ಆತ್ಮೀಯ ರೈತ ಬಾಂಧವರೇ ತಮ್ಮೆಲ್ಲರಿಗೂ ಬಹು ಜನರಿಗೆ ಕಾಡುವ ಸಮಸ್ಯೆ ಏನೆಂದರೆ ಭೂಮಿ ಡಿವೈಡ್ ಮಾಡುವ ಸಮಯದಲ್ಲಿ ಅಂದರೆ ಭೂಮಿಯನ್ನು ಹಂಚಿಕೊಳ್ಳುವಾಗ ತಕರಾರು ಏಕೆಂದರೆ ಭೂಮಿ ಮಾಪನ ಮಾಡುವಾಗ ಸ್ವಲ್ಪ ಹೆಚ್ಚು ಕಡಿಮೆಯಾದರೂ ಆ ಸಮಯದಲ್ಲಿ ನೀವು ಏನಾದರೂ ಸುಮ್ಮನೇ ಆದರೆ ಅದು ಅವರ ಭೂಮಿಯಾಗುತ್ತದೆ ಅದಕ್ಕೂ ಮೊದಲು ನಿಮಗೂ ಏನಾದರೂ ಸ್ವಲ್ಪ ಅದರ ಮೇಲೆ ಅನುಮಾನ ಇದ್ದರೆ ನೀವು ತಕರಾರು ಅರ್ಜಿಯನ್ನು ಸಲ್ಲಿಸಬಹುದು. ಇದನ್ನು ನೀವು ಮಾಡದೇ ಇದ್ದಲ್ಲಿ ಕೈಯಾರೆ ನಿಮ್ಮ ಭೂಮಿ ನಿಮ್ಮಿಂದ ಹೋಗುತ್ತದೆ ಅದಕ್ಕಾಗಿ ನೀವು ಮೊದಲೇ ಎಚ್ಚರಿಕೆ ತಗೊಂಡು ಈ ಕೆಲಸ ಮಾಡಬೇಕಾಗುತ್ತದೆ. ತಪ್ಪದೇ ಈ ಮಾಹಿತಿಯನ್ನು ಓದಿರಿ.

2018ರ ಸಾಲ ಮನ್ನಾ ಪಟ್ಟಿ ಸರ್ಕಾರದಿಂದ ಬಿಡುಗಡೆಯಾಗಿದೆ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಿ

ರೈತರು ಯಾವಾಗ ತಕರಾರು ಸಲ್ಲಿಸಬಹುದು?

ಅಕ್ಕ ಪಕ್ಕದ ರೈತರು ಏನಾದರೂ ಭೂಮಿ ಮಾಪನ ಮಾಡಲು ಬಂದಾಗ ಅಥವಾ ಭೂ ಸರ್ವೇಯರ್ ಬಂದಾಗ ನಿಮ್ಮ ಭೂಮಿ ಮಾಪನ ಮಾಡುವ ಸಮಯದಲ್ಲಿ ಏನಾದರೂ ಸ್ವಲ್ಪ ಹೆಚ್ಚು ಕಡಿಮೆ ಯಾಗಿದ್ದರೆ ಅಥವಾ ಭೂಮಿ ವಿಂಗಡನೆಯಲ್ಲಿ ಸಮಸ್ಯೆ ಆಗಿದ್ದರೆ ಅಥವಾ ಭೂಮಿ ಕಟ್ಟೆದಲ್ಲಿ ವ್ಯತ್ಯಾಸವಾಗಿದ್ದರೆ ನೀವು ತಕರಾರು ಅರ್ಜಿ ಸಲ್ಲಿಸುವುದಕ್ಕೆ ಅರ್ಹರಾಗಿರುತ್ತೀರಿ. ಮತ್ತು ನಿಮ್ಮ ಅಣ್ಣತಮ್ಮಂದಿರು ಭೂಮಿ ವಿಂಗಡನೆ ಮಾಡುವಾಗ ನಿಮ್ಮಿಬ್ಬರಲ್ಲಿ ಹೊಂದಾಣಿಕೆ ಇಲ್ಲದಿದ್ದಲ್ಲಿ ನೀವು ಅವಾಗ ತಕರಾರು ಸಲ್ಲಿಸುವ ಮೂಲಕ ಅದನ್ನು ಕೋರ್ಟಿನ ಮೂಲಕ ಬಗೆಹರಿಸಿಕೊಳ್ಳಬಹುದು.

