ಮೊಬೈಲ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ??

ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡನ್ನು ಸಂಪೂರ್ಣವಾಗಿ ಮೊಬೈಲ್ ನಲ್ಲಿಯೇ ಲಿಂಕ್ ಮಾಡುವುದನ್ನು ಸಂಪೂರ್ಣವಾಗಿ ಈ ಕೆಳಗೆ ನೀಡಿರುವ ಎಲ್ಲಾ ವಿಧಾನಗಳನ್ನು ಸರಿಯಾಗಿ ತಿಳಿಯಿರಿ!!

ಹಂತ 1: ಮೊದಲನೆಯದಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಬೇಕು.

https://ahara-kar-nic-in.translate.goog/Home/EServices?_x_tr_sl=en&_x_tr_tl=kn&_x_tr_hl=kn&_x_tr_pto=tc

ಹಂತ 2: ಈ ವೆಬ್ಸೈಟ್ನ ಮುಖಪುಟ ತೆರೆದ ನಂತರ ಅಲ್ಲಿ ಇ-ಸೇವೆಗಳು ಎಂಬ Option ಅನ್ನು ಕ್ಲಿಕ್ ಮಾಡಬೇಕು.

ಹಂತ 3: ಮುಖಪುಟದ ಎಡಭಾಗದಲ್ಲಿ ಕಾಣುವ ಇ-ಪಡಿತರ ಚೀಟಿ ಎಂಬ ಆಯ್ಕೆಯನ್ನು ಒತ್ತಿ.

ಹಂತ 4: ನಂತರ ಅದರ ಕೆಳಗಡೆ ಕಾಣಿಸುವ ಯುಐಡಿ ಲಿಂಕ್ Option ಅನ್ನು ಒತ್ತಿ.

ಹಂತ 5: ಮುಂದೆ ಒಂದು ಹೊಸಪುಟ ತೆರೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ಜಿಲ್ಲೆಯ ಹೆಸರಿನ ಮೇಲಿರುವ ಲಿಂಕನ್ನು ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 6: ಮೇಲೆ ತೋರಿಸಿರುವ ಹಾಗೆ ನಿಮ್ಮ ಜಿಲ್ಲೆಯ ಆಯ್ಕೆ ಮಾಡಿದ ಮೇಲೆ ಹೊಸ ಮುಖಪುಟ ತೆಗೆದುಕೊಳ್ಳುತ್ತದೆ. ಅದರಲ್ಲಿ ಅನೇಕ ಆಯ್ಕೆಗಳಿರುತ್ತವೆ, ಅದರಲ್ಲಿ ನೀವು UID linking for RC members ಎಂಬ button ಮೇಲೆ ಕ್ಲಿಕ್ ಮಾಡಿ.

ಹಂತ 7: ಮುಂದೆ ತೆರೆಯುವ ಮುಖಪುಟದಲ್ಲಿ ನೀವು ಯಾರ ನಂಬರ್ ಅನ್ನು ಲಿಂಕ್ ಮಾಡಬೇಕು ಅವರ ಆಧಾರ್ ನಂಬರ್ ಅನ್ನು ಹಾಕಿ Go ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 8: ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ(OTP) ಬರುತ್ತದೆ ಅದನ್ನು ಅಲ್ಲಿ ಕಾಣಿಸಿರುವ Enter OTP ಎಂಬ ಬಾಕ್ಸ್ ನಲ್ಲಿ ನಮೂದಿಸಿ. ಹಾಗೂ Go button ಮೇಲೆ ಕ್ಲಿಕ್ ಮಾಡಿರಿ.

ಹಂತ 9: ಮುಂದೆ OTP has been validated successfully. Please enter RC No. to link members. ಎಂದು ಬರುತ್ತದೆ ಅದನ್ನು OK ಬಟನ್ ಮೇಲೆ ಕ್ಲಿಕ್ ಮಾಡಿರಿ.

