ಪ್ರಿಯ ರೈತರೇ, ಕಳೆದ ವರ್ಷಗಳಲ್ಲಿ ಕೋವಿಡ್-19 (Covid 19) ಸಾಂಕ್ರಾಮಿಕ ರೋಗದ ಹಾವಳಿಯಿಂದ ಅನೇಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ.
ಹೀಗಾಗಿ ಅನೇಕ ಯುವಕರು ಹಳ್ಳಿಯ ಕಡೆ ಮುಖ ಮಾಡುತ್ತಿದ್ದಾರೆ. ಹೀಗೆ ಹಳ್ಳಿಗೆ ಬಂದ ಯುವಕರು ಕೆಲವರು ತಮ್ಮ ವ್ಯವಸಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರೆ. ಇನ್ನೂ ಕೆಲವು ಯುವಕರು ಹೊಸ ಹೊಸ ಕೃಷಿ ಆಧಾರಿತ ವ್ಯವಹಾರಗಳನ್ನು ಪ್ರಾರಂಭಿಸುತ್ತಿದ್ದಾರೆ.
ನೀವು ಈಗ ಹೊಸ ವ್ಯವಹಾರವನ್ನು ಪ್ರಾರಂಭಿಸುತ್ತಿದ್ದರೆ ಅದಕ್ಕೆ ಹೂಡಿಕೆ ಮಾಡಲು ಸರ್ಕಾರವು ಜನರಿಗೆ ಸಾಲಗಳು ಮತ್ತು ಸಬ್ಸಿಡಿಗಳ ರೂಪದಲ್ಲಿ ಎಲ್ಲಾ ಅಗತ್ಯ ಬೆಂಬಲವನ್ನು ಒದಗಿಸುತ್ತದೆ.
ಇವತ್ತಿನ ದಿನ ನಾವು ಭಾರತದ ಹೆಚ್ಚು ಬೇಡಿಕೆಯ ಕೃಷಿ ವ್ಯವಹಾರಗಳ ಬಗ್ಗೆ ಇರುವ ಸಂಪೂರ್ಣ ಮಾಹಿತಿ ಮತ್ತು ವಿವರಗಳನ್ನು ತಿಳಿದುಕೊಳ್ಳೋಣ.
ಅತ್ಯುತ್ತಮ ಕೃಷಿ ವ್ಯವಹಾರಗಳ ಯೋಜನೆಗಳ ಪಟ್ಟಿಯನ್ನು ನೋಡುವುದಾದರೆ,
» ಸಾವಯವ ಗೊಬ್ಬರ ಉತ್ಪಾದನೆ:
ಇತ್ತೀಚಿನ ದಿನಗಳಲ್ಲಿ ಎರೆಗೊಬ್ಬರ ಮತ್ತು ಸಾವಯವ ಗೊಬ್ಬರವನ್ನು ತಯಾರಿಸುವುದು ದೇಶೀಯ ವ್ಯವಹಾರವಾಗಿದೆ. ಈ ವ್ಯವಹಾರವನ್ನು ಕಡಿಮೆ ಬಂಡವಾಳ ಹೂಡಿಕೆಯಲ್ಲಿ ಮಾಡಬಹುದು, ನೀವು ಹೊಂದಿರಬೇಕಾಗಿರುವುದು ಅದರ ಉತ್ಪಾದನಾ ಪ್ರಕ್ರಿಯೆಯ ಬಗ್ಗೆ ಸ್ವಲ್ಪ ಅರಿವು. ಅಷ್ಟೇ ಅಂತ ಹೇಳಬಹುದು.
» ರಸಗೊಬ್ಬರ ವಿತರಣಾ ವ್ಯವಹಾರ:
ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಈ ವ್ಯವಹಾರವನ್ನು ಸುಲಭವಾಗಿ ಮಾಡಬಹುದು. ರಸಗೊಬ್ಬರ ವಿತರಣಾ ವ್ಯವಹಾರದಲ್ಲಿ ನೀವು ದೊಡ್ಡ ನಗರಗಳಿಂದ ರಸಗೊಬ್ಬರಗಳನ್ನು ಖರೀದಿಸಿ ಗ್ರಾಮೀಣ ಪ್ರದೇಶಗಳಿಗೆ ಮಾರಾಟ ಮಾಡಬಹುದು.
