ಪ್ರೀಯ ರೈತರೇ, ರಾಜ್ಯದ ಅನೇಕ ರೈತರು ಕೃಷಿಯಲ್ಲಿ ತಮ್ಮದೇ ಆದ ಒಂದು ಮೈಲುಗಲ್ಲನ್ನು ಸೃಷ್ಟಿಸಿದ್ದಾರೆ. ಅದೇ ರೀತಿಯಲ್ಲಿ ಇನ್ನೂ ಅನೇಕ ರೈತರು ಹೈನುಗಾರಿಕೆಯಲ್ಲಿ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ.
ಇದರಿಂದಾಗಿ ಮುಖ್ಯವಾಗಿ ಹೇಳಬೇಕೆಂದರೆ ರಾಜ್ಯ ಸರ್ಕಾರವು ಸಹ ರೈತರಿಗೆ ಅನುಕೂಲವಾಗಲೆಂದು ಹೈನುಗಾರಿಕೆ ಹೆಚ್ಚಿನ ಆದ್ಯತೆ ಅಥವಾ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಈದೀಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಕಿಸಾನ್ ಕ್ರೆಡಿಟ್ ಕಾರ್ಡ್’ (KCC) ಯೋಜನೆಯ ಅಡಿಯಲ್ಲಿ ರೈತರಿಗೆ ಪ್ರೋತ್ಸಾಹ ಧನವಾಗಿ 10,000 ರೂಪಾಯಿ ಹೆಚ್ಚಿನ ಹಣವನ್ನು ನೀಡಲು ಮುಂದಾಗಿದ್ದು, ಯಾವ ರೈತರು ಈ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೋ ಅಂತಹ ರೈತರಿಗೆ ಹೊಸದಾಗಿ ಜಾರಿಗೆ ತಂದ ಯೋಜನೆಯಾದ “ಭೂ ಸಿರಿ” ಎಂಬ ಯೋಜನೆ ಅಡಿಯಲ್ಲಿ ಸುಮಾರು 10,000 ರೂಪಾಯಿ ಗಳನ್ನು ಹೆಚ್ಚುವರಿಯಾಗಿ ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಈ ಹಣವು ರೈತರಿಗೆ ಬೀಜಗಳು, ರಸಗೊಬ್ಬರ, ಕೀಟನಾಶಕಗಳು ಮತ್ತು ಇತರ ಕೃಷಿ ವಸ್ತುಗಳನ್ನು ಖರೀದಿಸಲು ಅನುಕೂಲವಾಗುತ್ತದೆ.
ಇದನ್ನು ಓದಿರಿ: ಕೇವಲ ಸರ್ವೇ ನಂಬರನ್ನು ನಮೂದಿಸಿ ನಿಮ್ಮ ಖಾತೆಯ ಪುಸ್ತಕವನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ
ಈ ಯೋಜನೆ ಅಡಿಯಲ್ಲಿ ರೈತರಿಗೆ ಎಷ್ಟು ಲಕ್ಷದವರೆಗೆ ಸಾಲ ನೀಡಲು ಬರುತ್ತದೆ?
» ಅಕಾಲಿಕ ಮಳೆ ಪ್ರವಾಹ ಬರ ಬೆಳೆನಾಶ ಹೀಗೆ ನಾನಾ ಕಾರಣಗಳಿಂದ ಬೆಳೆದ ಬೆಳೆಗಳು ಹಾನಿಗಿಡಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂಥ ಸಂದರ್ಭಗಳಲ್ಲಿ ಉಂಟಾದ ನಷ್ಟಭರಿಸಲು ರೈತರು ಸಾಲ ಪಡೆಯುವುದು ಅನಿವಾರ್ಯ. ಇದನ್ನು ಮನಗಂಡ ಕೇಂದ್ರ ಸರ್ಕಾರ ರೈತರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಉದ್ದೇಶದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ.
» ಈ ಭೂ ಸಿರಿ ಯೋಜನೆ ಅಡಿ ರೈತರು ಗರಿಷ್ಠ 3 ಲಕ್ಷ ರೂ ತನಕ ಸಾಲ ಪಡೆಯಬಹುದು. ಈ ಸಾಲದ ಹಣವನ್ನು ರೈತ ಕೃಷಿಗೆ ಸಂಬಂಧಿಸಿದ ಸಾಮಗ್ರಿಗಳು ಅಂದರೆ ಬೀಜ ಗೊಬ್ಬರಗಳು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಹಾಗೂ ಇತರ ವೆಚ್ಚಗಳಿಗೆ ಬಳಸಬಹುದು.
ಇದನ್ನು ಓದಿ: ಆಧಾರ್ ನಂಬರ್ ಹಾಕಿ ಬೆಳೆ ಹಾನಿ ಸ್ಟೇಟಸ್ ಅನ್ನು ಮೊಬೈಲಿನಲ್ಲಿ ಚೆಕ್ ಮಾಡಿ
» ಈ ಯೋಜನೆ ಅಡಿಯಲ್ಲಿ ಇದರ ಸಾಲ ಹಾಗೂ ಹಣಕಾಸಿನ ನೆರವು ಪಡೆಯಲು ರೈತರು ಸೇರಿದಂತೆ ಗ್ರಾಮೀಣ ಪ್ರದೇಶದ ಗ್ರಾಹಕರು ತಮ್ಮ ಜಮೀನಿನ ಮಾಲೀಕತ್ವದ ದಾಖಲೆಗಳೊಂದಿಗೆ ಬ್ಯಾಂಕಿನ ಶಾಖೆಗೆ ಭೇಟಿ ನೀಡಬೇಕು. ಸಾಲಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಅದರ ವಿಲೇವಾರಿಗಾಗಿ 2 ರಿಂದ 4 ವಾರಗಳು ಬೇಕಾಗುತ್ತವೆ.
