ಆತ್ಮೀಯ ರೈತ ಬಾಂಧವರೆ ಇಂದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ರೈತರಿಗೆ ಆದ ಲಂಚ ಕೊಡುವ ವಿಚಾರದಲ್ಲಿ ಆಗ ಘಟನೆಯನ್ನು ತಿಳಿಯಿರಿ..

ಲಂಚ ನೀಡಲು ಹಣ ಇಲ್ಲದಕ್ಕೆ ಎತ್ತು, ಚಕ್ಕಡಿಯ ತಂದ ರೈತ

ಈಗಲಾದರೂ ಕೆಲಸ ಮಾಡಿಕೊಡಿ: ಅನ್ನದಾತ ಕಣ್ಣೀರಿಟ್ಟ ರೈತ 🙏🏻

ಸವಣೂರು ಆಸ್ತಿಯ ಇ-ಸ್ವತ್ತು ಮಾಡಿಕೊಡಲು ಪುರಸಭೆ ಅಧಿಕಾರಿ 25,000 ಲಂಚ ಕೇಳಿದ್ದರಿಂದ ಮನನೊಂದ ರೈತನೊಬ್ಬ ತನ್ನ ಎತ್ತು, ಚಕ್ಕಡಿಯೊಂದಿಗೆ ಆಗಮಿಸಿ ಅವುಗಳನ್ನು ತೆಗೆದುಕೊಂಡು-ಸ್ವತ್ತುಮಾಡಿಕೊಡುವಂತೆ ಕಣ್ಣೀರು ಹಾಕಿದ ಮನಕಲಕುವ ಘಟನೆ ಶುಕ್ರವಾರ ಇಲ್ಲಿನ ಪರಸಭೆಯಲ್ಲಿ ನಡೆಯಿತು. ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ನಿವಾಸಿ ಯಲ್ಲಪ್ಪ ತಿಪ್ಪಣ್ಣ ರಾಗೋಜಿ ಅವರಿಗೆ ಪಟ್ಟಣದಲ್ಲಿ ನಿವೇಶನವಿದೆ. ಮೊದಲು ಕೈಯಲ್ಲಿ ಬರೆದ ಉತ್ತಾರ ನೀಡುತ್ತಿದ್ದರು. ಇದೀಗ ಪುರಸಭೆ ವ್ಯಾಪ್ತಿಯಲ್ಲಿ ಇ-ಸ್ವತ್ತು ಬ೦ದಿದ್ದರಿ೦ದ ಅದರಡಿ ಆಸ್ತಿ ವರ್ಗಾಯಿಸಿ ಕೊಡಿ ಎಂದು ಪುರಸಭೆಗೆ ಅರ್ಜಿ ಸಲ್ಲಿಸಿದ್ದರು. ಆಗ ಪುರಸಭೆ ಮುಖ್ಯಾಧಿಕಾರಿ (₹25,000) ಲಂಚ ಕೇಳಿದ್ದಾರೆ. ಇಷ್ಟು ಹಣ ಕೊಡಲು ಯಲ್ಲಪ್ಪನಿಗೆ ಸಾಧ್ಯವಾಗಿಲ್ಲ.

ಹೀಗಾಗಿ ಹಲವು ತಿಂಗಳಿಂದ ಉತ್ಕಾರಕ್ಕಾಗಿ ಅಲೆ ಯುತ್ತಲೇ ಇದ್ದರು. ನಮ್ಮದು 4 ಎಕರೆ ಜಮೀನಿದ್ದು ಹೊಲದ ಕೆಲಸ ಬಿಟ್ಟು ಕಚೇರಿಗೆ ನಿತ್ಯ ಅಲೆಯುವಂತಾ ಗಿದೆ. ವರ್ಷದಿಂದ ಸತಾಯಿಸುತ್ತಿದ್ದಾರೆ. ಹಣದ ಬೇಡಿಕೆ ಇಟ್ಟರು. ನಮಗೆ ಕೊಡಲು ಸಾಧ್ಯವಾಗಲಿಲ್ಲ. ಇದೀಗ ಚಕ್ಕಡಿ, ಎತ್ತು ಹೊಡೆದು ಕೊಂಡು ಪುರಸಭೆಗೆ ಬ೦ದಿದ್ದೇನೆ. ಇವುಗಳನ್ನು ತೆಗೆದು ಕೊಂಡಾದರೂ ನಮಗೆ ಅಧಿಕಾರಿಗಳು ಇ-ಸ್ವತ್ತು ನೀಡಲಿ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಲಂಚ ಕೇಳಿದವ ವರ್ಗ: ಇ-ಸ್ವತ್ತಿನ ಬದಲಾವಣೆಗೆ

