ಪ್ರಿಯ ರೈತರೇ, ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿಗೆ ಸಂಭಂಧಿಸಿದಂತೆ ಹಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಘೋಷಣೆ ಮಾಡಿರುವ ಯೋಜನೆ ಈಗ ಎಲ್ಲರ ಗಮನ ಸೆಳೆದಿದೆ.
ಅದರಲ್ಲಿ ಪ್ರಮುಖವಾದುದು “ಪಿಎಂ ಪ್ರಣಾಮ” ಯೋಜನೆ. ಇದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪರ್ಯಾಯ ರಸಗೊಬ್ಬರಗಳಿಗೆ ಉತ್ತೇಜನ ನೀಡಲು ಪ್ರೋತ್ಸಾಹ ನೀಡಲಿದೆ. ಹಾಗೆಯೇ ರಾಸಾಯನಿಕ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೊರೆಯನ್ನು ತಗ್ಗಿಸುವ ಉದ್ದೇಶವನ್ನು ಕೂಡ ಈ ಯೋಜನೆ ಹೊಂದಿದೆ.
ಕೃಷಿಯಲ್ಲಿ ರಾಸಾಯನಿಕ ಬಳಕೆಯನ್ನು ತಗ್ಗಿಸುವುದು ಹಾಗೂ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಈ ಹೊಸ ಯೋಜನೆಯಾದ ಪಿಎಂ ಪ್ರಣಾಮ ಹೊಂದಿದೆ. ಭೂಮಿಯನ್ನು ರಾಸಾಯನಿಕಗಳ ಬಳಕೆಯಿಂದ ಸಂರಕ್ಷಿಸಲು ಸರ್ಕಾರ ಈ ಯೋಜನೆ ಜಾರಿಗೆ ಮುಂದಾಗಿದೆ.
ಏನಿದು ಪಿಎಂ ಪ್ರಣಾಮ ಯೋಜನೆ?
ಪಿಎಂ ಪ್ರಣಾಮ ಯೋಜನೆಯ (PM PRANAM Scheme) ವಿಸ್ಕೃತ ರೂಪ “ಪ್ರಧಾನ ಮಂತ್ರಿ ಪ್ರೊಮೋಷನ್ ಆಫ್ ಆಲ್ಟರ್ನೇಟಿವ್ ನ್ಯುಟಿಯೆಂಟ್ಸ್ ಫಾರ್ ಅಗ್ರಿಕಲ್ಟರ್ ಮ್ಯಾನೇಜ್ ಮೆಂಟ್” ಯೋಜನೆ.
ಇದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿನ ಸರ್ಕಾರಗಳಿಗೆ ಪರ್ಯಾಯ ರಸಗೊಬ್ಬರಗಳು ಹಾಗೂ ಸಮತೋಲಿತ ರಾಸಾಯನಿಕ ಬಳಕೆಗೆ ಉತ್ತೇಜನ ನೀಡಲಿದೆ.
ಈ ಪಿಎಂ ಪ್ರಣಾಮ್ ಯೋಜನೆಯ ಉದ್ದೇಶಗಳೇನು?
» ಸರ್ಕಾರಿ ರಸಗೊಬ್ಬರಗಳ ಮೇಲಿನ ಸಬ್ಸಿಡಿ (subsidy) ಹೊರೆಯನ್ನು ತಗ್ಗಿಸುವ ಗುರಿಯಾಗಿದೆ.
» ಈ ಸಬ್ಸಿಡಿ ಹೊರೆ 2022-2023ನೇ ಸಾಲಿನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಶೇ.39ರಷ್ಟು ಅಂದ್ರೆ 2.25ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಹಿಂದಿನ ವರ್ಷ ಇದು 1.62ಲಕ್ಷ ಕೋಟಿ ರೂ. ಆಗಿತ್ತು.
» ರಾಸಾಯನಿಕ ರಸಗೊಬ್ಬರ (chemical fertilisers) ಬಳಕೆಯನ್ನು ಪ್ರೋತ್ಸಾಹಿಸುವುದು ಕಡಿಮೆ ಮಾಡುವುದು ಹಾಗೂ ಸುಸ್ಥಿರ (Sustainable) ಕೃಷಿ ಅಭ್ಯಾಸಗಳಿಗೆ ಒತ್ತು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
» ರಾಸಾಯನಿಕ ರಸಗೊಬ್ಬರ ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು.
» ಸುಸ್ಥಿರ ನೈರ್ಸಗಿಕ ಕೃಷಿಗೆ (Natural agriculture) ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪಿಎಂ ಪ್ರಣಾಮ್ ಯೋಜನೆಯ ಪ್ರಯೋಜನಗಳೇನು?
* ಬರೀ ಕೆಲವೇ ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಈ ಯೋಜನೆ ಪ್ರೋತ್ಸಾಹಿಸಲಿದೆ.
* ನೈಸರ್ಗಿಕ ಪೌಷ್ಟಿಕಾಂಶಗಳು ಸೇರಿದಂತೆ ಪರ್ಯಾಯ ಪೌಷ್ಟಿಕಾಂಶಗಳು ಹಾಗೂ ರಸಗೊಬ್ಬರಗಳ ಬಳಕೆಯನ್ನು ಇದು ಉತ್ತೇಜಿಸಲಿದೆ.
* ದೀರ್ಘಾವಧಿಯಲ್ಲಿ ರಾಸಾಯನಿಕಯುಕ್ತ ರಸಗೊಬ್ಬರಗಳ ಬಳಕೆಯನ್ನು ತಗ್ಗಿಸುವುದರಿಂದ ಮಣ್ಣಿನ ಗುಣಮಟ್ಟ ಹೆಚ್ಚಲಿದೆ.
* ದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸಲಿದೆ.
ಇದನ್ನು ಓದಿರಿ 👇🏻::
ನಿಮ್ಮ ಜಮೀನಿನ ಮೇಲೆ ಇರುವ ಸಂಪೂರ್ಣ ಸಾಲವನ್ನು ಮೊಬೈಲ್ ನಲ್ಲಿ ತಿಳಿದುಕೊಳ್ಳುವುದು ಹೇಗೆ??
ನಿಮ್ಮ ಜಮೀನಿನ ಪಹಣಿ ತಿದ್ದುಪಡಿ ಮೊಬೈಲ್ ನಲ್ಲಿ ಮಾಡುವುದು ಹೇಗೆ??
ಪಿಎಂ ಪ್ರಣಾಮ್ ಯೋಜನೆ ಜಾರಿಗೆ ತಂದಿರುವ ಕಾರಣವೇನು?
ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ (Agriculture) ರಾಸಾಯನಿಕ ರಸಗೊಬ್ಬರಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದ್ರಿಂದ ಮಣ್ಣಿನ ಗುಣಮಟ್ಟ ತಗ್ಗಿದೆ. ಅಲ್ಲದೆ, ಕೃಷಿ ಉತ್ಪನ್ನಗಳು ಕೂಡ ರಾಸಾಯನಿಕಯುಕ್ತವಾಗಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.
ಈ ಕಾರಣದಿಂದ ಕೃಷಿಯಲ್ಲಿ ನೈಸರ್ಗಿಕ ವಿಧಾನಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ರಾಸಾಯನಿಕಯುಕ್ತ ರಸಗೊಬ್ಬರ ಬಳಕೆ ತಗ್ಗಿಸಲು ಕೇಂದ್ರ ಸರ್ಕಾರ ಪಿಎಂ ಪ್ರಣಾಮ ಯೋಜನೆಯನ್ನ ಜಾರಿಗೆ ತಂದಿದೆ.
ಇದಿಷ್ಟು ಈ ಯೋಜನೆ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದ್ದು, ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಇದರ ಲಾಭವನ್ನು ಪಡೆದುಕೊಳ್ಳಬೇಕು.