ಪ್ರಿಯ ರೈತರೇ, ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಈ ವರ್ಷದ ಬಜೆಟ್ ಮಂಡನೆ ಮುಕ್ತಾಯಗೊಂಡಿದ್ದು, ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ “ಗರೀಬ್ ಕಲ್ಯಾಣ” ಯೋಜನೆ ಅಡಿಯಲ್ಲಿ ಪಡಿತರ ಚೀಟಿ ಹೊಂದಿದ ಫಲಾನುಭವಿಗಳಿಗೆ ಸರ್ಕಾರದಿಂದ ಉಚಿತ ರೇಷನ್ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಈದೀಗ ಉಚಿತ ರೇಷನ್ ಪಡೆಯುವ ಪಡಿತರ ಚೀಟಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಉಚಿತ ರೇಷನ್ ಪಡೆಯಲು ಬೇಕಾಗುವ ದಾಖಲೆಗಳೇನು? ಇರಬೇಕಾದ ಅರ್ಹತೆಗಳೇನು? ಪಟ್ಟಿಯನ್ನು ಪರಿಶೀಲಿಸುವುದು ಹೇಗೆ? ಇವೆಲ್ಲವುದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ಭಾರತ ಸರ್ಕಾರವು ನೀಡುವ ಈ ಪಡಿತರ ಚೀಟಿಯಿಂದ ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಆಹಾರ ತಲುಪಿಸುವುದು ಆಗಿದೆ. ಆದರೆ ಈ ವರ್ಷ 2023 ರ ಬಜೆಟ್ ನಲ್ಲಿ ಮಾಡಿರುವ ಹೊಸ ಬದಲಾವಣೆಯಿಂದ ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬ ಬಡ ನಾಗರಿಕರಿಗೆ ಉಚಿತ ರೇಷನ್ ನೀಡಲಾಗುವುದು. ಉಚಿತ ರೇಷನ್ ಕಾರ್ಡ್ 2023ರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸುವುದರ ಮೂಲಕ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಉಚಿತ ರೇಷನ್ ಪಡೆಯಲು ಇರಬೇಕಾದ ಅರ್ಹತೆಗಳೇನು?
» ಅಭ್ಯರ್ಥಿಗಳ ವಾರ್ಷಿಕ ಆದಾಯವು ನಿಗದಿತ ಮಟ್ಟಕ್ಕಿಂತ ಕಡಿಮೆ ಹೊಂದಿರಬೇಕು.
» ಈ ಯೋಜನೆ ಲಾಭವನ್ನು ಪಡೆಯಲು ಫಲಾನುಭವಿಯು ಭಾರತೀಯ ನಾಗರೀಕತೆಯನ್ನು ಹೊಂದಿರಬೇಕು ಅಥವಾ ಭಾರತದ ನಿವಾಸಿಯಾಗಿರಬೇಕು.
» ಮುಖ್ಯವಾಗಿ ಒಂದು ಕುಟುಂಬದಿಂದ ಕೇವಲ 4 ಸದಸ್ಯರು ಮಾತ್ರ ಈ ಯೋಜನೆ ಲಾಭವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.
» ಈ ಯೋಜನೆ ಲಾಭವನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಸಣ್ಣ ಅಥವಾ ಅತಿಸಣ್ಣ ರೈತರಾಗಿರಬೇಕು. ಅಂದರೆ ರೈತರು 5 ಎಕರೆಗಿಂತ ಕಡಿಮೆ ಜಮೀನನ್ನು ಹೊಂದಿರಬೇಕು.
» ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವವರು ಯಾವುದೇ ತರಹದ 4 ಚಕ್ರದ ವಾಹನಗಳನ್ನು ಅಂದರೆ ಟ್ರ್ಯಾಕ್ಟರ್ ಅಥವಾ ಕಾರ್ ಇತ್ಯಾದಿಗಳನ್ನು ಹೊಂದಿರಬಾರದು.
» ಈ ಯೋಜನೆ ಲಾಭ ಪಡೆಯುವ ಸದಸ್ಯರು ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.
ಉಚಿತ ಪಡಿತರ ಪಟ್ಟಿಯನ್ನು ಪರಿಶೀಲಿಸಲು ಬೇಕಾಗುವ ದಾಖಲೆಗಳೇನು?
ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಬೇಕಾಗುವ ದಾಖಲೆಗಳನ್ನು ನೋಡುವುದಾದರೆ,
* ಬ್ಯಾಂಕ್ ಪಾಸ್ ಬುಕ್
* ರೇಷನ್ ಕಾರ್ಡ್ ನಂಬರ್
* ಆಧಾರ್ ಕಾರ್ಡ್
* ನಿಮ್ಮ ಕುಟುಂಬದ ಫೋಟೋ
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
* ನಿವಾಸದ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
ನಿಮ್ಮರೇಶನ್ ಕಾರ್ಡ್ ಮೊಬೈಲ್ ಚೆಕ್ ಮಾಡುವುದು ಹೇಗೆ?
ರೇಶನ್ ಕಾರ್ಡ್ ಫಲಾನುಭವಿಗಳು ತಮ್ಮ ಕಾರ್ಡ್ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಅಲ್ಲಿ ಕಾಣುವ ಇ ಸ್ಥಿತಿ (E Status ) ಮೇಲೆ ಕ್ಲಿಕ್ ಮಾಡಿ ನಂತರ ಜಿಲ್ಲೆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಪಡಿತರ ವಿವರ ಬಟನ್ ಮೇಲೆ ಒತ್ತಿ ಚೆಕ್ ಮಾಡಬಹುದು.ಅಲ್ಲಿ ನಿಮಗೆ ಕೇಳಲಾದ ಮಾಹಿತಿ ಎನ್ನು ಭರ್ತಿ ಮಾಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ..
ರೇಷನ್ ಕಾರ್ಡನ್ನು ಬೆಂಗಳೂರು ನಗರ ಹಾಗೂ ಗ್ರಾಮಾಂತರ ದವರು ಕೆಳಗೆ ತಿಳಿಸಿರುವ ಲಿಂಕ್ ನಲ್ಲಿ ಚೆಕ್ ಮಾಡಬೇಕು👇🏻👇🏻
https://ahara.kar.nic.in/status1/
ಬಳ್ಳಾರಿ , ಬೀದರ್ , ಚಿಕ್ಕಬಳ್ಳಾಪುರ , ಚಿತ್ರದುರ್ಗ , ದಾವಣಗೆರೆ , ಕಲಬುರಗಿ , ಕೋಲಾರ್ , ಕೊಪ್ಪಲ್ , ರೈಚೂರ್ ,ರಾಮನಗರ , ಶಿವಮೊಗ್ಗ , ತುಮಕೂರು , ಯಾದ್ಗೀರಿ ಜಿಲ್ಲೆಗಳು ಕೆಳಗಿನ ಲಿಂಕ್ ನಲ್ಲಿ ಚೆಕ್ ಮಾಡಿಕೊಳ್ಳಿ 👇🏻👇🏻
https://ahara.kar.nic.in/status3/
ಬಾಗಲಕೋಟೆ , Belagavi, ಚಾಮರಾಜನಗರ , ಚಿಕ್ಕಮಗಳೂರು , ದಕ್ಷಿಣಕನ್ನಡ , ಧಾರವಾರ , ಗದಗ , ಹಾಸನ್ , ಹಾವೇರಿ , ಕೊಡಗು , ಮಂಡ್ಯ , ಮೈಸೂರು , ಉಡುಪಿ , ಉತ್ತರಕನ್ನಡ , ವಿಜಯಪುರ ಜಿಲ್ಲೆಗಳು ಕೆಳಗಿನ ಲಿಂಕ್ ನಲ್ಲಿ ಚೆಕ್ ಮಾಡಿಕೊಳ್ಳಿ 👇🏻👇🏻
https://ahara.kar.nic.in/status2/
ರದ್ದುಗೊಳಿಸಲಾದ/ತಡೆಹಿಡಿಯಲಾದ ರೇಶನ್ ಕಾರ್ಡ್ ಫಲಾನುಭವಿಗಳ ಹೆಸರು (Show cancelled/suspended list)
ಪಡಿತರ ಚೀಟಿ ಹೊಂದಿದವರು ತಮ್ಮ ಹೆಸರು ರದ್ದು ಆಗಿದೆಯೇ ಎಂಬುದನ್ನು ಚೆಕ್ ಮಾಡಲು ರದ್ದುಗೊಳಿಸಲಾದ ತಡೆಹಿಡಿಯಲಾದ ಇದನ್ನು ನೋಡಲು 👇🏻👇🏻(Show Cancelled / Suspended list) ನಲ್ಲಿ ಹೋಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ
ಆಗ ಜಿಲ್ಲೆ, ತಾಲೂಕು, ತಿಂಗಳು ಆಯ್ಕೆ ಮಾಡಿಕೊಳ್ಳಬೇಕು. ಮಾಡಿಕೊಳ್ಳಬೇಕು.ನಂತರ Go ಮೇಲೆ ಕ್ಲಿಕ್ ಮಾಡಬೇಕು. ಆಗ ಯಾರ ಹೆಸರನ್ನು ತೆಗೆಯಲಾಗಿದೆ. ಯಾವಾಗ ತೆಗೆಯಲಾಗಿದೆ? ಯಾವ ಕಾರಣಕ್ಕಾಗಿ ತೆಗೆಯಲಾಗಿದೆ ಎಂಬ ಕಾರಣವನ್ನು ಬರೆಯಲಾಗಿದೆ.
