ಪ್ರಿಯ ರೈತರೇ, ಕೇಂದ್ರ ಸರ್ಕಾರದಿಂದ ರೈತರಿಗೆ ಹೊಸ ಸಿಹಿ ಸುದ್ದಿಯೊಂದು ಬಂದಿದೆ. ಸರ್ಕಾರವು ರೈತರಿಗೆ ಹಸು, ಎಮ್ಮೆ ಹಾಗೂ ದನಕರುಗಳನ್ನು ಖರೀದಿ ಮಾಡಲು ಸಹಾಯದನ ನೀಡುವ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಹೈನುಗಾರಿಕೆಯಲ್ಲಿ ಅಭಿವೃದ್ಧಿ ಹೊಂದಲು, ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ಇತರೇ ಕಾರ್ಯಗಳಿಂದ ಕೃಷಿಯಲ್ಲಿ ಆದಾಯ ಹೆಚ್ಚಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಸಂಭಂಧಿಸಿದಂತೆ ಇರುವ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು? ಅದನ್ನು ಪಡೆದುಕೊಳ್ಳುವುದು ಹೇಗೆ? ಅದಕ್ಕೆ ಬೇಕಾಗುವ ದಾಖಲೆಗಳೇನು? ಇವೆಲ್ಲುವುದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ಪಿಎಂ ಕಿಸಾನ್ ಸರ್ಕಾರದಿಂದ ಅನರ್ಹ ಪಟ್ಟಿ ಬಿಡುಗಡೆ ಮಾಡಿದೆ ಯಾರಿಗೆ ಹಣ ಬರುತ್ತದೆ ಬರುವುದಿಲ್ಲ ಎಂದು ತಿಳಿಯಿರಿ!!

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು?

ಕಿಸಾನ್ ಕ್ರೆಡಿಟ್ ಎಂದರೆ ಕೇಂದ್ರ ಸರ್ಕಾರವು ರೈತರಿಗೆ ಸಹಾಯವಾಗಲೆಂದು ಜಾರಿಗೆ ತಂದಿರುವ ಯೋಜನೆಯಾಗಿದೆ.

ಈ ಕಾರ್ಡ್ ನಿಂದ ರೈತರು ಸುಲಭವಾಗಿ ಕೃಷಿ ಸಾಲಗಳನ್ನು ಪಡೆಯಬಹುದು. ರೈತರು ಕೃಷಿಗೆ ಸಂಭಂದಿಸಿದ ಯಾವುದೇ ತರಹದ ಕೃಷಿ ಯಂತ್ರೋಪಕರಣಗಳು, ದನ ಕರುಗಳು, ಕೃಷಿ ಪರಿಕರಗಳು ಹಾಗೂ ಬೀಜ ಮತ್ತು ರಸಗೋಬ್ಬರಗಳನ್ನು ಖರೀದಿ ಮಾಡಲು ಈ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಳ್ಳಬಹುದು. ಈ ಯೋಜನೆ ಅಡಿಯಲ್ಲಿ ಅರ್ಹ ರೈತರು ಸುಮಾರು 75 ಸಾವಿರ ರೂಪಾಯಿಗಳವರೆಗೆ 3 ವರ್ಷಗಳಿಗೆ ಸಾಲವನ್ನು ಪಡೆದುಕೊಳ್ಳಬಹುದು. ಸಾಲವನ್ನು ಯಾವುದಾದರೂ ನಿಗದಿಪಡಿಸಿದ ಸಂಸ್ಥೆಗಳಿಂದ ಕಡಿಮೆ ಕಂತಿನಲ್ಲಿ ನೀಡಲಾಗುವುದು.

ರೈತರು ಈ ಪಶು ಕಿಸಾನ್ ಕ್ರೆಡಿಟ್ ನ ಸಹಾಯದಿಂದ ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಸರ್ಕಾರದಿಂದ ಸಬ್ಸಿಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳೇನು?

