ಪ್ರಿಯ ರೈತರೇ, ಇದೀಗ ಹಿಂಗಾರು ಹಂಗಾಮು ಪ್ರಾರಂಭವಾಗಿದ್ದರಿಂದ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿರುವ ಮೆಕ್ಕೆಜೋಳ, ಕಡಲೆ, ಶೇಂಗಾ, ಗೋದಿ, ಸೂರ್ಯಕಾಂತಿ ಹಾಗೂ ಇನ್ನಿತರೇ ಬೆಳೆಗಳಿಗೆ ಹಲವಾರು ತರಹದ ಕೀಟಗಳು, ರೋಗಗಳು ಭಾದೆ ಮಾಡುತ್ತವೆ. ರೈತರಿಗೆ ಈ ತರಹದ ರೋಗ ಅಥವಾ ಕೀಟಗಳ ನಿರ್ವಹಣೆ ಮಾಡಲು ಹಾಗೂ ಅದಕ್ಕಾಗಿ ಬೆಳೆಗಳಿಗೆ ಔಷದಿ ಸಿಂಪಡಣೆ ಮಾಡಲು ಪೆಟ್ರೋಲ್ ಪವರ್ ಸ್ಪ್ರೇಯರ್ ಅಥವಾ ಚಾರ್ಜರ್ ಬ್ಯಾಟರಿ ಪಂಪ್ ಗಳು ತುಂಬಾ ಅವಶ್ಯಕವಾಗಿರುತ್ತದೆ. ಔಷದಿ ಸಿಂಪರಣೆಗಾಗಿ ಪೆಟ್ರೋಲ್ ಪವರ್ ಪಂಪ್ ಅಥವಾ ಚಾರ್ಜರ್ ಬ್ಯಾಟರಿ ಪಂಪ್ ಗಳು ಸಾಮಾನ್ಯವಾಗಿ ಎಲ್ಲಾ ರೈತರಿಗೆ ಅವಶ್ಯಕತೆ ಇದ್ದೇ ಇರುತ್ತದೆ. ಅಂತಹ ಪಂಪ್ ಗಳನ್ನು ಸಬ್ಸಿಡಿಯಲ್ಲಿ ಖರೀದಿ ಮಾಡಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸ್ಪ್ರೇಯರ್ ಪಂಪ್ ಗಳು ತಾಲೂಕಿನಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಆಗ್ರೋ ಕೇಂದ್ರಕ್ಕೆ ಬರುತ್ತವೆ. ಎಲ್ಲಾ ರೈತರು ಬಹು ಬೇಗನೇ ಸಬ್ಸಿಡಿಯಲ್ಲಿ ಪಂಪ್ ಖರೀದಿ ಮಾಡಲು ಅರ್ಜಿಯನ್ನು ಸಲ್ಲಿಸಬೇಕು. ನೀವು ಅರ್ಜಿಗಳನ್ನು ಸಲ್ಲಿಸಲು ಹಾಗೂ ಇಂತಹ ಸ್ಪ್ರೇಯರ್ ಮತ್ತು ಇನ್ನಿತರೇ ಕೃಷಿ ಉಪಕರಣಗಳ ಮೇಲೆ ಇರುವ ಸಬ್ಸಿಡಿ ಬಗ್ಗೆ ತಿಳಿದುಕೊಳ್ಳಲು ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನಿಡಬೇಕು.

ಸಬ್ಸಿಡಿ ಪಡೆಯಲು ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳನ್ನು ನೋಡುವುದಾದರೆ,

» ಆಧಾರ್ ಕಾರ್ಡ್

» ಪಾಸ್ ಪೋರ್ಟ್ ಅಳತೆಯ 2 ಫೋಟೋ

» ನಿಮ್ಮ ಹೊಲದ ಖಾತೆ ಉತಾರಿ

» ಬ್ಯಾಂಕ್ ಪಾಸ್ ಪುಸ್ತಕ

» ದೃಡೀಕರಣ ಪತ್ರ.

