ಪ್ರಿಯ ರೈತರೇ, ಲೇಖನದಲ್ಲಿ ನಾವು ರೈತರು ಸಾಮಾನ್ಯವಾಗಿ ಜಮೀನಿಗೆ ಹೋಗಿ ಬರಲು ಬಂಡಿದಾರಿ ಅಥವಾ ಕಾಲು ದಾರಿ ಇರದಿದ್ದರೆ ಅದನ್ನು ಹೇಗೆ ಕ್ರಮಬದ್ಧವಾಗಿ ಪಡೆಯಬೇಕೆಂಬುದನ್ನು ನೋಡೋಣ. ಎಲ್ಲಾ ರೈತರು ತಮ್ಮ ತಮ್ಮ ಜಮೀನಿಗೆ ಹೋಗಬೇಕಾದರೆ ಕಾಲು ದಾರಿಯ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಕೆಲವೊಂದು ಸಲ ಅಣ್ಣ ತಮ್ಮಂದಿರಲ್ಲಿ ಜಗಳವಾಗುವುದರಿಂದ ಜಮೀನಿಗೆ ಹೋಗಲು ದಾರಿ ಇಲ್ಲದಂತಾಗುತ್ತದೆ. ಹೀಗಾಗಿ ಕೊನೆಯದಾಗಿ ನೀವು ಜಮೀನಿನ ಮಾರಾಟ ಮಾಡುವುದಕ್ಕೆ ಮೊರೆ ಹೋಗುತ್ತೀದ್ದಾರೆ ಇಂತಹ ಜಗಳವನ್ನು ನೀವು ದಿನನಿತ್ಯ ನೋಡುತಿರುತ್ತಿರಿ.ಆದರೆ ನಾವು ನಿಮಗೆ ಯಾವ ರೀತಿಯಾಗಿ ನಿಮ್ಮ ಭೂಮಿಗೆ ದಾರಿಯನ್ನು ಮಾಡಿಕೊಳ್ಳಬೇಕು?ನಿಮಗೆ ಮತ್ತೊಬ್ಬರ ಭೂಮಿಗೆ ಹೋಗಲು ಬಂಡಿ ದಾರಿ ಅಥವಾ ಕಾಲುದಾರಿ ಕೊಡದೆ ಇದ್ದಲ್ಲಿ ನೀವು ಏನು ಮಾಡಬೇಕು? ಇವೆಲ್ಲವುಗಳ ಬಗ್ಗೆ ಇರುವ ಸಂಪೂರ್ಣ ಮಾಹಿತಿಯನ್ನು ಇವತ್ತಿನ ದಿನ ತಿಳಿದುಕೊಳ್ಳೋಣ.
ರಾಜ್ಯ ಸರ್ಕಾರದ ಭೂ ಕಂದಾಯ ಇಲಾಖೆಯ ಪ್ರಕಾರ ಹೊಲಕ್ಕೆ ಹೋಗಲು ಅದಕ್ಕೆ ಅದರದೇ ಆದಂತಹ ಬಂಡಿದಾರಿ ಅಥವಾ ಕಾಲುದಾರಿ ಇದ್ದೇ ಇರುತ್ತದೆ. ಜಮೀನಿಗೆ ದಾರಿ ಇದ್ದರೂ ಸಹ ಹಲವಾರು ರೀತಿಯ ತಕರಾರುಗಳಿಂದ ಹೊಲಕ್ಕೆ ಹೋಗಿ ಬರಲು ಅಂದರೆ ಕಾಲು ದಾರಿ ಅಥವಾ ಬಂಡಿದಾರಿ ಗೊಂದಲದಲ್ಲಿ ಇರುತ್ತದೆ.
ನಿಮ್ಮ ಭೂಮಿಗೆ ಅಥವಾ ಹೊಲಕ್ಕೆ ಅಧಿಕೃತವಾಗಿ ದಾರಿ ಇಲ್ಲದಿದ್ದರೆ ಪಡೆದುಕೊಳ್ಳುವುದು ಹೇಗೆ? ಎಂಬುದನ್ನು ನೋಡುವುದಾದರೆ,
- ಒಂದು ವೇಳೆ ನಿಮ್ಮ ಭೂಮಿಗೆ ಹೋಗಿ ಬರಲು ಅಧಿಕೃತ ದಾರಿ ಇಲ್ಲದಿದ್ದರೆ ನೀವು ನಿಮ್ಮ ಅಕ್ಕಪಕ್ಕದ ರೈತರೊಂದಿಗೆ ಮಾತುಕತೆಗಳ ಮೂಲಕ ಸರಿಪಡಿಸಿಕೊಳ್ಳಬಹುದು.
- ಇಷ್ಟಾದರೂ ಸಹ ಅಕ್ಕಪಕ್ಕದ ರೈತರು ಅದಕ್ಕೆ ಒಪ್ಪಿಗೆ ನೀಡದಿದ್ದರೆ ಅಂತಹ ಸಂದರ್ಭದಲ್ಲಿ ನೀವು “Easement act” ಪ್ರಕಾರ ಪ್ರತಿಯೊಬ್ಬ ಜಮೀನಿನ ಮಾಲೀಕನಿಗೂ ಅವನ ಜಮೀನಿಗೆ ಹೋಗಲು ಸ್ವಂತ ದಾರಿ ಪಡೆದುಕೊಳ್ಳಲು ಅವಕಾಶವಿದೆ.
