ಪದವಿ ಮತ್ತು ಡಿಪ್ಲೋಮಾ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ಉಚಿತ. ಈ ಯೋಜನೆ ಅಡಿ ಹಣ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ
ರಾಜ್ಯದಲ್ಲಿ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನಿರುದ್ಯೋಗ ಬಗ್ಗೆ ಯಾಗಿ 3000 ರೂಪಾಯಿ ಉಚಿತವಾಗಿ ನೀಡಲು ಸರ್ಕಾರ ಒಂದು ಹೊಸ ಯೋಜನೆ ಬಿಡುಗಡೆ ಮಾಡಿದ್ದು ಈ ಬಾರಿ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಕೆಲವು ಭರವಸೆಗಳನ್ನು ನೀಡಲಾಗಿತ್ತು ಅಲ್ಲದೆ ಆ ಭರವಸೆಗಳಲ್ಲಿ ಕನಿಷ್ಠ ಐದು ಭರವಸೆಗಳನ್ನು ಚುನಾವಣೆಯ ಫಲಿತಾಂಶ ಬಂದಾಗ ಅತಿ ಹೆಚ್ಚು ಕ್ಷೇತ್ರಗಳಲ್ಲಿ ತಮ್ಮ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ಕೇವಲ ಒಂದು ವಾರದಿಂದ 10 ದಿನದ ಒಳಗಾಗಿ ಕನಿಷ್ಠ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ತಿಳಿಸಲಾಗಿತ್ತು ಅದೇ ರೀತಿ ಇದೀಗ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ಉಚಿತ ಹಣ ನೀಡಲು ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಎಲ್ಲಾ ಸದಸ್ಯರ ಜೊತೆಗೆ ಚರ್ಚಿಸಿ ಯೋಜನೆ ಜಾರಿ ಮಾಡುವುದಾಗಿ ತಿಳಿಸಿದ್ದ ಸರ್ಕಾರವು ಇದೀಗ ಡಿಪ್ಲೋಮೋ ಮತ್ತು ಪದವಿ ಪಾಸ್ ಆಗಿರುವ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿ ನೀಡಿದೆ.
ಈಗಾಗಲೇ ರಾಜ್ಯದಲ್ಲಿ ಹೊಸ ಸರ್ಕಾರವು ಚುನಾವಣೆಯ ಸಮಯದಲ್ಲಿ ನೀಡಿದ್ದ ಭರವಸೆಗಳಲ್ಲಿ ಕನಿಷ್ಠ ಐದು ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದು ಅದರಲ್ಲಿ ಇನ್ನೂರು ಯೂನಿಟ್ ವಿದ್ಯುತ್ ಉಚಿತ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ ಪ್ರತಿ ತಿಂಗಳು 2000 ಉಚಿತ, ಮತ್ತು ಎಲ್ಲಾ ಬಿಪಿಎಲ್ ಕಾರ್ಡ್ ಹೊಂದಿರುವವರಿಗು ಪ್ರತಿ ತಿಂಗಳು ಪ್ರತಿ ಸದಸ್ಯನಿಗೂ 10 ಕೆಜಿ ಉಚಿತ ಅಕ್ಕಿ, ಇದರ ಜೊತೆಗೆ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ವಿದ್ಯಾರ್ಥಿಗಳಿಗೆ ಈವರೆಗೂ ಕೆಲಸ ಸಿಕ್ಕಿಲ್ಲದಿದ್ದರೆ ಅಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಪದವಿ ಹೊಂದಿರುವ ವಿದ್ಯಾರ್ಥಿಗಳಿಗೆ 3000 ಮತ್ತು ಡಿಪ್ಲೋಮೋ ಹೊಂದಿರುವ ವಿದ್ಯಾರ್ಥಿಗಳಿಗೆ
1500 ರೂಪಾಯಿ ಉಚಿತ ಹಣ ನೀಡಲು ಸರ್ಕಾರ ನಿರ್ಧರಿಸಿದೆ.
