ನಮಸ್ಕಾರ ಪ್ರಿಯ ರೈತ ಬಾಂಧವರೇ, ಇಂದು ನಾವು ಹೊಲಕ್ಕೆ ಹೋಗಲು ದಾರಿ ಇಲ್ಲದಿದ್ದರೆ ಪಡೆಯುವುದು ಹೇಗೆ ಎಂಬುದನ್ನು ನೋಡೋಣ.

ನಮ್ಮ ಹೊಲ ನಮ್ಮ ದಾರಿ ಸ್ಕೀಮ್ :

ಹೆಚ್ಚಿನ ಗ್ರಾಮೀಣ ಭಾಗದಲ್ಲಿನ ರೈತರ ಸಮಸ್ಯೆ ಏನೆಂದರೆ ತಮ್ಮ ಹೊಲಕ್ಕೆ-ಗದ್ದೆಗಳಿಗೆ ಹೋಗಲು ದಾರಿ ಇರುವದಿಲ್ಲ. ಬಹಳ ಜನರು ಬೇರೆಯವರ ಜಮೀನಿನ ಮೇಲೆಯೇ ಅವರ ತೋಟಗಳಿಗೆ ಹಾದು ಹೋಗುತ್ತಾರೆ. ಇಂತಹ ಸಮಸ್ಯೆಯಿರುವವರಿಗೆ ರಾಜ್ಯ ಸರ್ಕಾರ ದಿನ ಹೊಸ ಯೋಜನೆ ಜಾರಿ ಗೊಳಿಸಿದ್ದಾರೆ.

ಹೌದು, ಬಹುತೇಕ ಗ್ರಾಮೀಣ ಭಾಗಗಳಲ್ಲಿ, ಹಳ್ಳಿ ಪ್ರದೇಶಗಳಲ್ಲಿ ಒಬ್ಬ ರೈತ ತನ್ನ ಜಮೀನಿಗೆ ಹೋಗಬೇಕಾದರೆ ಇನ್ನೊಬ್ಬನ ಗದ್ದೆಯನ್ನೋ, ಹೊಲವನ್ನೋ ದಾಟಿಕೊಂಡೆ ಮುಂದೆ ಹೋಗಬೇಕು. ಅವರಿಗೆ ಹೊಲಕ್ಕೆ ಹೋಗಲು ಸರಿಯಾದ ದಾರಿ ಇರುವುದಿಲ್ಲ. ಸಾಕಷ್ಟು ಬಾರಿ ಈ ರಸ್ತೆಯ ಕಾರಣಕ್ಕೆ ಅದೆಷ್ಟು ಜಗಳ, ಹೊಡೆದಾಟಗಳು ನಡೆದಿವೆ. ಆದರೀಗ ರಾಜ್ಯದ ನೂತನ ಸರ್ಕಾರ ಈ ರಸ್ತೆ ವಿಚಾರವಾಗಿ ಶುಭ ಸುದ್ದಿ ನೀಡಿದೆ ಉದ್ಯೋಗ ಖಾತ್ರಿ ಯೋಜನೆಯ(Udyoga khatri yojanae) ಅಡಿಯಲ್ಲಿ ರೈತರಿಗೆ ಹೊಲಕ್ಕೆ ಹೋಗಲು ದಾರಿ ಮಾಡಿಕೊಡಲು ಯೋಚಿಸಿದ್ದಾರೆ.

ಅಂದಹಾಗೆ ರೈತರು ಹೊಲ, ಗದ್ದೆ, ತೋಟ ಹಾಗೂ ತಮ್ಮ ಇತರ ಜಮೀನುಗಳಿಗೆ ಹೋಗಲು, ನೇರವಾಗಿ ಅವರಿಗೆ ಸಂಪರ್ಕ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಜಾರಿ ಇರುವ ‘ನಮ್ಮ ಹೊಲ ನಮ್ಮ ದಾರಿ'(Namma hola namma dari scheme) ಎಂಬ ಯೋಜನೆಗೆ ವಿಶೇಷವಾದ ಗಮನ ನೀಡುವ ಮೂಲಕ ರೈತರಿಗೆ ನೆರವಾಗಲು ಪ್ರಯತ್ನಿಸುತ್ತಿದೆ. ಅಲ್ಲದೆ ರೈತರು ಕೂಡ ಒಂದು ಸರಿಯಾದ ಅರ್ಜಿಯನ್ನು ಬರೆದು ಗ್ರಾಮ ಪಂಚಾಯಿತಿಗೆ ಕೊಟ್ಟರೆ ಅದನ್ನು ಪರಿಶೀಲಸಿ ನಿಮ್ಮ ಹೊಲಕ್ಕೆ ಹೋಗಲು ದಾರಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ.