ತಕರಾರು ಅರ್ಜಿಯನ್ನು ಸಲ್ಲಿಸಬೇಕಾದರೆ ರೈತರಲ್ಲಿ ಏನೆಲ್ಲ ದಾಖಲೆಗಳು ಇರಬೇಕು?

ಕರಾರು ಅರ್ಜಿ ಸಲ್ಲಿಸಬೇಕಾದರೆ ಮುಖ್ಯವಾದ ದಾಖಲೆಗಳಾದ ಪಹಣಿ ಪತ್ರ ಅಂದರೆ ಆ ಭೂಮಿ ನಿಮ್ಮದೇ ಎಂದು ತೋರಿಸುವುದಕ್ಕಾಗಿ ಪಹಣಿ ಇರಲೇಬೇಕು, ಹಿಂದಿನ ಕಾಲಗಳಲ್ಲಿ ಸರ್ವೆಯರ್ ಗಳು ಬಂದು ವಂಶಾವಳಿ ಪತ್ರಕ್ಕೆ ಸಹಿ ಮಾಡಿಕೊಂಡು ನಿಮಗೆ ಗೊತ್ತೇ ಆಗದ ಹಾಗೆ ಮಾಡಿರುತ್ತಾರೆ ಏಕೆಂದರೆ ಹಿಂದಿನ ಕಾಲದಲ್ಲಿ ಸಾಕಷ್ಟು ರೈತರು ಓದಿದ್ದಿಲ್ಲ ಆದರೆ ಈ ಸಮಯಗಳಲ್ಲಿ ಇಂತಹ ಕೆಲಸವಾಗುವುದು ಸ್ವಲ್ಪ ಕಡಿಮೆ. ಆ ಭೂಮಿ ನಿಮ್ಮದೊಂದು ಹೇಳುವ ಮೊದಲ ಪುರಾವೆ ದಾಖಲೆಗಳು ನಿಮ್ಮಲ್ಲಿ ಇರಬೇಕು ಅಂದಾಗ ಮಾತ್ರ ನೀವು ತಕರಾರು ಅರ್ಜಿಯನ್ನು ಕೋರ್ಟಿನಲ್ಲಿ ಸಲ್ಲಿಸಬಹುದು ಇಲ್ಲದಿದ್ದಲ್ಲಿ ತಕರಾರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ನಿಮ್ಮ ಜಮೀನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಮೊಬೈಲ್ ನಲ್ಲಿಯೇ ನೋಡಿರಿ