ಈ ಮೇಲೇ ಹೇಳಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಅದರ ಜೊತೆಗೆ ಕಚೇರಿಯಲ್ಲಿ ನೀಡುವ ದೃಡೀಕರಣ ಪತ್ರವನ್ನು ಅದರ ಜೊತೆಗೆ ಲಗತ್ತಿಸಿ ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಇನ್ನೇನು ಸ್ವಲ್ಪ ದಿನಗಳಲ್ಲಿ ಈ ಉಪಕರಣಗಳು ಬರುತ್ತವೆ. ಇವುಗಳಿಗೆ ಸಾಮಾನ್ಯ ವರ್ಗದ ರೈತರಿಗೆ 50 ಪ್ರತೀಶತ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ ರೈತರಿಗೆ 90 ಪ್ರತಿಶತದಷ್ಟು ಸಬ್ಸಿಡಿ ನೀಡಲಾಗುತ್ತದೆ.

ಪ್ರತಿಷ್ಠಿತ ಹೋಂಡಾ ಕಂಪನಿಯ ಪೆಟ್ರೋಲ್ ಸಿಂಪರಣ ಉಪಕರಣ ಅಥವಾ ಪವರ್ ಸ್ಪ್ರೇಯರ್ ಸುಮಾರು ಹತ್ತರಿಂದ ಹನ್ನೆರಡು ಸಾವಿರದಲ್ಲಿ ಸಾಮಾನ್ಯ ವರ್ಗದ ರೈತರಿಗೆ ನೀಡಲಾಗುತ್ತದೆ. ಒಂದೇ ಮೋಟಾರ್ ಅಥವಾ ಸಿಂಗಲ್ ಬ್ಯಾಟರಿ ಹೊಂದಿರುವ ಚಾರ್ಜರ್ ಪಂಪ್ ಗಳು 2 ರಿಂದ 3 ಸಾವಿರ ರೂಪಾಯಿ ಒಳಗೆ ಸಿಗುತ್ತದೆ. ಈಗಾಗಲೇ ನಿಮ್ಮ ನಿಮ್ಮ ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಂಪಡಣಗೆ ಸಂಭಂದಪಟ್ಟ ಉಪಕರಣಗಳು ಬಂದಿರುತ್ತವೆ. ಅಥವಾ ಈ ಹಿಂದೆ ಇನ್ನೂ ಏನಾದರೂ ಪೆಟ್ರೋಲ್ ಸ್ಪೇಯೆರ್ ಪಂಪ್ ಗಳು ಉಳಿದಿದ್ದರೆ ನೀವು ಈಗಲೂ ಅರ್ಜಿ ಸಲ್ಲಿಸಿ ಅವುಗಳನ್ನು ಪಡೆಯಬಹುದು. ಹೀಗಾಗಿ ಎಲ್ಲಾ ಆಸಕ್ತ ರೈತ ಬಾಂಧವರು ಕೂಡಲೆ ನಿಮಗೆ ಹತ್ತಿರವಿರುವ ಅಥವಾ ನಿಮಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಿ ಹಾಗೂ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.

ಇದಿಷ್ಟು ಈ ಯೋಜನೆ ಬಗ್ಗೆ ಇರುವ ಮಹತ್ವದ ಮಾಹಿತಿಯಾಗಿದ್ದು, ಎಲ್ಲಾ ರೈತರು ಈ ಬಹುಮುಖ್ಯ ಮಾಹಿತಿಯ ಸದುಪಯೋಗವನ್ನು ಪಡೆದುಕೊಂಡು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೆಕು.

ಕೃಷಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕೃಷಿ ವಾಹಿನಿ ಜಾಲತಾಣದ ಸಂಪರ್ಕದಲ್ಲಿರಿ..

Leave a Reply

Your email address will not be published. Required fields are marked *