ಪ್ರಿಯ ರೈತರೇ, ಸಾಮಾನ್ಯವಾಗಿ ರೈತರ ನಡುವೆ ಜಮೀನಿನ ಬಗ್ಗೆ ತಂಟೆ ತಕರಾರುಗಳು ನಡೆಯುತ್ತಲೇ ಇರುತ್ತವೆ. ತಮ್ಮ ಜಮೀನನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡುವಾಗ ಅಥವಾ ಬೇರೆಯವರ ಜಮೀನನ್ನು ಖರೀದಿಸಿದಾಗ ಅದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ರೈತರು ಕೊಡುವ ಕಷ್ಟ ಅಷ್ಟಿಷ್ಟಲ್ಲ. ರೈತರು ತಾವು ಖರೀದಿಸಿದ ಅಥವಾ ವರ್ಗಾವಣೆ ಮಾಡಿದ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಕೆಲವೊಮ್ಮೆ ವರ್ಷಗಳೇ ಬೇಕಾಗುತ್ತವೆ. ರೈತರಿಗೆ ಕಡಿಮೆ ಸಮಯದಲ್ಲಿ ತಮ್ಮ ಜಮೀನಿನ ವರ್ಗಾವಣೆ ದಾಖಲೆಯನ್ನು ಕಡಿಮೆ ಸಮಯದಲ್ಲಿ ಪಡೆದುಕೊಳ್ಳಲು ರಾಜ್ಯ ಸರ್ಕಾರವು ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳುವ ಹೊಸ ಅನುಕೂಲವನ್ನು ಜಾರಿಗೆ ತರಲಾಗಿದೆ.

ಸರ್ಕಾರದ ಈ ಹೊಸ ಯೋಜನೆಯಿಂದ ಅಥವಾ ಅನುಕೂಲದಿಂದ ಇದೀಗ ರೈತರು

ತಮ್ಮ ಜಮೀನಿನ ಸುತ್ತಳತೆ ಎಷ್ಟು? ಅಥವಾ ವಿಸ್ತೀರ್ಣ ಎಷ್ಟು? ಹಾಗೂ ತಮ್ಮ ಜಮೀನಿನ ಪಹಣಿಯನ್ನು ಯಾವ ರೀತಿ ಡೌನ್ಲೋಡ್ ಮಾಡಿಕೊಳ್ಳಬೇಕು? ನಿಮ್ಮ ಜಮೀನಿನ ಚೆಕ್ ಬಂದಿ, ನಿಮ್ಮ ಜಮೀನಿನ ಸರ್ವೆ ನಂಬರ್ ಎಷ್ಟು? ಮತ್ತು ಅದರ ಸುತ್ತಮುತ್ತ ಯಾರ ಯಾರ ಜಮೀನಿದೆ?

ಎಂಬುದರ ಬಗ್ಗೆ ಇರುವ ಸಂಪೂರ್ಣ ವಿವರವನ್ನು ರೈತರು ಇದರಿಂದ ತಿಳಿದುಕೊಳ್ಳಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಭೂ ವರ್ಗಾವಣೆ ಅಥವಾ ಖರೀದಿ ಮಾಡಿಕೊಂಡ ರೈತರು ತಮ್ಮ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಪಡುತ್ತಿರುವ ಕಷ್ಟವನ್ನು ಅರಿತ ರಾಜ್ಯ ಸರ್ಕಾರ ರೈತರ ಜಮೀನು ಭೂ ಪರಿವರ್ತನೆಯಾದ ನಂತರ ಅದರ ಹಕ್ಕು ಪತ್ರವನ್ನು ಅಥವಾ ತಮ್ಮ ಹೆಸರಿಗೆ ಆದ ಪಹಣಿ ದಾಖಲೆಯನ್ನು ನೀಡುವುದು ತಡವಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇದನ್ನು ಓದಿರಿ : ನಿಮ್ಮ ಜಮೀನಿಗೂ ಬಂತು ಆಧಾರ್ ಕಾರ್ಡ್ ಲಿಂಕ್ ಹೊಲದ ಎಲ್ಲಾ ದಾಖಲೆಗಳು ಡಿಜಿಟಲ್ ರೂಪದಲ್ಲಿ ಲಭ್ಯ