» ಡೈರಿ ವ್ಯವಹಾರ:
ಡೈರಿ ವ್ಯವಹಾರವು ಭಾರತದಲ್ಲಿ ಅತ್ಯಂತ ಲಾಭದಾಯಕ ಕೃಷಿ ವ್ಯವಹಾರವಾಗಿದೆ. ಡೈರಿ ವ್ಯವಹಾರವನ್ನು ಪ್ರಾರಂಭಿಸಲು, ನಿಮಗೆ ಉತ್ತಮ ಬಂಡವಾಳ ಹೂಡಿಕೆ ಮತ್ತು ಡೈರಿ ತಜ್ಞರಿಂದ ಸ್ವಲ್ಪ ಮಾರ್ಗದರ್ಶನ ಬೇಕು. ಆದರೆ ಪೂರ್ಣ ಉತ್ಸಾಹದಿಂದ ಮಾಡಿದರೆ, ಇದೊಂದು ಉತ್ತಮವಾದ ಲಾಭದಾಯಕವಾದ ವ್ಯವಹಾರವಾಗಬಹುದು.
» ಅಣಬೆ ಕೃಷಿ ವ್ಯವಹಾರ:
ಅಣಬೆ ಕೃಷಿ ವ್ಯವಹಾರವು ಕಡಿಮೆ ಸಮಯದಲ್ಲಿ ನಿಮಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಇದಲ್ಲದೆ, ಇದನ್ನು ಕಡಿಮೆ ವೆಚ್ಚದಲ್ಲಿ ಮತ್ತು ಕಡಿಮೆ ಸ್ಥಳಾವಕಾಶದಲ್ಲಿ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಮತ್ತು ಮನೆಗಳಲ್ಲಿ ಅಣಬೆಗೆ ಬೇಡಿಕೆ ಹೆಚ್ಚುತ್ತಾಲೇ ಇದೆ.
» ಹೈಡ್ರೋಪೋನಿಕ್ ರಿಟೇಲ್ ಸ್ಟೋರ್:
ಹೈಡೋಪೋನಿಕ್ಸ್, ಏರೋಪೋನಿಕ್ಸ್ ತಂತ್ರಜ್ಞಾನದ ಬಳಕೆಗೆ ಈ ದಿನಗಳಲ್ಲಿ ತುಂಬಾ ಬೇಡಿಕೆಯಿದೆ. ಹೈಡೋಪೋನಿಕ್ಸ್ ವ್ಯವಸ್ಥೆಯಲ್ಲಿ ಸಸ್ಯಗಳು, ಬೆಳೆಗಳನ್ನು ಮಣ್ಣು ಇಲ್ಲದೆ ಬೆಳೆಯಲಾಗುತ್ತದೆ. ಈ ವ್ಯವಹಾರದಲ್ಲಿ ನೀವು ಒಂದೇ ಸ್ಥಳದಲ್ಲಿ ಅನೇಕ ಹೈಡೋಪೋನಿಕ್ಸ್ ಉಪಕರಣಗಳನ್ನು ಮಾರಾಟ ಮಾಡಬಹುದು. ಅಗತ್ಯವಿರುವ ಹೂಡಿಕೆಯು ನಿಮ್ಮ ಅಂಗಡಿಯಲ್ಲಿ ನೀವು ಇಟ್ಟುಕೊಳ್ಳುವ ಉಪಕರಣಗಳು ಅಥವಾ ಪರಿಕರಗಳ ಪ್ರಕಾರವನ್ನು ಆಧರಿಸಿರುತ್ತದೆ.
