ನಮಸ್ಕಾರ ಪ್ರಿಯ ರೈತರೇ, ಇತ್ತೀಚಿಗಷ್ಟೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ್ ಬೊಮ್ಮಾಯಿಯವರು “ಕರ್ನಾಟಕ ಬಜೆಟ್-2023″ ಅನ್ನು ಯಾವುದೇ ಅಡೆತಡೆ ಇಲ್ಲದೆ ಸುಸೂತ್ರವಾಗಿ ಬಜೆಟನ್ನು ಮಂಡಿಸಿದ್ದಾರೆ. ಇದರಲ್ಲಿ ಹಲವು ಕ್ಷೇತ್ರಗಳಿಗೆ ಅವುಗಳಿಗೆ ತಕ್ಕಂತೆ ಅನುದಾನವನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಬಜೆಟ್ ನಲ್ಲಿ ಮಹಿಳೆಯರಿಗೆ, ಕೃಷಿಕರಿಗೆ ಅಥವಾ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತಹ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮುಖ್ಯಮಂತ್ರಿ ಅವರು ಎಲ್ಲಾ ವರ್ಗದ ಜನರಿಗೂ ಉಪಯೋಗವಾಗುವಂತಹ ಯೋಜನೆಗಳನ್ನು ಮಂಡಿಸಿದ್ದಾರೆ. ಈ ವರ್ಷದ ಬಜೆಟ್ ನಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಈ ವರ್ಷದ ಬಜೆಟ್ ನಲ್ಲಿ ಕೃಷಿಗೆ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಯಾವ ಯಾವ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ?
ಎಂಬುದರ ಬಗ್ಗೆ ಇರುವ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಈ ವರ್ಷದ ರಾಜ್ಯ ಬಜೆಟ್ ನಲ್ಲಿ ಕೃಷಿಗೆ ಸಂಬಂಧಿಸಿದಂತೆ ಮಂಡಿಸಿದ ಹೊಸ ಯೋಜನೆಗಳು ಮತ್ತು ಅವುಗಳಿಗೆ ನೀಡುವ ಅನುದಾನಗಳನ್ನು ನೋಡುವುದಾದರೆ,
ಆಧಾರ್ ನಂಬರ್ ಹಾಕಿ ಬೆಳೆ ಹಾನಿ ಸ್ಟೇಟಸ್ ಜಮಾ ಆಗಿದೆ ಚೆಕ್ ಮಾಡಿ
» ಕರ್ನಾಟಕ ರಾಜ್ಯದ ಹಲವು ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ಭದ್ರತೆಯನ್ನು ಒದಗಿಸಲು ಸುಮಾರು 180 ಕೋಟಿ ರೂಪಾಯಿ ವೆಚ್ಚದಲ್ಲಿ “ಜೀವನ್ ಜ್ಯೋತಿ ವಿಮಾ” ಯೋಜನೆಯನ್ನು ಜಾರಿಗೆ ತರಲಾಗಿದೆ.
» “ಸಹ್ಯಾದ್ರಿ ಸಿರಿ” ಎಂಬ ಯೋಜನೆ ಅಡಿಯಲ್ಲಿ ಮಲ್ನಾಡು ಪ್ರದೇಶದಲ್ಲಿ ಬೀಳುವ ಮಳೆಯ ನೀರಿನ ಸಂಗ್ರಹಣೆಗಾಗಿ ಕೆರೆ, ಬಾವಿ ಹಾಗೂ ಅಣೆಕಟ್ಟುಗಳ ಅಭಿವೃದ್ಧಿಗೆ 75 ಕೋಟಿ ರೂಪಾಯಿ ಅನುದಾನ ನೀಡಿದೆ.
» ರೈತರಿಗೆ ಸಹಾಯವಾಗಲು, ಅತ್ಯಾಧುನಿಕ ಯಂತ್ರೋಪಕರಣಗಳನ್ನು ರೈತರಿಗೆ ನೀಡಲು “ಕೃಷಿ ಯಂತ್ರದಾರೆ” ಯೋಜನೆ ಅಡಿಯಲ್ಲಿ ಸುಮಾರು 50 ಕೋಟಿ ಅಷ್ಟು ಅನುದಾನವನ್ನು ಮೀಸಲಿಡಲಾಗಿದೆ.
» ರೈತರು ಸಾಲ ತೆಗೆದುಕೊಳ್ಳಲು ಉಪಯೋಗವಾಗುವಂತಹ “ಕಿಸಾನ್ ಕ್ರೆಡಿಟ್ ಕಾರ್ಡ” ಹೊಂದಿದಂತಹ ರೈತರಿಗೆ “ಭೂ ಸಿರಿ” ಯೋಜನೆ ಅಡಿ 10,000 ರೂಪಾಯಿಗಳವರೆಗೆ ಸಹಾಯಧನವನ್ನು ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವುದು.
» ಈ ಹಿಂದೆ ಬ್ಯಾಂಕ್ ನಲ್ಲಾಗಲಿ ಅಥವಾ ಸಹಕಾರ ಸಂಘಗಳಲ್ಲಾಗಲಿ ರೈತರಿಗೆ ನೀಡುತ್ತಿದ್ದ ಬಡ್ಡಿ ರಹಿತ ಸಾಲವನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
» ರಾಜ್ಯದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವ ರೈತ ಸಂಘ ಸಂಸ್ಥೆಗಳಿಗೆ 10 ಲಕ್ಷವರೆಗೆ ಬಂಡವಾಳವನ್ನು ನೀಡಲಾಗುವುದು. ಈ ನೀಡಿದಂತಹ ಬಂಡವಾಳಕ್ಕೆ 5 ವರ್ಷದವರೆಗೆ ಬಡ್ಡಿಯಲ್ಲಿ ಸಬ್ಸಿಡಿಯನ್ನು ನೀಡಲಾಗುವುದೆಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
» ಅರ್ಹ ರೈತರ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು “ಜಲನಿಧಿ” ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ.