ಭೂ ಪರಿವರ್ತನೆಗೊಂಡ ರೈತರ ಜಮೀನಿನ ಅದಕ್ಕೆ ಹಕ್ಕುಪತ್ರ ನೀಡಲು ಕೇವಲ ಏಳು ದಿನಗಳಲ್ಲಿ ಹಕ್ಕುಪತ್ರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಒಂದು ವೇಳೆ ಸಂಬಂಧಿತ ಅಧಿಕಾರಿಗಳು ಭೂ ಪರಿವರ್ತನೆಗೊಂಡ ರೈತರ ಜಮೀನಿನ ಹಕ್ಕು ಪತ್ರ ಅಥವಾ ಜಮೀನಿನ ಪಹಣಿ ದಾಖಲೆ ಪತ್ರ ಒದಗಿಸುವುದನ್ನು ತಡ ಮಾಡಿದರೆ ಅಧಿಕಾರಿಗಳು ಈ ಹಿಂದೆ ಕಟ್ಟುತ್ತಿದ್ದ 25 ರೂಪಾಯಿ ದಂಡವನ್ನು ಈಗ ಸುಮಾರು 2,500 ರೂಪಾಯಿಗಳಷ್ಟು ದಂಡವನ್ನು ಅಧಿಕಾರಿಗಳು ಕಟ್ಟಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಇತ್ತೀಚಿಗೆ ನಡೆದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಭೂ ಪರಿವರ್ತನೆಗೊಂಡ ರೈತರ ಹಕ್ಕು ಪತ್ರಗಳನ್ನು ಕಡಿಮೆ ಅವಧಿ ಒಳಗಾಗಿ ತಿದ್ದುಪಡಿ ಮಾಡಿಸಿ ರೈತರಿಗೆ ಅವರ ಜಮೀನಿನ ಹಕ್ಕು ಪತ್ರವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ನಿಮ್ಮ ಜಮೀನಿನ ಹಕ್ಕು ಪತ್ರಗಳನ್ನು ಪಡೆಯುವುದು ಹೇಗೆ?

ರೈತರು ತಮ್ಮ ಜಮೀನಿಗೆ ಸಂಬಂದಿಸಿದ ಯಾವುದೇ ತರಹದ ಸರ್ಕಾರಿ ದಾಖಲೆಗಳನ್ನು ಪಡೆದುಕೊಳ್ಳಲು ಅಥವಾ ನಿಮ್ಮ ಜಮೀನಿನ ಮಾಹಿತಿ ವಿವರಗಳನ್ನು ಪಡೆದುಕೊಳ್ಳಲು, ಈ ಕೆಳಗಿನಂತೆ ಓದುತ್ತಾ ಕೆಳಗೆ ತಿಳಿಸಿರುವ ಲಿಂಕ್ ನ ಸಹಾಯದಿಂದ ನಿಮ್ಮ ಹೊಲಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.

ಇದನ್ನು ಓದಿರಿ : ಭೂ ಸಿರಿ ಯೋಜನೆ ಅರ್ಹ ರೈತರ ಖಾತೆಗೆ 10,000 ಜಮಾ ಮಾಡಲಾಗಿದೆ ಎಂದು ಘೋಷಣೆ

ಸರ್ವೇ ನಂಬರನ್ನು ನಮೂದಿಸಿ ನಿಮ್ಮ ಹೊಲದ ಉತರ ನೋಡಿರಿ..👇🏻

ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಂತರ ನಿಮ್ಮ ಜಿಲ್ಲೆ,ತಾಲೂಕು,ಹೋಬಳಿ,ಹಾಗೂ ನಿಮ್ಮ ಹಳ್ಳಿಯನ್ನು, ಆಯ್ಕೆ ಮಾಡಿ ನಂತರ ಸರ್ವೆ ನಂಬರನ್ನು ನಮೂದಿಸಿದ ನಂತರ

• ನಿಮ್ಮ ಹೊಲದ ಸಂಪೂರ್ಣ ಉತಾರ (view land data )

