ನಮಸ್ಕಾರ ಪ್ರಿಯ ರೈತ ಭಾಂದವರೇ, ಇಂದು ನಾವು ಯಾವ ಹೊಲದ ಅಥವಾ ಜಮೀನಿನ ಮೇಲೆ ಎಷ್ಟು ಸಾಲ ಇದೆ ಮತ್ತು ಆ ಹೊಲದ ಮೇಲೆ ಇರುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಬರೀ ಕೇವಲ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಇವೆಲ್ಲವುದರ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.

ನಿಮ್ಮ ಹೊಲದ ಅಥವಾ ಜಮೀನಿನ ಮೇಲೆ ಇರುವ ಸಂಪೂರ್ಣ ಸಾಲದ ಮಾಹಿತಿಯನ್ನು ನಿಮ್ಮ ಪಹಣಿಯಿಂದ ಪಡೆಯಲು ಸಾಧ್ಯವಿಲ್ಲ. ಅದಕ್ಕೆ ಬೇರೆ ಪ್ರಮಾಣ ಪತ್ರ ಬೇಕಾಗುತ್ತದೆ. ಆ ಪ್ರಮಾಣ ಪತ್ರದ ಹೆಸರು “EC” (Encumbarence Certificate).

ಎಂಕೆಂಬರೆನ್ಸ್ ಸರ್ಟಿಫಿಕೇಟ್ (EC) ಎಂದರೇನು?

ನೀವು ನಿಮ್ಮ ಹೊಲದ ಮೇಲೆ ಸಾಲ ತೆಗೆದುಕೊಳ್ಳಲು ಹೋದಾಗ ಬ್ಯಾಂಕಿನಲ್ಲಿ ಅಧಿಕಾರಿಗಳು ನಿಮಗೆ EC ಕೊಡಲು ಕೇಳುತ್ತಾರೆ. ಅದರಲ್ಲಿ ನೀವು ಈಗಾಗಲೇ ನಿಮ್ಮ ಹೊಲ ಅಥವಾ ಜಮೀನಿನ ಮೇಲೆ ಸಾಲವನ್ನು ತೆಗೆದುಕೊಂಡಿದ್ದರೆ ಅದರ ಸಂಪೂರ್ಣ ಮಾಹಿತಿ ಅದರಲ್ಲಿ ನೀಡಲಾಗಿರುತ್ತದೆ.

ನೀವು ನಿಮ್ಮ ಜಮೀನಿನ ಮೇಲೆ ಸಾಲ ತೆಗೆದುಕೊಳ್ಳುವ ಮೊದಲು ಬ್ಯಾಂಕಿನಲ್ಲಿ ಅಧಿಕಾರಿಗಳು ನಿಮಗೆ ನಿಮ್ಮ ಜಮೀನಿನ ಪಹಣಿ ಅಥವಾ ಉತಾರಿಯ ಮೇಲೆ ಬೋಜಾ ಕೂರಿಸಲು ಹೇಳುತ್ತಾರೆ. ನಿಮ್ಮ ಜಮೀನಿನ ಅಥವಾ ನಿಮ್ಮ ಹೊಲದ ಸಾಲದ ಸಂಪೂರ್ಣ ಮಾಹಿತಿಯನ್ನು ಕೇವಲ ಉತಾರಿ ಅಥವಾ ಪಹಣಿಯಿಂದ ಪಡೆಯಲು ಸಾಧ್ಯವಿಲ್ಲ. ಕೇವಲ ಅಧಿಕೃತವಾಗಿ ಹಾಗೂ ನಿರ್ಧಾಷ್ಟವಾಗಿ ಪಡೆದಂತಹ ಸಾಲದ ವಿವರವನ್ನು ಮಾತ್ರ ಪಹಣಿಯಿಂದ ಪಡೆಯಬಹುದು. ನಿಮ್ಮ ಹೊಲದ ಸಂಪೂರ್ಣ ಸಾಲದ ಮಾಹಿತಿಯನ್ನು ಪಡೆಯಲು EC (Encembarence Certificate) ಬೇಕೇ ಬೇಕು.

ಆದ್ದರಿಂದ ಬ್ಯಾಂಕಿನಲ್ಲಿ ಅಧಿಕಾರಿಗಳು ಸಾಲ ನೀಡುವ ಮೊದಲು EC ತರಲು ಹೇಳುತ್ತಾರೆ.