ದಾಖಲೆಗಳಲ್ಲಿ ಪ್ರಮುಖವಾಗಿ ಎಂದರೆ ನೀವು ಒಂದು ಅರ್ಜಿಯನ್ನು ಯಾರು ಭೂಮಿ ಮಾಪನ ಮಾಡುತ್ತಿದ್ದಾರೆ ಅಥವಾ ಸರ್ವೇಯರ್ ಗೆ ಒಂದು ಅರ್ಜಿಯನ್ನು ಬರೆಯಬೇಕಾಗುತ್ತದೆ ಅರ್ಜಿಯನ್ನು ಈ ರೀತಿಯಾಗಿ ನೀವು ಬರೆಯಬಹುದಾಗಿದೆ ಉದಾಹರಣೆಗೆ ಒಂದು ಪೇಜ್ ಅಥವಾ ಒಂದು ಪುಟದಲ್ಲಿ ಮೇಲ್ಬಾಗದ ಎಡಗಡೆ ಭಾಗದಲ್ಲಿ ” ಗೆ ” ಎಂದು ಬರೆಯಬೇಕು ನಂತರ ಅದರ ಭೂಮಿ ಮಾಪನ ಮಾಡುವ ಅಧಿಕಾರಿಗಳು ಅವರ ಹೆಸರು ನಂತರ ಕೆಳಗಡೆ ಅವರ ವಿಳಾಸವನ್ನು ಬರೆಯಬೇಕು ನಂತರ ವಿಷಯ: ನೀವು ಭೂಮಿ ಮಾಪನ ಮಾಡುವುದಕ್ಕೆ ನಮ್ಮ ತಕರಾರು ಇದೆ ಕೊರಿ ಇದಾದ ಮೇಲೆ ಮೇಲ್ಕಂಡವಿಷಯದಂತೆ ನಾವು ಈ ಭೂಮಿ ಮಾಪನ ಮಾಡುವುದಕ್ಕೆ ತಕರಾರು ನೀಡುತ್ತೇವೆ ಏಕೆಂದರೆ ಸ್ವಲ್ಪ ಹೆಚ್ಚು ಕಡಿಮೆ ಇರುವುದರಿಂದ ಸ್ವಲ್ಪ ಬದಲಾವಣೆಯಾಗಬಹುದು ಅದಕ್ಕಾಗಿ ನಾವು ತಕರಾರು ಅರ್ಜಿ ನೀಡುತ್ತಿದ್ದೇವೆ ಎಂದು ಬರೆಯಬೇಕು. ಇದಾದಮೇಲೆ ಇಂತಿ ನಿಮ್ಮ ಹೆಸರನ್ನು ನಮೂದನೆ ಮಾಡಿ ಸಹಿಯನ್ನು ಮಾಡಬೇಕು. ಈ ಅರ್ಜಿ ನೀವು ಭೂಮಾಪನದವರಿಗೆ ಕೊಡಬೇಕು.

ಪಿಎಂ ಕಿಸಾನ್ ಹಣ ರೈತರ ಖಾತೆಗೆ ಜಮಾ ಆಗಿದೆ ಮೊಬೈಲ್ ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ..

ಇದನ್ನು ಬಿಟ್ಟು ನೀವು ಯಾವ ರೀತಿಯಾಗಿ ತಕರಾರು ಮಾಡಬಹುದು?

ಕೋರ್ಟಿನ ಮೂಲಕ ನೀವು, ತಡೆಯಾದ್ದೇ ಪತ್ರ ಮತ್ತು ಸ್ಟೇ ಆರ್ಡರ್ ತೆಗೆದುಕೊಂಡು ಬಂದರೆ ಸಹ ನಿಮ್ಮ ಭೂಮಿ ಮಾಪನ ಅಥವಾ ಭೂಮಿ ಅಳೆಯುವುದನ್ನು ನಿಲ್ಲಿಸಬೇಕಾಗುತ್ತದೆ ಏಕೆಂದರೆ ಇದು ಕೋರ್ಟಿನ ತೀರ್ಮಾನವಾಗಿರುವುದರಿಂದ ಭೂಮಾಪಕರು ಭೂಮಿಯನ್ನು ಸರ್ವೆ ಮಾಡಲು ಆಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕಂದಾಯ ಇಲಾಖೆ ಅಥವಾ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಲ್ಯಾಂಡ್ ರೆಕಾರ್ಡ್ (ADLR) ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು ನಮಗೆ ಎಷ್ಟು ಸಾಧ್ಯವೂ ನಾವು ನಾವು ನಿಮಗೆ ತಿಳಿಸಲು ಪ್ರಯತ್ನ ಮಾಡಿದ್ದೇವೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻👇🏻

https://chat.whatsapp.com/CatKjFMzi1f5uiEQn86AW0

Leave a Reply

Your email address will not be published. Required fields are marked *