ ಇಲ್ಲದವರು ಬೇರೆ ಪಾಸ್ ಬುಕ್ಕನ್ನು ತೆಗೆದುಕೊಂಡು ಹೋಗಬಹುದು.

ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ಅನ್ನು ತೆಗೆದುಕೊಂಡು ಹೋಗಬೇಕು ಮತ್ತು ಪಾಸ್ ಬುಕ್ ಹಾಗೂ ಆಧಾರ್ ಕಾರ್ಡಿನಲ್ಲಿ ಒಂದೇ ಹೆಸರು ಇರಬೇಕು. ವರಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ಇರುವುದಿಲ್ಲ.

ಇದನ್ನು ಓದಿರಿ : ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ನೋಡಿ

ಬೆಳಿಗ್ಗೆ7:00 ರಿಂದ ಸಂಜೆ 5:00 ವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ ಆ ವೇಳೆಯಲ್ಲಿ ಅರ್ಹ ಫಲಾನುಭವಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು..

ಈ ಮೇಲೆ ಕಾಣಿಸಿದ ಲೇಖನವನ್ನು ಓದಿದ ತಕ್ಷಣ ಬೇರೆಯ ರೈತ ವರ್ಗದ ಸಮುದಾಯಕ್ಕೆ ಈ ಸಂದೇಶವನ್ನು ತಪ್ಪದೇ ತಿಳಿಸಿ ಹಾಗೂ ಈ ಲೇಖನವನ್ನು ತಪ್ಪದೇ ಶೇರ್ ಮಾಡಿ.

ಇದನ್ನು ಓದಿರಿ : ಮೆಕ್ಕೆಜೋಳದಲ್ಲಿ ಬರುವ ಮುಳ್ಳು ಸಜ್ಜೆ ಕಸಕ್ಕೆ ಕಳೆನಾಶಕ ಬಂದಿದೆ!

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಯೋಜನೆಗಳಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇🏻

https://chat.whatsapp.com/K9mNNO3T6FzKJGch4oqd2m

Leave a Reply

Your email address will not be published. Required fields are marked *