ಪ್ರಿಯ ರೈತರೇ, ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ರೈತರಿಗೆ ಮುಖ್ಯಮಂತ್ರಿಗಳು ಇತ್ತೀಚಿಗೆ ಮಂಡಿಸಿದ ಬಜೆಟ್ ನಲ್ಲಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಎಲ್ಲಾ ರೈತರಿಗೂ ಸಾಮಾನ್ಯವಾಗಿ ನೀಡುವ ಬಡ್ಡಿ ರಹಿತ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಳ ಅಥವಾ ವಿಸ್ತರಣೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಬಜೆಟ್ 2023ನಲ್ಲಿ ಮಂಡಿಸಿದ್ದಾರೆ. ಆದರೆ ಈ ಹೊಸ ಯೋಜನೆಯು ರೈತರಿಗೆ ಬಹಳ ಅತ್ಯಂತ ಗೊಂದಲವನ್ನು ಉಂಟು ಮಾಡುತ್ತಿದೆ. ಈದೀಗ ಸೊಸೈಟಿಗಳಲ್ಲಿ ಅಥವಾ ಸಹಕಾರ ಸಂಘಗಳಲ್ಲಿ ಅಧಿಕಾರಿಗಳು ಸಾಲವನ್ನು ನೀಡಲು ಹಿಂದೆ ಸರಿಯುತ್ತಿದ್ದಾರೆ. ಈ ಸಾಲವನ್ನು ಯಾವ ಯಾವ ರೈತರಿಗೆ ನೀಡಲಾಗುತ್ತದೆ? ಅದಕ್ಕೆ ಇರಬೇಕಾದ ಅರ್ಹತೆಗಳೇನು? ಮತ್ತು ಈ ಸಾಲದ ಮಿತಿ ಹೆಚ್ಚಳ ಮಾಡಿರುವ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಬಜೆಟ್ 2023- ರೈತರಿಗೆ ಸಿಗುವ ಎಲ್ಲಾ ಹೊಸ ಯೋಜನೆಗಳ ಬಗ್ಗೆ ತಿಳಿಯಿರಿ.
ಯಾವ ಯಾವ ರೈತರಿಗೆ 5 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ?
» ಮೊದಲಿಗೆ, ಈಗಾಗಲೇ ರೈತರು ಸಾಲವನ್ನು ಅಂದರೆ ಬೇರೆ ಬ್ಯಾಂಕುಗಳಿಂದ ಅಂದರೆ ಡಿಸಿಸಿ ಮತ್ತು ಸೊಸೈಟಿ ಬ್ಯಾಂಕುಗಳು ಹೊರತುಪಡಿಸಿ ಯಾವುದೇ ಬ್ಯಾಂಕುಗಳಿಂದ ಸಾಲವನ್ನು ತೆಗೆದುಕೊಂಡುದಲ್ಲಿ ಅಂತಹ ರೈತರಿಗೆ ಈ ಸಾಲವನ್ನು ನೀಡಲು ಬರುವುದಿಲ್ಲ.
» ನೀವೇನಾದರೂ ಮೊದಲ ಬಾರಿಗೆ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ ನಿಮಗೆ ಅಂದರೆ ನಿಮ್ಮ ಊರಿನ ಅಥವಾ ನಿಮಗೆ ಸಂಭಂದಪಟ್ಟ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಪ್ರತಿ ಎಕರೆಗೆ 60 ಸಾವಿರ ರೂಪಾಯಿಯಂತೆ ಕನಿಷ್ಠ 2 ಹೆಕ್ಟರ್ ಪ್ರದೇಶ ಅಥವಾ ಜಮೀನಿಗೆ ಅಂದರೆ 5 ಎಕರೆಗಳ ವರೆಗೆ ಸುಮಾರು 3 ಲಕ್ಷ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡುವುದಾಗಿ ಈಗಾಗಲೇ ಘೋಷಣೆ ಮಾಡಿದ್ದು, ಇದೀಗ ರಾಜ್ಯ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಅಥವಾ ಬಡ್ಡಿ ರಹಿತ ನೀಡುವ ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ ಈಗ 5ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಸ್ತ್ರೀ ಶಕ್ತಿ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ- ಭೂ ರಹಿತ ಮಹಿಳಾ ಕಾರ್ಮಿಕರಿಗೆ ತಿಂಗಳಿಗೆ 500 ರೂ
ರೈತರು ಯಾವ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಬಹುದು?
» ಬಹು ಮುಖ್ಯವಾಗಿ ಕೃಷಿ ಇಲಾಖೆಗೆ ಸಂಬಂಧಪಟ್ಟಂತ ಪ್ರಮುಖ ಡಿ ಸಿ ಸಿ ಬ್ಯಾಂಕ್ ಹಾಗೂ ನಿಮಗೆ ಹತ್ತಿರದ, ನಿಮಗೆ ಸಂಭಂದಪಟ್ಟ ಅಥವಾ ನಿಮ್ಮ ಊರಿನ ಕೃಷಿ ಪತ್ತಿನ ಸಹಕಾರಿ ಸಂಘಗಳು ಇನ್ನು ಮುಂದೆ ಐದು ಲಕ್ಷದವರೆಗೆ ಗರಿಷ್ಠ ಮಿತಿ ಸಾಲವನ್ನು ನೀಡಲಿವೆ ಎಂದು ತಿಳಿಸಿದ್ದಾರೆ.