» ಸಾವಯವ ಹಸಿರುಮನೆ:
ಸಾವಯವ ಹಸಿರುಮನೆ ವ್ಯವಹಾರವು ಲಾಭಧಾಯಕವಾಗಿದೆ. ಈ ಮೊದಲು ಈ ಸಾವಯವ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಮಾಡಲಾಗುತ್ತಿತ್ತು. ಆದರೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಜನರು ಈಗ ಸಾವಯವ ಹಸಿರುಮನೆಗಳನ್ನು ನಿರ್ಮಿಸುತ್ತಿದ್ದಾರೆ.
» ಮರ ಸಾಕಾಣಿಕೆ:
ದೀರ್ಘಕಾಲದ ವ್ಯವಹಾರವನ್ನು ಕೇಂದ್ರೀಕರಿಸಿದಾಗ ಮರ ಸಾಕಾಣಿಕೆಯು ಹೆಚ್ಚಿನ ಆದಾಯದ ತರುವ ವ್ಯವಹಾರವಾಗಿದೆ. ನೀವು ಮರಗಳನ್ನು ಬೆಳೆಸುವ ಮತ್ತು ಮಾರಾಟ ಮಾಡುವ ಮೂಲಕ ಆದಾಯವನ್ನು ಗಳಿಸಬಹುದು.
ಈ ವ್ಯವಹಾರದಲ್ಲಿ ಮರಗಳು ಬೆಳೆಯಲು ಸಮಯ ತೆಗೆದುಕೊಳ್ಳುವುದರಿಂದ ನೀವು ತಾಳ್ಮೆಯನ್ನು ಹೊಂದಿರಬೇಕು ಮತ್ತು ಈ ಕಾರಣದಿಂದಾಗಿ ವ್ಯವಹಾರ ಮತ್ತು ಅದರ ಲಾಭವೂ ತಡವಾಗಿ ಬರುತ್ತದೆ. ಆದರೆ ಇದು ಉತ್ತಮ ಲಾಭದಾಯಕ ಕೃಷಿ ವ್ಯವಹಾರವಾಗಿದೆ.
» ಜೇನು ಸಾಕಾಣಿಕೆ:
ಇತ್ತೀಚಿನ ದಿನಗಳಲ್ಲಿ ಜೇನುತುಪ್ಪದ ಬೇಡಿಕೆಯೂ ಹೆಚ್ಚುತ್ತಿದೆ. ಆದ್ದರಿಂದ ಭಾರತದಲ್ಲಿ ಜೇನು ಸಾಕಾಣಿಕೆ ವ್ಯವಹಾರವು ಲಾಭದಾಯಕ ಕೃಷಿ ವ್ಯವಹಾರವಾಗಿದೆ. ಜೇನು ಸಾಕಾಣಿಕೆಯನ್ನು ಪ್ರಾರಂಭಿಸಲು ಮೊದಲು ನೀವು ಅದರ ತರಬೇತಿಯನ್ನು ಪಡೆಯಬೇಕಾಗುತ್ತದೆ.
» ಹಣ್ಣುಗಳು ಮತ್ತು ತರಕಾರಿ ರಫ್ತು ವ್ಯವಹಾರ:
ಈ ವ್ಯವಹಾರದಲ್ಲಿ, ನೀವು ಸ್ಥಳೀಯ ಹೊಲಗಳು ಅಥವಾ ರೈತರಿಂದ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸಬೇಕು ಮತ್ತು ಅವುಗಳನ್ನು ದೊಡ್ಡ ನಗರಗಳಿಗೆ ರಫ್ತ್ತು ಮಾಡಬೇಕು. ಇದೊಂದು ಕಡಿಮೆ ಬಂಡವಾಳ ಮತ್ತು ಲಾಭದಾಯಕ ಕೃಷಿಯಾಗಿದೆ.
