ನಮಸ್ಕಾರ ಪ್ರಿಯ ಆತ್ಮೀಯ ರೈತ ಬಾಂಧವರೇ 2021-22ರ ಬೆಳೆವಿಮೆ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ರೈತರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ.
ಬೆಳೆ ವಿಮೆ ಯೋಜನೆಯಡಿ 2021-22ರ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಿಗೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ರೈತರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ. ಅರ್ಜಿಯನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು ಯಾರನ್ನು ಸಂಪರ್ಕಿಸಬೇಕು ಎಂಬುದನ್ನು ಈ ಕೆಳಗಿನಂತೆ ಓದಿರಿ..
ಯಾವ ಕಾರಣಕ್ಕೆ ವಿಮಾ ಮೊತ್ತ ಜಮಾ ಮಾಡಿರುವುದಿಲ್ಲ?
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ವಿಮಾ ಪರಿಹಾರ ಪಡೆಯಲು ಅರ್ಹರಿದ್ದು ಬೆಳೆಯ ಸಮೀಕ್ಷೆ ವಿವರದೊಂದಿಗೆ ಬೆಳೆ ಹೋಲಿಕೆ ಮಾಡಿದ ನಂತರ ತಾಳೆಯಾಗದ ಕೆಲ ಕಾರಣ ಪ್ರಸ್ತಾವನೆಗಳನ್ನು ಸಂಬಂಧಿಸಿದ ವಿಮಾ ಕಂಪನಿಯವರು ತಿರಸ್ಕರಿಸಿ ವಿಮಾ ಮೊತ್ತ ಜಮೆ ಮಾಡಿರುವುದಿಲ್ಲ.
ತಿರಸ್ಕೃತಗೊಂಡ ಪ್ರಸ್ತಾವನೆಗಳನ್ನು ಎಲ್ಲಿ ನೋಡಬೇಕು?
ಈ ರೀತಿ ಬೆಳೆ ಸಮೀಕ್ಷೆ ವಿವರಗಳೊಂದಿಗೆ ಹೊಂದಾಣಿಕೆಯಾಗದೇ ತಿರಸ್ಕೃತಗೊಂಡ ಪ್ರಸ್ತಾವನೆಗಳನ್ನು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ಪ್ರದರ್ಶಿಸಲಾಗಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ರೈತರು ಆಕ್ಷೇಪಣೆಯೊಂದಿಗೆ ವಿಮಾ ಕಂತು ಪಾವತಿಸಿದ ರಸೀದಿ, 2021-22ರ ಪಹಣಿಯಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರಬೇಕು, ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಸೀದಿ, ವಿಮೆಗೆ ನೋಂದಾಯಿತ ಬೆಳೆ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಲ್ಲಿ ರಸೀದಿ ಲಗತ್ತಿಸಿ ಏಪ್ರಿಲ್ 15ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದರು.
ವಿಮೆ ಸ್ಟೇಟಸ್ ನೋಡುವುದು ಹೇಗೆ ?
ಈ ಕೆಳಗೆ ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ-
https://www.samrakshane.karnataka.gov.in/
ಆಗ ಅಲ್ಲಿ ವರ್ಷ ಹಾಗೂ ಋತುವಿನ ಆಯ್ಕೆ ಮಾಡಿ
1)ವರ್ಷ 2021 202
2)ಋತು
3)ಮುಂದೆ/go ಬಟನ್ ಒತ್ತಿರಿ
ಅದಾದ ನಂತರ ಓಪನ್ ಆಗುವಂತಹ ಹೊಸ ಪುಟದಲ್ಲಿ, ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಚೆಕ್ ಸ್ಟೇಟಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ಡೈರೆಕ್ಟ್ ಲಿಂಕ್ ಆಗಿ ಇಲ್ಲಿ ಕ್ಲಿಕ್ ಮಾಡಿ:-
https://www.samrakshane.karnataka.gov.in/publichome.aspx
ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/K9mNNO3T6FzKJGch4oqd2m