ಹಂತ 10: ಕೊನೆಯದಾಗಿ Enter RC number ಎಂದಿರುವ ಬಾಕ್ಸ್ ನಲ್ಲಿ ನಿಮ್ಮ ಕುಟುಂಬದ ರೇಷನ್ ಕಾರ್ಡ್ ನಂಬರನ್ನು ನಮೂದಿಸಿ ಮತ್ತು GO ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿಗೆ ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ. ಅಲ್ಲಿಗೆ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು ಮುಂದೆ ಹೇಗೆ ನೋಡಬೇಕು..

ನಂತರ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು ಚೆಕ್ ಮಾಡುವುದು ಹೇಗೆ ಎಂದು ತಿಳಿಯಿರಿ!

Step1) ಮೇಲೆ ಹೇಳಿರುವ ಹಾಗೆ ಮೊದಲಿಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು…

https://ahara-kar-nic-in.translate.goog/Home/EServices?_x_tr_sl=en&_x_tr_tl=kn&_x_tr_hl=kn&_x_tr_pto=tc

Step2) ನಂತರ ಎಡ ಭಾಗದಲ್ಲಿ ಕಾಣುವ ಇ-ಸೇವೆಗಳು ಎಂಬ ಆಪ್ಷನ್ ಮೇಲೆ click ಮಾಡಬೇಕು.

Step3) ನಂತರ ಎಡ ಭಾಗದಲ್ಲಿ ಕಾಣುವ ಮೂರು ಗೆರೆಗಳನ್ನು ಒತ್ತಿ ಅದರೊಳಗೆ ಕಾಣಿಸುವ ಇ-ಸ್ಥಿತಿ ಅದನ್ನು ಒತ್ತಿದ ತಕ್ಷಣ ಕೆಳಗಡೆ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ (Ration card status) ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.

https://ahara.kar.nic.in/WebForms/Show_RationCard.aspx

Step4) ನಂತರ ಹೊಸ ಮುಖಪುಟ ತೆರೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ಜಿಲ್ಲೆಗೆ ಅನುಗುಣವಾಗಿ ಲಿಂಕ್ ಗಳನ್ನು ಕೊಟ್ಟಿರುತ್ತಾರೆ. ಅದರಲ್ಲಿ ನಿಮಗೆ ಸಂಬಂಧಿಸಿದ ಜಿಲ್ಲೆಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.

Step5) ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ status of Ration Card ಎಂಬ ಆಯ್ಕೆ ಮೇಲೆ ಒತ್ತಬೇಕು.

Step6) ಮುಂದಿನ ಮುಖಪುಟದಲ್ಲಿ with OTP ಎಂದು ಆಯ್ಕೆ ಮಾಡಿ. Enter RC number ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ನಮೂದಿಸಿ. Go button ಮೇಲೆ ಕ್ಲಿಕ್ ಮಾಡಿ…

Step7) ನಿಮ್ಮ ಕುಟುಂಬದ ಸದಸ್ಯರ ಸಂಖ್ಯೆ,ಎಷ್ಟು ಜನರ Ration card eKYC ಆಗಿದೆ ಮತ್ತು ಎಷ್ಟು ಜನರ eKYC ಆಗಿಲ್ಲ ಎಂಬುದು ಅಲ್ಲಿ ಗೊತ್ತಾಗುತ್ತದೆ.

Step8) ಯಾರ eKYC ಆಗಿಲ್ಲ ಎಂಬುದನ್ನು ತಿಳಿಯಲು with otp ಆಯ್ಕೆ ಮಾಡಿ. Enter RC number ಎಂದಿರುವಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ನಮೂದಿಸಿ Go ಬಟನ್ ಮೇಲೆ ಕ್ಲಿಕ್ ಮಾಡಿ.

Step9) ನಿಮ್ಮ ರೇಷನ್ ಕಾರ್ಡ್ ನಲ್ಲಿ ಈಗಾಗಲೇ ಆಧಾರ್ ಸಂಖ್ಯೆ ಲಿಂಕ್ ಇರುವ ಸದಸ್ಯರ ಹೆಸರನ್ನು ಆಯ್ಕೆ ಮಾಡಿ Go ಬಟನ್ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ಮುಂದೆ ನಿಮಗೆ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ತಿಳಿದು ಬರುತ್ತದೆ.

Leave a Reply

Your email address will not be published. Required fields are marked *