» ಗಿಡಮೂಲಿಕೆಗಳ ಕೃಷಿ:
ಔಷಧೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳನ್ನು ಬೆಳೆಸುವುದು ಮತ್ತೊಂದು ಲಾಭದಾಯಕ ಕೃಷಿ ವ್ಯವಹಾರವಾಗಿದೆ. ನೀವು ಔಷಧೀಯ ಸಸ್ಯಗಳ ಮೂಲಭೂತ ಜ್ಞಾನವನ್ನು ಹೊಂದಿದ್ದರೆ ಮತ್ತು ನಿಮಗೆ ಸಾಕಷ್ಟು ಭೂಮಿ ಇದ್ದರೆ, ಅದರ ಕೃಷಿಯಿಂದ ನೀವು ಸುಲಭವಾಗಿ ಉತ್ತಮ ಆದಾಯವನ್ನು ಗಳಿಸಬಹುದು. ಅದೇ ಸಮಯದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಲು ಸರ್ಕಾರವು ಸಬ್ಸಿಡಿಗಳನ್ನು ಸಹ ನೀಡುತ್ತದೆ.
» ಮೆಕ್ಕೆಜೋಳ ಕೃಷಿ:
ಮೆಕ್ಕೆಜೋಳವು ಬಹುಮುಖ ಬೆಳೆಯಾಗಿದೆ. ಮೆಕ್ಕೆಜೋಳದ ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ಕೆ ಮಾಡುವ ಮೂಲಕ, ನೀವು ಬಂಪರ್ ಇಳುವರಿಯನ್ನು ಪಡೆಯಬಹುದು.
» ಮೇಕೆ ಸಾಕಾಣಿಕೆ:
ಮೇಕೆ ಸಾಕಾಣಿಕೆ ವ್ಯವಹಾರವು ಪ್ರಪಂಚದಾದ್ಯಂತ ಬಹಳ ಲಾಭದಾಯಕ ವ್ಯವಹಾರವಾಗಿದೆ. ಮತ್ತು ಅದರ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿಂದಾಗಿ ಲಾಭದಾಯಕವಾಗಿದೆ. ಉತ್ತಮ ವಿಷಯವೆಂದರೆ ಮೇಕೆ ಸಾಕಾಣಿಕೆಯನ್ನು ಕಡಿಮೆ ಬಂಡವಾಳ ಹೂಡಿಕೆಯಲ್ಲಿ ಮಾಡಬಹುದು.
» ಆಲೂಗೆಡ್ಡೆ ಪುಡಿ ವ್ಯವಹಾರ:
ಆಲೂಗೆಡ್ಡೆ ಪುಡಿಯನ್ನು ಲಘು ಆಹಾರ ಉದ್ಯಮದಲ್ಲಿ ಅತಿ ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ತರಕಾರಿ ಗ್ರೇವಿ ಮತ್ತು ಸೂಪ್ ತಯಾರಿಸಲು ಸಹ ಬಳಸಲಾಗುತ್ತದೆ. ಆದ್ದರಿಂದ ನೀವು ಈ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು.
» ಮಸಾಲೆ ಸಂಸ್ಕರಣೆ:
ಸಾವಯವ ಮಸಾಲೆಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಇದೆ. ನಮಗೆ ಮನೆಯಲ್ಲಿಯೂ ಮಸಾಲೆಗಳು ಬೇಕು. ಅದರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಪ್ರಕ್ರಿಯೆಯು ತುಂಬಾ ಕಷ್ಟವಲ್ಲ ಮತ್ತು ಕಡಿಮೆ ಬಂಡವಾಳ ಹೂಡಿಕೆಯೊಂದಿಗೆ ಈ ವ್ಯವಹಾರವನ್ನು ಪ್ರಾರಂಭಿಸಬಹುದು.
» ತರಕಾರಿ ಕೃಷಿ:
ನೀವು ಕೃಷಿಗೆ ಯೋಗ್ಯವಾದ ಭೂಮಿಯನ್ನು ಹೊಂದಿದ್ದರೆ ಮತ್ತು ಅದರಲ್ಲಿ ಕೆಲಸ ಮಾಡಲು ಸಾಕಷ್ಟು ಜನರನ್ನು ಸಹ ಹೊಂದಿದ್ದರೆ, ನೀವು ವಿವಿಧ ತರಕಾರಿಗಳನ್ನು ಬೆಳೆಯಬಹುದು. ಉತ್ತಮ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿ ಉತ್ತಮ ಲಾಭಕ್ಕೆ ಕಾರಣವಾಗಬಹುದು.
