Pm kisan yojana: ಆತ್ಮೀಯ ರೈತ ಬಾಂಧವರೇ ಪಿಎಂ ಕಿಸಾನ್ 13ನೇ ಕಂತಿನಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ ಹಾಗೂ 13ನೇ ಕಂತಿನ ಹಣವನ್ನು ಫೆಬ್ರವರಿ ತಿಂಗಳ ಕೊನೆಯೊಳೆಗೆ ರೈತರ ಖಾತೆಗೆ ಜಮೆ ಮಾಡುವ ಎಲ್ಲಾ ಸಾಧ್ಯತೆ ಇದೆ.ಪ್ರಸ್ತುತ ಅನರ್ಹ ಫಲಾನುಭವಿಗಳ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಲಾಗಿದೆ. ಇದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇಂದು ತಿಳಿದುಕೊಳ್ಳನ.
ಪಿಎಂ ಕಿಸಾನ್ ಅನರ್ಹ ಅಭ್ಯರ್ಥಿಗಳ ಕುರಿತು ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಿಂದ ಅನರ್ಹ ಅಭ್ಯರ್ಥಿಗಳ ಹೆಸರುಗಳನ್ನು ತೆಗೆದು ಹಾಕಲಾಗಿದ್ದು ಅಂತಹ ಅಭ್ಯರ್ಥಿಗಳಿಗೆ 13ನೇ ಕಂತಿನ ಹಣ ಜಮ ಆಗುವುದಿಲ್ಲ ಎಂದು ತಿಳಿಸಿದ್ದರು.
ಈ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಅವರು ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ಹಲವು ನಕ್ಕಲುಗಳು ಇರುವುದರಿಂದ ಈ ಬಾರಿ ಅನರ್ಹ ಅಭ್ಯರ್ಥಿಗಳನ್ನು ಹೊರತುಪಡಿಸಿ ಅರ್ಹ ಫಲಾನುಭವಿಗಳೆಲ್ಲರಿಗೂ ಈ ಯೋಜನೆಯ ಉಪಯೋಗ ಮುಂದುವರೆಯುತ್ತದೆ ಎಂದು ತಿಳಿಸಿದರು.
ಸರ್ಕಾರದಿಂದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ಮಾಡಲಾಗಿದೆ ನಿಮ್ಮ ಹೆಸರು ಇದೇ ಇಲ್ಲವೋ ಎಂದು ಮೊಬೈಲ್ ನಲ್ಲಿಯೇ ತಿಳಿಯಿರಿ
ಹಲವು ಅನರ್ಹರು ಪಿಎಂ ಕಿಸಾನ್ ಯೋಜನೆ ಹಣವನ್ನು ಪಡೆಯುತ್ತಿದ್ದು ಇದನ್ನು ತಡೆಗಟ್ಟಲು ಸರ್ಕಾರವು ಈ ಕೆವೈಸಿ ಮಾಡಿಸಲು ತಿಳಿಸಿದ್ದು ಈ ಮೂಲಕ ಯಾರು ಅನರ್ಹ ಅಭ್ಯರ್ಥಿಗಳು ಎಂದು ಸರ್ಕಾರಕ್ಕೆ ತಿಳಿಯುತ್ತದೆ ಆಗ ಅನರ್ಹ ಅಭ್ಯರ್ಥಿಗಳಿಗೆ ಹಣ ತಲುಪದ ಹಾಗೆ ಕೇವಲ ಅರ್ಹ ಫಲಾನುಭವಿಗಳಿಗೆ ಈ ಯೋಜನೆ ಉಪಯೋಗವನ್ನು ತಲುಪಿಸಬಹುದಾಗಿದೆ.
ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಪಿಎಂ ಕಿಸಾನ್ ಯೋಜನೆಯಲ್ಲಿ 8,000 ಕೋಟಿಗಳಷ್ಟು ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ ಅನರ್ಹ ರೈತರುಗಳನ್ನು ತೆಗೆದು ಹಾಕುವ ಮೂಲಕ ಈ ಹಣವನ್ನು ರೈತರ ಅಭಿವೃದ್ಧಿಗೆ ಬಳಸಲಾಗುವುದು ಎಂದರು.
