ನಮಸ್ಕಾರ ಪ್ರಿಯ ರೈತ ಬಾಂಧವರೇ ಇಂದು ನಾವು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡುತ್ತಿದ್ದರೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.. ಸಮಾಜದಲ್ಲಿ ಮಹಿಳೆಯರನ್ನು ಸಬಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಈ ಯೋಜನೆಗಳು ಶೂನ್ಯ ಬಂಡವಾಳದಲ್ಲಿ ಅಥವಾ ಕಡಿಮೆ ಬಂಡವಾಳದಲ್ಲಿ ಆರಂಭಿಸುವಂಥದ್ದಾಗಿದೆ. ಇದರಿಂದ ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಜೀವನವನ್ನುನಡೆಸಲು ಸಾಧ್ಯವಾಗುತ್ತದೆ ಮತ್ತು ಸಹಾಯವಾಗುತ್ತದೆ. ಅಂಥಾ ಯೋಜನೆಗಳಲ್ಲಿ ಇದು ಒಂದು ಯೋಜನೆಯಾಗಿದೆ ಅದುವೇ ಉಚಿತ ಹೊಲಿಗೆ ಯಂತ್ರ ಯೋಜನೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯ ಸರ್ಕಾರವು ಕೂಡ ಈ ಯೋಜನೆಯನ್ನು ಮಹಿಳೆಯರಿಗೆ ಕಲ್ಪಿಸಿಕೊಟ್ಟಿದೆ. ಇದರ ಉಪಯೋಗವನ್ನು ಕಡಿಮೆ ಆದಾಯದಿಂದ ಬಳಲುತ್ತಿರುವ ಎಲ್ಲಾ ಮಹಿಳೆಯರು ಪಡೆದುಕೊಳ್ಳಬೇಕು.
ಟೈಲರಿಂಗ್‌ನಲ್ಲಿ ಪ್ರತಿಭೆಯನ್ನ ಹೊಂದಿರುವ ಅನೇಕ ಮಹಿಳೆಯರು ಇದ್ದಾರೆ. ಆದರೆ ಬಹುತೇಕರಿಗೆ ಆರ್ಥಿಕ ಸಮಸ್ಯೆಯಿಂದ ಯಂತ್ರಗಳನ್ನ ಖರೀದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸರ್ಕಾರವು ಉಚಿತ ಹೋಲಿಗೆ ಯಂತ್ರಗಳನ್ನ ವಿತರಿಸುವ ಮೂಲಕ ಬಡ ಮಹಿಳೆಯರಿಗೆ ನೆರವು ನೀಡುವ ಉದ್ದೇಶವನ್ನು ಹೊಂದಿದೆ. ಅದರಂತೆ, ನೀವು ಕೂಡ ಕರ್ನಾಟಕ ಸರ್ಕಾರ ನೀಡುವ ಉಚಿತ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಭೂಮಿ ಭಾಗ ಮಾಡುವಲ್ಲಿ ತೊಂದರೆಯೇ ತಕರಾರು ಅರ್ಜಿಯನ್ನು ಎಲ್ಲಿ ಹೇಗೆ ಸಲ್ಲಿಸಬೇಕು??
ಕರ್ನಾಟಕ ಉಚಿತ ಹೊಲಿಗೆ ಯಂತ್ರ 2023
ಉಚಿತ ಹೊಲಿಗೆ ಯಂತ್ರದ ಯೋಜನೆಯ ಪ್ರಕಾರ, ಕರ್ನಾಟಕ ಸರ್ಕಾರವು ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುತ್ತದೆ. ಈ ಯೋಜನೆಯ ಮುಖ್ಯ ಗುರಿ ಮಹಿಳೆಯರನ್ನು ಸ್ವತಂತ್ರ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ. ಪ್ರತಿಯೊಬ್ಬರ ಕುಟುಂಬದಲ್ಲೂ ಆದಾಯವನ್ನು ಗಳಿಸುವ ಒಬ್ಬ ವ್ಯಕ್ತಿ ಇರುತ್ತಾರೆ. ಆದ್ರೆ ಕೋವಿಡ್‌ನ ನಂತರ ಪರಿಸ್ಥಿತಿ ಬದಲಾಗಿದೆ. ಹೀಗಿರುವಾಗ ಸಾಧ್ಯವಾದಷ್ಟೂ ಕುಟುಂಬದ ಎಲ್ಲಾ ಸದಸ್ಯರು ಏನಾದರೂ ಕೆಲಸ ಮಾಡುವುದು ಮತ್ತು ಪರಸ್ಪರ ಸಹಾಯ ಮಾಡುವುದು ಬಹಳ ಮುಖ್ಯ.ಹೀಗಿರುವಾಗ ಮನೆಯಲ್ಲಿರುವ ಮಹಿಳೆಯರಿಗೆ ಕರ್ನಾಟಕ ಉಚಿತ ಹೊಲಿಗೆ ಯಂತ್ರ ಯೋಜನೆ ನೆರವಿಗೆ ಬರುತ್ತದೆ.
