ಆತ್ಮೀಯ ರೈತ ಬಾಂಧವರೇ ತಾವು ತಮ್ಮ ಮೊಬೈಲ್ ನಲ್ಲಿ ನಿಮ್ಮ ಪಹಣಿ ಪತ್ರದ ಅಥವಾ ನಿಮ್ಮ ಹೊಲದ ಖಾತೆ ಸಂಖ್ಯೆಯನ್ನು ಅಥವಾ ನಿಮ್ಮ ಹೆಸರಿನ ಖಾತೆ ಸಂಖ್ಯೆಯನ್ನು ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು. ತುಂಬಾ ಸುಲಭವಾಗಿ ಒಂದು ಸರ್ವೆ ನಂಬರ್ ಹಾಕಿ ನಿಮ್ಮ ಖಾತೆ ಅಥವಾ ಪಟ್ಟಾ ಪುಸ್ತಕ ಡೌಪ್ಲೋಡ್ ಮಾಡಿಕೊಳ್ಳಬಹುದು. ಬನ್ನಿ ನಾವು ನಿಮಗೆ ಯಾವ ರೀತಿ ಮೊಬೈಲಲ್ಲಿ ಡೌನ್ಹೋಡ್ ಮಾಡಿರೋದು ಇಲ್ಲಿ ನಿಮಗೆ ತಿಳಿಸಲಾಗುತ್ತದೆ. ನೀವು ಭೂಮಿಗೆ ಆಧಾರಿತ ಯಾವುದೇ ದಾಖಲೆಗಳು ಪಡೆಯಬೇಕಾದರೆ ಭೂಮಿ ಎಂಬ ಸರ್ಕಾರದ ಪೋರ್ಟಲ್ ಗೆ ಭೇಟಿನಿಡಬೇಕಾಗುತ್ತದೆ.ನಂತರ ನಿಮಗೆ ಬೇಕಾದ ದಾಖಲೆಗಳನ್ನು ನೀವು ಪಡೆದುಕೊಳ್ಳಬಹುದು.

ಇದನ್ನು ಓದಿರಿ: ರೈತರಿಗಾಗಿ ಕೀಟನಾಶಕಗಳು ಮತ್ತು ಗೊಬ್ಬರಗಳ ಮೇಲೆ ಸಬ್ಸಿಡಿ ಹೊಸ ಯೋಜನೆ ಜಾರಿಗೆ ತರಲಾಗಿದೆ..

ಮೊಬೈಲ್ ನಲ್ಲಿ ಖಾತೆ ಸಂಖ್ಯಾ ಅಥವಾ ಖಾತೆ ಪುಸ್ತಕವನ್ನು ಯಾವ ರೀತಿ ಸರ್ವೇ ನಂಬರ್ ಮೂಲಕ ತೆಗೆಯುವುದು??

ಸರ್ವೆ ನಂಬರ್ ಮೂಲಕ ನಿಮ್ಮ ಖಾತೆ ಪುಸ್ತಕವನ್ನು ನೀವು ಡೌಪ್ಲೋಡ್ ಮಾಡಿಕೊಳ್ಳಬೇಕಾದರೆ ಮೊದಲಿಗೆ ನೀವು ಈ ರೀತಿಯಾಗಿ ಮಾಡಬೇಕು ಮೊದಲಿಗೆ ನೀವು ಇಲ್ಲಿ ಕೆಳಗಡೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ ಒಂದು ಆಫೀಷಿಯಲ್ ವೆಬ್ಬೆಟ್ ತೆರೆದುಕೊಳ್ಳುತ್ತದೆ ನಂತರ

https://landrecords.karnataka.gov.in/Service64/

ಅಲ್ಲಿ ನಿಮಗೆ ಎರಡು ಪ್ರಮುಖ ಆಯ್ಕೆಗಳನ್ನು ನೀಡಲಾಗಿರುತ್ತದೆ. ನೀವು ನಿಮ್ಮ ಸರ್ವೇ ನಂಬರ್ ನ್ನು ನಮೂದಿಸುವ ಮೂಲಕ ಮುಂದಿನ ಆಯ್ಕೆ ಮಾಡಿಕೊಳ್ಳಿ ಇದಾದ ಮೇಲೆ ನಿಮಗೆ ಅಲ್ಲಿ ಇನ್ನೂ ಕೆಳಗಡೆ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ ಅದರಲ್ಲಿ ನೀವು ಮೊದಲಿಗೆ• ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು

• ನಂತರ ತಾಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು.

• ಅದಾದ ನಂತರ ಹೋಬಳಿ ಆಯ್ಕೆಯನ್ನು ಮಾಡಿಕೊಳ್ಳಬೇಕು.

