ಪ್ರಿಯ ರೈತರೇ, ಬೆಳೆಹಾನಿ ಪರಿಹಾರ ಬಗ್ಗೆ ಇರುವ ಸಂಪೂರ್ಣ ಮಾಹಿತಿ, ಪಿಎಂ ಕಿಸಾನ್ ಯೋಜನೆ ಬಗ್ಗೆ ಮಾಹಿತಿಯನ್ನು ಒಂದೇ ನಿಮಿಷದಲ್ಲಿ ಪಡೆಯುವುದು ಹೇಗೆ? ಯಾವ ರೀತಿ ಸ್ಟೇಟಸ್ ಚೆಕ್ ಮಾಡಬೇಕು ಎಂಬುದರ ಬಗ್ಗೆ ಇರುವ ವಿವರವಾದ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
1) ಬೆಳೆವಿಮೆ ಪರಿಹಾರ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ? ಎಂಬುದನ್ನು ನೋಡುವುದಾದರೆ,
ಈ ಬೆಳೆ ವಿಮೆಯನ್ನು ಎಲ್ಲಿ ಮಾಡಿಸುವುದೆಂದರೆ ‘ಪ್ರಧಾನ್ ಮಂತ್ರಿ ಫಸಲ್ ಭೀಮ ಯೋಜನೆ’ ಅಡಿಯಲ್ಲಿ ಹಿಂಗಾರು ಬೆಳೆಗಳ ವಿಮೆ ಮಾಡಿಸಲು ಈಗಾಗಲೇ ಅರ್ಜಿಯನ್ನು ಕರೆಯಲಾಗಿದೆ. ಬೆಳೆ ಸಾಲ ಪಡೆಯದ ರೈತರು ‘ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ ಅಡಿಯಲ್ಲಿ ಬೆಳೆ ವಿಮೆ ಮಾಡಿಸಲು ಹತ್ತಿರದ ಬ್ಯಾಂಕುಗಳಲ್ಲಾಗಲಿ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ಅರ್ಜಿಯೊಂದಿಗೆ
* ಜಮೀನು ಹೊಂದಿದ ಪಹಣಿ
* ಬ್ಯಾಂಕ್ ಪಾಸ್ ಬುಕ್
* ಆಧಾರ್ ಕಾರ್ಡ್
ನೀಡಬೇಕು. ರೈತರು ಬೆಳೆ ವಿಮೆ ಮಾಡಿಸುತ್ತಾರೆ ಆದರೆ ಯಾವ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸುತ್ತಾರೋ ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತಹ ರೈತರು ಕೆಳಗೆ ಕೊಟ್ಟಿರುವ ಅಧಿಕೃತ
https://www.samrakshane.karnataka.gov.in/
ಎಂಬ ವೆಬ್ ಸೈಟ್ ಅನ್ನು ಸಂಪರ್ಕಿಸುವುದರಿಂದ ಕರ್ನಾಟಕ ರಾಜ್ಯದಲ್ಲಿ ಯಾವ ಜಿಲ್ಲೆಗೆ ಯಾವ ಬೆಳೆ ವಿಮಾ ಕಂಪನಿ ಇದೆ ಎಂಬ ಪಟ್ಟಿ ಸಿಗುತ್ತದೆ. ಆ ಪಟ್ಟಿಯ ಮೂಲಕ ನೀವು ಯಾವ ಬೆಳೆ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಿ ಎಂಬುದನ್ನು ತಿಳಿದುಕೊಳ್ಳಬಹುದು. ರೈತರು ಬೆಳೆ ಹಾನಿ ಮಾಹಿತಿ ಪಡೆದುಕೊಳ್ಳಲು ಜಿಲ್ಲೆಯ ಬೆಳೆ ವಿಮಾ ಸಿಬ್ಬಂದಿ ಮೊಬೈಲ್ ನಂಬರ್ 18001801551 ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
2) ಪಿಎಂ ಕಿಸಾನ್ ಯೋಜನೆ ಬಗ್ಗೆ ಇರುವ ಹಣದ ಸ್ಟೇಟಸ್ ಹೇಗೆ ಚೆಕ್ ಮಾಡಬೇಕು? ಎಂಬುದನ್ನು ನೋಡುವುದಾದರೆ,
ಫಲಾನುಭವಿಗಳು ಅಥವಾ ರೈತರು ಕೇವಲ ತಮ್ಮ ಮೊಬೈಲ್ ನಂಬರ್ ಅನ್ನು ಉಪಯೋಗಿಸಿಕೊಂಡು ಪಿಎಂ ಕಿಸಾನ್ ಹಣ ಅವರ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ಈಗ ನಾವು ಕೇವಲ ಮೊಬೈಲ್ ನಂಬರನ್ನು ಬಳಸಿಕೊಂಡು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆಯೋ ಇಲ್ಲವ ಎಂಬುದನ್ನು ಚೆಕ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ವಿವರವವನ್ನು ತಿಳಿದುಕೊಳ್ಳೋಣ.
