ಬೇಸಿಗೆಯಲ್ಲಿ ಹೊಲವನ್ನು ಉಳುಮೆ ಮಾಡುವುದು ಸರಿಯಲ್ಲ ಏಕೆಂದರೆ ಬೇಸಿಗೆಯಲ್ಲಿ ನೆಲದ ತೇವಂಶವು ಕಡಿಮೆ ಇರುವುದರಿಂದ ಉಳುಮೆ ಮಾಡಿದರೆ ತೇವಾಂಶವೆಲ್ಲ ಆವಿಯಾಗುವುದು . ಅಲ್ಲದೆ ಭೂಮಿಯನ್ನು ಉಳುಮೆ ಮಾಡಿ ನೆಲವನ್ನು ಸ್ವಚ್ಛವಾಗಿಟ್ಟಾಗ ಆಂತರಿಕ ಉಷ್ಣಾಂಶವು ಹೆಚ್ಚಾಗುತ್ತದೆ. ಆದ್ದರಿಂದ ಅಡಿಕೆ ಗಿಡಗಳಿಗೆ ಬೇಸಿಗೆಯಲ್ಲಿ ಕೀಟಗಳ ಕಾಟ ಹೆಚ್ಚಾಗುತ್ತದೆ .
ಅದೇನೆಂದರೆ ಬೇಸಿಗೆಯಲ್ಲಿ ಉಳುಮೆ ಮಾಡಿ ನೆಲವನ್ನು ಸ್ವಚ್ಚಗೊಳಿಸಿದಾಗ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬಿದ್ದು ಆಂತರಿಕ ಉಷ್ಣಾಂಶವು ಹೆಚ್ಚಾಗಿ ಆವಿಯಾಗುವ ಸಂದರ್ಭದಲ್ಲಿ ಅಡಿಕೆ ಗಿಡಗಳಲ್ಲಿ ರಸ ಹೀರುವಂತಹ ಕೀಟಗಳ ಬಾದೆಯು ಹೆಚ್ಚಾಗುತ್ತದೆ.
ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬೀಳುವುದರಿಂದ ತೇವಾಂಶವು ಆವಿಯಾಗುತ್ತದೆ ಅಲ್ಲದೆ ಗಿಡದ ಬೇರುಗಳಿಗೆ ನೇರವಾಗಿ ಸೂರ್ಯನ ಕಿರಣಗಳು ಬೀಳುವುದರಿಂದ ಗಿಡದಲ್ಲಿರುವ ತೇವಂಶ ಕೂಡ ಆವಿಯಾಗುವ ಸಂದರ್ಭದಲ್ಲಿ ಗಿಡದ ತೇವಾಂಶ ಕಡಿಮೆಯಾಗಿ ಗಿಡಗಳಿಗೆ ರೋಗ ನಿರೋಧಕ ಶಕ್ತಿ ಕಡಿಮಯಾಗುತ್ತ ಹೋಗುತ್ತದೆ ಈ ನಿಟ್ಟಿನಲ್ಲಿ ಗಿಡಗಳ ಕೆಳಗೆ ಗೊಬ್ಬರ ಗಿಡಗಳನ್ನು, ಹಸಿರು ಗಿಡಗಳನ್ನು ಬೆಳೆಸುವುದರಿಂದ ಆಂತರಿಕ ಉಷ್ಣಾಂಶವು ಕಡಿಮೆಯಾಗಿ ಗಿಡಗಳಿಗೆ ರೋಗ ಬರುವುದು ಕಡಿಮೆಯಾಗುತ್ತದೆ.
ಬೇಸಿಗೆಯಲ್ಲಿ ನೆಲದಲ್ಲಿ ಮತ್ತು ಮೇಲೆಯೂ ಉಷ್ಣಾಂಶ ಹೆಚ್ಚಾದರೆ ಹರಳು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.
ಅದನ್ನು ತಪ್ಪಿಸಲು ಬೇಸಿಗೆಯಲ್ಲಿ ಅಡಿಕೆ ಬೆಳೆಯಲ್ಲಿ ಯಾವುದಾದರೂ ದ್ವಿದಳ ಧಾನ್ಯಗಳ ಬೆಲೆಯನ್ನು ಅಂತರ್ ಬೇಳೆಯನ್ನಾಗಿ ಮಾಡಿಕೊಂಡರೆ( ಉರುಳಿ, ಕಡಲೆ,) ಬಿದ್ದಂತ ಸೂರ್ಯನ ಕಿರಣಗಳು ನೇರವಾಗಿ ಈ ಬೆಳೆಯ ಮೇಲೆ ಬೀಳುತ್ತದೆ. ಇದರಿಂದ ರಸ ಹೀರುವ ಕೀಟಗಳ ಬಾಧೆಯೂ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಗಿಡದ ಸುತ್ತ ಅಡಿಕೆ ಸಿಪ್ಪೆಯ ಹೊಟ್ಟು, ಕಬ್ಬಿನ ಸೊಪ್ಪು, ತೆಂಗಿನ ಗರಿಯ ಪುಡಿ , ಭತ್ತದ ಹುಲ್ಲು , ಮುಂತಾದ ಕೃಷಿ ತ್ಯಾಜ್ಯ ವಸ್ತುಗಳನ್ನು ಗಿಡಗಳ ಬುಡಕ್ಕೆ ಹೊದಿಕೆಯ ರೂಪದಲ್ಲಿ ಹಾಕಿದರೆ ನೆಲದ ತೇವಾಂಶವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಅಡಿಕೆ ತೋಟಗಳು ಯಾವಾಗಲೂ ಹಚ್ಚ ಹಸಿರಿನಿಂದ ಇರುತ್ತದೆ. ಮುಖ್ಯವಾಗಿ ಬೇಸಿಗೆಯಲ್ಲಿ ಉಳುಮೆ ಮಾಡದಿರುವುದು ಉತ್ತಮ.
ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳ ಕಂಡ ಲಿಂಕ್ ಅನ್ನು ಒತ್ತಿ 👇🏻
https://chat.whatsapp.com/CatKjFMzi1f5uiEQn86AW0