ರೈತರು ನಿಮ್ಮ ಹೊಲಕ್ಕೆ ಹೋಗಲು ಬಂಡಿದಾರಿ ಇಲ್ಲವೇ ಕಾಲುದಾರಿ ಇಲ್ಲವೇ ರಸ್ತೆ ಹಾಗೂ ಬಾವಿ ಸೀಮೆಗಳನ್ನು ಉಚಿತವಾಗಿ ನೋಡುವುದು ಹೇಗೆ?
ಆತ್ಮೀಯ ರೈತ ಬಾಂಧವರೇ ತಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಅಥವಾ ನಿಮ್ಮ ಊರಿನಲ್ಲಿ ಎಷ್ಟು ಕಾಲುಧಾರಿಗಳಿವೆ? ಎಷ್ಟು ಹಾದಿಗಳಿವೆ ಮತ್ತು ಯಾವ ಹಾದಿ ಎಲ್ಲಿಗೆ ಯಾರ ಹೊಲಗಳ ಹತ್ತಿರ ಹಾದು ಹೋಗುತ್ತದೆ. ಮತ್ತು ನಿಮ್ಮ ಅಕ್ಕಪಕ್ಕದ ಜಮೀನು ಅಥವಾ ನಿಮ್ಮ ಜಮೀನಿಗೆ ಯಾವ ದಾರಿಗಳಿವೆ ಆಧಾರಗಳು ನಿಜವೋ ಸುಳ್ಳೋ ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು. ಇದರಿಂದ ನೀವು ನೋಡಿರಬಹುದು ಸಾಕಷ್ಟು ಜನರು ಹಾದಿ ಗೋಸ್ಕರ ಜಗಳ ಮಾಡುತ್ತಾರೆ ಅವರಿಗೆ ಮೊದಲಿಗೆ ತಮ್ಮ ಹೊಲಗಳ ಹತ್ತಿರ ಅಥವಾ ಅಕ್ಕಪಕ್ಕದಲ್ಲಿ ದಾರಿ ಇದೆಯೋ ಇಲ್ಲವೆಂದು ಮೊದಲಿಗೆ ನೋಡಿಕೊಳ್ಳಬೇಕು ತದನಂತರದಲ್ಲಿ ಜಗಳ ಅಥವಾ ಕೋರ್ಟಿಗೆ ಹೋಗಬಹುದು.
ಸರ್ಕಾರದಿಂದ ಉಚಿತ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ನಿಮ್ಮ ಹೆಸರನ್ನು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಿ.
ನಿಮ್ಮ ಊರಿನಲ್ಲಿ ಎಷ್ಟು ಹಾದಿಗಳಿವೆ ಮತ್ತು ಎಷ್ಟು ಕಾಲುಧಾರಿಗಳಿವೆ ಮತ್ತು ಎಷ್ಟು ಬಂಡಿದಾರಿಗಳಿವೆ?
ಹೌದು ರೈತರೇ ನೀವು ನಿಮ್ಮ ಮೊಬೈಲ್ ಮೂಲಕ ನಿಮ್ಮ ಊರಿನಲ್ಲಿ ಎಷ್ಟು ಹಾದಿಗಳಿವೆ ಮತ್ತು ನಿಮ್ಮ ಅಕ್ಕಪಕ್ಕದ ಜಮೀನಿನಲ್ಲಿ ಯಾವ ಹಾದಿಗಳು ಹಾದು ಹೋಗುತ್ತವೆ. ಅವುಗಳನ್ನು ನೀವು ನಿಮ್ಮ ಮೊಬೈಲ್ ಮೂಲಕ ಮನೆಯಲ್ಲೇ ಕುಳಿತುಕೊಂಡು ನೋಡಬಹುದು ಇದು ನಿಮಗೆ ತುಂಬಾ ಸಹಕಾರಿಯಾಗುತ್ತದೆ ಏಕೆಂದರೆ ಜಗಳದ ಸಮಯದಲ್ಲಿ ನಿಮಗೆ ಗೊತ್ತೇ ಇರದ ಹಾದಿಯ ಬಗ್ಗೆ ನೀವು ಎಷ್ಟೇ ಹೋರಾಡಿದರೂ ನಿಮಗೆ ಅದು ಸಿಗುವುದಿಲ್ಲ. ಒಂದು ವೇಳೆ ಇದರಲ್ಲಿ ಹಾದಿ ಇದ್ದರೆ ನಿಮಗೆ ಏನಾದರೂ ಜಗಳದ ಸಮಯದಲ್ಲಿ ನೀವು ನೇರವಾಗಿ ಅದನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ.