• ನಿಮ್ಮ ಹೊಲದ ಸಂಪೂರ್ಣ ಬದಲಾವಣೆ (view mutation status of field)ಅನ್ನು ನೋಡಿರಿ

• ಕೊನೆಯದಾಗಿ ಹೊಲದ ಮೇಲೆ ಕೇಸ್ ಅಥವಾ ಜಗಳವಿದ್ದಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು (View dispute case information)ಅನ್ನು ಒತ್ತೀರಿ..

https://landrecords.karnataka.gov.in/service53/

ಗ್ರಾಮವಾರು ಮ್ಯುಟೇಷನ್ ಪ್ರಕ್ರಿಯೆಯಲ್ಲಿರುವ ಸರ್ವೇ ನಂಬರ್ , ವಹಿವಾಟಿನ ವಿವರ ಹಾಗು ಮ್ಯುಟೇಷನ್ ಸ್ಥಿತಿಯನ್ನು (Mutation status)ಇಲ್ಲಿ ವೀಕ್ಷಿಸಬಹುದು ಹಾಗು ಡೌನ್ಲೋಡ್ ಮಾಡಿ ಕೊಳ್ಳಬಹುದು👇🏻👇🏻

https://landrecords.karnataka.gov.in/service40/BhoomiPendencyReport

ನಿಮ್ಮ ಹೊಲಕ್ಕೆ ಸಂಬಂಧಿಸಿದ ಎಲ್ಲಾ ಸರ್ವೆ ಡಾಕ್ಯುಮೆಂಟ್ಸ್ (Survey Documents)ನೋಡಲು ಕೆಳಗಿನ ಲಿಂಕ್ ಮೇಲೆ ಒತ್ತಿರಿ ಚೆಕ್ ಮಾಡಿ👇🏻

https://bhoomojini.karnataka.gov.in/service35/

ನಿಮ್ಮ ಜಮೀನಿನ ಆಕರ ಬಂದ /ಚೆಕ್ ಬಂದಿ(akara banda)ನೋಡಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ 👇🏻

https://bhoomojini.karnataka.gov.in/service39/

ರೈತರು ವರ್ಗಾವಣೆಯಾದ ಜಮೀನನ್ನು ಅಥವಾ ತಾವು ಖರೀದಿ ಮಾಡಿದ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಬಹಳ ಕಷ್ಟ ಪಡುತ್ತಾರೆ. ಇದಕ್ಕಾಗಿ ಕೆಲವು ಅಧಿಕಾರಿಗಳಿಗೆ ಲಂಚವನ್ನು ಸಹ ನೀಡಬೇಕಾಗುತ್ತದೆ. ಕೆಲವೊಮ್ಮೆ ಲಂಚ ಕೊಟ್ಟರು ಭೂ ಪರಿವರ್ತನೆಯ ಹಕ್ಕು ಪತ್ರ ನೀಡುವುದಿಲ್ಲ. ಅದಕ್ಕಾಗಿ ರಾಜ್ಯ ಸರ್ಕಾರ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಹಲವು ರೈತರಿಗೆ ತಮ್ಮ ಜಮೀನಿನ ವರ್ಗಾವಣೆಯ ಹಕ್ಕು ಪತ್ರವನ್ನು ಕೇವಲ ಏಳೇ ದಿನದಲ್ಲಿ ಪಡೆಯಲು ತುಂಬಾ ಅನುಕೂಲವಾಗುತ್ತದೆ.

ಇದಿಷ್ಟು ಈ ಭೂ ಪರಿವರ್ತನೆಯ ಹಕ್ಕು ಪತ್ರದ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದೆ. ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯನ್ನು ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.

ಇದನ್ನು ಓದಿರಿ : ಕೇವಲ ಸರ್ವೇ ನಂಬರ್ ನಮೂದಿಸಿ ನಿಮ್ಮ ಖಾತೆಯ ಪುಸ್ತಕವನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ!

ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡುವ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿ ಇರಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕ್ ನ್ನು ಒತ್ತಿ 👇🏻https://chat.whatsapp.com/CatKjFMzi1f5uiEQn86AW0

Leave a Reply

Your email address will not be published. Required fields are marked *