ಉಚಿತ ರೇಷನ್ ಕಾರ್ಡ್ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸುವುದು ಹೇಗೆ?
ಉಚಿತ ಪಡಿತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಲು ಮೊದಲು ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
https://ahara.kar.nic.in/Home/EServices
ಅಲ್ಲಿ ನಿಮಗೆ ಬಲಗಡೆ ಕೆಲವು ಆಯ್ಕೆಗಳು ಕಾಣುತ್ತವೆ. ವಿಧಾನ, ಇ ಪಡಿತರ ಚೀಟಿ, ಇ-ಸ್ಥಿತಿ , ಸಾರ್ವಜನಿಕ ದೂರು ಮತ್ತು ಬಹುಮಾನ ಯೋಜನೆ,ಇ ನ್ಯಾಯಬೆಲೆ ಅಂಗಡೆ, ಎಸ್.ಎಂ.ಎಸ್ ಸೇವೆ,ಅಂಕಿ ಅಂಶ, ಸೌಕರ್ಯ ಕೇಂದ್ರಗಳು,ಟೆಂಡರ್, ದರಗಳು, ಹೀಗೆ ವಿವಿಧ ಆಯ್ಕೆಗಳು ಕಾಣುತ್ತವೆ.
ಇದನ್ನು ಓದಿರಿ : ರೈತರಿಗೆ ಸರ್ಕಾರದಿಂದ ಅನುಕೂಲವಾಗುವಂತಹ ಎಲ್ಲ ಯೋಜನೆಗಳ ಪಟ್ಟಿ ಈಗ ನಿಮ್ಮ ಕೈಯಲ್ಲಿ
ರೈತರಿಗಾಗಿ ಕೇಂದ್ರದಿಂದ ಪಿಎಂ ಪ್ರಣಾಮ್ ಹೊಸ ಯೋಜನೆ ಜಾರಿ
ಅಲ್ಲಿ ನೀವು ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನು ಕೆಲವು ಆಯ್ಕೆಗಳು ಕಾಣಿಸುತ್ತವೆ. ಹೊಸ ಪಡಿತರ ಚೀಟಿ, ಪಡಿತರ ಚೀಟಿ ತೋರಿಸು, ಹಂಚಿಕೆ, ಪಡಿತರಎತ್ತುವಳಿ ಸ್ಥಿತಿ, ಅಪ್ಡೇಟ್ ಆಧಾರ್, ರದ್ದುಗೊಳಿಸಲಾದ /ತಡೆಹಿಡಿಯಲಾದ ಪಟ್ಟಿ, ಹಳ್ಳಿ ಪಟ್ಟಿ ವಿತರಣೆಯಾಗುವ ಹೊಸ ಪಡಿತರ ಚೀಟಿ ಹೀಗೆ ಹಲವಾರು ಆಯ್ಕೆಗಳು ಕಾಣುತ್ತದೆ.
ನಂತರ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಗೆ ತಕ್ಕಂತೆ ಅದರ ದಾಖಲೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
ಇದಾದ ನಂತರ ಅದರಲ್ಲಿ ಕೇಳಲಾಗುವ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ಹೀಗೆ ಮುಂತಾದ ಆಯ್ಕೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
ಎಲ್ಲವನ್ನು ಆಯ್ಕೆ ಮಾಡಿದ ಮೇಲೆ ಕೊನೆಯದಾಗಿ ನಿಮಗೆ ಸಂಭಂದಪಟ್ಟ ರೇಷನ್ ಕಾರ್ಡ್ ಅಂಗಡಿಯ ಆಯ್ಕೆಯನ್ನು ಆಯ್ಕೆ ಮಾಡಬೇಕಾಗುತ್ತದೆ.
ನಂತರ ಕೊನೆಯಲ್ಲಿ 2023ರ ಉಚಿತ ರೇಷನ್ ಕಾರ್ಡ್ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳಬಹುದು.
ಇದಿಷ್ಟು ಈ ಉಚಿತ ಪಡಿತರ ಚೀಟಿಯ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದ್ದು, ಎಲ್ಲಾ ಸಾರ್ವಜನಿಕರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆ ಲಾಭವನ್ನು ಪಡೆದುಕೊಳ್ಳಬೇಕು.