ಪ್ರಿಯ ರೈತರೇ, ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಖ್ಯವಾಗಿ ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ತೊಗರಿ ಬೆಳೆಗೆ ಸಂಭವಿಸಿದ ಬೆಳೆ ಹಾನಿಯನ್ನು ರಾಜ್ಯ ಸರ್ಕಾರ ವಿಶೇಷ ಪ್ರಕರಣದಲ್ಲಿ ಅಡಿಯಲ್ಲಿ ಪರಿಗಣಿಸಿ, ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್‌ಗೆ ಸುಮಾರು 10,000 ರೂಪಾಯಿಗಳಂತೆ ರಾಜ್ಯ ಸರ್ಕಾರದ ಎನ್.ಡಿ.ಆರ್.ಎಫ್. ಅಥವಾ ಎಸ್.ಡಿ.ಆರ್.ಎಫ್. ತನಿಖಾ ದಳಗಳ ಮಾರ್ಗಸೂಚಿಯ ಅನುಸಾರವಾಗಿ ಗರಿಷ್ಟ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಈ ತೊಗರಿ ಬೆಳೆಯ ನೆಟೆ ರೋಗದಿಂದ ಬಾಧೀತರಾದಂತಹ ರೈತರಿಗೆ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಈ ತೊಗರಿ ಬೆಳೆಯ ನೆಟೆ ರೋಗಕ್ಕಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿರುವ ಒಟ್ಟು ಪರಿಹಾರ ಮೊತ್ತ 223 ಕೋಟಿಗಳು ಎಂದು ಅಂದಾಜಿಸಲಾಗಿದೆ.
ರಾಜ್ಯದ ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ಜಿಲ್ಲಾ ಪ್ರವಾಸದಿಂದ ಹಿಂತಿರುಗಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ಘೋಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸುರಿದಂತಹ ಅಕಾಲಿಕ ಮಳೆಯಿಂದ ಹಾಗೂ ಇದರ ನಂತರ ನವೆಂಬರ್ ತಿಂಗಳಿನಲ್ಲಿ ಕಾಣಿಸಿಕೊಂಡ ಒಣ/ ಶುಷ್ಕ ಅಥವಾ ಹವೇ ವಾತಾವರಣದಿಂದ ತೊಗರಿ ಬೆಳೆಯಲ್ಲಿ ಸಂಕೀರ್ಣ ನೆಟೆ ರೋಗವು ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಳವಾಗಿ ತೊಗರಿ ಬೆಳೆಹಾನಿಯಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಸುಮಾರು 1.98 ಲಕ್ಷ ಹೆಕ್ಟೇರ್, ಬೀದರ ಜಿಲೆಯಲ್ಲಿ ಸುಮಾರು 0.145 ಲಕ್ಷ ಹೆಕ್ಟೇರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸುಮಾರು 0.1028 ಲಕ್ಷ ಹೆಕ್ಟೇರ್ ತೊಗರಿ ಬೆಳೆ ಹಾನಿಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸುಮಾರು 2.2278 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ತೊಗರಿ ಬೆಳೆ ಸಂಕೀರ್ಣ ನೆಟೆ ರೋಗಕ್ಕೆ ಹಾನಿಯಾಗಿರುವುದು ಕಂಡುಬಂದಿದೆ. ಹಾನಿಗೊಳಗಾದ ರೈತರ ನೆರೆವಿಗೆ ಧಾವಿಸಿದ ರಾಜ್ಯ ಸರ್ಕಾರವು ಪರಿಹಾರ ನೀಡಲು “ವಿಶೇಷ ಪ್ರಕರಣ”ವೆಂದು ರಾಜ್ಯ ಸರ್ಕಾರ ತೀರ್ಮಾನಿಸಿ ಈ ಯೋಜನೆ ಅಡಿಯಲ್ಲಿ ಪರಿಹಾರ ಘೋಷಣೆ ಮಾಡಲಾಗಿದೆ.
ರೈತರು ತೊಗರಿ ಬೆಳೆ ಅಥವಾ ಇನ್ನಿತರೇ ಯಾವುದೇ ಬೆಳೆಗಳ ಬೆಳೆ ಹಾನಿ ಪರಿಹಾರ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ತಮಗೆ ಹತ್ತಿರದ ಅಥವಾ ತಮಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು.
ಕೇವಲ ಒಂದೇ ನಿಮಿಷದಲ್ಲಿ ಪಿ ಎಂ ಕಿಸಾನ್,ಬೆಳೆ ಹಾನಿ, ಬೆಳೆ ವಿಮೆಯನ್ನು ನಿಮ್ಮ ಮೊಬೈಲ್ ನಲ್ಲಿಯೇ ಸ್ಟೇಟಸ್ ಚೆಕ್ ನೋಡುವುದು ಹೇಗೆ?👇🏻👇🏻https://krushivahini.com/2023/01/24/crop-damage-pm-kisan-crop-insurance-compensation-status-how-to-check-in-just-one-minute/
ನಿಮ್ಮ ಜಮಿನಿಗೆ ಹೋಗಲು ಕಾಲುದಾರಿ ಅಥವಾ ಬಂಡಿ ದಾರಿ ಇಲ್ಲದಿದ್ದರೆ ಅಧಿಕೃತವಾಗಿ ದಾರಿಯನ್ನು ಪಡೆಯುವುದು ಹೇಗೆ?👇🏻👇🏻https://krushivahini.com/2023/01/19/get-cart-road-to-your-field/
ನಿಮ್ಮ ಬೆಳೆ ಸಾಲದ ಮಾಹಿತಿಯನ್ನು ಮೊಬೈಲ್ ನಲ್ಲಿ ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅನ್ನು ಬಳಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?? 👇🏻👇🏻https://krushivahini.com/2023/01/19/how-to-see-your-crop-loan-waiver-information-on-mobile/
ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣವಾದ ಕೃಷಿ ವಾಹಿನಿ ಸಂಪರ್ಕದಲ್ಲಿರಿ..