ಪ್ರಿಯ ರೈತರೇ, ಸರ್ಕಾರವು ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ರೈತರಿಗೆ ತಮಗೆ ಆಗಿರುವ ಬೆಳೆ ಸಾಲ ಮನ್ನಾದ ಬಗ್ಗೆ ಸರಿಯಾದ ಮಾಹಿತಿ ಸಿಗುವುದಿಲ್ಲ. ಅದೇ ರೀತಿಯಲ್ಲಿ ಅವರಲ್ಲಿ ಈ ಸಾಲ ಮನ್ನಾದ ಬಗ್ಗೆ ಹಲವಾರು ಗೊಂದಲಗಳಿರುತ್ತವೆ. ಈದೀಗ ರಾಜ್ಯ ಸರ್ಕಾರವು ರೈತರ ಬೆಳೆ ಸಾಲ ಮನ್ನಾದ ಮಾಹಿತಿಯು ಅಧಿಕೃತ ವೆಬ್ ಸೈಟ್ ನಲ್ಲಿ ಸಿಗುವಂತೆ ಮಾಡಿದೆ. ರೈತರು ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ನಿಂದ ಆಧಾರ್ ಕಾರ್ಡ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಬಳಸಿಕೊಂಡು ಸಾಲ ಮನ್ನಾದ ಮಾಹಿತಿಯನ್ನು ಪಡೆಯಬಹುದಾಗಿದೆ.

ರಾಜ್ಯ ಸರ್ಕಾರವು ರೈತರ ಜಮೀನಿನ ಆಧಾರದ ಮೇಲೆ ಅವರಿಗೆ ಸಾಲವನ್ನು ನೀಡುತ್ತದೆ. ರೈತರು ಸಾಲ ತೀರಿಸಲು ಸಶಕ್ತರಾಗಿದ್ದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ತೀರಿಸಬಹುದು. ಆದರೆ ಕೆಲವೊಂದು ಸಲ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಸಾಲ ತೀರಿಸಲು ಸಾಧ್ಯವಾಗಿರುವುದಿಲ್ಲ. ಹೀಗಿದ್ದಾಗ ಸರ್ಕಾರವು ರೈತರ ಬೆಳೆ ಮೇಲೆ ಇರುವ ಸಾಲವನ್ನು ಮನ್ನಾ ಮಾಡುತ್ತದೆ. ಆದರೆ ಕೆಲವೊಂದು ಸಲ ಎಲ್ಲಾ ರೈತರು ಇದರ ಲಾಭ ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಇದರಿಂದ ರೈತರಲ್ಲಿ ಆತಂಕ ಹಾಗೂ ಗೊಂದಲ ಸೃಷ್ಟಿ ಆಗುತ್ತವೆ. ಹೀಗಾಗಿ ಸರ್ಕಾರವು ರೈತರು ತಮ್ಮ ಸಾಲ ಮನ್ನಾ ಆಗಿದಿಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಬೆಳೆ ಸಾಲ ಮನ್ನಾ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ನೀಡಲಾಗಿದೆ.

ರೈತರು ಇಲ್ಲಿಯವರೆಗೆ ಆದ ತಮ್ಮ ಬೆಳೆ ಸಾಲ ಮನ್ನಾದ ಬಗ್ಗೆ ಇರುವ ಮಾಹಿತಿಯನ್ನು ಪಡೆದುಕೊಳ್ಳುವುದು ಹೇಗೆ? ಎಂಬುದನ್ನು ನೋಡುವುದಾದರೆ,

» ಸಾಲ ಮನ್ನಾದ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ..

» ಅದರಲ್ಲಿ “CLWS ನಾಗರೀಕ ವರದಿಗಳು” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.

https://clws.karnataka.gov.in/clws/pacs/citizenreport/

» ನಂತರ ನೀವು ರೇಷನ್ ಕಾರ್ಡ್ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ “fetch details” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈ ಮೇಲೆ ಕೊಟ್ಟಿರುವ ಲಿಂಕನ್ನು ಬಳಸಿ ಸರಳವಾಗಿ ಆಧಾರ್ ಕಾರ್ಡ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರನ್ನು ನಮೂದಿಸಿ ಸುಲಭವಾಗಿ ಎಷ್ಟು ಸಾಲ ಮನ್ನಾ ಆಗಿದೆ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಮನ್ನಾ ಆಗಿದೆ ಎಂಬುದನ್ನು ಸುಲಭವಾಗಿ ಮೊಬೈಲ್ ನಲ್ಲಿ ತಿಳಿಯಿರಿ. ಮೇಲ್ಕಾಣಿಸಿದ ಲಿಂಕ್ ಅಲ್ಲಿ ನಿಮಗೆ ಸಾಲ ಮನ್ನಾ ಸ್ಟೇಟಸ್ ಚೆಕ್ ಮಾಡಲು ತಿಳಿಯದೆ ಹೋದರೆ ಅಥವಾ ಗೊಂದಲವಿದ್ದರೆ ಕೆಳಗೆ ಕೊಟ್ಟಿರುವ ಫೋಟೋ ಗಮನಿಸಿ ಅದರನಂತೆ ಚೆಕ್ ಮಾಡಿಕೊಳ್ಳಿ👇🏻

» ಕೊನೆಯಲ್ಲಿ ನಿಮಗೆ ನಿಮ್ಮ ಹೆಸರು, ಬ್ಯಾಂಕಿನ ಹೆಸರು, ಸಾಲದ ಮೊತ್ತ, ಸಾಲ ಮನ್ನಾ ಆದ ಮೊತ್ತದ ವಿವರ ಮತ್ತು ಇನ್ನಿತರೇ ಮಾಹಿತಿ ಲಭ್ಯವಾಗುತ್ತದೆ.

ಬೆಳೆ ಸಾಲ ಮನ್ನಾದ ಬಗ್ಗೆ ಇರುವ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಕೆಳಗೆ ಕಾಣುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

080-22113255

ಈ ರೀತಿಯಲ್ಲಿ ರೈತರು ತಮ್ಮ ಬೆಳೆ ಸಾಲ ಮನ್ನಾದ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *