ಪ್ರಿಯ ರೈತರೇ, ನಿಮ್ಮ ಜಮೀನಿಗೆ ಸಂಬಂಧಿಸಿದ ಪಹಣಿಯಲ್ಲಿ ಅಥವಾ ಉತಾರಿಯಲ್ಲಿ ಹೊಲದ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡುವುದು ಹೇಗೆ? ಹೆಸರನ್ನು ತಿದ್ದುಪಡಿ ಎಲ್ಲಿ ಮಾಡಬೇಕು? ಅದರ ಪ್ರಕ್ರಿಯೆ ಏನು? ನಿಮ್ಮ ಜಮೀನಿನ ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡುವುದರಿಂದ ಆಗುವ ಉಪಯೋಗಗಳೇನು? ಇವೆಲ್ಲವುಗಳ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡಲು ಕೆಲವು ದಾಖಲೆಗಳ ಅವಶ್ಯಕತೆ ಇರುತ್ತದೆ.

ಪಹಣಿ ತಿದ್ದುಪಡಿ ಮಾಡಲು ಬೇಕಾಗುವ ದಾಖಲೆಗಳು?

» 1964 ರಿಂದ ಇಲ್ಲಿಯವರೆಗೆ ಪ್ರತಿವರ್ಷದ ಪಹಣಿಯನ್ನು ನೀವು ತೆಗೆದುಕೊಂಡು ಇಟ್ಟುಕೊಳ್ಳಬೇಕು. ನೀವು ಇದನ್ನು ತಾಲೂಕಿನ ತಹಶೀಲ್ದಾರ್ ಆಫೀಸ್ ನಲ್ಲಿ ಇರುವ ಪಹಣಿ ಕೇಂದ್ರದಲ್ಲಿ ಇದು ಸಿಗುತ್ತದೆ.

» 20 ರೂಪಾಯಿಯ ಈ ಸ್ಟ್ಯಾಂಪ್ ಪೇಪರ್ ಮಾಡಿಸಬೇಕು. ಅದರ ಮೇಲೆ ವಕೀಲರಿಂದ ತಪ್ಪದೇ ನೋಟ್ರೀ ಮಾಡಿಸಬೇಕು.

» ಪಹಣಿಯಲ್ಲಿರುವ ಹೆಸರು ತಿದ್ದುಪಡಿಗೋಸ್ಕರ ಮಾದರಿ ಅರ್ಜಿ ಬರೆಯಬೇಕು. ಅದರಲ್ಲಿ ನೀವು ಪಹಣಿಯಲ್ಲಿ ಯಾವ ವಿಷಯ ತಿದ್ದುಪಡಿ ಮಾಡಿಸುತ್ತಿರೋ ಎಂಬುದನ್ನು ಸ್ಪಷ್ಟವಾಗಿ ಅನುಮೋದಿಸಬೇಕು.

» ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕು.

ಈ ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ನಿಮ್ಮ ತಾಲೂಕಿನಲ್ಲಿರುವ ಭೂಮಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು.

ಪಹಣಿ ತಿದ್ದುಪಡಿಯ ಪ್ರಕ್ರಿಯೆ ಹೇಗಿರುತ್ತದೆ?

* ನಂತರ ಭೂಮಿ ಕೇಂದ್ರದಲ್ಲಿರುವ ಅಧಿಕಾರಿಗಳು ನಿಮ್ಮ ಸದರಿ ದಾಖಲೆಗಳನ್ನು ನಿಮಗೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳುಹಿಸುತ್ತಾರೆ.

* ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ಬಂದಿರುವ ಅರ್ಜಿಯನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.

* ದಾಖಲೆಗಳು ತಪ್ಪಾಗಿದ್ದಲ್ಲಿ ಅದನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತಾರೆ. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುವ ಹಕ್ಕನ್ನು ಹೊಂದಿರುತ್ತಾರೆ.

* ಗ್ರಾಮ ಲೆಕ್ಕಾಧಿಕಾರಿಗಳ ಆದೇಶದ ಮೇಲೆ ಭೂಮಿ ಕೇಂದ್ರದ ಅಧಿಕಾರಿಗಳು ನಿಮ್ಮ ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡುತ್ತಾರೆ. ಸುಮಾರು ದಿನಗಳ ನಂತರ ತಿದ್ದುಪಡಿ ಆಗಿರುವ ಹೊಸ ಪಹಣಿ ನಿಮ್ಮ ಕೈ ಸೇರುತ್ತದೆ.

ಈ ರೀತಿಯಾಗಿ ನೀವು ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡಬಹುದು.

ಪಹಣಿಯಲ್ಲಿ ಹೆಸರನ್ನು ತಿದ್ದುಪಡಿ ಮಾಡುವುದರಿಂದ ನಮಗಾಗುವ ಉಪಯೋಗಗಳೇನು?

• ಜಮೀನನ್ನು ಕೊಂಡುಕೊಳ್ಳುವಾಗ ಅಥವಾ ಮಾರುವಾಗ ಅಥವಾ ಭಾಗ ಮಾಡುವಾಗ ಯಾವುದೇ ಗೊಂದಲ ಉಂಟಾಗುವುದಿಲ್ಲ.

• ಇವತ್ತಿನ ದಿನದಲ್ಲಿ ಯಾವುದೇ ಒಂದು ಸರ್ಕಾರಿ ಕೆಲಸಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗಿರುವುದರಿಂದ ಸರ್ಕಾರದಿಂದ ಸಿಗುವ ಸಹಾಯಧನ ಸರಿಯಾದ ಸಮಯಕ್ಕೆ ಸಿಗಬೇಕೆಂದರೆ ಪಹಣಿ ತಿದ್ದುಪಡಿಯ ಅವಶ್ಯಕತೆ ಇರುತ್ತದೆ.

• ಇದರ ಮುಖ್ಯ ಲಾಭ ಎಂದರೆ ಪಿಎಂ ಕಿಸಾನ್ ಆಗಲಿ ಅಥವಾ ಸರ್ಕಾರದ ಬೇರೆ ಯಾವುದೋ ಯೋಜನೆಯಿಂದ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲು ಪಹಣಿಯಲ್ಲಿ ತಿದ್ದುಪಡಿ ಮಾಡುವುದು ಅವಶ್ಯಕತೆ ಇರುತ್ತದೆ.

• ನೀವು ಬ್ಯಾಂಕಿನಲ್ಲಿ ಬೆಳೆ ಸಾಲ ತೆಗೆದುಕೊಳ್ಳುವಾಗ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ನಿಮ್ಮ ಪಹಣಿಯಲ್ಲಿರುವ ಹೆಸರು ಸರಿ ಹೊಂದಬೇಕಾಗುತ್ತದೆ. ಇದಕ್ಕಾಗಿ ಪಹಣಿ ತಿದ್ದುಪಡಿ ಮಾಡುವುದು ತುಂಬಾ ಅವಶ್ಯಕವಾಗಿರುತ್ತದೆ.

ಇದಿಷ್ಟು ಪಹಣಿ ತಿದ್ದುಪಡಿಯ ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದ್ದು ರೈತರು ಈ ಉಪಯುಕ್ತ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಇದರ ಲಾಭವನ್ನು ಪಡೆದುಕೊಳ್ಳಬೇಕು.

Leave a Reply

Your email address will not be published. Required fields are marked *