» ಸೋಯಾಬೀನ್ ಕೃಷಿ:
ಸೋಯಾ ಹಾಲು, ಸೋಯಾ ಹಿಟ್ಟು, ಸೋಯಾ ಸಾಸ್, ಸೋಯಾಬೀನ್ ಎಣ್ಣೆ ಮುಂತಾದ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಸೋಯಾಬೀನ್ ನಿಂದ ತಯಾರಿಸಲಾಗುತ್ತದೆ. ನೀವು ಮುಖ್ಯ ಬೆಳೆಯನ್ನು ಹೊಂದಿದ್ದರೆ ಅದರಲ್ಲಿ ಸೋಯಾಬೀನ್ ಬೆಳೆಯುನ್ನು ಅಂತರ ಬೆಳೆಯಾಗಿ ಬೆಳೆಯಬಹುದು.
» ಬೀಜ ಮಾರಾಟ ವ್ಯವಹಾರ:
ನೀವು ಉತ್ತಮ ಗುಣಮಟ್ಟದ ಅಥವಾ ಪ್ರಮಾಣೀಕೃತ ಬೀಜಗಳನ್ನು ಸಹ ಮಾರಾಟ ಮಾಡಬಹುದು. ಈ ವ್ಯವಹಾರವನ್ನು ಮಾಡಲು, ಕೆಲವು ಕಾರ್ಯವಿಧಾನಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಅದರಲ್ಲಿ ಹೆಚ್ಚು ಬಂಡವಾಳ ಹೂಡಿಕೆ ಮಾಡುವ ಅಗತ್ಯವಿಲ್ಲ.
» ಆಲೂಗೆಡ್ಡೆ ಚಿಪ್ಸ್ ಉತ್ಪಾದನೆ:
ಫ್ರೆಂಚ್ ಪ್ರೈಸ್ ಮತ್ತು ಆಲೂಗೆಡ್ಡೆ ಚಿಪ್ಸ್ಗೆ ಪ್ರಪಂಚದಾದ್ಯಂತ ಬೇಡಿಕೆ ಇದೆ. ಬಹಳ ಲಾಭದಾಯಕ ವ್ಯವಹಾರವಾಗಿದ್ದು, ಕಡಿಮೆ ಬಂಡವಾಳ ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು.
# ಸರ್ಕಾರದ ಸಾಲಗಳು ಮತ್ತು ಸಬ್ಸಿಡಿಗಳು:
ಈ ಯಾವುದೇ ವ್ಯವಹಾರಗಳನ್ನು ಪ್ರಾರಂಭಿಸಲು ಬಯಸುವವರಿಗೆ ಸರ್ಕಾರವು ಸಾಲಗಳು ಮತ್ತು ಸಬ್ಸಿಡಿಗಳನ್ನು ಒದಗಿಸುತ್ತದೆ. ನೀವು ಮಾಡಬೇಕಾಗಿರುವುದು ನಿಮ್ಮ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸುವುದು. ನಿಮ್ಮ ವ್ಯವಹಾರ ಯೋಜನೆಯನ್ನು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗೆ ವಿವರಿಸಿ ಮತ್ತು ಎಲ್ಲವೂ ಸರಿಯಾಗಿದ್ದರೆ ನೀವು ತ್ವರಿತವಾಗಿ ಸಾಲವನ್ನು ಪಡೆಯುತ್ತೀರಿ.
ಹೆಚ್ಚಿನ ಕೃಷಿ ಸಂಬಂಧಿತ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ…
ಈ ರೀತಿಯಲ್ಲಿ ನೀವು ಸರ್ಕಾರ ನೀಡುವ ಸಬ್ಸಿಡಿ ಅಥವಾ ಸಹಾಯಧನವನ್ನು ಪಡೆದುಕೊಳ್ಳಬಹುದು.