ಪ್ರಿಯ ರೈತರೇ, ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 13ನೇ ಕಂತನ ಹಣ ಬಿಡುಗಡೆಯ ಬಗ್ಗೆ ಕೊನೆಗೂ ಈ ಸುದ್ದಿ ನೀಡಿದೆ. ಪ್ರಧಾನ ಮಂತ್ರಿಗಳು ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣವನ್ನು ಇದೇ ತಿಂಗಳ ಫೆಬ್ರುವರಿ 27ನೇ ತಾರೀಕಿನಂದು ಈಗಾಗಲೇ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದೇ ತಿಂಗಳ ಫೆಬ್ರುವರಿ 27 ನೇ ತಾರೀಕಿನಂದು ಸನ್ಮಾನ್ಯರಾದ ಬಿಎಸ್ ಯಡಿಯೂರಪ್ಪ ಅವರ ಹುಟ್ಟು ಹಬ್ಬದ ದಿನದಂದು ಈ 13ನೇ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು. ಅದೇ ದಿನದಂದು ಪ್ರಧಾನ ಮಂತ್ರಿಗಳ ಕರ್ನಾಟಕ ಪ್ರವಾಸ ಇರುವುದರಿಂದ ಮೊದಲ ಬಾರಿಗೆ ಕರ್ನಾಟಕದಿಂದ ಈ ಪಿಎಂ ಕಿಸಾನ್ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ.
ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಹೊಲದ ಉತಾರ ಪಹಣಿ ಎಲ್ಲವನ್ನು ಮೊಬೈಲ್ ನಲ್ಲಿ ನೋಡಿರಿ
ಈ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಇದುವರೆಗೆ ಒಟ್ಟಾರೆಯಾಗಿ ಸುಮಾರು 2.70ಲಕ್ಷ ಕೋಟಿ ರೂಪಾಯಿಗಳನ್ನು 14 ಕೋಟಿ ರೈತರ ಖಾತೆಗೆ ಜಮಾ ಮಾಡಲಾಗಿದೆ.
ಈ ಹಿಂದಿನ ಕಂತಿನ ಹಣ ಅಂದರೆ 12ನೇ ಕಂತಿನ ಹಣವನ್ನು ಪ್ರಧಾನಮಂತ್ರಿಗಳು ದೆಹಲಿಯಿಂದ ರೈತರ ಖಾತೆಗೆ ಜಮಾ ಮಾಡಿದ್ದರು. ಈ ಸಲ 13ನೇ ಕಂತಿನ ಹಣವನ್ನು ಕರ್ನಾಟಕದಿಂದ ಬಿಡುಗಡೆ ಮಾಡುತ್ತಿರುವುದು ವಿಶೇಷವಾಗಿದೆ.
13ನೇ ಕಂತಿನ ಹಣ ಎಷ್ಟು ಜಮೆ ಆಗಲಿದೆ?
ಪಿಎಂ ಕಿಸಾನ್ ನಿಯಮಗಳ ಪ್ರಕಾರ 13ನೇ ಕಂತಿನ ಹಣ ಹಿಂದಿನ ಕಂತಿಂನಂತೆ 2,000 ರೂಪಾಯಿಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ರೈತರು ಯಾವುದೇ ತರಹದ ಗಾಳಿ ಸುದ್ದಿಗಳಿಗೆ ತಲೆ ಕೆಡಿಸಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನಿಮ್ಮ ಸ್ವಂತ ಜಮೀನಿಗೂ ಬಂತು ಆಧಾರ್ ಕಾರ್ಡ್ ಲಿಂಕ್ ಇನ್ನು ಮುಂದೆ ಎಲ್ಲಾ ದಾಖಲಾತಿಗಳು ಡಿಜಿಟಲ್ ರೂಪದಲ್ಲಿ ಸಿಗುತ್ತವೆ
ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣದ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡುವುದು ಹೇಗೆ?
» ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣದ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಲು ರೈತರು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
https://pmkisan.gov.in/BeneficiaryStatus.aspx
» ನಂತರ ಅಲ್ಲಿ ಕೇಳಲಾಗುವ ಕೆಲವು ಮಾಹಿತಿಯ ವಿವರಗಳನ್ನು ನೀಡಬೇಕಾಗುತ್ತಸದೆ.
» ನೀವು ನಿಮ್ಮ “aadhar authentication” ನೀಡಿದ್ದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಬರುತ್ತವೆ.
» ನಂತರ ಕೊನೆಯಲ್ಲಿ 13ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮಗೆ 13ನೇ ಕಂತಿನ ಹಣ ಬರುತ್ತದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ಇದಿಷ್ಟು ಈ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣದ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದೆ. ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
ಹೆಚ್ಚಿನ ಕೃಷಿ ಸಂಬಂಧಿತ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ
https://chat.whatsapp.com/CatKjFMzi1f5uiEQn86AW0