» ರಾಜ್ಯದಲ್ಲಿರುವ ರೈತ ಮಹಿಳೆಯರ ಕೋಳಿ ಸಾಕಾಣಿಕೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸುಮಾರು 3.33 ಲಕ್ಷ ಕೋಳಿ ಮರಿಗಳನ್ನು ಈ ವರ್ಷದ ಸಾಲಿನಲ್ಲಿ ವಿತರಿಸಲಾಗುವುದು.
» ರಾಜ್ಯದಲ್ಲಿ ಸಿರಿಧಾನ್ಯ ಉತ್ಪಾದನೆ ಹೆಚ್ಚಿಸಲು ಪ್ರತಿ ಸಿರಿಧಾನ್ಯ ಬೆಳೆಗಾರರಿಗೆ ಸುಮಾರು 10,000 ರೂಪಾಯಿ ಸಹಾಯದನವನ್ನು “ರೈತ ಸಿರಿ” ಎಂಬ ಯೋಜನೆ ಅಡಿ ನೀಡಲಾಗುವುದು.
» ಚರ್ಮ ಗಂಟು ರೋಗದಿಂದ ಮೃತಪಟ್ಟ ದನ ಕುರುಗಳ ಮಾಲಿಕರಿಗೆ ಪರಿಹಾರವಾಗಿ ಸುಮಾರು 55 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.
» ದನ ಕರುಗಳ ರಕ್ಷಣೆಗಾಗಿ ಗೋಶಾಲೆ ನಿರ್ಮಾಣ, ಪುಣ್ಯಕೋಟಿ ದತ್ತು ಯೋಜನೆ ಹಾಗೂ ಸುಮಾರು 290 ಸಂಚಾರಿ ಪಶು ಚಿಕಿತ್ಸಾಲಯಗಳನ್ನು ಪ್ರಾರಂಭಿಸುವುದು.
» ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ರಫ್ತು ಹಾಗೂ ಸಂಸ್ಕರಣೆಗೆ ಸುಮಾರು 100 ಕೋಟಿ ರೂಪಾಯಿ ಅನುದಾನವನ್ನು “ರೈತ ಸಂಪದ” ಯೋಜನೆ ಅಡಿ ಎತ್ತಿಡಲಾಗಿದೆ.
» ಸುಮಾರು 355 ಕೋಟಿ ರೂಪಾಯಿ ಅನುದಾನದಲ್ಲಿ ಅರ್ಹ ಫಲಾನುಭವಿಗಳಿಗೆ ಕುರಿ ಅಥವಾ ಮೇಕೆ ಘಟಕ ನಿರ್ಮಾಣ ಮಾಡುವುದು.
» ಸರ್ಕಾರವು ರೈತರಿಂದ ತೆಗೆದುಕೊಳ್ಳುವ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಮಾಡುವ ಧಾನ್ಯಗಳಿಗೆ ಸ್ಥಳದಲ್ಲೇ ಪಾವತಿ ಮಾಡಲು ಮೀಸಲಿಟ್ಟ ಹಣದಲ್ಲಿ ಏರಿಕೆ ಮಾಡಲಾಗಿದೆ.
» ತೀರ್ಥಹಳ್ಳಿ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ ಅಡಿಕೆ ಬೆಳೆಯ ರೋಗನಿರ್ವಣೆ ಹಾಗೂ ತಂತ್ರಜ್ಞಾನ ಅಭಿವೃತ್ತಿಗೆ ಸುಮಾರು 10 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ.
» ರಾಜ್ಯದಲ್ಲಿರುವ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲು ಹಾಗೂ ಮಾರಾಟದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಇ-ನಗದು ಮತ್ತು ಇ-ಹರಾಜು ಪ್ರಕ್ರಿಯೆಯನ್ನು ಜಾರಿಗೆ ತರುವುದು.
» ಬೆಂಗಳೂರು ಮತ್ತು ಹಾವೇರಿ ಜಿಲ್ಲೆಯಲ್ಲಿ ಆಧುನಿಕ ಸಣ್ಣ ಹೂವಿನ ಮಾರುಕಟ್ಟೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೂವಿನ ಮಾರುಕಟ್ಟೆಯನ್ನು ಸ್ಥಾಪಿಸುವುದು.
» ಶಿಡ್ಲಗಟ್ಟ ತಾಲೂಕಿನಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ಸುಮಾರು 75 ಕೋಟಿ ರೂಪಾಯಿಯಷ್ಟು ಅನುದಾನವನ್ನು ಮಂಜೂರು ಮಾಡಲಾಗಿದೆ.
» ರೇಷ್ಮೆ ಉದ್ಯಮವನ್ನು ಅಭಿವೃದ್ಧಿ ಪಡಿಸಲು ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ 32 ಸ್ವಯಂ ಚಾಲಿತ ರೀಲಿಂಗ್ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು.
ಇದಿಷ್ಟು ಕರ್ನಾಟಕ ಬಜೆಟ್ 2023 ನಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂದಿಸಿದ ಚಟುವಟಿಕೆಗಳಿಗೆ ಮಂಡಿಸಿದ ಹೊಸ ಯೋಜನೆ ಮತ್ತು ಅನುದಾನಗಳ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದೆ.
ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ ನಮ್ಮ ಗ್ರೂಪ್ ಅನ್ನು ಸೇರಲು ಕೆಳಕಂಡ ಲಿಂಕನ್ನು ಒತ್ತಿ 👇🏻
https://chat.whatsapp.com/CatKjFMzi1f5uiEQn86AW0