ಕೊನೆಯದಾಗಿ ಇದಾದ ಮೇಲೆ ನಿಮ್ಮ ಊರನ್ನು ಆಯ್ಕೆಮಾಡಿಕೊಳ್ಳಿ ನಂತರ ಕೆಳಗಡೆ ಅಲ್ಲಿ “Go” ಇದರ ಮೇಲೆ ಕ್ಲಿಕಿಸಿದ ನಂತರ ಮತ್ತೆ ಕೆಳಗಡೆ ಆಯ್ಕೆಗಳು ಬರುತ್ತವೆ.

ಇದನ್ನು ಓದಿರಿ : ರೈತರಿಗೆ ನೀಡುವ ಬಡ್ಡಿ ರಹಿತ ಸಾಲದ ಮಿತಿಯನ್ನು ಮೂರು ಲಕ್ಷದಿಂದ 5 ಲಕ್ಷಕ್ಕೆ ಏರಿಸಲಾಗಿದೆ

ಇದರಲ್ಲಿ ನಿಮಗೆ ಮೊದಲಿಗೆ ಸರ್ವೆ ನಂಬರ್ ನಮೂದಿಸಲು ತಿಳಿಸುತ್ತದೆ ಇದಾದ ನಂತರ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ಸಬ್ ಹಿಸ್ಸಾ ನಂಬರ್ ನಿಮ್ಮದು ಇದ್ದರೆ ಅದನ್ನು ಆಯ್ಕೆ ಮಾಡಿಕೊಂಡು ನಂತರ “get report” ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಕೆಳಗಡೆ ಸರ್ವೇ ನಂಬರ್ ಮತ್ತು ನಿಮ್ಮ ಪಹಣಿ ಪತ್ರದ ಯಾರ ಹೆಸರಿನಲ್ಲಿದೆ ಅವರ ಹೆಸರು ಮತ್ತು ಎಷ್ಟು ವಿಸ್ತೀರ್ಣ ಹೊಂದಿದೆ ಮತ್ತು ಖಾತೆ ಸಂಖ್ಯೆಯನ್ನು ನಿಮಗೆ ಅಲ್ಲಿ ತೋರಿಸುತ್ತದೆ. ಇದು ಬಾಕ್ಸ್ ನಲ್ಲಿ ಇರುವುದರಿಂದ ನೀವು ಮೊದಲಿಗೆ ಬಾಕ್ಸ್ ನಲ್ಲಿ “Select ” ಇದರ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮಗೆ ಇನ್ನೂ ಅಂದರೆ ಖಾತೆ ಪುಸ್ತಕವನ್ನು ಡೌಪ್ಲೋಡ್ ಮಾಡಿಕೊಳ್ಳಿ ಅಥವಾ ಪೇಮೆಂಟ್ ಮೂಲಕ ಡೌಪ್ಲೋಡ್ ಮಾಡಿಕೊಳ್ಳಲು ನಿಮಗೆ ತೋರಿಸುತ್ತದೆ ಅದರಲ್ಲಿ ನೀವು “only for view” ಆಯ್ಕೆ ಮಾಡಿಕೊಂಡು, ನಂತರ ನಿಮಗೆ ಒಂದು ಪಿಡಿಎಫ್ ಫೈಲ್ ಡೌನ್ಲೋಡ್ ಆಗುತ್ತದೆ.ಇದು ನಿಮಗೆ ಸರ್ಕಾರದಿಂದ ನೀಡಿರುವ ಖಾತೆ ಪತ್ರ ಅಥವಾ ಪಟ್ಟ ಪುಸ್ತಕದ ಪ್ರತಿ ಆಗಿರುತ್ತದೆ.

ಇದನ್ನು ಓದಿರಿ: ಪಿ ಎಂ ಕಿಸಾನ್ ಅನರ್ಹ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಯಾರಿಗೆ ಹಣ ಜಮಾ ಆಗುತ್ತದೆಯೋ ಆಗುವುದಿಲ್ಲ ಮೊಬೈಲ್ನಲ್ಲಿ ತಿಳಿಯಿರಿ

ಹೆಚ್ಚಿನ ಕೃಷಿ ಸಂಬಂಧಿತ ಯೋಜನೆಗಳು ಮತ್ತು ಮಾಹಿತಿಗಾಗಿ ಕೃಷಿ ವಾಹಿನಿ ಜಾಲ ತಾಣದ ಸಂಪರ್ಕದಲ್ಲಿರಿ..

ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻👇🏻

https://chat.whatsapp.com/CatKjFMzi1f5uiEQn86AW0

Leave a Reply

Your email address will not be published. Required fields are marked *