ಅನ್ನಭಾಗ್ಯ ಯೋಜನೆಯ ಹಣ ರೈತರ ಖಾತೆಗೆ ಜಮಾ!

ನಮಸ್ಕಾರ ಪ್ರಿಯರೈತ ಬಾಂಧವರೇ ಇಂದು ನಾವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿಯ ಅಕ್ಕಿ ಹಣವನ್ನು ಜಮಾ ಆಗಿದೆಯೇ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಈ ಲೇಖನದಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಿ.

ಏನಿದು ಅನ್ನ ಭಾಗ್ಯ ಯೋಜನೆ?

ನೀವು ನೋಡಿರುವ ಹಾಗೆ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿ ಯೋಜನೆಗಳನ್ನು ಚುನಾವಣೆಯ ವೇಳೆಯಲ್ಲಿ ಹೇಳಲಾಗಿತ್ತು ಅದರಲ್ಲಿ ಅನ್ನಭಾಗ್ಯ ಯೋಜನೆಯ ಒಂದು ಯೋಜನೆ. ನೀವು ಈಗಾಗಲೇ ನೋಡಿರುವ ಹಾಗೆ ಗೃಹಜೋತಿ, ಅನ್ನ ಭಾಗ್ಯ ಯೋಜನೆ, ಶಕ್ತಿ ಯೋಜನೆ, ಈ ಮೂರು ಯೋಜನೆಗಳು ಜಾರಿಯಲ್ಲಿವೆ.

ಎಲ್ಲರೂ ತಿಳಿದ ಹಾಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ನೀಡುವ ಆಶ್ವಾಸನೆಯನ್ನು ಕಾಂಗ್ರೆಸ್ ಪಕ್ಷವು ನೀಡಿತ್ತು. ಆದರೆ ಹೆಚ್ಚುವರಿ 5 ಕೆಜಿ ಅಕ್ಕಿ ಲಭ್ಯವಾಗದ ಕಾರಣದಿಂದ ಕಾಂಗ್ರೆಸ್ ಪಕ್ಷವು 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ. ಅದೇ ರೀತಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೂ 170 ರೂಪಾಯಿ ದುಡ್ಡು ಕೊಡಲಾಗುತ್ತಿದೆ.

ಇದನ್ನು ಓದಿರಿ : ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ

ನೀವು ಬಿಪಿಎಲ್ ಕಾರ್ಡ್ ಹೊಂದಿರುವ ನಿಮ್ಮ ಬ್ಯಾಂಕ್ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣ ಬಂದಿದೆ ಹೇಗೆ ಪರಿಶೀಲಿಸಬೇಕು ಈ ಕೆಳಕಂಡಂತೆ ನೋಡಿ👇🏻👇🏻

https://ahara.kar.nic.in/lpg/

ನಿಮ್ಮ ಖಾತೆಗೆ ಹಣ ಬಂದಿರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ 👇🏻 ಮೊದಲಿಗೆ ನೀವು ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತಿದ ಮೇಲೆ ನಿಮಗೆ ಯಾವ ಯಾವ ಜಿಲ್ಲೆಗೆ ಸೇರ್ಪಡೆಯಾಗಿದೆಯೋ ಅಲ್ಲಿಯ ಒಂದು ಹೊಸ ಮುಖಪುಟ ತೆರೆಯುತ್ತದೆ.

ನಂತರ ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಲಿಂಕನ್ನು ನೀವು ಒತ್ತಬೇಕು.

ನಂತರ ಆ ಲಿಂಕ್ ಮೇಲೆ ಒತ್ತಿದ ತಕ್ಷಣ ನಿಮಗೆ(ನೇರ ನಗದು ವರ್ಗಾವಣೆ ಸ್ಥಿತಿ) ಅಂದರೆ ಡಿಬಿಟಿ ಸ್ಟೇಟಸ್ (DBT Status)ಎಂದು ಕೊನೆಯ ಬಾಕ್ಸ್ ನಲ್ಲಿ ಇರುತ್ತದೆ. ಆ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಬೇಕು.

ನಂತರ ಅಲ್ಲಿ Select year, select month ಅವುಗಳನ್ನು ಆಯ್ಕೆ ಮಾಡಬೇಕು ನಂತರ Enter RC number ಎಂಬ ಬಾಕ್ಸ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಬೇಕು ನಂತರ Go ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದಾದ ನಂತರ ಕೊನೆಯ ಹಂತದಲ್ಲಿ ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರು ಅಲ್ಲಿ ಕಾಣುತ್ತದೆ, ಅವರ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆಗಳು ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಅಕ್ಕಿ ಸಿಗುವ ಪ್ರಮಾಣ ಮತ್ತು ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿರುತ್ತದೆ ಎಂದು ನೀವು ಅಲ್ಲಿ ನೋಡಬಹುದು.

ಇದನ್ನು ಓದಿರಿ : ಮನೆಯಲ್ಲಿಯೇ ಕುಳಿತುಕೊಂಡು ರೇಷನ್ ಕಾರ್ಡ್ ಗೆ ಆಧಾರ್ ನಂಬರ್ ಅನ್ನು ಲಿಂಕ್ ಮಾಡುವುದು ಹೇಗೆ ಎಂದು ನೋಡಿರಿ!!

ಮೇಲೆ ತಿಳಿಸಿರುವ ಹಾಗೆ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿರುವುದನ್ನು ಖಚಿತಪಡಿಸಿಕೊಂಡ ಮೇಲೆ ಈ ಲೇಖನವೂ ಬೇರೆ ಯಾರಿಗಾದರೂ ರೈತರಿಗೆ ಅನುಕೂಲವಾಗುತ್ತದೆ ಉಪಯೋಗವಾಗುವಂತಿದ್ದರೆ ಅವರಿಗೆ ತಪ್ಪದೆ ಶೇರ್ ಮಾಡಿ!!

ಕೃಷಿ ಆಧಾರಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ. ಹೆಚ್ಚಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಸಿಗಲು ಕೃಷಿ ವಾಹಿನಿ ವಾಟ್ಸಪ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ.. ಎಲ್ಲ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಿರಿ👇🏻👇🏻

https://chat.whatsapp.com/K9mNNO3T6FzKJGch4oqd2m

Leave a Reply

Your email address will not be published. Required fields are marked *