ಇದೀಗ ಅಂತಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲು ಮುಂದಾಗಿದೆ ಅಲ್ಲದೆ ಈಗಾಗಲೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದರ ಬಗ್ಗೆ ಕೆಲವು ಚರ್ಚೆ ನಡೆಸಿದ್ದು 2022 23ನೇ ಸಾಲಿನ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ವಿದ್ಯಾರ್ಥಿಗಳಿಗೆ ಮಾತ್ರ 3000 ಮತ್ತು 1500 ಹಣ ನೀಡಲು ನಿರ್ಧರಿಸಿದ್ದು ಇದೀಗ ಸರ್ಕಾರದ ಅಫೀಶಿಯಲ್ ವೆಬ್ಸೈಟ್ ಅಂದರೆ ಆನ್ಲೈನ್ ನಲ್ಲಿ ಇದೀಗ ಅರ್ಜಿ ಸ್ವೀಕರಿಸಲಾಗುತ್ತಿದೆ ಅರ್ಜಿ ಸಲ್ಲಿಸಲು ಅರ್ಹರಾದ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಬಹುದು.
ಪದವಿ ಮತ್ತು ಡಿಪ್ಲೋಮೋ ಹೊಂದಿದ್ದು ಉಚಿತ
3000 ಮತ್ತು 1500 ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಬೇಕಾಗುವ ದಾಖಲೆಗಳು ಏನು.
ಸದ್ಯ ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ರಾಜ್ಯ ಸರ್ಕಾರವು ಐದು ಭರವಸೆಗಳನ್ನು ಈಡೇರಿಸಲು ಮುಂದಾಗಿದ್ದು ಅದರಲ್ಲೂ ಅವುಗಳನ್ನು ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಜಾರಿ ಮಾಡುವುದಾಗಿ ಸ್ಪಷ್ಟನೆ ನೀಡಿತು ಇದರಲ್ಲಿ ಕೆಲವು ನಿಯಮಗಳನ್ನು ಮತ್ತು ಕೆಲವು ಮುಖ್ಯ ದಾಖಲೆಗಳನ್ನು ಹೊಂದಿದವರಿಗೆ ಮಾತ್ರ ಈ ಯೋಜನೆಗಳು ಸಿಗಲಿವೇ ಎಂದು ಸರ್ಕಾರದಿಂದ ಆದೇಶ ಮಾಡಲಾಗಿದ್ದು ಇದೀಗ ಪದವಿ ಮತ್ತು ಡಿಪ್ಲೋಮೋ ಹೊಂದಿರುವ ವಿದ್ಯಾರ್ಥಿಗಳಿಗೆ ಉಚಿತ ನಿರುದ್ಯೋಗ ಭತ್ಯೆ ನೀಡಲಿದ್ದು ಇದಕ್ಕಾಗಿ
ಸರ್ಕಾರದ ಅಧಿಕೃತ ವೆಬ್ಸೈಟ್ ಅಂದರೆ ಆನ್ಲೈನ್ ಮೂಲಕ 2022-23 ನೇ ಸಾಲಿನಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಅರ್ಜಿ ಸಲ್ಲಿಸುವವರು ಎಲ್ಲಾ ಸೆಮಿಸ್ಟರ್ ಗಳನ್ನು ಪಾಸ್ ಆಗಿರಬೇಕು
- ಆಧಾರ್ ಕಾರ್ಡ್
- ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಅಂತಹ ಅಭ್ಯರ್ಥಿಗಳಿಗೆ ಮಾತ್ರ ಉಚಿತ ಹಣ ನೀಡಲಾಗುತ್ತದೆ ಮತ್ತು ಇದೀಗ ಸರ್ಕಾರದಿಂದ ಬಂದಿರುವಂತಹ ಮಾಹಿತಿಯ ಪ್ರಕಾರ ಅಭ್ಯರ್ಥಿಗಳಿಗೆ ಗರಿಷ್ಠ ಎರಡು ವರ್ಷಗಳ ವರೆಗೆ ಮಾತ್ರ ಹಣ ನೀಡಲಾಗುತ್ತದೆ ಅಥವಾ ಅವರಿಗೆ ಕೆಲಸ ಕೊಡಲಾಗುತ್ತದೆ.
ಕೃಷಿ ಬಗ್ಗೆ ಅಧಿಕೃತ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ..
https://chat.whatsapp.com/K9mNNO3T6FzKJGch4oqd2m