ನಮಸ್ಕಾರ ಪ್ರಿಯ ರೈತ ಬಾಂಧವರೇ,

ಕರ್ನಾಟಕ ಬೆಳೆ ಸಾಲ ಮನ್ನಾ ಯೋಜನೆ

ಸಾಲ ಮನ್ನಾ ಯೋಜನೆಯು ಭಾರತದ ರೈತರಿಗೆ ಒಂದು ದೊಡ್ಡ ಅನುಕೂಲವಾದ ಯೋಜನೆಯಾಗಿದೆ. ಬೇರೆ ರಾಜ್ಯಗಳು ತಮ್ಮದೇ ಆದ ಸಾಲ ಮನ್ನಾ ಯೋಜನೆಗಳನ್ನು ಪ್ರಾರಂಭ ಮಾಡಿವೆ ಮತ್ತು ಇದು ರೈತರಿಗೆ ತುಂಬಾ ಉಪಯೋಗಕರವಾಗಿದೆ, ಕರ್ನಾಟಕ ಸರ್ಕಾರವು ಸಾಲ ಮನ್ನಾ ಯೋಜನೆಯನ್ನು ಪ್ರಾರಂಭಿಸಿದೆ. ಅದು ರಾಜ್ಯದ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರ ಸಾಲವನ್ನು ಸರ್ಕಾರವೇ ಬ್ಯಾಂಕ್ಗಳಿಗೆ ತುಂಬುತ್ತವೆ. ಈ ಯೋಜನೆ ಮೂಲಕ ರಾಜ್ಯದ ರೈತರಿಗೆ ತುಂಬಾ ಅನುಕೂಲವಾಗಿದೆ

ರೈತರು ಮೊಬೈಲ್ ನಲ್ಲೇ ಎಷ್ಟು ಬೆಳೆ ಸಾಲ ಮನ್ನಾ ಆಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರೈತರು ಮೊಬೈಲ್ ನಲ್ಲೇ ಎಷ್ಟು ಬೆಳೆ ಸಾಲಮನ್ನಾ ಆಗಿದೆ ಎಂಬುದನ್ನು ನೋಡಲು ಈhttps://clws.karnataka.gov.in/loanwaiverreport/ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ಸಾಲ ಮನ್ನಾ ಪಟ್ಟಿ ಓಪನ್ ಆಗುವುದು. Bank Wise ಮೇಲೆ ಕ್ಲಿಕ್ ಮಾಡಬೇಕು. Select Report 3 Farmer wise ಮಾಡಿಕೊಳ್ಳಬೇಕು.ಮೊದಲಿಗೆ ನೀವು ನಿಮ್ಮ ಜಿಲ್ಲೆ, ತಾಲೂಕನ್ನು, ಆಯ್ಕೆ ಮಾಡಿಕೊಳ್ಳಿ. ನಂತರ ನಿಮ್ಮ ಹೋಬಳಿ ಮತ್ತು ಗ್ರಾಮವನ್ನು ಸಹ ಆಯ್ಕೆ ಮಾಡಿ. ನಂತರ( Get Report) ಮೇಲೆ ಕ್ಲಿಕ್ ಮಾಡಬೇಕು. ಅದಾದ ನಂತರ ನಿಮ್ಮ ಊರಿನಲ್ಲಿ ಯಾವ ರೈತರಿಗೆ ಸಾಲ ಮನ್ನಾ ಆಗಿದ್ಯೋ ಅವರ ಹೆಸರು ಪಟ್ಟಿಯಲ್ಲಿ ಕಾಣಿಸುತ್ತದೆ ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಸಾಲ ಕೂಡ ಮನ್ನಾ ಆಗಿರುತ್ತದೆ.

ಯಾವ ಬ್ಯಾಂಕ್ ನಿಂದ ಸಾಲವನ್ನುಪಡೆದಿದ್ದೀರಿ?

(Branch name)ಬ್ರಾಂಚ್ ಹೆಸರು, ನಿಮ್ಮ ಬೆಳೆ ಸಾಲ ಯಾವ ಪ್ರಕಾರದದ್ದು ಇದಾದ ಮೇಲೆ 31-12-2017 ರವರೆಗೆ ಎಷ್ಟು ಸಾಲ ಇತ್ತು ? ನಿಮ್ಮ ಹೆಸರು ಗ್ರೀನ್ ಪಟ್ಟಿಯಲ್ಲಿದೆಯೋ ಇಲ್ಲವೋ ಎಂಬುದು ಕಾಣುತ್ತದೆ. ಒಂದು ವೇಳೆ ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲವಾದಲ್ಲಿ ಯಾಕೆ ಇಲ್ಲ ಎಂದು ಕಾರಣ ಕೂಡ ಅಲ್ಲಿಯೇ ನೀಡಿರುತ್ತಾರೆ. ಬೆಳೆ ಸಾಲ ಮನ್ನಾ ಆಗಿದೆಯೇ? ಆಗಿದ್ದರೆ ಎಷ್ಟು ಬೆಳೆ ಸಾಲಮನ್ನಾ ಆಗಿದೆ? ಹಾಗೂ ಬೆಳೆ ಸಾಲ ಸಂಪೂರ್ಣವಾಗಿ ಮನ್ನಾ ಆಗಿದೆಯೋ ಇಲ್ಲವೋ ಎಂಬುದು ಕಾಣುತ್ತದೆ. ಕೊನೆಯದಲ್ಲಿ ನಿಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಮಾಹಿತಿ ಕೂಡ ಕಾಣಿಸುತ್ತದೆ ಇದರಲ್ಲಿ ಸರಿ ಇದೆಯೋ ಇಲ್ಲ ಎಂದು ನೀವು ಒಮ್ಮೆ ಚೆಕ್ ಮಾಡಿಕೊಳ್ಳಿ.

Crop loan waiver ಬಗ್ಗೆ ಯಾವ ಮಾಹಿತಿ ಸಿಗುತ್ತದೆ?

ಇದರಲ್ಲಿ ನಿಮಗೆ ಕಮರ್ಷಿಯಲ್ ಬ್ಯಾಂಕ್ ಗಳಲ್ಲಿ ಸಾಲ ಮನ್ನಾ ಆಗಿದ್ಯೋ ಇಲ್ಲ ಎಂದು ತೋರಿಸುತ್ತಾರೆ

PACS ಲೋನ್ ಮಾಹಿತಿ

ನೀವು ಸಹಕಾರ ಸಂಘಗಳಲ್ಲಿ ಸಾಲವನ್ನು ಪಡೆದಿದ್ದರು. ಅದರ ಮಾಹಿತಿಯನ್ನು ಕೂಡ ತೋರಿಸುತ್ತಾರೆ.ನೀವು ಇದೇ ರೀತಿ ನಿಮ್ಮ ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿ ಬೆಳೆ ಸಾಲ ಮನ್ನಾ ಬಗ್ಗೆ ತಿಳಿದುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ನ್ನು ಒತ್ತಿರಿ… 👇🏻👇🏻https://chat.whatsapp.com/CatKjFMzi1f5uiEQn86AW0

Leave a Reply

Your email address will not be published. Required fields are marked *