ರೈತರಿಗೆ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೆ ಏನು?
* ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ರೈತರು ಸುಮಾರು 1.6 ಲಕ್ಷರೂಪಾಯಿಗಳಿಂದ 3 ಲಕ್ಷರೂಪಾಯಿತನಕ ಸಾಲ ಪಡೆಯಬಹುದು.
* ಸಾಲ ಪಡೆದವರಿಗೆ ಅಪಘಾತ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯವಿದೆ.
* ಹಾಗೆನಾದರೂ ಅಪಘಾತದಿಂದ ಅಂಗವಿಕಲರು ಅಥವಾ ಮೃತ್ಯುವಾದರೆ 50,000 ರೂಪಾಯಿ ಹಾಗೂ ಇತರ ಸಂದರ್ಭದಲ್ಲಿ 25,000ರೂಪಾಯಿ ವಿಮೆ ಸೌಲಭ್ಯವನ್ನು ಒದಗಿಸಲಾಗುತ್ತದೆ.
* ಬ್ಯಾಂಕಿನಿಂದ ನಗದು ವಿತ್ ಡ್ರಾಗೆ ಪಾಸ್ ಬುಕ್ ನೀಡಲಾಗುತ್ತದೆ.
* 25,000 ರೂಪಾಯಿ ನಗದು ಮಿತಿಯೊಂದಿಗೆ ಚೆಕ್ ಬುಕ್ ವಿತರಿಸಲಾಗುತ್ತದೆ.
* ಈ ಯೋಜನೆ ಅಡಿಯಲ್ಲಿ ನೀಡಲಾಗುವ ಸಾಲದ ಹಣದಲ್ಲಿ ರೈತರು ತಮಗೆ ಬೇಕಾಗುವ ಬೀಜಗಳು, ರಸಾಯನಿಕಗಳ ಗೊಬ್ಬರಗಳು ಹಾಗೂ ಕೃಷಿ ಉಪಕರಣಗಳನ್ನು ಖರೀದಿಸಬಹುದು.
* ಈ ಯೋಜನೆ ಅಡಿಯಲ್ಲಿ ರೂಪೇ ಕ್ರೆಡಿಟ್ ಕಾರ್ಡ್ ಯನ್ನು ಕೂಡ ನೀಡಲಾಗುತ್ತದೆ. ಈ ಕಾರ್ಡ್ ಸೌಲಭ್ಯದ ಅಡಿಯಲ್ಲಿ 3 ವರ್ಷಗಳ ಅವಧಿಗೆ ಸಾಲವನ್ನು ನೀಡಲಾಗುತ್ತದೆ.
* ಉತ್ತಮ ಕ್ರೆಡಿಟ್ ಸ್ಕೋರ್ ಬಂದಿರುವ ರೈತರಿಗೆ ಕ್ರೆಡಿಟ್ ಮಿತಿ ಹೆಚ್ಚಳ ಮಾಡಲಾಗುತ್ತದೆ.
* ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ರೈತರಿಗೆ ಬಡ್ಡಿ ದರಗಳ ಮೇಲೆ ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ.
ಇದನ್ನು ಓದಿರಿ :ಪಿ ಎಂ ಕಿಸಾನ್ ಅನರ್ಹ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಯಾರಿಗೆ ಮುಂದಿನ ಕಂತಿನ ಹಣ ಬರುತ್ತದೆಯೋ ಅಥವಾ ಬರುವುದಿಲ್ಲ ಮೊಬೈಲ್ನಲ್ಲಿ ತಿಳಿಯಿರಿ
ಈ ಭೂ ಸಿರಿ ಯೋಜನೆಯ ಅಡಿಯಲ್ಲಿ ಲಾಭ ಪಡೆಯಲು ಅರ್ಜಿ ಸಲ್ಲಿಸುವುದು ಎಲ್ಲಿ? ಮತ್ತು ಹೇಗೆ?
ಈ ಯೋಜನೆ ಅಡಿಯಲ್ಲಿ ರೈತರಿಗೆ ನೀಡಲಾಗುವ ಕಿಸಾನ್ ಕ್ರೆಡಿಟ್ ಕಾರ್ಡಿಗೆ ಆನ್ ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ನೀವು ನಿಮ್ಮ ಬ್ಯಾಂಕ್ ನ ಅಪ್ಲಿಕೇಶನ್ ಅಥವಾ ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಇದಿಷ್ಟು ಭೂ ಸಿರಿ ಯೋಜನೆ ಅಡಿಯಲ್ಲಿ ರೈತರಿಗೆ ಪ್ರೋತ್ಸಾಹಧನವಾಗಿ 10,000ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡುವ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದ್ದು, ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಕೃಷಿ ವಾಹಿನಿ ಗ್ರೂಪನ್ನು ಸೇರಲು ಕೆಳಕಂಡ ಲಿಂಕ್ ಅನ್ನು ಒತ್ತಿ
https://chat.whatsapp.com/CatKjFMzi1f5uiEQn86AW0