“ನಮ್ಮ ಹೊಲ ನಮ್ಮ ದಾರಿ” ಏನಿದು ಯೋಜನೆ?:

ಗ್ರಾಮೀಣ ಪ್ರದೇಶದಲ್ಲಿ ಹೊಲ-ಮನೆಗಳಿಗೆ ಸಂಚರಿಸಲು ದಾರಿಯದ್ದೇ ದೊಡ್ಡ ಸಮಸ್ಯೆಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಜಮೀನುಗಳಿಗೆ ಹೋಗಲು ರೈತರು ಬಹಳ ಕಷ್ಟ ಎದುರಿಸುತ್ತಿದ್ದರು. ಇಂತಹ ಪರಿಸ್ಥಿತಿ ನಿವಾರಣೆಗಾಗಿಯೇ ನಮ್ಮ ಹೊಲ-ನಮ್ಮ ದಾರಿ ಯೋಜನೆಯನ್ನು ಹಿಂದೆ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಜಾರಿ ಮಾಡಲಾಗಿತ್ತು. ಹಳ್ಳಿಯಿಂದ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸುಧಾರಣೆ ಮಾಡುವುದು, ದ್ವಿಚಕ್ರ ವಾಹನ, ಟ್ರ್ಯಾಕ್ಟರ್‌ ಇಲ್ಲವೇ ಎತ್ತಿನ ಬಂಡಿಯಲ್ಲಿ ತೆರಳಲು ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡುವುದು ಈ ಯೋಜನೆಯ ದೊಡ್ಡ ಉದ್ದೇಶವಾಗಿದೆ.

ಈ ಯೋಜನೆಯ ಪ್ರಯೋಜನ ಪಡೆವುದು ಹೇಗೆ?

ನಿಮ್ಮ ಹೊಲದ ಸರ್ವೆ ನಂಬರ್ ಹೊಲದ ವಿಸ್ತೀರ್ಣ ಹಾಗೂ ಜಮೀನಿಗೆ ಸಂಬಂಧಪಟ್ಟ ಹಾಗೆ ಎಲ್ಲಾ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು. ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿಮ್ಮ ಅರ್ಜಿಯ ಕುರಿತಾಗಿ ಚರ್ಚಿಸಿ ಅನುಮೋದನೆ ನೀಡಲಾಗುತ್ತದೆ. ಇದನ್ನು ವಾರ್ಷಿಕ ಕ್ರಿಯೆ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತ್ ಸೇರಿಸುತ್ತದೆ. ಆ ಮೂಲಕ ನಿಮಗೆ ಅನುದಾನ ನೀಡುವ ಬಗ್ಗೆ ಚರ್ಚೆ ಮಾಡಿ, ಸಾಮಾನ್ಯ ಸಭೆಯಲ್ಲಿ ಎಷ್ಟು ಅನುದಾನ ನೀಡಬೇಕು ಎನ್ನುವುದನ್ನು ಚರ್ಚಿಸಿ ಅಷ್ಟು ಹಣವನ್ನು ಮಂಜೂರು ಮಾಡಲಾಗುತ್ತದೆ.

ಈ ಯೋಜನೆಗೆ ಏನೆಲ್ಲಾ ದಾಖಲೆಗಳು ಬೇಕು?

• ಪಹಣಿ ಮತ್ತು ಆಧಾರ್ ಕಾರ್ಡ್

• ಜಮೀನಿನ ಪೂರ್ಣ ಸರ್ವೆಯ ನಕ್ಷೆ

• ನಿಮ್ಮ ಸರ್ವೇ ನಂಬರ್ ನ ನಾಲ್ಕು ದಿಕ್ಕುಗಳಲ್ಲಿನ ಸರ್ವೇ ನಂಬರ್ ಗಳ ಪೂರ್ಣ ಪ್ರಮಾಣದ ಸ್ಕೆಚ್.

• ನಿಮ್ಮ ಸರ್ವೇ ನಂಬರಿನ ಟಿಪ್ಪಣಿಗಳು.

• ನಿಮ್ಮ ಜಮೀನಿನ ಎದುರಿರುವ ಜಮೀನಿನ ಪಹಣಿ ಮತ್ತು ವಿಳಾಸ.