ಯೋಜನೆಯ ಮೊತ್ತವನ್ನು ಹೆಚ್ಚಿಸುವಂತೆ ಕೇಳಿದ ಪ್ರತಿಪಕ್ಷಗಳ ಹಾಗೂ ರೈತರ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ನರೇಂದ್ರ ತೋಮರ್ ಅವರು ಈ ಬಾರಿ ಯೋಜನೆಯ ಹಣದಲ್ಲಿ ಯಾವುದೇ ಹೆಚ್ಚಳ ಮಾಡಲಾಗುವುದಿಲ್ಲ ಎಂದು ತಿಳಿಸಿದರು.
ಪಿಎಂ ಕಿಸಾನ್ ಸಮ್ಮಾನ್ ನಿದಿ ಸ್ಟೇಟಸ್ ಚೆಕ್ ಮಾಡುವ ಬಗ್ಗೆ
ಪಿಎಂ ಕಿಸಾನ್ 13ನೇ ಕಂತಿನ ಹಣ ಜಮೆಯಾಗುವುದರಲ್ಲಿ ನಿಮ್ಮ ಸ್ಟೇಟಸ್ ಅನ್ನು ಪರಿಶೀಲನೆ ಮಾಡಿಕೊಳ್ಳಲು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ.
https://pmkisan.gov.in/beneficiarystatus.aspx
ಈ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಯೋಜನೆಯ ಒಂದು ಹೊಸ ಪೇಜ್ ತೆಗೆದುಕೊಳ್ಳುತ್ತದೆ ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಆಗಿರುವಂತಹ ಮೊಬೈಲ್ ನಂಬರ್ ಮೂಲಕ ನೀವು ನಿಮ್ಮ ಸ್ಟೇಟಸ್ ಅನ್ನು ಪರಿಶೀಲಿಸಿಕೊಳ್ಳಬಹುದು.
ಹೊಸ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ
ಮೊದಲು ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಯೋಜನೆಯ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಫಲಾನುಭವಿ ರೈತನ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನಮೂದಿಸಲು ಕೇಳುತ್ತದೆ. ಮೊಬೈಲ್ ನಂಬರ್ ಅನ್ನು ನಮೂದಿಸಿ, get data ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಅಲ್ಲಿ ನಿಮ್ಮ ಪಿಎಂ ಕಿಸಾನ್ ಸ್ಟೇಟಸ್ ಸಂಪೂರ್ಣ ಮಾಹಿತಿ ಕಾಣುತ್ತದೆ.
ಪಿಎಂ ಕಿಸಾನ್ ಯೋಜನೆಯ ಹೊಸ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟಿನ ಒಂದು ಹೊಸ ಮುಖಪುಟ ತೆರೆದುಕೊಳ್ಳುತ್ತದೆ.
ಆಗ ಅಲ್ಲಿ ನೀವು ನಿಮ್ಮ ರಾಜ್ಯವನ್ನು, ಜಿಲ್ಲೆಯನ್ನು, ಬ್ಲಾಕ್ ಅನ್ನು, ತಾಲೂಕು ಅನ್ನು ಹಾಗೂ ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು, ನಂತರ ಸಬ್ಮಿಟ್(submit) ಬಟನ್ ಮೇಲೆ ಒತ್ತಿ ನಂತರ ನಿಮಗೆ ನಿಮ್ಮ ಗ್ರಾಮದ ಸಂಪೂರ್ಣ ಫಲಾನುಭವಿಗಳ ಪಟ್ಟಿಯು ನಿಮ್ಮ ಮೊಬೈಲ್ ನಲ್ಲಿ ಸಾಲಾಗಿ ಆರ್ಡರ್‌ನಲ್ಲಿ ಕಾಣುತ್ತದೆ.
ಅದರೊಳಗೆ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬಹುದು. ಆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ 13ನೇ ಕಂತಿನ ಹಣ ಜಮಯಾಗುತ್ತದೆ.
ಕೃಷಿ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ.. ಕೃಷಿ ಆಧಾರಿತ ಹೊಸ ಯೋಜನೆಗಳು, ಸಬ್ಸಿಡಿಗಳು, ಕೃಷಿ ಸಂಬಂಧಿತ ಎಲ್ಲಾ ವಿಷಯಗಳನ್ನು ತಿಳಿಯಲು ಕೃಷಿ ವಾಹಿನಿ ಗ್ರೂಪ್ ಸೇರಿಕೊಳ್ಳಲು ಕೆಳಗಿನ ಲಿಂಕ್ ಒತ್ತಿರಿ…👇🏻
https://chat.whatsapp.com/CatKjFMzi1f5uiEQn86AW0