ಯಾರು ಯಾರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹಾಗಿರುತ್ತಾರೆ
• ಅರ್ಜಿದಾರರು ಕರ್ನಾಟಕದ ಖಾಯಂ ಪ್ರಜೆಯಾಗಿರಬೇಕು.
• ಮಹಿಳೆಯರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.
• ಅಭ್ಯರ್ಥಿಯು ಬಡತನದ ರೇಖೆಗಿಂತ ಕೆಳಗಿರಬೇಕು.
• ಕುಟುಂಬದ ಆದಾಯವು 12,000 ರೂಪಾಯಿಕ್ಕಿಂತ ಕಡಿಮೆ ಇರಬೇಕು.
• ಈ ಯೋಜನೆಯಡಿಯಲ್ಲಿ ಮಹಿಳೆಯರ ಕನಿಷ್ಠ ವಯಸ್ಸು 20 ರಿಂದ 49 ವರೆಗೆ ಆಗಿರಬೇಕು.
• ಮಹಿಳೆಯರು ದುಡಿಯುವ ವರ್ಗದಲ್ಲಿ ಕೆಲಸ ಮಾಡಲು ಸಮರ್ಥರಾಗಿದ್ದರೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
• ಅಭ್ಯರ್ಥಿಯು ಟೈಲರಿಂಗ್‌ನಲ್ಲಿ ಪ್ರತಿಭೆಯನ್ನು ಹೊಂದಿರಬೇಕು.
• ಅರ್ಹತಾ ಮಾನದಂಡಗಳ ಅಡಿಯಲ್ಲಿ ಬರುವ ಮಹಿಳೆಯರು ಮಾತ್ರ ಉಚಿತ ಹೊಲಿಗೆ ಯಂತ್ರ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಪಿ ಎಂ ಕಿಸಾನ್ ಹಣ ರೈತರ ಖಾತೆಗೆ ಜಮಾ ಸ್ಟೇಟಸ್ ಚೆಕ್ ಮಾಡ್ಕೊಳ್ಳಿ!!
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವುದೇನು ?
ಅರ್ಜಿದಾರರ ಆದಾಯ ಪ್ರಮಾಣಪತ್ರ.
ಆಧಾರ್ ಕಾರ್ಡ್‌ನ ಝೆರಾಕ್ಸ್ ಪ್ರತಿ.
ಜಾತಿ ಪ್ರಮಾಣ ಪತ್ರದ ಪ್ರತಿ
ಟೈಲರಿಂಗ್ ಮತ್ತು ಕಟಿಂಗ್ ಸರ್ಟಿಫಿಕೇಟ್
ವಯಸ್ಸಿನ ದೃಢೀಕರಣ ಪ್ರಮಾಣಪತ್ರದ ಛಾಯಾಪ್ರತಿ
ಅರ್ಜಿದಾರರು ಅಂಗವಿಕಲರಾಗಿದ್ದರೆ, ಅಂಗವೈಕಲ್ಯವನ್ನ ಸಾಬೀತುಪಡಿಸುವ ಪ್ರಮಾಣಪತ್ರ.
ಮೊಬೈಲ್ ಸಂಖ್ಯೆ
ವಿಧವೆಯರ ಸಾಕ್ಷ್ಯದ ಅಫಿಡವಿಟ್
ಕಡಿಮೆ ಖರ್ಚು ಹೆಚ್ಚಿನ ಲಾಭವನ್ನು ಗಳಿಸುವ ಕೃಷಿ ಮಾಡಿರಿ
ಯೋಜನೆಗೆ ಆನ್ಲೈನ್ ನೋಂದಣಿಗೆ ಅರ್ಜಿ ಸಲ್ಲಿಸುವುದು ಹೇಗೆ ?
ಮೊದಲು ಯೋಜನೆಯ ಅಧಿಕೃತ ವೆಬ್‌ಸೈಟ್ National Portal of India ಗೆ ಭೇಟಿ ನೀಡಬೇಕು. https://www.india.gov.in/ ಪುಟವನ್ನ ತೆರೆದನಂತರ ಉಚಿತ ಹೊಲಿಗೆ ಯಂತ್ರ ಯೋಜನೆ ಕರ್ನಾಟಕದ ಲಿಂಕ್ ಆನ್ ಲೈನ್ ಅರ್ಜಿ ನಮೂನೆ ಇರುತ್ತದೆ. ಆ ಲಿಂಕ್ ಕ್ಲಿಕ್ ಮಾಡಿ. ಅದರ ನಂತರ ಅರ್ಜಿ ನಮೂನೆ ಪರದೆಯ ಮೇಲೆ ತೆರೆಯುತ್ತದೆ. ಅರ್ಜಿ ನಮೂನೆಯ ಕೆಳಗಿರುವ ಡೌನ್ ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮತ್ತು ಎಲ್ಲಾ ಫಾರ್ಮ್‌ಗಳನ್ನು ಭರ್ತಿ ಮಾಡಿ. ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯಂತಹ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಇಲ್ಲಿ ನಮೂದಿಸಬೇಕು. ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿದ ನಂತರ ಎಲ್ಲಾ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿಬೇಕು.
ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ 👇🏻
https://chat.whatsapp.com/CatKjFMzi1f5uiEQn86AW0