• ಜಮೀನಿಗೆ ದಾರಿ ಇಲ್ಲದಿರುವ ಕುರಿತು ಪ್ರಮಾಣ ಪತ್ರ.

ರಸ್ತೆ ಮಾಡಿಸುವುದು ಹೇಗೆ?

ಗ್ರಾಮ ಸಭೆಯಲ್ಲಿ ಚರ್ಚೆಯಾಗಿ, ಪಂಚಾಯಿತಿ ಅನುಮತಿ ಸಿಕ್ಕ ಬಳಿಕ ನಿಮ್ಮ ಕೆಲಸಕ್ಕೆ ಚಾಲನೆ ಸಿಕ್ಕಂತೆಯೆ. ಆಗ ಪಂಚಾಯಿತಿ ಪ್ರತಿನಿಧಿಯೂಬ್ಬರು ನಿಮ್ಮ ಹೊಲಕ್ಕೆ ರಸ್ತೆ ಮಾಡಲು ಬೇಕಾದ ರಸ್ತೆ ಅಳತೆ ಕಾರ್ಯ ತಗುಲುವ ವೆಚ್ಚ ಹಾಗೂ ಉಪಕರಣ ಮತ್ತು ಕೆಲಸಗಾರ ವೆಚ್ಚ ಪಟ್ಟಿಯನ್ನು ತಯಾರಿ ಮಾಡುತ್ತಾರೆ. ತದನಂತರ ಆ ಗ್ರಾಮದಲ್ಲಿ ಇರುವ ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಇರುವರಿಗೆ ಅವಕಾಶ ನೀಡಿ ಪ್ರತಿಯೊಬ್ಬ ಕೆಲಸಗಾರರು ಅವರ ವೇತನ ಸೀದಾ ಅವರ ಅಕೌಂಟ್ ಜಮೆ ಆಗುವುದು ಇನ್ನೂ ಕಾರ್ಮಿಕರಿಗೆ ವಾಸ ಮಾಡಲು ನೀರು ಹೀರಿಕೊಳ್ಳಲ್ಲು ಗಡುಸಾದ ಜಾಗ ಸಣ್ಣ ಸಣ್ಣ ಕಲ್ಲು ಹಾಗೂ ನೀರು ಸರಾಗವಾಗಿ ಹರಿಯಲು ಕಂದಕ ಅನ್ನು ನಿರ್ಮಾಣ ಮಾಡುತ್ತಾರೆ .

ತಪ್ಪದೆ ಓದಿ ಅನುಸರಿಸಿ….

• ರಸ್ತೆ ನಿರ್ಮಾಣ ಮಾಡಲು ಸುತ್ತಮುತ್ತಲು ಇರುವ ಎಲ್ಲಾ ರೈತರು ಒಪ್ಪಿಗೆಯನ್ನು ನೀಡಬೇಕು.

• ರಸ್ತೆ ಕಾಮಗಾರಿ ನಡೆಸಲು 60% ನಷ್ಟು ಯಂತ್ರದ ಸಹಾಯ ಹಾಗೂ 40% ನಷ್ಟು ಕಾರ್ಮಿಕರ ಸಹಾಯ ಪಡೆದು ರಸ್ತೆ ಕಾಮಗಾರಿ ಮಾಡಲಾಗುತ್ತದೆ. ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವಂತೆ ಗಂಡು ಅಥವಾ ಹೆಣ್ಣು ಯಾರೇ ಕೆಲಸ ನಿರ್ವಹಿಸಿದರು ಅವರಿಗೆ ಸಮಾನ ವೇತನ ನೀಡಲಾಗುತ್ತದೆ .

• ರಸ್ತೆ ಮಾಡಿಸಿಕೊಳ್ಳುವ ಸಲುವಾಗಿ ರೈತರಿಗ ಯಾವುದೇ ಗೊಂದಲ ಇದ್ದರೆ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೋಗಿ ಸಲಹೆ ಪಡೆದುಕೊಂಡು ನಮ್ಮ ಹೊಲ ನಮ್ಮ ರಸ್ತೆ ಅಡಿಯಲ್ಲಿ ನಿಮ್ಮ ಹೊಲಕ್ಕೆ ಹೋಗುವಂತೆ ರಸ್ತೆ ಮಾಡಿಸಿಕೊಳ್ಳಬಹುದು.

Leave a Reply

Your email address will not be published. Required fields are marked *