ನಿಮ್ಮ ಜಮೀನಿಗೆ ಅಥವಾ ಭೂಮಿಗೆ ಕಾಲುದಾರಿ ಅಥವಾ ಬಂಡಿದಾರಿ ಮಾಡಿಕೊಳ್ಳಲು ಬೇಕಾಗುವ ದಾಖಲೆಗಳನ್ನು ನೋಡುವುದಾದರೆ,
* ಮೊದಲಿಗೆ ಯಾವುದೇ ಭೂಮಿಯಾಗಲಿ ಅದಕ್ಕೆ ಒಂದು ದಾರಿ ಪಡೆದುಕೊಳ್ಳಬೇಕಾದರೆ ಅರ್ಜಿ ಸಲ್ಲಿಸಲು ಪ್ರಮುಖವಾಗಿ ಆ ಭೂಮಿಯ ಸರ್ವೆ ನಂಬರ್ ಮತ್ತು ಆ ಜಮೀನಿನ ನಕ್ಷೆಯು ನಿಮ್ಮ ಹತ್ತಿರ ಇರಬೇಕಾಗುತ್ತದೆ.
* ನಂತರ ನಿಮ್ಮ ಜಮೀನಿನ ಸುತ್ತ ಮುತ್ತ ನಾಲ್ಕು ದಿಕ್ಕುಗಳಲ್ಲಿ ಯಾರ ಯಾರ ಜಮೀನು ಇದೆ ಮತ್ತು ಅವುಗಳ ಸರ್ವೆ ನಂಬರ್ ನಕ್ಷೆ ಸಹ ಕಡ್ಡಾಯವಾಗಿ ಬೇಕಾಗುತ್ತದೆ.
* ಇದಾದ ನಂತರ ಪಹಣಿ ಪತ್ರ ಮತ್ತು ಆಧಾರ್ ಕಾರ್ಡ್, ನಿಮ್ಮ ಸುತ್ತ ಮುತ್ತ ಇರುವ ಜಮೀನಿನ ಪಹಣಿ ಪತ್ರ ಮತ್ತು ವಿಳಾಸಗಳು ಬೇಕಾಗುತ್ತದೆ.
* ಇದಾದ ನಂತರ ಪ್ರಮುಖ ಅರ್ಜಿಗಳಾದಂತಹ ನಿಮ್ಮ ತಾಲೂಕು ಸರ್ವೆ ಆಫೀಸ್ ಗಳಿಂದ ನಿಮ್ಮ ಭೂಮಿಗೆ ದಾರಿ ಇಲ್ಲ ಎಂದು ಒಂದು ಅರ್ಜಿಯನ್ನು ಬರೆದುಕೊಡಬೇಕಾಗುತ್ತದೆ.
* ಇದಾದ ನಂತರ ನಿಮ್ಮ ಜಮೀನಿಗೆ ದಾರಿ ಇಲ್ಲ ಎಂಬುದಾಗಿ ಒಂದು ಸಾಧಾರಣ ಅರ್ಜಿಯನ್ನು ಬರೆದು ಕೊಡಬೇಕಾಗುತ್ತದೆ.
ಈ ಮೇಲೆ ಹೇಳಿದ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಂಡು ಅರ್ಜಿಯನ್ನು ನಿಮ್ಮ DDLR ಕಚೇರಿಗೆ /ಕಂದಾಯ ಇಲಾಖೆಯಲ್ಲಿ ದೂರು ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ನೀವು ಅರ್ಜಿ ಸಲ್ಲಿಸದ ನಂತರ ನಿಮ್ಮ ಅರ್ಜಿ ಪ್ರಕ್ರಿಯೆ ಯಾವ ರೀತಿಯಾಗಿ ನಡೆಯುತ್ತದೆ? ಎಂಬುದನ್ನು ನೋಡುವುದಾದರೆ,
ತಾವು ಅರ್ಜಿ ಸಲ್ಲಿಸಿದ ನಂತರ DDLR ಕಚೇರಿಯವರು ಮತ್ತೆ ಪುನಃ ನಿಮ್ಮ ಜಮೀನನ್ನು ಸರ್ವೆ ಮಾಡಬಹುದು ಅಥವಾ ನಿಮ್ಮ ಊರಿನ ತಲಾಟಿ ಹತ್ತಿರ ನಿಮ್ಮ ಜಮೀನಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದಾದ ನಂತರ ನಿಮ್ಮ ಸುತ್ತ ಮುತ್ತ ಇರುವ ಜಮೀನು ಮಾಲೀಕರಿಗೆ ನೋಟಿಸ್ ನೀಡಲಾಗುವುದು ಮತ್ತು ದಾರಿಯನ್ನು ಬಿಟ್ಟು ಕೊಡುವಂತೆ ಆದೇಶವನ್ನು ನೀಡಲಾಗುತ್ತದೆ.
ಈ ರೀತಿಯಲ್ಲಿ ರೈತರು ತಮ್ಮ ಜಮೀನಿಗೆ ಹೋಗಿ ಬರಲು ಯಾವುದೇ ಗೊಂದಲಗಳಿಲ್ಲದೆ ಅಧಿಕೃತವಾಗಿ ದಾರಿಯನ್ನು ಪಡೆಯಬಹುದು.
ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಡಿಜಿಟಲ್ ಮಾಧ್ಯಮದ ರೈತರಿಗೆ ಬೇಕಾದ ಸಾಮಾನ್ಯ ಮಾಹಿತಿಗಳು, ಕೃಷಿಯ ಆಧಾರಿತ ಯಂತ್ರೋಪಕರಣ ಪಶು ಇಲಾಖೆಯ ಸಬ್ಸಿಡಿಗಳ ಬಗ್ಗೆ ತಿಳಿಸಿಕೊಡುತ್ತೇವೆ..