ಲಂಚ ಕೇಳಿದ ಪುರಸಭೆ ಮುಖ್ಯಾಧಿಕಾರಿ ಎರಡು ತಿಂಗಳ ಹಿಂದೆ ಬೇರೆಡೆ ವರ್ಗಾವಣೆಯಾಗಿದ್ದಾರೆ. ಉಳಿದ ಅಧಿಕಾರಿಗಳನ್ನು ಹೋಗಿ ಕೇಳಿದರೆ ಇಂದು ಬಾ, ನಾಳೆ ಬಾ ಎ೦ದು ಅಲೆಸುತ್ತಿದ್ದಾರೆ. ಕೆಲವೊಮ್ಮೆ ನನಗೆ ಗೊತ್ತಿಲ್ಲ. ನಿಮ್ಮ ಫೈಲ್ ಕಳೆದಿದೆ ಎಂದು ಹೇಳುತ್ತಿ ದ್ದಾರೆ. ಈ ಹಿಂದೆ ಇಬ್ಬರು ಪುರಸಭೆ ಸದಸ್ಯರಿಗೆ 237 ಸಾವಿರ ಲಂಚ ಕೊಟ್ಟಿದ್ದೆ. ಒಬ್ಬರಿಗೆ 725 ಸಾವಿರ, ಮತ್ತೊ ಬ್ಬರಿಗೆ 212 ಸಾವಿರ ನೀಡಿದ್ದೇನೆ. ಇದೀಗ ಮತ್ತೆ ಕೊಡಲು ನನ್ನ ಬಳಿ ದುಡ್ಡಿಲ್ಲ. ಹೀಗಾಗಿ ಎತ್ತು, ಚಕ್ಕಡಿ ಹೊಡೆದುಕೊಂಡು ಬಂದಿದ್ದು ಇವುಗಳನ್ನು ತೆಗೆದುಕೊಂಡು ನನಗೆ ಇ-ಸ್ವತ್ತು ಮಾಡಿಕೊಡಲಿ ಎ೦ದು ಯಲ್ಲಪ್ಪರಾಣೋಜಿ ಕಣ್ಣೀರು ಹಾಕಿದರು.

ಜನ ಮಧ್ಯವ ರ್ತಿಗಳ ಕೈಗೆ ಸಿಗದೆ ನೇರವಾಗಿ ಕಚೇರಿಗೆ ಭೇಟಿ ಕೊಟ್ಟು ತಮ್ಮ ಕೆಲಸ ನಿರ್ವಹಿಸಿ ಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಜಿಲ್ಲಾಧಿಕಾರಿ ಮೂಲಕ ಸೂಕ್ತ ಕ್ರಮಕೈಗೊಳ್ಳಲು ಪತ್ರ ಬರೆಯಲಾಗಿದೆ.

• ರೇಣುಕಾ ದೇಸಾಯಿ ಪುರಸಭೆ ಅಧಿಕಾರಿ

ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕೊಂಡ ಲಿಂಕನ್ನು ಒತ್ತಿ 👇🏻

https://chat.whatsapp.com/CatKjFMzi1f5uiEQn86AW0

Leave a Reply

Your email address will not be published. Required fields are marked *