» ಕರ್ನಾಟಕ ಬಜೆಟ್ 2023 ನಲ್ಲಿ ಘೋಷಣೆ ಮಾಡಿರುವುದರಿಂದ ಇದು ಚಲಾವಣಗೆ ಅಥವಾ ಕಾರ್ಯ ರೂಪಕ್ಕೆ ಬರಬೇಕಾದರೆ ಒಂದರಿಂದ ಎರಡು ತಿಂಗಳು ಅವಧಿ ತೆಗೆದುಕೊಳ್ಳುತ್ತದೆ. ಇದರ ಬಗ್ಗೆ ಇನ್ನು ಸಂಪೂರ್ಣ ವಿವರವಾದ ಮತ್ತು ನಿಖರವಾದ ಮಾಹಿತಿ ದೊರೆತಿಲ್ಲ.
» ಇದಾದ ನಂತರ ರೈತರು ಬ್ಯಾಂಕ್ ಅಥವಾ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸಾಲ ತೆಗೆದುಕೊಂಡ ನಂತರ ತೆಗೆದುಕೊಂಡ ಸಾಲವನ್ನು ನಿಗದಿತ ಸಮಯದ ಒಳಗಡೆ ಮರುಪಾವತಿ ಮಾಡದಿದ್ದಲ್ಲಿ ಎಷ್ಟು ದಂಡ ಬೀಳುತ್ತದೆ ಎಂಬುದರ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಸಿಕ್ಕಿಲ್ಲ. ಈ ಹೊಸ ಯೋಜನೆ ಬಗ್ಗೆ ಏನಾದರೂ ಸಂಪೂರ್ಣ ನಿಕರವಾದ ಮಾಹಿತಿ ತಿಳಿದುಬಂದರೆ ನಾವು ನಿಮಗೆ ತಿಳಿಸುತ್ತೇವೆ.
» ಆದರೆ ಸರ್ಕಾರವು ರೈತರಿಗೆ ನೀಡುವ ಶೂನ್ಯ ಬಡ್ಡಿದರ ಅಥವಾ ಬಡ್ಡಿ ರಹಿತ ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಕೆ ಮಾಡಿರುವುದಂತೂ ಸತ್ಯ.
ಇದರ ಜೊತೆಗೆ ರಾಜ್ಯದ ಮುಖ್ಯಮಂತ್ರಿಗಳು ಇತ್ತೀಚಿಗೆ ಮಂಡಿಸಿದ ಕರ್ನಾಟಕ ಬಜೆಟ್ 2023 ನಲ್ಲಿ ಇನ್ನೂ ಹಲವಾರು ಹೊಸ ಹೊಸ ಯೋಜನೆಗಳಿಗೆ ಅನುದಾನಗಳನ್ನು ಘೋಷಣೆ ಮಾಡಿದ್ದಾರೆ.
ಆಧಾರ್ ನಂಬರ್ ಹಾಕಿ ಬೆಳೆ ಹಾನಿ ಸ್ಟೇಟಸ್ ಅನ್ನು ಮೊಬೈಲಿನಲ್ಲಿ ಚೆಕ್ ಮಾಡಿ
ರೈತರ ಆದಾಯವನ್ನು ಹೆಚ್ಚಿಸುವ ಅಥವಾ ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಒಕ್ಕಲುತನದ ಹಂತದಲ್ಲಿಯೂ ರೈತರಿಗೆ ಬೆಂಗಾವಲಾಗಿ ಅವರ ಹಿಂದೆ ನಿಂತು ಪ್ರೋತ್ಸಾಹವನ್ನು ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ದಾಖಲೆ ಪ್ರಮಾಣದ ರಾಗಿ ಖರೀದಿ, ಕುಚ್ಚಲಕ್ಕಿ ಖರೀದಿಗೆ ಅವಕಾಶ ಒದಗಿಸುವುದರೊಂದಿಗೆ ಪ್ರವಾಹ ಸಂದರ್ಭದಲ್ಲಿ ಎನ್‌ಆರ್‌ಡಿಎಫ್ ಪರಿಹಾರ ಧನದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಪರಿಹಾರವನ್ನು ದಾಖಲೆ ಅವಧಿಯಲ್ಲಿ ವಿತರಿಸಲಾಗಿದೆ .
ದನ ಕರುಗಳಿಗೆ ಚರ್ಮಗಂಟು ರೋಗಬಾಧೆ ಸಂಭವಿಸಿದ ಸಂಧರ್ಭದಲ್ಲೂ ಕೂಡ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿದೆ . ರೈತರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವುದನ್ನು ಉತ್ತೇಜಿಸಲು ಪ್ರಾರಂಭಿಸಲಾದ ರೈತ ವಿದ್ಯಾನಿಧಿ ಯೋಜನೆಯನ್ನು ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ ಚಾಲಕರು, ಆಟೋ ರಿಕ್ಷಾ ಚಾಲಕರ ಮಕ್ಕಳಿಗೂ ಸಹ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಇದಿಷ್ಟು ಶೂನ್ಯ ಬಡ್ಡಿದರ ಅಥವಾ ಬಡ್ಡಿ ರಹಿತವಾಗಿ ರೈತರಿಗೆ ನೀಡುವ ಸಾಲದ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಳ ಮಾಡಿರುವ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದ್ದು, ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ಕೃಷಿ ವಾಹಿನಿ ಗ್ರೂಪ್ ಸೇರಲು ಕೆಳಕಂಡ ಲಿಂಕನ್ನು ಒತ್ತಿ