ಬಸವನಬಾಗೇವಾಡಿ: ಅಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಐಟಿ ಕಂಪನಿ ಉದ್ಯೋಗಿಯಾಗಿದ್ದ ತಾಲ್ಲೂಕಿನ ಮುತ್ತಗಿ ಗ್ರಾಮದ ಗಿರೀಶ ತೋಟಗಿ (ಮಾಳಜಿ) ಅವರು ಉದ್ಯೋಗ ತೊರೆದು ಕಳೆದ ನಾಲ್ಕು ವರ್ಷದಿಂದ ಕೃಷಿ ಕಾರ್ಯದಲ್ಲಿ ತೊಡಗಿಕೊಂಡು ಉತ್ತಮ ಫಸಲು ತೆಗೆಯುತ್ತಿದ್ದಾರೆ.
ತಮ್ಮ ಏಳು ಎಕರೆ ಒಣಬೇಸಾಯದ ಜಮೀನಿನಲ್ಲಿ ಬ್ಯಾಡಗಿ ಮೆಣಸಿನ ಗಿಡಗಳನ್ನು ಬೆಳೆಸಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಸರ್ಪನ್ ಕಂಪನಿಯ ಮೆಣಸಿನ ಬೀಜಗಳನ್ನು ತಂದು ತಮ್ಮ ಜಮೀನಿನ ಸ್ವಂತ ನರ್ಸರಿಯಲ್ಲಿ ಸಸಿ ಮಾಡಿ, ಅವುಗಳನ್ನು ನಾಟಿ ಮಾಡಿದ್ದಾರೆ.ಇಸ್ರೇಲ್ ತಂತ್ರಜ್ಞಾನದೊಂದಿಗೆ ಸಾವಯವ ಬಳಕೆ ಸಂಗ್ರಹಿಸಿ ಮಾಡುತ್ತಿರುವ ಇವರು ಸಸಿಗಳನ್ನು ನಾಟಿ ಮಾಡಿದ ನಾಲ್ಕು ತಿಂಗಳಲ್ಲಿ ಮೆಣಸಿನ ಗಿಡಗಳ ತುಂಬ ಕಾಯಿ ತುಂಬಿಕೊಂಡಿವೆ.
ದೇಶಿ ತಳಿಯ 5 ಆಕಳುಗಳನ್ನು ಸಾಕಿರುವ ಇವರು ಅವುಗಳ ಗೋಮೂತ್ರ ಗಿಡಗಳಿಗೆ ಸಿಂಪಡಣೆ ಮಾಡುತ್ತಿದ್ದಾರೆ. ಅಲ್ಲದೇ, ಸಾವಯವ ಗೊಬ್ಬರದ ಬಳಕೆ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ಉತ್ತಮ ಫಸಲು ತೆಗೆಯುತ್ತಿದ್ದಾರೆ.
ರೈತ ಅರಂಭದಲ್ಲಿ ಬೀಜ, ಸಸಿ ನಾಟಿ ಮಾಡಿ ಬೆಳೆಯಲ್ಲಿ ಕಸ ಬೆಳೆಯದಂತೆ ಗಮನ ಹರಿಸಿದ್ದಾರೆ. ಗಿಡಗಳಿಂದ ಬರುವ ಒಣ ಮೆಣಸಿನಕಾಯಿ ಮಾರಾಟ ಮಾಡುತ್ತಿರುವ ಗಿರೀಶ ಅವರು ಅಂದಾಜು 10 ಲಕ್ಷಕ್ಕೂ ಹೆಚ್ಚು ಲಾಭ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಮೆಣಸಿನ ಗಿಡಗಳಿಗೆ ಅಗತ್ಯವಿರುವ ಜೀವಾಮೃತ ಸಮಯಕ್ಕೆ ಮೂಲಕ ತಯಾರಿಸಿ. ನಿಗದಿತ ಗಿಡಗಳಿಗೆ ನೀಡುವ ಉತ್ತಮ ಪಸಲು ಬರುವಂತೆ ನಮ್ಮ ಜಮೀನಿನಲ್ಲಿ ಕೃಷಿ ಕಾರ್ಯನಿರ್ವಹಿಸುತ್ತಿರುವ ಯರನಾಳ ಗ್ರಾಮದ ತಿಪ್ಪಣ್ಣ ಹೊನ್ನಳ್ಳಿ ಅವರು ಕಾಳಜಿ ವಹಿಸುತ್ತಿದ್ದಾರೆ ಎನ್ನುತ್ತಾರೆ.ಗಿರೀಶ,
ಮುಂಬರುವ ದಿನಗಳಲ್ಲಿ ಗೋಶಾಲೆ ಆರಂಭಿಸಬೇಕು ಎಂದು ನಿರ್ಧರಿಸಿದ್ದೇನೆ ಗಿರೀಶ ತೋಟಗಿ,
ಒಣ ಬೇಸಾಯದ ನಮ್ಮ ಹೊಲದಲ್ಲಿ ಕೇವಲ ಜೋಳ, ಗೋಧಿ, ಕಡಲೆ, ಕುಸುಬೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಉತ್ತಮ ಮಳೆ ಬಂದರೆ ಒಂದಷ್ಟು ಬೆಳೆ ಕೈಸೇರುತ್ತಿತ್ತು. ಆದರೆ, ನಿರೀಕ್ಷಿತ ಲಾಭ ಸಿಗುತ್ತಿರಲಿಲ್ಲ. ಹೀಗಾಗಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯಬೇಕೆಂದು ನಿರ್ಧರಿಸಿ ಕೆల ರೈತರಿಂದ ಮಾಹಿತಿ ಸಂಗ್ರಹಿಸಿ ಮೆಣಸಿನ ಸಸಿಗಳನ್ನು ನಾಟಿ ಮಾಡಿರುವೆ, ಜೊತೆಗೆ ದೇಶಿಯ ತಳಿಯ ಗೋವುಗಳನ್ನು ಸಾಕುವ ಮೂಲಕ ಅವುಗಳ ಸಗಣಿ, ಗೋಮುತ್ರ ಬೆಳೆಗಳಿಗೆ ಬಳಕೆಯಾಗುತ್ತಿದೆ.