ಆತ್ಮೀಯ ರೈತ ಬಂದವರೇ ನಿಮ್ಮ ಖಾತೆಗೆ ಡಿಸೆಲ್ ಸಬ್ಸಿಡಿ ಹಣ ಜಮಯಾಗಿದೆ, ಕೆನರಾ ಬ್ಯಾಂಕ್ ನಿಂದ ನಿನ್ನೆ ಮಧ್ಯಾಹ್ನ ನಮ್ಮ ಖಾತೆಗೆ ಡಿ ಬಿ ಟಿ ವರ್ಗಾವಣೆ ಮೂಲಕ 1250 ರೂಗಳು ನಮ್ಮ ಖಾತೆಗೆ ಕ್ರೆಡಿಟ್ ಆಗಿವೆ ಎಂದು ಮೆಸೇಜ್ ಬಂದಿದೆ. ಹೀಗಾಗಿ ನಿಮಗೂ ಕೂಡ ಈ ಮಾಹಿತಿ ಬಂದಿರಬಹುದು ಅಥವಾ ಹಣ ಜಮೆಯಾಗಿರುವ ಖಾತೆಯಿಂದ ನಿಮ್ಮ ಮೊಬೈಲ್ ಗೆ ಮೆಸೇಜ್ ಬರೆದಿರಬಹುದು. ಆದರೆ ಎಲ್ಲರಿಗೆ ಹಣ ಜಮೆಯಾಗಿದೆ.

ಏನಿದು ರೈತ ಶಕ್ತಿ ಯೋಜನೆ?

ಪ್ರತಿಯೊಬ್ಬರ ರೈತರಿಗೆ ಯಂತ್ರೋಪಕರಣಗಳ ಅವಶ್ಯಕತೆ ಇದೆ ಯಂತ್ರೋಪಕರಣಗಳು ನಡೆಸಬೇಕಾದ ಡಿಸೈನ್ ಅವಶ್ಯಕತೆ ಇದೆ ಮತ್ತು ಪ್ರತಿಯೊಬ್ಬ ರೈತನು ಪ್ರಾಥಮಿಕ ಮತ್ತು ದ್ವಿತೀಯ ಉಳಿಮೆಗಳಿಗಾಗಿ ಟ್ರಾಕ್ಟರ್ ಬಳಸುವುದ ಅನಿವಾರ್ಯ ಹೀಗಾಗಿ ಪ್ರತಿ ವರ್ಷ ಅವರಿಗೆ ತಗಲುವ ಖರ್ಚಿನಲ್ಲಿ ಸ್ವಲ್ಪ ಸಹಾಯಧನವನ್ನು ನೀಡಿದರೆ ಅವರಿಗೆ ತುಂಬಾ ಒಳ್ಳೆಯದಾಗುತ್ತದೆ. ಕೃಷಿಯಲ್ಲಿ ಮುಂದೆ ಬರುತ್ತಾರೆ. ಅದಕ್ಕಾಗಿ ರೈತ ಶಕ್ತಿ ಯೋಜನೆ ಪ್ರತಿಯೊಂದು ಹೆಕ್ಟರ್ ಗೆ 1250 ಪ್ರತಿ ಎಕರೆಗೆ 250ರಂತೆ ರೈತಶಕ್ತಿ ಯೋಜನೆ ಎಂದು ಘೋಷಣೆ ಮಾಡಲಾಗಿತ್ತು.

ಕಳೆದ ಒಂದು ತಿಂಗಳಿಂದ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಹಲವಾರು ಸಂಘ ಸಭೆಗಳಲ್ಲಿ ಸಿಎಂ ಅವರು ಮತ್ತು ಕೃಷಿ ಸಚಿವರು ಹೇಳಿದ್ದರು ಆದರೆ ಇದೀಗ ಎಲ್ಲ ರೈತರಿಗೆ ಸಿಹಿ ಸುದ್ದಿ ಏನೆಂದರೆ ಅದನ್ನು ಜಮೆ ಸಹ ಮಾಡಿದ್ದಾರೆ.

ಇನ್ನೂ ರೈತ ಶಕ್ತಿ ಯೋಜನೆ ಹಣ ಜಮೆ ಆಗದಿದ್ದರೆ ನೀವು ಏನು ಮಾಡಬೇಕು?

ಆತ್ಮೀಯರೇ ನಾವೀಗಾಗಲೇ ಇದರ ಪಟ್ಟಿ ಬಿಡುಗಡೆ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಯಾರು ಹೆಸರಲ್ಲಿ ಫ್ರಟ್ಸ್ ಐಡಿ ಹೊಂದಿದ್ದಾರೆ ಆ ಎಲ್ಲ ರೈತರು ಇದರ ಫಲಾನುಭವಿಗಳಾಗುತ್ತಾರೆ ಎಂದು ನಿಮಗೆ ಈಗಾಗಲೇ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸಹ ನೋಡಲು ನಾವು ಮಾಹಿತಿಯನ್ನು ತಿಳಿಸಿದ್ದೇವೆ. ಹೀಗಾಗಿ ನಿಮ್ಮ ಹೆಸರಲ್ಲಿ ಎಫ್ ಐ ಡಿ ಇದ್ದರೆ ಸಾಕು ಇದು ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ ಅದನ್ನು ಡಿಬಿಟಿ ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಒಂದು ವೇಳೆ ನಿಮ್ಮ ಖಾತೆಗೆ ಇನ್ನೂ ರೈತ ಶಕ್ತಿ ಯೋಜನೆ ಹಣ ಜಮೆ ಆಗದೇ ಇದ್ದಲ್ಲಿ ನೀವು ಒಂದು ಬಾರಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಹೋಗಿ ನಿಮ್ಮ ಹೆಸರಿನಲ್ಲಿ ಎಫ್ ಐ ಡಿ ಇದೆಯಾ ಅಥವಾ ಇಲ್ಲ ಎಂಬುದನ್ನು ಸರಿಯಾಗಿ ಚೆಕ್ ಮಾಡಿಕೊಳ್ಳಿ ಇದ್ದರೆ ನಿಮಗೆ ಖಂಡಿತವಾಗಿಯೂ ಇನ್ನು ಎರಡು ದಿನಗಳಲ್ಲಿ ಹಣ ಬರಲಿದೆ ಮತ್ತು ನೀವು ಕೆನರಾ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ನಿಮಗೆ ಈಗಾಗಲೇ ಹಣ ಬಂದಿರಬಹುದು ಏಕೆಂದರೆ ನಮಗೂ ಹಣ ಬಂದಿದೆ.

ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ

https://chat.whatsapp.com/CatKjFMzi1f5uiEQn86AW0

Leave a Reply

Your email address will not be published. Required fields are marked *