ರೈತರು ಜಮೀನು ಖರೀದಿಸುವ ಮೊದಲು ಗಮನಿಸಬೇಕಾದ ಅಂಶಗಳು ಏನೇನು?

ರೈತರು ಯಾವುದಾದರು ಜಮೀನನ್ನು ಖರೀದಿ ಮಾಡಬೇಕೆಂದುಕೊಂಡಿದ್ದರೆ ನೀವು ಆ ಜಮೀನಿನ ಮೇಲೆ ಇರುವ ಸಾಲದ ಮಾಹಿತಿ ವಿವರಗಳನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ನೀವು EC ಸರ್ಟಿಫಿಕೇಟ್ ಅನ್ನು ಪರಿಶೀಲಿಸಿ ಆ ಹೊಲದ ಮೇಲೆ ಸಾಲ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜಮೀನಿನ ಹಳೆಯ ಮಾಲಿಕರು ಸಾಲವನ್ನು ತುಂಬಿದ ನಂತರ ನೀವು ಆ ಜಮೀನನ್ನು ಖರೀದಿಸಬಹುದು.

ನೀವು ಜಮೀನು ವರ್ಗಾವಣೆಯ ಬಗ್ಗೆ ವ್ಯವಹಾರಿಸುವಾಗ EC ಸರ್ಟಿಫಿಕೇಟ್ ಅವಶ್ಯಕವಾಗಿ ಬೇಕಾಗುತ್ತದೆ.

EC ಸರ್ಟಿಫಿಕೇಟ್ ಅನ್ನು ಪಡೆಯುವುದು ಹೇಗೆ?

ಸರ್ಟಿಫಿಕೇಟ್ ಪಡೆಯಲು ಬೇಕಾಗುವ ದಾಖಲೆಗಳನ್ನು ನೋಡುವುದಾದರೆ,

» ಪಹಣಿ

» ಆಧಾರ್ ಕಾರ್ಡ್

» ಖಾತೆ ಉತಾರಿ

» ಬ್ಯಾಂಕ ಪಾಸ್ ಬುಕ್

» ಪಾಸ್ ಪೋರ್ಟ್ ಸೈಜ್ ಫೋಟೋ

ಈ ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಅದರ ಜೊತೆಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಿಮಗೆ ಸಂಬಂಧಪಟ್ಟ ಕಚೇರಿಗೆ ಅಥವಾ ತಹಶೀಲ್ದಾರ್ ಕಚೇರಿಗೆ ಹೋಗಿ ನಿಮ್ಮ ಅರ್ಜಿಯನ್ನು ಸಲ್ಲಿಸಿ EC ಪಡೆದುಕೊಳ್ಳಬಹುದು.

ಅದೇ ರೀತಿಯಲ್ಲಿ ಆನ್ ಲೈನ್ ಮೂಲಕ ಸರ್ಟಿಫಿಕೇಟ್ ಪಡೆಯುವುದು ಹೇಗೆ?

ನೀವು ಆನ್ ಲೈನ್ ಮೂಲಕ EC ಪಡೆಯಲು

www.kaverionline.karntaka.gov.in

ಎಂಬ ವೆಬ್ ಸೈಟ್ ಗೆ ಭೇಟಿ ನೀಡಿ EC ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳಬಹುದು.

ಇದಿಷ್ಟು Encumbarence Certificate (EC) ಬಗ್ಗೆ ಇರುವ ಸಂಪೂರ್ಣ ಮಾಹಿತಿಯಾಗಿದ್ದು ರೈತರು ಈ ಉಪಯುಕ್ತ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಇದರ ಲಾಭವನ್ನು ಪಡೆದುಕೊಳ್ಳಬೇಕು.

#ಬೈಕ್ ಟ್ರೋಲಿ ರೈತನ ಮಿತ್ರ!!
ಲಿಫ್ಟ್ ಮತ್ತು ರಿವರ್ಸ್ ಗೇರ್ ಎರಡು ಇವೆ!!👇🏻👇🏻

https://krushivahini.com/2023/01/31/bike-trolley-is-farmers-friend-there-are-two-lift-and-reverse-gear/

#ರೈತರ ಖಾತೆಗೆ 13ನೇ ಕಂತಿನ ಹಣ ₹2,000 ಅಥವಾ ₹3,000 ಜಮಾ??ಯಾವುದು ಸತ್ಯ ಯಾವುದು ಸುಳ್ಳು??

Leave a Reply

Your email address will not be published. Required fields are marked *