ಈ ಯೋಜನೆ ಅಡಿಯಲ್ಲಿ ಕಾರ್ಡ್ ಪಡೆಯಲು ರೈತರು,

» ಅರ್ಜಿದಾರರ ಗುರುತಿನ ಚೀಟಿ

» ಚಾಲನಾ ಪರವಾನಗಿ

» ಪಾಸ್ ಪೋರ್ಟ್

» ಬ್ಯಾಂಕ ಪಾಸ್ ಬುಕ್

» ಆಧಾರ್ ಕಾರ್ಡ್

» ಪಾನ್ ಕಾರ್ಡ್

» ವಿಳಾಸ ಮತ್ತು ಗುರುತಿನ ಪುರಾವೆ

» ಅರ್ಜಿ ನಮೂನೆ

» ಜಾತಿ ಪ್ರಮಾಣ ಪತ್ರ

» ಆದಾಯ ಪ್ರಮಾಣ ಪತ್ರ

ಈ ಮೇಲೆ ಹೇಳಿದ ಎಲ್ಲಾ ದಾಖಲೆಗಳನ್ನು ರೈತರು ಹೊಂದಿರಬೇಕು.

ಪಶು ಕಿಸಾನ್ ಕ್ರೆಡಿಟ್ ಪಡೆಯಲು ಅರ್ಜಿಗಳನ್ನು ಎಲ್ಲಿ ಸಲ್ಲಿಸಬೇಕು?

* ಈ ಯೋಜನೆ ಅಡಿ ಪಶು ಕಿಸಾನ್ ಕಾರ್ಡ್ ಪಡೆಯಲು ಮೊದಲು ಅರ್ಜಿದಾರರು ನಿಮಗೆ ಹತ್ತಿರದ ಅಥವಾ ನಿಮಗೆ ಸಂಭಂದಪಟ್ಟ ಬ್ಯಾಂಕಿಗೆ ಭೇಟಿ ನೀಡಿ “ಅರ್ಜಿ ನಮೂನೆ“ಯನ್ನು ಕೇಳಬೇಕು.

* ಅರ್ಜಿಯನ್ನು ಸರಿಯಾಗಿ ತುಂಬಿದ ನಂತರ ಮೊದಲೇ ಮೇಲೆ ಹೇಳಿದ ಎಲ್ಲ ದಾಖಲೆಗಳನ್ನು ಮತ್ತು ಕೆಲವು KYC ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

* ಬ್ಯಾಂಕಿನಲ್ಲಿ ಅಧಿಕಾರಿಗಳು ನಿಮ್ಮ ಕೆಲಸದ ಆರ್ಥಿಕತೆ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನೀಡುವರು.

* ಇದರಿಂದ ನೀವು ಬ್ಯಾಂಕಿನಲ್ಲಿ ಹಸು ಅಥವಾ ಎಮ್ಮೆಯನ್ನು ಕೊಂಡುಕೊಳ್ಳುವುದಕ್ಕೆ ಸಬ್ಸಿಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಇದಿಷ್ಟು ಹಸು ಅಥವಾ ಎಮ್ಮೆಯನ್ನು ಕೊಂಡುಕೊಳ್ಳುವುದಕ್ಕೆ ಇರುವ “ಪಶು ಕಿಸಾನ್ ಕ್ರೆಡಿಟ್ ಕಾರ್ಡ್” ಯೋಜನೆ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದ್ದು, ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.

ಆಧಾರ್ ನಂಬರ್ ಹಾಕಿ ಬೆಳೆ ಹಾನಿ ಪರಿಹಾರ ಬಂದಿದೆ ಇಲ್ಲವೋ ಮೊಬೈಲ್ ನಲ್ಲಿ ಚೆಕ್ ಮಾಡಿ

ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ..

ಕೃಷಿ ವಾಹಿನಿ ಗ್ರೂಪ್ಸ್ ಸೇರಲು ಕೆಳಗನ ಲಿಂಕ್ ಅನ್ನು ಒತ್ತಿ 👇🏻👇🏻

Leave a Reply

Your email address will not be published. Required fields are marked *