ನೀವು ಅದನ್ನು ನೋಡಬೇಕಾದರೆ ಮೊದಲಿಗೆ ಕೆಳಗಡೆ ನೀಡಿರುವ ಜಾಲತಾಣಕ್ಕೆ ಭೇಟಿ ನೀಡಬೇಕು ಅಥವಾ ಇಲ್ಲಿ ಲಿಂಕನ್ನು ನೀಡಿದೆ ನೀವು ನೇರವಾಗಿ ಆ ಪೇಜ್ ಗೆ ಹೋಗಬಹುದು.
https://landrecords.karnataka.gov.in/service3/
ರೈತರೇ ನೀವು ಈಗ “revenue maps online” ಪೇಜ್ ಓಪನ್ ಆಗಿರುತ್ತದೆ ಅಲ್ಲಿ ನಿಮಗೆ ಆಯ್ಕೆಗಳು ಬರುತ್ತವೆ ಅದರಲ್ಲಿ ನೀವು ಮೊದಲಿಗೆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮ್ಮ ತಾಲೂಕಿನ ಆಯ್ಕೆ ಮಾಡಿಕೊಳ್ಳಬೇಕು. ತದನಂತರದಲ್ಲಿ ನಿಮ್ಮ ಊರನ್ನು ಸಹ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಇದಾದಮೇಲೆ ನೇರವಾಗಿ ನಿಮಗೆ ಇನ್ನೊಂದು ಆಯ್ಕೆ ಕಾಣಿಸಿಕೊಳ್ಳುತ್ತದೆ ಆಯ್ಕೆ ನೀವು Map type ಯಾವದು ಆಯ್ಕೆ ಮಾಡಿಕೊಳ್ಳಲು ಹೇಳುತ್ತದೆ ಅದರಲ್ಲಿ ನೀವು “cadastral maps” ಆಯ್ಕೆಮಾಡಿಕೊಳ್ಳಿ.
ನಂತರ” Serach ” ಮೇಲೆ ಕ್ಲಿಕಿಸಿ/ಒತ್ತಿರಿ ಇದಾದ ಮೇಲೆ ನೀವು ನಿಮ್ಮ ಹೋಬಳಿಯಲ್ಲಿ ಬರುವ ಎಲ್ಲಾ ಊರುಗಳ ಮ್ಯಾಪ್ ಅಥವಾ ನಿಮ್ಮ ಊರಿನ ದಾರಿ ಇರುವ ಭಾವಚಿತ್ರವನ್ನು ತೋರಿಸುತ್ತದೆ. ನೀವು ಅದನ್ನು ಡೌನ್ಹೋಡ್(Download) ಮಾಡಿಕೊಳ್ಳಬಹುದು ಡೌನ್ಲೋಡ್ (Download) ಮಾಡಿದ ನಂತರ ಅದನ್ನು ಓಪನ್ ಮಾಡಿಕೊಳ್ಳಬೇಕು ಮೊದಲಿಗೆ ನೀವು ನಿಮ್ಮ ಊರಿನ ಮ್ಯಾಪನ್ನು ಸರಿಯಾಗಿ ನೋಡಿ ಯಾವ ಕಡೆಗೆ ನಿಮ್ಮ ಹೊಲದ ಸರ್ವೆ ನಂಬರ್ ಬರುತ್ತಿದೆ ಎಂದು ನೀವು ಹುಡುಕಿಕೊಳ್ಳಬೇಕು. ಇದಾದ ಮೇಲೆ ನಿಮಗೆ ಅವರು ಇನ್ನೊಂದು ಪಿಡಿಎಫ್‌ನ ಒಂದು ಭಾಗದಲ್ಲಿ ಯಾವ ದಾರಿಗೆ ಯಾವ ರೀತಿ ಕಲರ್ ನೀಡಲಾಗಿದೆ ಅದನ್ನು ನೀವು ಸರಿಯಾಗಿ ನಿಮ್ಮ ಮ್ಯಾಪಿನಲ್ಲಿ ಹೊಂದಾಣಿಕೆ ಮಾಡಿಕೊಂಡು ನೀವು ಯಾವ ಬಾರಿ ನಿಮ್ಮ ಭೂಮಿಯ ಪಕ್ಕದಲ್ಲಿ ಹಾದು ಹೋಗುತ್ತದೆ.👇🏻👇🏻ಈ ರೀತಿಯಾಗಿ ನೀವು ನಿಮ್ಮ ಹೊಲದ ಸ್ಥಿತಿ ಗತಿ ತಿಳಿಯಬಹುದು
ಇದರಲ್ಲಿ ನೀವು ಗ್ರಾಮದ ಗಡಿರೇಖೆ, ಸರ್ವೆ ನಂಬರ್, ಕಾಲುದಾರಿ,ಬಂಡಿದಾರಿ,ರಸ್ತೆ, ರೈಲು ದಾರಿ ಸ್ಟೇಷನ್ ಮತ್ತು ನಿಮ್ಮ ಹೊಲದ ಸರ್ವೆ ನಂಬರ್ ಗಳು, ಹಳ್ಳ ಕೊಳ್ಳಗಳು, ಬಂಧುವುಗಳು, ಕಲ್ಲುಗಳು ನೀರು ಹರಿಯುವ ದಿಕ್ಕು ದೊಡ್ಡ ಮರಗಳು ಇವೆಲ್ಲವನ್ನು ನೀವು ನಿಮ್ಮ ಮೊಬೈಲ್ ಮೂಲಕವೆ ನಿಮ್ಮ ಊರಿನಲ್ಲಿ ಎಲ್ಲಿವೆ ಎಂಬುವುದನ್ನು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ನೋಡಿಕೊಳ್ಳಬಹುದು.