* ಮೊದಲಿಗೆ ಫಲಾನುಭವಿಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿ
ಎಂಬ ವೆಬ್ ಸೈಟ್ ತೆರೆಯಬೇಕಾಗುತ್ತದೆ.
* ಆ ಮುಖಪುಟದಲ್ಲಿ ನಿಮಗೆ ಅಲ್ಲಿ ಬೆನಿಫಿಶಿಯರಿ ಸ್ಟೇಟಸ್ (beneficiary status) ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
* ನಿಮಗಿಲ್ಲಿ ಚೆಕ್ ಮಾಡಲು ಎರಡು ಆಯ್ಕೆಗಳನ್ನು ನೀಡಲಾಗುತ್ತದೆ.
• ಮೊಬೈಲ್ ನಂಬರ್
• ರಿಜಿಸ್ಟ್ರೇಷನ್ ನಂಬರ್
ಇವೆರಡವುಗಳಿಂದ ನೀವು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
* ಅದರಲ್ಲಿ ನೀವು “ಮೊಬೈಲ್ ನಂಬರ್” ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಕೇಳಲಾಗುವ ಕ್ಯಾಪ್ಟ ನಮೂದಿಸಿ “ವಿವರವನ್ನು ಪಡೆಯಿರಿ” (get details) ಎಂಬ ಆಯ್ಕೆಯನ್ನು ಆಯ್ಕೆ ಮಾಡಿ.
ಇದಾದ ನಂತರ ನಿಮಗೆ ಅಲ್ಲಿ
• ನಿಮಗೆ ಎಷ್ಟು ಕಂತುಗಳ ಹಣ ಬಂದಿದೆ.
• ಇನ್ನು ಎಷ್ಟು ಕಂತುಗಳ ಹಣ ಬರುವುದು ಬಾಕಿ ಇದೆ.
• ಪಿಎಂ ಕಿಸಾನ್ ಫಲಾನುಭವಿಯ ಹೆಸರು.
• ಅವರ ಬ್ಯಾಂಕ್ ಖಾತೆ ಮತ್ತು ಅಕೌಂಟ್ ನಂಬರ್ ಮುಂತಾದವುಗಳ ಸಂಪೂರ್ಣ ವಿವರವನ್ನು ಅಲ್ಲಿ ನೀಡಲಾಗುತ್ತದೆ.
ಫಲಾನುಭವಿಗಳು ಅಥವಾ ರೈತರು ತಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಕೇವಲ ಮೊಬೈಲ್ ನಂಬರ್ ಬಳಸಿಕೊಂಡು ಈ ರೀತಿ ಚೆಕ್ ಮಾಡಿಕೊಳ್ಳಬಹುದು.
3) ಬೆಳೆಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ಎಂಬುದನ್ನು ನೋಡುವುದಾದರೆ,
ಮುಖ್ಯವಾಗಿ ಹೇಳಬೇಕೆಂದರೆ ಈಗಾಗಲೇ ಬಿಡುಗಡೆಯಾದ ಪರಿಹಾರ ಹಣವನ್ನು ರೈತರು ಈ ವಿಧಾನದಲ್ಲಿ ತಮ್ಮ ಹಣದ ಮಾಹಿತಿಯನ್ನು ಪಡೆಯಬಹುದು. ಮುಖ್ಯವಾಗಿ ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಲು ರೈತರು ಈ ಕೆಳಗಿನ ಲಿಂಕ್ ಅನ್ನು ಒತ್ತಿ..
https://landrecords.karnataka.gov.in/PariharaPayment/
ಎಂಬ ವೆಬ್ ಸೈಟ್ ಅನ್ನು ತೆರೆಯಬೇಕು. ನಂತರ ಅಲ್ಲಿ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಂಡು, ಯಾವ ವರ್ಷದ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದಾರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ನಂಬರ್ ಹಾಗೂ ಕ್ಯಾಪ್ಟ್ಾ (Capthe Code)ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.