Indian Railway: ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ (Indian Railway) ನಿಯಮದಲ್ಲಿ ಸಾಕಷ್ಟು ರೀತಿಯ ನಿಯಮಗಳು ಬದಲಾಗಿವೆ. ರೈಲ್ವೆ ನಿಯಮಗಳ ಬದಲಾವಣೆಯ ಜೊತೆಗೆ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಹೊಸ ಹೊಸ ಸೌಲಭ್ಯಗಳನ್ನು ಕೂಡ ನೀಡುತ್ತಿವೆ. Source: THE HINDU

ಇದೀಗ ರೈಲ್ವೆ ಇಲಾಖೆ ರೈಲು ಪ್ರಯಾಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ರೈಲು ಪ್ರಯಾಣದ ವೇಳೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ನಿರ್ಧಾರ ಮಾಡಿದೆ.

ರೈಲ್ವೆ ಇಲಾಖೆಯಿಂದ ಮಹಿಳೆಯರಿಗೆ ಸಂತಸದ ಸುದ್ದಿ

ಭಾರತೀಯ ರೈಲೇ ಇತ್ತೀಚಿಗೆ ಪ್ರಯಾಣಿಕರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ.ಇನ್ನು ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ವಿಶೇಷ ರೀತಿಯ ಸೌಲಭ್ಯವನ್ನು ರೈಲ್ವೆ ಇಲಾಖೆ ಒದಗಿಸುತ್ತಿದೆ. ಇದೀಗ ಭಾರತೀಯ ರೈಲ್ವೆ ಇಲಾಖೆ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ.

ಈ ಹಿಂದೆ ರೈಲುಗಳಲ್ಲಿ ಪ್ರಯಾಣ ಮಾಡುವ ಯಾವುದೇ ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣ ಮಾಡುವಂತಿರಲ್ಲ. ಪ್ರಯಾಣ ಮಾಡುವ ಸಮಯದಲ್ಲಿ ಟಿಕೆಟ್ ಇಲ್ಲದೆ ಇದ್ದರೆ ಪ್ರಯಾಣಿಕರಿಗೆ ದಂಡ ವಿಧಿಸಲಾಗುತ್ತಿತ್ತು. ಹಾಗೂ ರೈಲಿನಿಂದ ಕೆಳಗೆ ಇರಿಸುವ ನಿಯಮ ಇತ್ತು, ಆದರೆ ಇದೀಗ ಭಾರತೀಯ ರೈಲ್ವೆ ಇಲಾಖೆ ಮಹಿಳೆಯರಿಗೆ ಈ ನಿಯಮದಲ್ಲಿ ಬದಲಾವಣೆ ತಂದಿದೆ.

ಮಹಿಳೆಯರು ರೈಲಿನಲ್ಲಿ ಟಿಕೆಟ್ ಇಲ್ಲದೆಯೂ ಪ್ರಯಾಣಿಸಬಹುದು

ಭಾರತೀಯ ರೈಲ್ವೆ ನಿಯಮದ ಪ್ರಕಾರ, ಮಹಿಳೆ ಅಥವಾ ಮಗು ಒಬ್ಬಂಟಿಯಾಗಿ ರಾತ್ರಿಯಲ್ಲಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ನಂತರ TTE ಮಹಿಳೆಯನ್ನು ರೈಲಿನಿಂದ ಕೆಳಗೆ ಇಳಿಸುವಂತಿಲ್ಲ. ಒಂದು ವೇಳೆ ರೈಲಿನಿಂದ ಮಹಿಳೆಯನ್ನು ಕೆಳಗೆ ಇಳಿಸಿದರೆ ಮಹಿಳೆಯು ರೈಲ್ವೆ ಪ್ರಾಧಿಕಾರಕ್ಕೆ ಸಂಬಂಧಿಸಿದ ಟೀಟೀ ವಿರುದ್ಧ ದೂರು ಸಲ್ಲಿಸಬಹುದು.

ಇತ್ತೀಚೆಗಂತೂ ರೈಲು ಪ್ರಯಾಣಕ್ಕೆ ಸಂಭಂದಿಸಿದಂತೆ ಸಾಕಷ್ಟು ನಿಯಮಗಳು ಬದಲಾಗುತ್ತಲೇ ಇವೆ. ಇನ್ನು ನೀವು ರೈಲು ಪ್ರಯಾಣ ಮಾಡಲು ಬಯಸಿದರೆ ಹೊಸ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Leave a Reply

Your email address will not be published. Required fields are marked *